Homeರಾಷ್ಟ್ರೀಯಗುಜರಾತ್ ಗಲಭೆ: ಪ್ರಧಾನಿಗೆ ಕ್ಲೀನ್ ಚಿಟ್ ದೃಢಪಡಿಸಿದ ಸುಪ್ರೀಂ ಕೋರ್ಟ್, ಮೇಲ್ಮನವಿ ವಜಾ

ಗುಜರಾತ್ ಗಲಭೆ: ಪ್ರಧಾನಿಗೆ ಕ್ಲೀನ್ ಚಿಟ್ ದೃಢಪಡಿಸಿದ ಸುಪ್ರೀಂ ಕೋರ್ಟ್, ಮೇಲ್ಮನವಿ ವಜಾ

- Advertisement -
- Advertisement -

2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೋಷಮುಕ್ತಗೊಳಿಸಿರುವುದನ್ನು ಪ್ರಶ್ನಿಸಿ, ಹಿಂಸಾಚಾರದಲ್ಲಿ ಹತರಾದ ಕಾಂಗ್ರೆಸ್ ಸಂಸದರೊಬ್ಬರ ಪತ್ನಿ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂಕೋರ್ಟ್‌ ಶುಕ್ರವಾರ ‘ಅರ್ಹವಲ್ಲ’ ಎಂದು ಹೇಳಿದೆ.

ವಿಶೇಷ ತನಿಖಾ ತಂಡವು ರಾಜ್ಯದ ಮುಖ್ಯಮಂತ್ರಿಗೆ ನೀಡಿದ್ದ ಕ್ಲೀನ್‌ಚಿಟ್‌ ಅನ್ನ ಎತ್ತಿಹಿಡಿದ ಸುಪ್ರೀಂ ಕೋರ್ಟ್, ಗುಲ್ಬರ್ಗ್ ಸಮಾಜದ ಹತ್ಯಾಕಾಂಡ ಎಂದು ಕರೆಯಲ್ಪಡುವ ಹಿಂಸಾಚಾರ ಪ್ರಕರಣದಲ್ಲಿ ಹತ್ಯೆಯಾದ 68 ಜನರಲ್ಲಿ ಒಬ್ಬರಾದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅವರು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

84ರ ವಯಸ್ಸಿನ ಜಾಕಿಯಾ ಜಾಫ್ರಿ ಅವರು ಕೋಮುಗಲಭೆಗಳ ಕುರಿತು ಹೊಸದಾಗಿ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್‌ ಅನ್ನು ಕೋರಿದ್ದರು. ಹತ್ಯಾಕಾಂಡವು ರಾಜಕಾರಣಿಗಳು ಮತ್ತು ಪೊಲೀಸರನ್ನು ಒಳಗೊಂಡ ದೊಡ್ಡ ಪಿತೂರಿಯಿಂದಾಗಿ ನಡೆದಿದೆ ಎಂದು ಅವರು ಆರೋಪಿಸಿದ್ದರು.

ಇದನ್ನೂ ಓದಿ: ಗುಜರಾತ್: ಗಲಭೆ ಪ್ರಕರಣದಲ್ಲಿ ಬಿಜೆಪಿ ಶಾಸಕನಿಗೆ 6 ತಿಂಗಳು ಜೈಲು ಶಿಕ್ಷೆ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಮತ್ತು ಸಿಟಿ ರವಿಕುಮಾರ್ ಅವರು ಕಳೆದ ಡಿಸೆಂಬರ್‌ನಲ್ಲಿ ತೀರ್ಪನ್ನು ಕಾಯ್ದಿರಿಸಿದ್ದರು.

ಹೆಚ್ಚಾಗಿ ಮುಸ್ಲಿಮರೇ ವಾಸಿಸುತ್ತಿದ್ದ 29 ಬಂಗಲೆಗಳು ಮತ್ತು 10 ಅಪಾರ್ಟ್‌ಮೆಂಟ್ ಕಟ್ಟಡಗಳ ಸಮೂಹವಾದ ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಹತ್ಯಾಕಾಂಡ ಸೇರಿದಂತೆ 10 ಪ್ರಮುಖ ಗುಜರಾತ್ ಗಲಭೆ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ ವಿಶೇಷ ತಂಡವು ಮರು ತನಿಖೆ ನಡೆಸಿದೆ.

ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ 68 ಮಂದಿಯನ್ನು ಗಲಭೆಕೋರರು ಎಳೆದೊಯ್ದು, ಕತ್ತರಿಸಿ ಸುಟ್ಟು ಹಾಕಿದ್ದಾರೆ. ಸಹಾಯಕ್ಕಾಗಿ ಪೊಲೀಸ್ ಅಧಿಕಾರಿಗಳು ಮತ್ತು ಹಿರಿಯ ರಾಜಕಾರಣಿಗಳಿಗೆ ಫೋನ್ ಮಾಡಿದ್ದರೂ ಅವರಿಗೆ ಉತ್ತರಿಸಿರಲಿಲ್ಲ ಎಂದು ಜಾಕಿಯಾ ಜಾಫ್ರಿ ಆರೋಪಿಸಿದ್ದಾರೆ.

ವಿಶೇಷ ತನಿಖಾ ತಂಡ(ಎಸ್‌ಐಟಿ)ವು ಗಲಭೆಗಳ ಒಂದು ದಶಕದ ನಂತರ 2012 ರ ಫೆಬ್ರವರಿಯಲ್ಲಿ ‘ಯಾವುದೇ ಪ್ರಾಸಿಕ್ಯೂಟ್ ಮಾಡಬಹುದಾದ ಪುರಾವೆಗಳಿಲ್ಲ’ ಎಂದು ಉಲ್ಲೇಖಿಸಿ ತನ್ನ ‘ಮುಕ್ತಾಯದ ವರದಿ’ಯನ್ನು ಸಲ್ಲಿಸಿ ಪ್ರಧಾನಿ ಮೋದಿ ಮತ್ತು ಇತರ 63 ಜನರನ್ನು ದೋಷಮುಕ್ತಗೊಳಿಸಿತ್ತು.

ಇದನ್ನೂ ಓದಿ: ಬಂಗಾಳವನ್ನು’ಗಲಭೆ ಪೀಡಿತ ಗುಜರಾತ್’ ಮಾಡಲು ಎಂದಿಗೂ ಬಿಡುವುದಿಲ್ಲ- ಮಮತಾ ಬ್ಯಾನರ್ಜಿ

2016 ರಲ್ಲಿ ಅಹಮದಾಬಾದ್‌ನ ವಿಶೇಷ ನ್ಯಾಯಾಲಯವು ಹತ್ಯಾಕಾಂಡಕ್ಕಾಗಿ 24 ದಾಳಿಕೋರರನ್ನು ದೋಷಿ ಎಂದು ತೀರ್ಪು ನೀಡಿತ್ತು. ಹತ್ಯಾಕಾಂಡವನ್ನು ನ್ಯಾಯಾಲಯವು ‘ನಾಗರಿಕ ಸಮಾಜದ ಇತಿಹಾಸದಲ್ಲಿ ಕರಾಳ ದಿನ’ ಎಂದು ಬಣ್ಣಿಸಿತ್ತು. ಆದರೆ ಈ ಪ್ರಕರಣದಲ್ಲಿ ಬಿಜೆಪಿ ಕಾರ್ಪೊರೇಟರ್ ಸೇರಿದಂತೆ 36 ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ, ದೊಡ್ಡ ಪಿತೂರಿ ಇಲ್ಲ ಎಂದು ಒತ್ತಿ ಹೇಳಿತ್ತು.

2002ರಲ್ಲಿ ಮೂರು ದಿನಗಳ ಕಾಲ ಗುಜರಾತ್‌ನಲ್ಲಿ ನಡೆದ ಹಿಂಸಾಚಾರದಿಂದಾಗಿ 1,000 ಕ್ಕೂ ಹೆಚ್ಚು ಜನರು, ಅದರಲ್ಲೂ ಹೆಚ್ಚಾಗಿ ಮುಸ್ಲಿಮರು ಕೊಲ್ಲಲ್ಪಟ್ಟಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...