Homeಅಂತರಾಷ್ಟ್ರೀಯಇಂಗ್ಲೆಂಡ್‌: ಮುಸ್ಲಿಂ ವಿರೋಧಿ ಘೋಷಣೆ ಕೂಗಿ ಮೆರವಣಿಗೆ ನಡೆಸಿದ ಹಿಂದುತ್ವ ಪ್ರೇರಿತ ಯುವಕರು; ಭುಗಿಲೆದ್ದ ಘರ್ಷಣೆ

ಇಂಗ್ಲೆಂಡ್‌: ಮುಸ್ಲಿಂ ವಿರೋಧಿ ಘೋಷಣೆ ಕೂಗಿ ಮೆರವಣಿಗೆ ನಡೆಸಿದ ಹಿಂದುತ್ವ ಪ್ರೇರಿತ ಯುವಕರು; ಭುಗಿಲೆದ್ದ ಘರ್ಷಣೆ

- Advertisement -
- Advertisement -

ಶನಿವಾರ ಇಂಗ್ಲೆಂಡ್‌‌ನ ಲೀಸೆಸ್ಟರ್‌‌ನಲ್ಲಿ ಯುವಕರ ಗುಂಪೊಂದು ನಡೆಸಿದ ಮೆರವಣಿಗೆಯು ಕೋಮು ‘ಘರ್ಷಣೆ’ಗಳನ್ನು ಹುಟ್ಟುಹಾಕಿದೆ. ಹಿಂದುತ್ವದ ಬೆಂಬಲಿಗರು ಎಂದು ಆರೋಪಿಸಲಾಗಿರುವ ಮೆರವಣಿಯಲ್ಲಿದ್ದ ಯುವಕರೆಲ್ಲರೂ ಮಾಸ್ಕ್‌ ಧರಿಸಿದ್ದು, ಕೈಗಳಲ್ಲಿ ಚಾಕು ಮತ್ತು ಇತರ ಅಸ್ತ್ರಗಳನ್ನು ಇಟ್ಟುಕೊಂಡಿದ್ದರು. ಮೆರವಣಿಗೆಯ ಉದ್ದಕ್ಕೂ ಜೈಶ್ರೀರಾಮ್ ಸೇರಿದಂತೆ ಮುಸ್ಲಿಂ ವಿರೂಧಿ ಘೋಷಣೆಗಳು ಕೂಗಿ ಬಾಟಲಿಗಳನ್ನು ಎಸೆದು ಕಿಟಕಿ ಗಾಜುಗಳನ್ನು ಒಡೆದಿದ್ದಾರಲ್ಲದೆ ಬದಿಯಲ್ಲಿ ಇದ್ದ ವ್ಯಕ್ತಿಯೊಬ್ಬರಿಗೆ ಥಳಿಸುತ್ತಿರುವ ವಿಡಿಯೊಗಳು ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಘರ್ಷಣೆಯ ಹಿನ್ನಲೆಯಲ್ಲಿ ಪೊಲೀಸರು ಮತ್ತು ಸಮುದಾಯದ ಮುಖಂಡರು ನಾಗರಿಕರಿಗೆ ಶಾಂತವಾಗಿರಲು ಕರೆ ನೀಡಿದ್ದಾರೆ. ಶನಿವಾರ ಇಬ್ಬರನ್ನು ಬಂಧಿಸಲಾಗಿದ್ದು, ಸೆಕ್ಷನ್ ‘60 ಸ್ಟಾಪ್ ಆಂಡ್‌ ಸರ್ಚ್’ ಅಧಿಕಾರದ ಅಡಿಯಲ್ಲಿ ಹೆಚ್ಚಿನ ಸಂಖ್ಯೆ ಜನರನ್ನು ಜನರನ್ನು ಹುಡುಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ 15 ಜನರನ್ನು ಬಂಧಿಸಲಾಗಿದೆ ಎಂದು ಬಿಬಿಸಿ ವರದಿ ಹೇಳಿದೆ. ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆದ ನಂತರ ಲೀಸೆಸ್ಟರ್‌‌ನ ಪೂರ್ವದಲ್ಲಿ ಕೆಲವು ಗೊಂದಲಕಾರಿ ಘಟನೆಗಳು ನಡೆದಿದ್ದು, ಈ ಸರಣಿಗೆ ಹೊಸದಾಗಿ ಶನಿವಾರದ ಘರ್ಷಣೆಯು ಸೇರಿಕೊಂಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನಗರದ ಗ್ರೀನ್ ಲೇನ್ ರಸ್ತೆಯಲ್ಲಿ, ಹಲವಾರು ಮುಸ್ಲಿಂ ಒಡೆತನದ ವ್ಯಾಪಾರಿ ಮಳಿಗೆಗಳು ಮತ್ತು ಹಿಂದೂ ದೇವಾಲಯ ಇದ್ದು, ಹಿಂದೂ ಯುವಕರ ಗುಂಪು ಶನಿವಾರ ಆ ಪ್ರದೇಶದ ಮೂಲಕ ಮೆರವಣಿಗೆ ನಡೆಸುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸಾಮಾಜಿಕ ಕಾರ್ಯಕರ್ತ ಮಜಿದ್ ಫ್ರೀಮನ್ ಶನಿವಾರ ಸಂಜೆ ಬೆಲ್‌ಗ್ರೇವ್ ರಸ್ತೆಯಲ್ಲಿ ನಡೆದ ಘಟನೆಗಳನ್ನು ಚಿತ್ರೀಕರಿಸಿದ್ದು, ಅವರುಗಳನ್ನು ಟ್ವಿಟರ್‌ನಲ್ಲಿ ಅಫ್‌ಲೋಡ್‌ ಮಾಡಿದ್ದಾರೆ. ಅವರು ಪೋಸ್ಟ್‌ ಮಾಡಿರುವ ವೀಡಿಯೋವೊಂದರಲ್ಲಿ, ಗಾಜಿನ ಬಾಟಲಿಗಳನ್ನು ಒಡೆದು ಹಾಕುವ ಶಬ್ದ ಕೇಳಿಸುತ್ತಿದ್ದು, ಪೊಲೀಸರು ಅವರನ್ನು ದೂರ ಹೋಗುವಂತೆ ಕೂಗುತ್ತಾರೆ.

ಇದನ್ನೂ ಓದಿ: ಗುಜರಾತ್ ಗಲಭೆ: ಪ್ರಧಾನಿಗೆ ಕ್ಲೀನ್ ಚಿಟ್ ದೃಢಪಡಿಸಿದ ಸುಪ್ರೀಂ ಕೋರ್ಟ್, ಮೇಲ್ಮನವಿ ವಜಾ

“ಅವರು ಬಾಟಲಿಗಳು ಸೇರಿದಂತೆ ಎಲ್ಲವನ್ನೂ ಎಸೆಯುತ್ತಿದ್ದರು. ಮಸೀದಿಯ ಹಿಂದೆ ಬರುತ್ತಿದ್ದು ಸಮುದಾಯವನ್ನು ನಿಂದಿಸುತ್ತಿದ್ದರು. ಅಷ್ಟೆ ಅಲ್ಲದೆ ದೈಹಿಕವಾಗಿ ಜನರನ್ನು ಹೊಡೆಯುತ್ತಿದ್ದರು” ಎಂದು ಫ್ರೀಮನ್ ಹೇಳಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಹಿಂದುತ್ವ ಯುವಕರ ಮೆರವಣಿಗೆಗೆ ಪ್ರತಿಕ್ರಿಯೆಯಾಗಿ ನಗರದಲ್ಲಿ ಮುಸ್ಲಿಂ ಯುವಕರು ಕೂಡಾ ಪೂರ್ವಸಿದ್ಧತೆಯಿಲ್ಲದೆ ಸಭೆ ನಡೆಸಿದ್ದಾರೆ ಎಂದು ಗಾರ್ಡಿಯನ್ ವರದಿ ಹೇಳಿದೆ. “ನಾವು ಪೊಲೀಸರನ್ನು ನಂಬಲು ಸಾಧ್ಯವಿಲ್ಲ, ನಮ್ಮ ಸಮುದಾಯವನ್ನು ನಾವೇ ರಕ್ಷಿಸಿಕೊಳ್ಳುತ್ತೇವೆ” ಎಂದು ಯುವಕರು ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.

ಸರಣಿ ಘರ್ಷಣೆಗಳಿಂದ ಲೀಸೆಸ್ಟರ್‌ನ ಹಿಂದೂ ಸಮುದಾಯದಲ್ಲೂ ಭೀತಿ ಎದುರಾಗಿದೆ. ರಾಷ್ಟ್ರೀಯ ಹಿಂದೂ ಸಂಘಟನೆಯ ಅಧ್ಯಕ್ಷರಾಗಿರುವ ಲೀಸೆಸ್ಟರ್ ನಿವಾಸಿ ‘ದೃಷ್ಟಿ ಮಾ’ ಅವರು,“ಕಳೆದ ಮೂರು ದಶಕಗಳಲ್ಲೆ ಇತ್ತೀಚೆಗಿನ ಅಶಾಂತಿಯು ಅತಿಕೆಟ್ಟದಾಗಿದೆ. ಮೊದಲ ತಲೆಮಾರಿನ ವಲಸಿಗ ಸಮುದಾಯವು ಹಿಂದೂ ಸಮುದಾಯವನ್ನು ಗುರಿಯಾಗಿಸುತ್ತಿದೆ. ನಗರದ ಕೆಲವು ಮುಸ್ಲಿಮರು ಹಿಂದೂ ಕುಟುಂಬಗಳಿಗೆ ಕಿರುಕುಳ ನೀಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಗಲಭೆ: ಅನುಮತಿಯಿಲ್ಲದ ಮೆರವಣಿಗೆ ತಡೆಯದೆ ಇದ್ದಿದ್ದು ‘ಸಂಪೂರ್ಣ ವಿಫಲತೆ’; ದೆಹಲಿ ಪೊಲೀಸರಿಗೆ ಕೋರ್ಟ್ ಛೀಮಾರಿ

“ಅವರು ಬೆದರಿಕೆ ಮತ್ತು ದಾಳಿಗೆ ಒಳಗಾಗಿದ್ದಾರೆ. ಪೊಲೀಸರು ಆಸ್ತಿ, ಜನರು ಮತ್ತು ಪೂಜಾ ಸ್ಥಳಗಳನ್ನು ರಕ್ಷಿಸಲು ವಿಫಲರಾಗಿದ್ದಾರೆ. ನಮ್ಮನ್ನು ರಕ್ಷಿಸಿಕೊಳ್ಳಲು ನಮಗೆ ಹಕ್ಕಿದೆ” ಎಂದು ಅವರು ಹೇಳಿದ್ದಾರೆ. ಈ ನಡುವೆ ಯುವಕರ ಗುಂಪೊಂದು ದೇವಾಲಯದ ಹೊರ ಹಾಕಿದ್ದ ಕೇಸರಿ ಧ್ವಜವನ್ನು ಕಿತ್ತು ಹಾಕಿರುವ ವಿಡಿಯೊ ಕೂಡಾ ವೈರಲ್ ಆಗಿದೆ.

“ಪೂರ್ವ ಲೀಸೆಸ್ಟರ್‌ನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿರುವ ಹಲವಾರು ವರದಿಗಳಿವೆ. ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದಾರೆ” ಎಂದು ಶನಿವಾರ ಸಂಜೆ ಲೀಸೆಸ್ಟರ್‌ಶೈರ್ ಪೊಲೀಸ್‌ ಫೋರ್ಸ್‌ನ ತಾತ್ಕಾಲಿಕ ಮುಖ್ಯ ಕಾನ್ಸ್‌ಟೇಬಲ್ ರಾಬ್ ನಿಕ್ಸನ್ ಅವರು ಸಾಮಾಜಿಕ ಮಾಧ್ಯಮದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಭಾನುವಾರ ಯುವಕರ ಗುಂಪುಗಳು ಯೋಜಿತವಲ್ಲದ ಪ್ರತಿಭಟನೆಯನ್ನು ಪ್ರಾರಂಭಿಸಿದ ನಂತರ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. “ಹಲವಾರು ಹಿಂಸಾಚಾರ ಮತ್ತು ಹಾನಿಯ ಘಟನೆಗಳನ್ನು ಪೊಲೀಸರಿಗೆ ವರದಿ ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ: ಮಸೀದಿಗಳ ಮೇಲೆ ಆಕ್ಷೇಪಾರ್ಹ ಪೋಸ್ಟರ್‌ ಅಂಟಿಸಿ ಗಲಭೆಗೆ ಪ್ರಚೋದನೆ; 7 ದುಷ್ಕರ್ಮಿಗಳ ಬಂಧನ

“ಲೀಸೆಸ್ಟರ್‌ನ ಮೆಲ್ಟನ್ ರಸ್ತೆಯಲ್ಲಿರುವ ಧಾರ್ಮಿಕ ಕಟ್ಟಡದ ಹೊರಗೆ ವ್ಯಕ್ತಿಯೊಬ್ಬ ಧ್ವಜವನ್ನು ಕೆಳಗೆ ಎಳೆಯುತ್ತಿರುವ ವೀಡಿಯೊ ಪ್ರಸಾರವಾಗುತ್ತಿದ್ದು, ಈ ಬಗ್ಗೆ ನಮಗೆ ತಿಳಿದಿದೆ. ಪೊಲೀಸ್ ಅಧಿಕಾರಿಗಳು ಈ ಪ್ರದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಯೊಂದಿಗೆ ವ್ಯವಹರಿಸುವಾಗ ಇದು ಸಂಭವಿಸಿದೆ ಎಂದು ತೋರುತ್ತದೆ. ಈ ಘಟನೆಯ ಕುರಿತು ತನಿಖೆ ನಡೆಸಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಶನಿವಾರ ಇಬ್ಬರನ್ನು ಬಂಧಿಸಿಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತರಲ್ಲಿ ಒಬ್ಬನನ್ನು ಹಿಂಸೆಗೆ ಸಂಚು ರೂಪಿಸಿದ ಶಂಕೆಯ ಮೇಲೆ ಬಂಧಿಸಲಾಗಿದ್ದು, ಮತ್ತೊಬ್ಬ ವ್ಯಕ್ತಿಯನ್ನು ಬ್ಲೇಡ್‌ ರೀತಿಯ ವಸ್ತುವನ್ನು ಹೊಂದಿರುವ ಶಂಕೆಯ ಮೇಲೆ ಬಂಧಿಸಲಾಗಿದೆ. ಇಬ್ಬರೂ ಭಾನುವಾರವೂ ಪೊಲೀಸ್ ಕಸ್ಟಡಿಯಲ್ಲಿದ್ದರು ದಿ ಗಾರ್ಡಿಯನ್ ವರದಿ ಹೇಳಿದೆ.

“ನಾವು ಸ್ಥಳೀಯ ಸಮುದಾಯದ ಮುಖಂಡರ ಬೆಂಬಲದೊಂದಿಗೆ ಸಂವಾದ ಮತ್ತು ಶಾಂತಿಗೆ ಕರೆ ನೀಡುವುದನ್ನು ಮುಂದುವರಿಸುತ್ತಿದ್ದೇವೆ. ನಗರದಲ್ಲಿ ಹಿಂಸೆ ಅಥವಾ ಅವ್ಯವಸ್ಥೆಯನ್ನು ನಾವು ಸಹಿಸುವುದಿಲ್ಲ. ಮುಂಬರುವ ದಿನಗಳಲ್ಲಿ ಮಹತ್ವದ ಪೊಲೀಸ್ ಕಾರ್ಯಾಚರಣೆಯು ಪ್ರದೇಶದಲ್ಲಿ ಉಳಿಯುತ್ತದೆ” ಎಂದು ಪೊಲೀಸರು ಹೇಳಿದ್ದಾರೆ.

ಲೀಸೆಸ್ಟರ್ ಮೂಲದ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಸುಲೇಮಾನ್ ನಗ್ಡಿ,“ನಾವು ಬೀದಿಗಳಲ್ಲಿ ನೋಡಿರುವುದು ತುಂಬಾ ಆತಂಕಕಾರಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ಸಮುದಾಯಗಳ ಎಡೆಯಲ್ಲಿ ಈ ರೀತಿಯ ಸಮಸ್ಯೆ ನಡೆಯುತ್ತಿತ್ತು. ಆದರೆ ಅದು ಇಷ್ಟೊಂದು ಕೆಟ್ಟದಾಗಿ ಈ ವರೆಗೆ ಭುಗಿಲೆದ್ದಿಲ್ಲ. ನಮಗೆ ಶಾಂತಿ ಬೇಕಿದ್ದು, ಹಿಂಸಾಚಾರ ನಿಲ್ಲಬೇಕು. ಕೆಲವು ಅತೃಪ್ತ ಯುವಕರು ವಿನಾಶವನ್ನು ಉಂಟುಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉಕ್ರೇನ್‌ ಸಂಘರ್ಷ & ದೆಹಲಿ ಗಲಭೆಗಳ ಪ್ರಸಾರದ ಕುರಿತು ಟಿವಿ ಚಾನೆಲ್‌ಗಳಿಗೆ ‘ಸಲಹೆ’ ನೀಡಿದ ಒಕ್ಕೂಟ ಸರ್ಕಾರ!

ಲೀಸೆಸ್ಟರ್‌ನಲ್ಲಿರುವ ಹಿಂದೂ ಮತ್ತು ಜೈನ ದೇವಾಲಯಗಳು ಮತ್ತು ಸಮುದಾಯ ಸಂಘಟನೆಗಳ ಮುಖಂಡರು ನೀಡಿದ ಹೇಳಿಕೆಯಲ್ಲಿ, “ಶನಿವಾರದ ಪೂರ್ವಸಿದ್ಧತೆಯಿಲ್ಲದ ಮೆರವಣಿಗೆಯ ಬಗ್ಗೆ ತಿಳಿಯಲು ಪೊಲೀಸರೊಂದಿಗೆ ಕೆಲಸ ಮಾಡುತ್ತಿದ್ದೇವೆ. ಬೆಲ್‌ಗ್ರೇವ್ ಮತ್ತು ನಾರ್ತ್ ಎವಿಂಗ್‌ಟನ್‌ನ ಬೀದಿಗಳಲ್ಲಿ ಸಂವೇದನಾಶೀಲವಲ್ಲದ ಮತ್ತು ಸಂಪೂರ್ಣವಾಗಿ ಅವಮಾನಕರ ಕೃತ್ಯಗಳನ್ನು ನಾವು ಖಂಡಿಸುತ್ತೇವೆ. ಲೀಸೆಸ್ಟರ್ ನಗರದೊಳಗಿನ ಸಂಬಂಧಗಳು ಮತ್ತು ಏಕತೆಯನ್ನು ಹಾಳುಮಾಡುವ ಇಂತಹ ಆಕ್ರಮಣಕಾರಿ ಕೃತ್ಯಗಳನ್ನು ಹಿಂದೂ ಸಮುದಾಯದ ನಾಯಕರು ಸಹಿಸುವುದಿಲ್ಲ” ಎಂದು ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...