Homeಮುಖಪುಟವಿಡಿಯೊ| ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ ಎಲ್ಲ ಅರಾಮು; ಎಲ್ಲಾ ಆರಾಮು.

ವಿಡಿಯೊ| ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ ಎಲ್ಲ ಅರಾಮು; ಎಲ್ಲಾ ಆರಾಮು.

- Advertisement -
- Advertisement -

ಎಲ್ಲಾ ಆರಾಮು

ಪಾಮರರಿಗೆ: ಈ ಹಾಡನ್ನು ಬರೆದ ಕಾಲದ ಬಗ್ಗೆ ಕಾಳಿದಾಸನ ಕಾಲದೇಶದ ಬಗ್ಗೆಯಿರುವಷ್ಟೇ ಗೊಂದಲಗಳಿವೆ. ಮೂಲದ ಬಗ್ಗೆ ನದಿಮೂಲದಷ್ಟೆ ಕುತೂಹಲವಿದೆ. ಇದನ್ನು ಬರೆದವರು ಯಾರು ಎಂಬುದು ಇದರ ಕತೃಗಳ ಜಗಳಾನಂತರವೂ ನಿರ್ಧಾರವಾಗಲಿಲ್ಲ. ೧೮೯೩ ಡಿಸೆಂಬರ್ ೧೬ ರಂದು ಆಡಲ್ಪಟ್ಟ “ಲಾಟ್ರೆಕ್ ನ ಎಚ್” ಎಂಬ ಒಂದು ಇಂಗ್ಲೀಷ್ ಕಾಮಿಡಿಯಲ್ಲಿದ್ದ ಒಂದು ಸಂಭಾಷಣೆಯ ತುಣುಕನ್ನಿಟ್ಟುಕೊಂಡು ೧೯೩೬ ರಲ್ಲಿ ಪೌಲ್ ಮಿಸ್’ರಕಿ ಎಂಬುವವನು ಈ ಹಾಡು ಬರೆದನಂತೆ ಎಂಬ ಇನ್ನೊಂದು ಉಹಾಪೋಹವೂ ಇದೆ.  ಇದೆಲ್ಲದರ ನಂತರ ರೇ ವೆಂಟ್ಯುರಾ ಎಂಬ ಫ್ರೆಂಚ್ ಸಂಗೀತದ ಅಪೂರ್ವನೂ, ಜಾಝ್‌ಅನ್ನು ಫ್ರಾನ್ಸಿನಲ್ಲಿ ಸಮೃದ್ಧವಾಗಿ ಬೆಳೆಸಿದವನೂ ಈ ಹಾಡಿಗೆ ಸಂಗೀತ ನೀಡಿದ. ಫ್ರೆಂಚ್ ಗೀತೆಗಳಲ್ಲಿ ಅಬ್ಬರವೆನ್ನುವುದು ಇಲ್ಲವೇ ಇಲ್ಲ. ಬಾಯಿಯಿಂಬ ಹೊರಟ ಹೊಗೆ ಸುರುಳಿಗಳನ್ನು ವರ್ಣಿಸುತ್ತ ಮಗುವನ್ನು ಮಲಗಿಸುವ ಜೋಗುಳದಂಥ ಹಾಡುಗಳಿವೆ ಅಲ್ಲಿ. ತೀರಾ ಸರಳ. ಈ ಕೆಳಗಿನ ಹಾಡಿನಲ್ಲಿ ಬಹುತೇಕ ಸಾಲುಗಳು ಪುನರಾವರ್ತಿತ. ನಿಜವಾಗಿ ಇರುವುದು ನಾಲ್ಕೋ ಐದೋ ಸಾಲುಗಳಷ್ಟೇ. ಬಿಡುಗಡೆಗೊಂಡಾಗ ಈ ಹಾಡು ಯೂರೋಪಿನ ತುಂಬ ಎಷ್ಟು ಪ್ರಿಯವಾದ ಗೀತೆಯಾಗಿ ಹೋಯಿತೆಂದರೆ ರೇ ವೆಂಟ್ಯುರಾ ಮತ್ತು ಪೌಲ್ ಮಿಸ್’ರಕಿ “ಎಲ್ಲಾ ಆರಾಮು” ನ ಕತೃಗಳಾಗಿಯೇ ಇವತ್ತಿಗೂ ಉಳಿದಿದ್ದಾರೆ.

ನಮ್ಮಲ್ಲೂ ಈ ಹಾಡಿನ ಲಾಜಿಕ್ಕಿನ ಥರದವುಗಳು ಇಲ್ಲವೆಂದಲ್ಲ. ಇಂಗ್ಲೀಷ್, ಫ್ರೆಂಚ್, ಸ್ಪಾನಿಷ್, ಆಸ್ಟ್ರಿಯನ್ ಗಳಲ್ಲಿ ಇದೇ ರೀತಿಯ ಸಂಭಾಷಣೆಗಳು ತುಂಬ ಸಿಗುತ್ತವೆ. ಆದರೆ ಈ ಹಾಡಿನ ವ್ಯಂಗ್ಯ ಮತ್ತು ತಿಳಿ ಹಾಸ್ಯಗಳು ಆಗಿನ ಭಯಗ್ರಸ್ಥ ಯೂರೋಪಿನಲ್ಲಿ ಶೀಘ್ರವಾಗಿ ಹರಡಿತೆಂದರೆ ೧೯೩೬ ರಲ್ಲಿ ಇದೇ ಹೆಸರಿನ ಒಂದು ಸಿನೆಮಾ ಕೂಡ ತೆರೆಕಂಡಿತು.  ನನ್ನ ಅನುವಾದದಲ್ಲಿ ಎರಡು ಬದಲಾವಣೆ ಮಾಡಿಕೊಂಡಿದ್ದೇನೆ ನಾನು. ಮೂಲದಲ್ಲಿ ಕುದುರೆ ಸಾಯುತ್ತದೆ; ಇಲ್ಲಿ ಎಮ್ಮೆ. ಮತ್ತು ಅಲ್ಲಿ ಮನೆ ಕುಸಿದ ಮೇಲೆ ಗಂಡ ಸಾಯುತ್ತಾನೆ. ಇಲ್ಲಿ ಅದನ್ನು ಉಲ್ಟಾ ಮಾಡಿಕೊಂಡೆ- ಫ್ರೆಂಚಿನ ಮತ್ತು ಕನ್ನಡದ ವಾಕ್ಯರಚನೆಗಳ ಭಿನ್ನತೆಯ ಕಾರಣದಿಂದ. ಹಾಡಿನ ಮೂಲ ಲಯ ಮತ್ತು ತಾಳದಲ್ಲಿಯೇ ಈ ಅನುವಾದವೂ ಇದೆ. ಹಾಗಾಗಿ ಈ ಕೆಳಗಿನ ಲಿಂಕ್ ನಲ್ಲಿ ಹಾಡು ಕೇಳಿ ಅದೇ ರಿದಮ್ ಅನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಹಾಡನ್ನು ಕನ್ನಡದಲ್ಲಿ ಹಾಡಿಕೊಳ್ಳಬಹುದು. ಇದೊಂದು “ಗೀತೆ” ಎನ್ನುವುದು ಮನಸ್ಸಿನಲ್ಲಿರಲಿ ಎಂದು ಕೋರಿಕೆ.

ವಿಡಿಯೊ ನೋಡಿ.

ಪಂಡಿತರಿಗೆ: ’ರಾಜಕೀಯ ಮತ್ತು ಸಾಮಾಜಿಕವಾಗಿ’ ಈ ಹಾಡು ಹೊರಗೆ ಬಂದು, ಮೆಡಿಟರೇನಿಯನ್ ದೇಶಗಳಾದ್ಯಂತ ಪ್ರಸಿದ್ಧವಾದ ಕಾಲ ನಾಝೀಸಂ ನ ಬರ್ಭರತೆ ಯೂರೋಪಿನ ಮನಸ್ಸನ್ನು ಕೊರೆಯತೊಡಗಿದಂತದ್ದು- ಎಂಬುದಾಗಿ ಯೂಟ್ಯೂಬಿನಲ್ಲಿ ಫ್ರೆಂಚ್ ಗೀತೆಗಳ ಬಗ್ಗೆ ಆಳವಾದ ಗ್ರಹಿಕೆಗಳನ್ನು ದಾಖಲಿಸುವವಳೊಬ್ಬಳು ಬರೆಯುತ್ತಾಳೆ. ಮುಖ್ಯವಾದ್ದನ್ನು ನಿರ್ಲಕ್ಷಿಸುವ ಅಥವಾ ಲಕ್ಷಿಸಲು ಭಯಪಡುವ ಕಾಲವನ್ನು ಗೇಲಿ ಮಾಡಲು ರೇ ವೆಂಟ್ಯುರಾ ಇದನ್ನು ಅಳವಡಿಸಿಕೊಂಡನಂತೆ. ವಾಸ್ತವದಲ್ಲಿ ಫ್ರೆಂಚ್ ಕಾವ್ಯದಷ್ಟೇ ತೀವ್ರವಾಗಿ ರಾಜಕೀಯವನ್ನು ವಿಮರ್ಶಿಸಿದವು ಈ ಫ್ರೆಂಚ್ ಗೀತೆಗಳು. ಈ ಸರಳ ಹಾಡು ಎಷ್ಟು ಚೂಪಾದ ಒಂದು ರಾಜಕೀಯ ಹಾಡೂ ಆಯಿತೆಂದರೆ- ಯೂರೋಪಿನ ಪತ್ರಿಕೆಗಳು “ಎಲ್ಲಾ ಅರಾಮು ಮುಸಲೋನಿ ಮಹಾಶಯ” ಎಂದು ಇಟಲಿ-ಇಥಿಯೋಪಿಯನ್ ಯುದ್ಧದ ಸಮಯದಲ್ಲಿಯೂ, “ಎಲ್ಲಾ ಅರಾಮು ಸ್ಟಾಲಿನ್ ಮಹಾಶಯ” ಎಂದು ಸ್ಪಾನಿಷ್ ಅಂತರ್ಯುದ್ಧದ. ಸಮಯದಲ್ಲೂ ತಮಾಷೆ ಮಾಡಲು ಶುರುಮಾಡಿದ್ದವು. ತಣ್ಣನೆಯ ರಾಜಕೀಯ ಫ್ರೆಂಚ್ ಗೀತೆಗಳಿಗೆ ಇನ್ನೊಂದು ದೊಡ್ಡ ಉದಾಹಾರಣೆಯೆಂದರೆ ಬೋರಿಸ್ ವಿಯಾಂ ಎಂಬಾತ ಬರೆದು ಹಾಡಿದ “ಲ್ ಡೆಸರ್ಟರ್” ಎಂಬ ರಚನೆ. ಸರ್ವಾಧಿಕಾರದ ವಿರುದ್ಧ ದುಃಖ ಮತ್ತು ಸ್ಪಷ್ಟತೆಯಲ್ಲಿ ದನಿಯೆತ್ತುವ ಈ ಹಾಡನ್ನು ಅಪಾರ ವಿನಯ ಹಾಗೂ ದೃಢತೆಯಲ್ಲಿ ಹಾಡುತಾನೆ ಬೋರಿಸ್. ಹಾಡಿದು ಕೇವಲ ಫ್ರೆಂಚ್ ಭಾಷೆಯೊಂದರಲ್ಲೇ ಮೂವತ್ತಕ್ಕಿಂತ ಹೆಚ್ಚಿನ ರೂಪಗಳಲ್ಲಿ ಅಫ್ರಿಕಾದ ಅನೇಕ ಸರ್ವಾಧಿಕಾರೀ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿತು. ಸಾಹಿತ್ಯ ಬೇರೆಯಾದರೂ ಧ್ವನಿ, ದೃಢತೆ ಮತ್ತು ವಿನಯಗಳು ಈ ಹಾಡಿನ ಎಲ್ಲ ರೂಪಗಳಲ್ಲೂ ಹಾಗೆಯೇ ಇದ್ದವು ಎಂಬುದು ಈ ಗೀತೆಗಳ ವ್ಯಾಪಕತೆಯನ್ನು ತೊರಿಸುತ್ತವೆ ಅಂದುಕೊಂಡಿದ್ದೇನೆ.

೨೦೧೦ರಲ್ಲಿ ಕೆಂಡಸಂಪಿಗೆ ಗೆ ಮಾಡಿದ್ದ ಮೂಲ ಹಾಡಿನ ನಿಷ್ಟ ಅನುವಾದ ಇಲ್ಲಿದೆ. ಈಗಿನ ವೀಡಿಯೋ ಹಾಡು ಸಧ್ಯದ ಪರಿಸ್ಥಿತಿಗೆ ಬದಲಿಸಿ ಬರೆದದ್ದು.

“ಹಲೋ ಹಲೋ ಕಿಟ್ಟಿ

ಎನಪ್ಪಾ ವಿಶೇಷ?

ಇರಲಿಲ್ಲ ಊರಲ್ಲಿ; ಹದಿನೈದು ದಿನದಿಂದ

ನಾ ಮರಳಿ ಬಂದಾಗ

ಏನೇನು ಕಂಡೇನು?

ಏನಾಯಿತಲ್ಲಿ; ಹದಿನೈದು ದಿನದಿಂದ?”

“ಅಂಥಾದ್ದೇನಿಲ್ಲ; ಏನಿಲ್ಲ ಪದ್ಮಕ್ಕ

ಎಲ್ಲ ಆರಾಮು; ಎಲ್ಲಾ ಅರಾಮು.

ಅದ್ರೂನೂ ನಾಮಿಮ್ಗೆ ಹೇಳೋದು ಹೇಳ್ತೀನಿ

ಸಣ್ಣ್-ಪುಟ್ಟ ಮಾತಷ್ಟೇ; ತಲೆ ಹೋಗೋದೇನಿಲ್ಲ.

ನಿಮ್ ಮುದ್ದು ಎಮ್ಮೆ-ಬೆಳ್ಳಿ ಇತ್ತಲ್ಲ?

ಅದೊಂದು ಸತ್ತೋಯ್ತು. ಅದು ಬಿಟ್ರೆ ಪದ್ಮಕ್ಕ

ಇನ್ನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು.”

“ಹಲೋ ಹಲೋ ಕಿಟ್ಟಿ!

ಎಂಥಾ ಮಾತಂದೇ?

ನನ್ನೆಮ್ಮೆ ಸತ್ತೋಯ್ತಾ

ಓ ನನ್ನ ಬಂಗಾರ!

ಹೇಳಪ್ಪಾ ನಂಗೆ-

ಇದಾಗಿದ್ ಹೆಂಗೆ?”

“ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ

ಎಲ್ಲ ಅರಾಮು; ಎಲ್ಲಾ ಆರಾಮು.

ಅದ್ರೂನೂ ನಾಮಿಮ್ಗೆ ಹೇಳೋದು ಹೇಳ್ತೀನಿ

ಸಣ್ಣ್-ಪುಟ್ಟ ಮಾತಷ್ಟೇ; ತಲೆ ಹೋಗೋದೇನಿಲ್ಲ.

ನಿಮ್ ಕೊಟ್ಗೇಗ್’ ಮೊನ್ನೆ

ಬೆಂಕಿ ಬಿತ್ತಲ್ಲ?- ಅದ್ರಲ್ಲಿ ಬೆಳ್ಳಿ

ಸಿಕ್ಕೊಂಡಳಲ್ಲ? ಅಷ್ಟೇನೆ ಪದ್ಮಕ್ಕ

ಅದು ಬಿಟ್ರೆ ಏನಿಲ್ಲ

ಏನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು”

“ಹಲೋ ಹಲೋ ಕಿಟ್ಟಿ!

ಎಂಥಾ ಮಾತಂದೇ?

ನನ್ ಕೊಟ್ಗೆ ಸುಟ್ಟೋಯ್ತಾ

ಓ ಹಾಳು ದೇವ್ರೆ!

ಹೇಳಪ್ಪಾ ನಂಗೆ-

ಇದಾಗಿದ್ ಹೇಂಗೆ?”

“ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ

ಎಲ್ಲ ಅರಾಮು; ಎಲ್ಲಾ ಆರಾಮು.

ಅದ್ರೂನೂ ನಾಮಿಮ್ಗೆ ಹೇಳೋದು ಹೇಳ್ತೀನಿ

ಸಣ್ಣ್-ಪುಟ್ಟ ಮಾತಷ್ಟೇ; ತಲೆ ಹೋಗೋದೇನಿಲ್ಲ.

ನಿಮ್ಮನೆಗ್’ ಮೊನ್ನೆ ಬೆಂಕಿ ಬಿತ್ತಲ್ಲ?

ಅದೊಂಚೂರ್ ಕೊಟ್ಗೆಗೆ

ಹತ್ಕೊಂಡಿತ್ತಷ್ಟೇ! ಅಷ್ಟೇನೆ ಪದ್ಮಕ್ಕ

ಅದು ಬಿಟ್ರೆ ಏನಿಲ್ಲ

ಏನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು.”

“ಹಲೋ ಹಲೋ ಕಿಟ್ಟಿ!

ಎಂಥಾ ಮಾತಂದೇ?

ನಮ್ಮನೆ ಬಿದ್ದೋಯ್ತಾ?

ಓ ನನ್ನ ಗೋಳೇ!

ಹೇಳಪ್ಪಾ ನಂಗೆ-

ಇದಾಗಿದ್ ಹೆಂಗೆ?”

“ಅದಿಷ್ಟೇ ಪದ್ಮಕ್ಕಾ; ಹೆಚ್ಚೇನು ಇಲ್ಲ.

ನಿನ್ ಗಂಡ ರಾಮಣ್ಣ

ಕುಡ್ಕೊಂಡು ಬಂದ್’ನಲ್ಲಾ.

ಏನ್ ಬೇಜಾರೋ ಏನೋ; ನೇಣಾಕ್ಕೊಂಡ್’ಬಿಟ್ನಲ್ಲ.

ಆಗವ್ನ ಕಾಲಿಗೆ ತಾಗಿತು ಚಿಮಣಿ

ಹತ್ಗೊಂತು ಬೆಂಕಿ- ಸುಟ್ಟೋಯ್ತು ನಿಮ್ಮನೆ.

ಆಗಂತೂ ಏನ್ ಗಾಳಿ, ತುಂಬಾನೇ ಪದ್ಮಕ್ಕಾ!

ಅಂಟಿತು ಬೆಂಕಿ-ಉರಿದೋಯ್ತು ಕೊಟ್ಟಿಗೆ.

ನಿಮ್ಮನೆ ಎಮ್ಮೆ ಸತ್ತಿದ್ದು ಹಿಂಗೆ. ಅಷ್ಟೇನೆ ಪದ್ಮಕ್ಕ

ಅದು ಬಿಟ್ರೆ ಏನಿಲ್ಲ

ಏನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...