Homeಮುಖಪುಟಈಶಾನ್ಯ ಪ್ರವಾಹಕ್ಕೆ ಕುರುಡಾಗಿರುವ ಬಿಜೆಪಿಗೆ ಅಧಿಕಾರದಲ್ಲಿ ಮಾತ್ರ ಆಸಕ್ತಿ: ಕಾಂಗ್ರೆಸ್

ಈಶಾನ್ಯ ಪ್ರವಾಹಕ್ಕೆ ಕುರುಡಾಗಿರುವ ಬಿಜೆಪಿಗೆ ಅಧಿಕಾರದಲ್ಲಿ ಮಾತ್ರ ಆಸಕ್ತಿ: ಕಾಂಗ್ರೆಸ್

- Advertisement -
- Advertisement -

ಪ್ರವಾಹದಿಂದ ಬಳಲುತ್ತಿರುವ ಈಶಾನ್ಯ ಭಾಗದ ಜನರ ನೋವಿಗೆ ಕುರುಡಾಗಿರುವ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬರುವಲ್ಲಿ ಮಾತ್ರ ಆಸಕ್ತಿ ವಹಿಸುತ್ತಿದೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ.

ಪ್ರವಾಹದಿಂದ  ತತ್ತರಿಸಿರುವ ಪ್ರದೇಶಗಳಲ್ಲಿ ಪರಿಹಾರ ಕ್ರಮಗಳನ್ನು ನೀಡುವತ್ತ ಗಮನ ಹರಿಸುವ ಬದಲು ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ.

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಗುರುವಾರ ಮತ್ತಷ್ಟು ಕಠಿಣವಾಗಿದ್ದು, ಈವರೆಗೆ 54.5 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. ಇಂದು ಹೊಸದಾಗಿ 12 ಸಾವುಗಳು ವರದಿಯಾಗಿವೆ. ಮೇ ಮಧ್ಯದಿಂದ ಉಂಟಾಗಿರುವ ಪ್ರವಾಹದಿಂದಾಗಿ ಈವರೆಗೆ ಸಾವನ್ನಪ್ಪಿರುವವರ ಸಂಖ್ಯೆ 101ಕ್ಕೆ ಏರಿದೆ.

ಇದನ್ನೂ ಓದಿ: ಮಹಾರಾಷ್ಟ್ರ: ಸಿಎಂ ಗೃಹ ಕಚೇರಿ ಬಿಟ್ಟು ಸ್ವಂತ ಮನೆಗೆ ತೆರಳಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ

ಎಐಸಿಸಿ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಸಂಸದ ಗೌರವ್ ಗೊಗೊಯ್, “ಪ್ರಸ್ತುತ ಅಸ್ಸಾಂ, ಮೇಘಾಲಯದಲ್ಲಿ ಪ್ರವಾಹ ಉಂಟಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ, ಈ ಹಿಂದೆ ಪ್ರವಾಹ ಅಥವಾ ಯಾವುದೇ ನೈಸರ್ಗಿಕ ವಿಕೋಪ ಸಂಭವಿಸಿದಾಗ, ಜವಾಬ್ದಾರಿಯುತ ಕೇಂದ್ರ ಸರ್ಕಾರ ತಂಡವನ್ನು ಕಳುಹಿಸುತ್ತದೆ. ಮಂತ್ರಿಗಳು, ಪ್ರಧಾನ ಮಂತ್ರಿಗಳು ಸ್ವತಃ ಭೇಟಿ ನೀಡಿ, ಅಧ್ಯಯನ ಮತ್ತು ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಪರಿಹಾರ ಮತ್ತು ತುರ್ತು ಸಹಾಯವನ್ನು ನೀಡುತ್ತಾರೆ. ಆದರೆ, ಬಿಜೆಪಿಯು ತನ್ನ ಅಧಿಕಾರದ ಲಾಲಸೆಯಲ್ಲಿ ಪ್ರವಾಹದಿಂದ ಬಳಲುತ್ತಿರುವ ಈಶಾನ್ಯ ಜನರ ನೋವಿಗೆ ಕುರುಡಾಗಿದೆ” ಎಂದು ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ ಅಥವಾ ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಇದು ಜನರ ನೋವಿಗೆ ಕುರುಡಾಗಿರುವ ಸರ್ಕಾರ. ಜನರ ನೋವಿಗೆ ಸ್ಪಂದಿಸಬೇಕಾದ ಸರ್ಕಾರವು ತನ್ನ ಸಂಪನ್ಮೂಲಗಳನ್ನು ತನ್ನದೇ ಆದ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ಬಳಸುತ್ತಿರುವುದನ್ನು ನಾವು ಹಿಂದೆಂದೂ ನೋಡಿಲ್ಲ” ಎಂದು ಅಸ್ಸಾಂನಿಂದ ಬಂದ ಸಂಸದ ಗೌರವ್ ಗೊಗೊಯ್ ಕಿಡಿಕಾರಿದ್ದಾರೆ.

ಇನ್ನು ಮಹಾರಾಷ್ಟ್ರ ಸರ್ಕಾರದಲ್ಲಿ ಎದ್ದಿರುವ ಬಂಡಾಯಕ್ಕೆ ಗುರುವಾರ ಹೊಸ ತಿರುವು ಸಿಕ್ಕಿದೆ. ಸಚಿವ ಏಕನಾಥ್‌ ಶಿಂಧೆ ನೇತೃತ್ವದ ಬಂಡಾಯ ಪಾಳಯಕ್ಕೆ ಹೊಸದಾಗಿ ಸೇರ್ಪಡೆಯಾದ ಶಿವಸೇನೆ ಶಾಸಕ ದೀಪಕ್ ಕೇಸರ್ಕರ್ ಅವರು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದನ್ನು ತಮ್ಮ ಪಾಳಯ ಬಯಸುತ್ತಿಲ್ಲ ಎಂದು ಹೇಳಿದ್ದಾರೆ. ರಾಜೀನಾಮೆಗೆ ಬದಲಾಗಿದೆ, ಶಿವಸೇನೆಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿ, ಹೊಸ ಸರ್ಕಾರವನ್ನು ರಚಿಸಬೇಕೆಂದು ನಾವು ಬಯಸುತ್ತೇವೆ ಎಂದು ಅವರು ಎನ್‌ಡಿಟಿವಿಗೆ ತಿಳಿಸಿದ್ದಾರೆ.


ಇದನ್ನೂ ಓದಿ: ‘ಉದ್ಧವ್ ಠಾಕ್ರೆ ರಾಜೀನಾಮೆ ಬೇಡ; ಬಿಜೆಪಿ ಜೊತೆಗೆ ಮೈತ್ರಿ ಮಾಡೋಣ’- ಶಿವಸೇನೆಯ ಬಂಡಾಯ ಶಾಸಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...