Homeಮುಖಪುಟಅಲ್ಪಾವದಿ ಸಾಲದ ನೀತಿಯನ್ನು ಮಾರ್ಪಾಡು ಮಾಡದಿದ್ದಲ್ಲಿ ಹೋರಾಟ: ರೈತ ಸಂಘ

ಅಲ್ಪಾವದಿ ಸಾಲದ ನೀತಿಯನ್ನು ಮಾರ್ಪಾಡು ಮಾಡದಿದ್ದಲ್ಲಿ ಹೋರಾಟ: ರೈತ ಸಂಘ

- Advertisement -
- Advertisement -

ಸಹಕಾರಿ ಸಂಸ್ಥೆಗಳಲ್ಲಿ ನೀಡುವ ಅಲ್ಪಾವದಿ ಸಾಲದ ನೀತಿಯಲ್ಲಿ ಸರಕಾರ ಮಾರ್ಪಾಡು ಮಾಡಿದ್ದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿರೋಧಿಸಿದೆ ಹಾಗೂ ಇದು ರೈತರಿಗೆ ಮಾಡಿದ ಅನ್ಯಾಯ ಎಂದು ಬಣ್ಣಿಸಿದೆ.

“ಅಲ್ಪಾವದಿ ಕೃಷಿ ಸಾಲ ಯೋಜನೆಯ ಮೂಲಕ ಸಹಕಾರಿ ಸಂಸ್ಥೆಗಳಲ್ಲಿ ಮೂರು ಲಕ್ಷದವರೆಗೆ ಕೊಡುವ ಶೂನ್ಯ ಬಡ್ಡಿದರದ ಸಾಲ ನೀಡುವ ನೀತಿಯನ್ನು ಮಾರ್ಪಾಡು ಮಾಡಿ, ಒಂದು ಕುಟುಂಬಕ್ಕೆ ಮೂರು ಲಕ್ಷದವರೆಗೆ ನೀಡಿದ ಸಾಲಗಳಿಗೆ ಮಾತ್ರ ಶೂನ್ಯಬಡ್ಡಿ ಅನ್ವಯವಾಗುತ್ತದೆ ಎಂಬ ಷರತ್ತು ರೈತರಿಗೆ ಮಾಡಿದ ಅನ್ಯಾಯ, ಇದು ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ನೀಡುವ ಸಾಲದ ಯೋಜನೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ” ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೇಳಿದೆ

“ಸಾಲದ ಹೊರೆಯಿಂದ ರೈತರು ಆತ್ಮಹತ್ಯೆಗೆ ಒಳಗಾಗುತ್ತಿರುವುದನ್ನು ತಡೆಗಟ್ಟಲು ರೂಪಿಸಿರುವ ಮಾನದಂಡದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದು ಕೂಡ ಮುಖ್ಯ ಅಂಶವಾಗಿದೆ ಆದರೆ ಸರಕಾರ ಹೆಚ್ಚುವರಿ ಷರತ್ತು ವಿಧಿಸಿ ರೈತರು ಪಡೆಯುತ್ತಿದ್ದ ಅನುಕೂಲಕ್ಕೆ ಕತ್ತರಿ ಹಾಕಿದೆ” ಎಂದು ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

ನಾಗೇಂದ್ರ ಅವರು “ಒಂದು ಕುಟುಂಬದಲ್ಲಿ ಪ್ರತ್ಯೇಕ ಪಹಣಿ ಹೊಂದಿರುವವರು ಇರುತ್ತಾರೆ, ಹಾಗೆಯೇ ಬೇರೆ ಬೇರೆಯಾಗಿದ್ದರೂ ಇನ್ನು ಖಾತೆ ಮಾಡಿಸಿಕೊಳ್ಳದವರೂ ಇರುತ್ತಾರೆ. ಅಲ್ಲದೆ ಒಟ್ಟು ಕುಟುಂಬದಲ್ಲಿ ಇದ್ದು ಜಂಟಿ ವ್ಯವಸಾಯ ಮಾಡುವವರು ಕೂಡ ಇದ್ದಾರೆ. ಹಲವರಿಗೆ ಅನುಕೂಲವಾಗುವಂತೆ ಸಾಲದ ಅನುಕೂಲವನ್ನು ನೀಡಬೇಕೆ ಹೊರತು ಒಂದೆ ಕುಟುಂಬ ಎಂದು ಶರತ್ತು ವಿಧಿಸಬಾರದು” ಎಂದು ಹೇಳಿದ್ದಾರೆ.

“ಈ ಲೋಪವನ್ನು ಕೂಡಲೇ ಸರಕಾರ ಸರಿಪಡಿಸಬೇಕು ಇಲ್ಲದಿದ್ದಲ್ಲಿ ಲಾಕ್ ಡೌನ್ ಅವಧಿಯ ನಂತರ ಇದರ ವಿರುದ್ಧ ಹೋರಾಟ ಮಾಡಲಾಗುವುದು” ಎಂದು ನಾಗೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರೈತರ ಉತ್ಪನ್ನಗಳಿಗೆ ಮಾರಾಟ ವ್ಯವಸ್ಥೆ ಮಾಡುವುದಾಗಿ ಹೇಳಿಕೊಂಡಿದ್ದ ಸರಕಾರ ಮಾತಿನಂತೆ ನಡೆದುಕೊಳ್ಳುತ್ತಿಲ್ಲ

ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತೇವೆ ಎಂದು ಸರಕಾರ ಹೇಳಿದೆ ಆದರೆ ಇದು ಕೇವಲ ಹೇಳಿಕೆಯಾಗಿ ಮಾತ್ರ ಉಳಿದಿದೆ, ಕಾರ್ಯರೂಪಕ್ಕೆ ಬಂದಿಲ್ಲ. ಬೀದರ್ ನಲ್ಲಿ ರೈತರು ಕಲ್ಲಂಗಡಿ ಹಣ್ಣನ್ನು ಬೀದಿಗೆ ಸುರಿಯುತ್ತಿದ್ದಾರೆ, ಎಲ್ಲಾ ಕಡೆ ತರಕಾರಿಗಳು ಮಾರುಕಟ್ಟೆ ಇಲ್ಲದೆ ರೈತರ ಹೊಳಗಳಲ್ಲೇ ಕೊಳೆಯುತ್ತಿದೆ, ಬಾಳೆಹಣ್ಣಿಗೆ ಸೂಕ್ತ ಮಾರುಕಟ್ಟೆ ಕೂಡಾ ಇಲ್ಲ” ಎಂದು ನಾಗೇಂದ್ರ  ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...