ಬಿಹಾರದ ಸರನ್ ಜಿಲ್ಲೆಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಯೋಗೇಂದ್ರ ಕುಮಾರ್ ಅವರು ಬೈಕ್‌ನಲ್ಲಿ ತೆರಳುತ್ತಿದ್ದ ಯುವಕರ ಮೇಲೆ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಲಾಠಿ ಪ್ರಹಾರ ನಡೆಸಿದ್ದು, ಸಾಮಾಜಿಕ ಮಾಧ್ಯಮಗಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಯನ್ನು ಜನರು, “ಬಿಹಾರದ ಲಾಠಿವೀರ ಎಸ್.ಡಿ.ಎಂ” ಎಂದು ಕರೆದಿದ್ದಾರೆ.
ಎಸ್‌ಡಿಎಂ ಮಾತ್ರವಲ್ಲದೆ, ಅವರ ಜೊತೆಯಲ್ಲಿದ್ದ ಹಲವು ಪೊಲೀಸರು ಕೂಡಾ ಬೈಕ್ ಸವಾರನನ್ನು ತಡೆದು ದೊಣ್ಣೆಯಿಂದ ಥಳಿಸಲು ಆರಂಭಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮಾಧ್ಯಮಗಳು ವರದಿ ಮಾಡಿರುವಂತೆ, ಜೂನ್ 20ರಂದು ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಅಗ್ನಿಪಥ್ ವಿರುದ್ಧ ಪ್ರತಿಭಟನೆ ನಡೆಸಲು ಬಿಹಾರ ಬಂದ್‌ಗಾಗಿ ಹಲವು ಸಂಘಟನೆಗಳು ಬೀದಿಗಿಳಿದ್ದವು. ಈ ಬಂದ್‌ಗೆ ಸಾರ್ವಜನಿಕರ ಬೆಂಬಲವೂ ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ನಗರದಲ್ಲಿ ಸೆಕ್ಷನ್ 144 ವಿಧಿಸಿದಾಗ ಈ ಘಟನೆ ನಡೆದಿದೆ.
ಇದನ್ನೂ ಓದಿ: ಈಶಾನ್ಯ ಪ್ರವಾಹಕ್ಕೆ ಕುರುಡಾಗಿರುವ ಬಿಜೆಪಿಗೆ ಅಧಿಕಾರದಲ್ಲಿ ಮಾತ್ರ ಆಸಕ್ತಿ: ಕಾಂಗ್ರೆಸ್
ವೈರಲ್ ವೀಡಿಯೊದಲ್ಲಿ, ಕೆಲವು ಪೊಲೀಸರೊಂದಿಗೆ ವ್ಯಕ್ತಿಯೊಬ್ಬರು ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ ಕೈಯಲ್ಲಿ ಕೋಲು ಹಿಡಿದಿರುವುದನ್ನು ಕಾಣುತ್ತದೆ. ಅವರು ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರರನ್ನು ತಡೆದು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಸರನ್ ಜಿಲ್ಲೆಯ ಛಾಪ್ರಾದ ತಾರೈಯಾ ಪ್ರದೇಶದಲ್ಲಿ ಮರ್ಹೌರಾದ ಎಸ್‌ಡಿಎಂ ಯೋಗೇಂದ್ರ ಕುಮಾರ್ ಕೂಡಾ ಬೀದಿಗೆ ಇಳಿದಿದ್ದರು.
ಕೆಲವು ಪೊಲೀಸರು ಬೈಕ್ ಸವಾರನನ್ನು ನಿಲ್ಲಿಸಿ ನಂತರ ಏನನ್ನೋ ಕೇಳುತ್ತಿರುತ್ತಾರೆ. ಆಗ ಎಸ್‌ಡಿಎಂ ಯೋಗೇಂದ್ರ ಕುಮಾರ್ ಅವರು ಲಾಠಿ ಹಿಡಿದುಕೊಂಡು ಎಲ್ಲಿಗೆ ಹೋಗುತ್ತಿದ್ದೀರಿ, ಹೆಲ್ಮೆಟ್‌ಗಳು ಎಲ್ಲಿವೆ ಎಂದು ಕೇಳುತ್ತಾ ಲಾಠಿಯಲ್ಲಿ ಇಬ್ಬರಿಗೂ ಥಳಿಸುತ್ತಾರೆ. ಘಟನೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಎಸ್‌ಡಿಎಂ ಯೋಗೇಂದ್ರ ಕುಮಾರ್ ಯಾವ ಪ್ರತಿಕ್ರಿಯೆಯೂ ನೀಡಿಲ್ಲ ಎಂದು ವರದಿ ಮಾಡಿವೆ.
बिहार के ‘डंडावीर’ SDM #Saran pic.twitter.com/31NNbKUbd0
— Utkarsh Singh (@UtkarshSingh_) June 23, 2022
ಇದನ್ನೂ ಓದಿ: ನಾವು ಯಾರಂತ ಜನರೇ ನಮಗೆ ಪರಿಚಯಿಸುತ್ತಾರೆ: ಟ್ರಾನ್ಸ್‌ಜೆಂಡರ್ ‘ಶಬ್ಬು’ ಜೀವನಗಾಥೆ
ಇತ್ತೀಚಿನ ದಿನಗಳಲ್ಲಿ ಬಿಹಾರ ರಾಜ್ಯದ ಅಧಿಕಾರಿಗಳಿಂದ ಸಾಮಾನ್ಯ ನಾಗರಿಕರ ಮೇಲೆ ನಡೆಸುತ್ತಿರುವ ಕಿರುಕುಳದ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ.
ಕೆಲವು ದಿನಗಳ ಮುಂಚೆ ರಾಜ್ಯದ ಗೋಪಾಲ್‌ಗಂಜ್‌ನಲ್ಲಿ ವಾಹನ ತಪಾಸಣೆ ವೇಳೆ ಡಿಎಸ್‌ಪಿ ಹೆಡ್‌ಕ್ವಾರ್ಟರ್ ಜ್ಯೋತಿ ಕುಮಾರಿ ಅವರು ಬೈಕ್ ಸವಾರನಿಗೆ ಕಪಾಳಮೋಕ್ಷ ಮಾಡಿ, ಲಾಠಿ ಪ್ರಹಾರ ಮಾಡಿದ್ದ ವಿಡಿಯೊ ವೈರಲ್ ಆಗಿತ್ತು.