Homeಮುಖಪುಟ‘ಚೋಳರ ಕಾಲದಲ್ಲಿ ಹಿಂದೂ ಧರ್ಮವಿರಲಿಲ್ಲ’ - ಕಮಲ್ ಹಾಸನ್

‘ಚೋಳರ ಕಾಲದಲ್ಲಿ ಹಿಂದೂ ಧರ್ಮವಿರಲಿಲ್ಲ’ – ಕಮಲ್ ಹಾಸನ್

- Advertisement -
- Advertisement -

ಐತಿಹಾಸಿಕ ಚೋಳ ಸಾಮ್ರಾಜ್ಯದ ಖ್ಯಾತ ಸಾಮ್ರಾಟ ‘ರಾಜ ರಾಜ ಚೋಳ’ ಹಿಂದೂ ರಾಜನೇ ಎಂಬ ಚರ್ಚೆಗೆ ಹಿರಿಯ ನಟ ಕಮಲ್ ಹಾಸನ್ ಅವರು ಕೂಡಾ ಸೇರಿಕೊಂಡಿದ್ದು, “ಅವನು ಹಿಂದೂ ರಾಜ ಅಲ್ಲ” ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಮೂಲಕ ತಮಿಳು ಚಲನಚಿತ್ರ ನಿರ್ದೇಶಕ ವೆಟ್ರಿಮಾರನ್ ಅವರ ವಾದವನ್ನು ಕಮಲ್ ಹಾಸನ್ ಬೆಂಬಲಿಸಿದ್ದಾರೆ.

“ರಾಜ ರಾಜ ಚೋಳ ಹಿಂದೂ ರಾಜನಲ್ಲ ಮತ್ತು ಹಿಂದೂ ಧರ್ಮ”ದ ಬಗ್ಗೆ ಹಲವು ದಿನಗಳಿಂದ ತಮಿಳುನಾಡಿನದಲ್ಲಿ ಚರ್ಚೆ ನಡೆಯುತ್ತಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಪೊನ್ನಿಯಿನ್ ಸೆಲ್ವನ್” ಚಲನಚಿತ್ರ ಬಿಡುಗಡೆಯಾದ ಒಂದು ದಿನದ ನಂತರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಿರ್ದೇಶಕ ವೆಟ್ರಿಮಾರನ್,“ರಾಜ ರಾಜ ಚೋಜ್ಲಾನ್ ಹಿಂದೂ ಅಲ್ಲ. ತಿರುವಳ್ಳುವರ್ ಅವರನ್ನು ಕೇಸರಿಕರಣ ಮಾಡಲು ಪ್ರಯತ್ನಿಸಿದ ಬಿಜೆಪಿ ‘ನಮ್ಮ ಅಸ್ಮಿತೆ’ಯನ್ನು ಕದಿಯಲು ಪ್ರಯತ್ನಿಸುತ್ತಿದೆ” ಎಂದು ಪ್ರತಿಪಾದಿಸಿದ್ದರು. ‘ನಾವು ಅದನ್ನು ಎಂದಿಗೂ ಅನುಮತಿಸಬಾರದು’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಸಿನಿಮಾಗಳಲ್ಲಿ ನಮ್ಮ ಅಸ್ಮಿತೆಗಳನ್ನು ಅಳಿಸಲಾಗುತ್ತಿದೆ: ವೆಟ್ರಿಮಾರನ್‌ ಆತಂಕ

ವೆಟ್ರಿಮಾರನ್ ಅವರ ಹೇಳಿಕೆಯನ್ನು ಬೆಂಬಲಿಸಿದ ಕಮಲ್ ಹಾಸನ್‌, ರಾಜ ರಾಜ ಚೋಳನ ಕಾಲದಲ್ಲಿ ‘ಹಿಂದೂ ಧರ್ಮ’ ಇರಲಿಲ್ಲ, ಆದರೆ ವೈನವಂ, ಶಿವಂ ಮತ್ತು ಸಮಾನಂ ಇತ್ತು ಎಂದು  ಹೇಳಿದ್ದಾರೆ.

ಬ್ರಿಟಿಷರು ತುತ್ತುಕುಡಿಯನ್ನು ಟುಟಿಕೋರಿನ್ ಆಗಿ ಹೇಗೆ ಬದಲಾಯಿಸಿದರೋ ಅದೇ ರೀತಿ ಒಂದು ಸಾಮೂಹಿಕ ಪದವನ್ನು ಉಲ್ಲೇಖಿಸಲು ‘ಹಿಂದೂ’ ಪದವನ್ನು ಸೃಷ್ಟಿಸಿದರು ಎಂದು ಅವರು ಹೇಳಿದ್ದಾರೆ.

ವೆಟ್ರಿಮಾರನ್‌ ಅವರ ಹೇಳಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಹೆಚ್.ರಾಜಾ, ‘ರಾಜ ರಾಜ ಚೋಳ ನಿಜವಾಗಿಯೂ ಹಿಂದೂ ರಾಜ” ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ವ್ಯವಸ್ಥೆಯ ವಾಸ್ತವಗಳತ್ತ ತಮಿಳು, ಮಲಯಾಳಂ ಚಿತ್ರರಂಗ

ರಾಜ ರಾಜ ಚೋಳನು ನಿರ್ಮಿಸಿದ ಎರಡು ಚರ್ಚ್ ಮತ್ತು ಮಸೀದಿಗಳನ್ನು ತೋರಿಸುವಂತೆ ಎಚ್ ರಾಜಾ ಅವರು ವೆಟ್ರಿಮಾರನ್‌ ಅವರಿಗೆ ಕೇಳಿದ್ದಾರೆ. ರಾಜ ರಾಜ ಚೋಳನನ್ನು ಶಿವಪಾದ ಶೇಖರನ್ ಎಂದು ಕರೆದ ಅವರು, ‘ಹಾಗಾದರೆ, ಆತ ಹಿಂದೂ ಅಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಮನುವಾದಿಗಳು ಯಾವತ್ತೂ ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ. ಅವರು ಹೇಳುವ ಸುಳ್ಳುಗಳನ್ನು ನಾವು ನಿಜ ಎಂದು ನಂಬಿದ್ದೇವೆ. ಇನ್ನು ಮುಂದಾದರೂ ನಾವು ಜಾಗೃತರಾಗಿ, ಸತ್ಯವನ್ನು ಪ್ರತಿಪಾದಿಸಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿ ಮಾಡುತ್ತೇವೆ: ರಾಹುಲ್‌ ಗಾಂಧಿ

0
ಜಾತಿ ಗಣತಿ ನನ್ನ ಜೀವನದ ಪ್ರಮುಖ ಗುರಿಯಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿಯನ್ನು ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಸಂಪತ್ತು ಮರುಹಂಚಿಕೆ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ...