Homeಮುಖಪುಟಕುವೆಂಪು, ನಾಡಗೀತೆಗೆ ಅಪಮಾನಿಸಿದ 'ರೋಹಿತ್ ಚಕ್ರತೀರ್ಥ'ಗೆ ಕುಲಪತಿಗಳಿಂದ ಸನ್ಮಾನ: ತೀವ್ರ ವಿರೋಧ

ಕುವೆಂಪು, ನಾಡಗೀತೆಗೆ ಅಪಮಾನಿಸಿದ ‘ರೋಹಿತ್ ಚಕ್ರತೀರ್ಥ’ಗೆ ಕುಲಪತಿಗಳಿಂದ ಸನ್ಮಾನ: ತೀವ್ರ ವಿರೋಧ

- Advertisement -
- Advertisement -

ರಾಷ್ಟ್ರಕವಿ ಕುವೆಂಪುರವರಿಗೆ ಅವಮಾನಿಸಿ, ನಾಡಗೀತೆ ತಿರುಚಿದ ಆರೋಪ ಎದುರಿಸುತ್ತಿರುವ, ವಿವಾದಾತ್ಮಕ ಪಠ್ಯ ಪರಿಷ್ಕರಣೆ ಸಮಿತಿಯ ಮಾಜಿ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥರನ್ನು ಮಂಗಳೂರು ವಿವಿ ಕುಲಪತಿಗಳು ಸನ್ಮಾನಿಸುವುದು ಚರ್ಚೆಗೆ ಗ್ರಾಸವಾಗಿದ್ದು, ತೀವ್ರ ವಿರೋಧ ವ್ಯಕ್ತವಾಗಿದೆ.

ಚಿಂತನಗಂಗಾ ಮತ್ತು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಜೂನ್ 25ರ ಶನಿವಾರ ಸಂಜೆ 5 ಗಂಟೆಗೆ ಮಂಗಳೂರಿನ ಡೊಂಗರಕೇರಿ ಕೆನರಾ ಹೈಸ್ಕೂಲ್‌ನ ಭುವನೇಂದ್ರ ಸಭಾಂಗಣದಲ್ಲಿ ರೋಹಿತ್ ಚಕ್ರತೀರ್ಥ ಅವರಿಗೆ ‘ನಾಗರಿಕ ಸನ್ಮಾನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ಕಾರ್ಯಕ್ರಮದಲ್ಲಿ ‘ಭರತಖಂಡದ ಗತವೈಭವ ಮತ್ತು ಅಳಿಸಿಹೋದ ಇತಿಹಾಸ’ ಎಂಬ ವಿಷಯದ ಬಗ್ಗೆ ರೋಹಿತ್ ಚಕ್ರತೀರ್ಥ ಅವರು ವಿಷಯ ಮಂಡಿಸಲಿದ್ದು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಪಿ ಸುಬ್ರಹ್ಮಣ್ಯ ಯಡಪಡಿತ್ತಾಯರು ವಹಿಸಲಿರುವುದಾಗಿ ತಿಳಿದುಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ.

ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ನಾಡಿನ ಖ್ಯಾತನಾಮರು, ಮಹಾನ್ ಚೇತನಗಳಿಗೆ ಅವಮಾನ ಎಸಗಿರುವ, ನಾಡಗೀತೆಗೆ ಅಪಮಾನ ಎಸಗಿರುವ, ರಾಜ್ಯದಲ್ಲಿ ಸಾರ್ವತ್ರಿಕ ಆಕ್ರೋಶಕ್ಕೆ ಗುರಿಯಾಗಿರುವ ರೋಹಿತ್ ಚಕ್ರತೀರ್ಥ ಗೆ ಮಂಗಳೂರಿನ ಬಲಪಂಥೀಯ ವೇದಿಕೆಯೊಂದು ಶನಿವಾರ (ಜೂನ್ 25) ನಾಗರಿಕ ಸನ್ಮಾನ ನಡೆಸುತ್ತಿದೆ ಎಂಬ ಮಾಹಿತಿ ತಿಳಿದು ಆಘಾತವಾಯಿತು. ಇಡೀ ಕರ್ನಾಟಕ ಈ ವ್ಯಕ್ತಿಯ ವಿರುದ್ದ ಆಕ್ರೋಶಗೊಂಡಿರುವಾಗ, ಬಸವಣ್ಣ, ಕುವೆಂಪು, ನಾರಾಯಣ ಗುರುಗಳ ಅನುಯಾಯಿಗಳು ಪ್ರತಿಭಟನೆ ನಿರತರಾಗಿರುವ ಸಂದರ್ಭದಲ್ಲಿ ಮಂಗಳೂರಿನಂತಹ ವಿದ್ಯಾವಂತ ಜನರಿರುವ ನಗರದಲ್ಲಿ ಇದು ಘಟಿಸಬಾರದಿತ್ತು. ಅದರಲ್ಲಿಯೂ ನಾಗರಿಕ ಸನ್ಮಾನದ ಸಭಾಧ್ಯಕ್ಷತೆಯನ್ನು ಮಂಗಳೂರು ವಿ ವಿಯ ಕುಲಪತಿಗಳಾದ ಮಾನ್ಯ ಯಡಪಡಿತ್ತಾಯರು ವಹಿಸಲಿರುವುದು ಕಂಡು ಮನಸ್ಸು ವಿಷಣ್ಣವಾಯಿತು ಎಂದು ಮಂಗಳೂರಿನ ಯುವ ಹೋರಾಟಗಾರ ಮುನೀರ್ ಕಾಟಿಪಳ್ಳ ಬೇಸರ ವ್ಯಕ್ತಪಡಿಸಿದ್ದಾರೆ.

ಕುವೆಂಪು, ಅಂಬೆಡ್ಕರ್ ರಂತಹ ಮಹಾ ಚೇತನಗಳನ್ನು ಅವಮಾನಿಸುವ, ಅತ್ಯಂತ ಕೊಳಕು ಪದಗಳಿಂದ ನಾಡಿನ ಸಾಹಿತಿ ಬರಹಗಾರರನ್ನು ಟ್ರೋಲ್ ಮಾಡುವುದರಲ್ಲಿ ಕುಖ್ಯಾತಗೊಂಡಿರುವ ವ್ಯಕ್ತಿಯೊಬ್ಬನಿಗೆ ಸನ್ಮಾನ ಮಾಡುವ ಸಭೆಯ ಅಧ್ಯಕ್ಷತೆಯನ್ನು ವಿವಿಯ ಕುಲಪತಿಗಳು ವಹಿಸುತ್ತಾರೆ ಅಂತಾದರೆ ಕನಿಷ್ಟಪಕ್ಷ ಸಾರ್ವಜನಿಕ ಲಜ್ಜೆಯೂ ಈ ನಾಡಿನಲ್ಲಿ ಇಲ್ಲದಾಯಿತೇ ಎಂದು ಚಡಪಡಿಸುವಂತಾಗುತ್ತಿದೆ. ಇದು ಸರಿಯಲ್ಲ. ಮಂಗಳೂರಿನಲ್ಲಿ ಇಂತಹ ಕಾರ್ಯಕ್ರಮ ನಡೆಯುವುದು ಇಡೀ ರಾಜ್ಯದಲ್ಲಿ ನಮ್ಮ ನಗರದ ಘನತೆಗೆ ಕುಂದು ತರುತ್ತದೆ.‌ ಆಯೋಜಕರು ಕಾರ್ಯಕ್ರಮ ಕೈ ಬಿಡಬೇಕು. ಕುಲಪತಿಗಳಾದ ಮಾನ್ಯ ಯಡಪಡಿತ್ತಾಯರಾದರು ಈ ಕಾರ್ಯಕ್ರದಲ್ಲಿ ನಾನಿಲ್ಲ ಎಂತ ಹೇಳಬೇಕು. ಅದಾಗಲಿಲ್ಲ ಅಂತಾದರೆ ಮಂಗಳೂರಿನ ಪ್ರಜ್ಞಾವಂತರು, ನಾಗರಿಕ ಸಂಘಟನೆಗಳು ಕಾರ್ಯಕ್ರಮದ ರದ್ದತಿಗೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪಠ್ಯ ಪರಿಷ್ಕರಣೆಯಲ್ಲಿ ವಿವಿಧ ಮಹಾನ್ ವ್ಯಕ್ತಿಗಳ ಪಾಠವನ್ನು ಕೈಬಿಡಲಾಗಿದೆ, ತಿರುಚಲಾಗಿದೆ ಎಂಬ ಆರೋಪಗಳು ಜೋರಾಗಿ ಕೇಳಿಬರುತ್ತಿವೆ. ಅಲ್ಲದೆ ಆದಿವಾಸಿಗಳನ್ನು ಅವಮಾನಿಸಿದ್ದಾರೆ ಎಂದೂ ಕುವೆಂಪುರವರ ರಚಿಸಿದ ನಾಡಗೀತೆಯನ್ನು ತಿರುಚಿದ್ದಾರೆಂದು ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲಾಗಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ಸನ್ಮಾನ ಏರ್ಪಡಿಸುತ್ತಿರುವುದು ವಿರೋಧಕ್ಕೆ ಕಾರಣವಾಗಿದೆ.


ಇದನ್ನೂ ಓದಿ: ವಾಟ್ಸಾಪ್ ಯೂನಿವರ್ಸಿಟಿಯ ವಿಧೇಯ ವಿದ್ಯಾರ್ಥಿ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಟ್ವೀಟ್‌ಗೆ ವ್ಯಂಗ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಏನು ಹೇಳಿದರೂ ಕಾರ್ಯಕ್ರಮವನ್ನಂತೂ ಹೇಗೂ ಆ ಪ್ರತಿಗಾಮಿಗಳು ನಿಲ್ಲಿಸುವುದಿಲ್ಲ. ಕಡೇ ಪಕ್ಷ ಕುಲಪತಿ “ಯಡವಟ್ಟಾಯ”ನಾದರೂ ಹೋಗುವುದನ್ನು ಕೈ ಬಿಡದಿದ್ದಲ್ಲಿ ರಾಜ್ಯದಾದ್ಯಂತ ಹಲವು ಗಣ್ಯರು, ಕಾರ್ಯಕರ್ತರು ಯಾವುದಾದರೂ ಗಾಂಧಿ ಪ್ರತಿಮೆ ಬಳಿ ಸೇರಿ, ಕಪ್ಪು ಪಟ್ಟಿ ಕಟ್ಟಿಕೊಂಡು, “ಯಡವಟ್ಟಾಯ”ನ ಫೋಟೋವನ್ನು ತಲೆಕೆಳಗಾಗಿ ಇಟ್ಕೊಂಡು, ಎರಡು-ಮೂರು ಗಂಟೆ ಕಾಲ ಧರಣಿಯನ್ನಾದರೂ ಮಾಡುವುದು ನಾವು ಮಾಡಬಹುದಾದ ಕನಿಷ್ಠ ಪ್ರತಿಭಟನೆ ಅಂತ ನನ್ನ ಅನ್ನಿಸಿಕೆ.

  2. ಈ ಅಯ್ಯೊಗ್ಯ ಉಪಕುಲಪತಿ ಸಾರ್ವಜನಿಕರ ತೆರಿಗೆ ಹಣದಿಂದ ಸಂಬಳ ಸಾರಿಗೆ ಪಡಿತಾ ಇದ್ದಾನೆ, ಈತನಿಗೆ ಕನಿಷ್ಠ ಜ್ಞಾನವು ಇಲ್ಲವೇ?ನಾಡಿನಾದ್ಯಂತ ಚಕ್ರತೀರ್ಥನ ಮೇಲೆ ಇಷ್ಟು ವಿರೋಧವ್ಯಕ್ತ ಆಗುತ್ತಿರುವ ಈ ಸಮಯದಲ್ಲಿ,ಅದು ಸಾರ್ವಜನಿಕರ ತೆರಿಗೆ ಹಣದಿಂದಆತನಿಗೆ ಸನ್ಮಾನ ಯಾವ ಪುರುಷಾರ್ಥಕ್ಕೆ? ಒಂದು ಪಕ್ಷ ಈ ಕುಲಪತಿಯು ಚಕ್ರತೀರ್ಥನ ಸಮುದಾಯದವನೆ ಆಗಿದ್ದರೆ ಮತ್ತು ಸನ್ಮಾನ ಮಾಡುವ ತೇವಲಿದ್ದರೆ ಆತನ ಸ್ವಂತಹಣದಲ್ಲಿ ಖಾಸಗಿಯಾಗಿ ಮಾಡಿಕೊಳ್ಳಲಿ,

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...