Homeಕರ್ನಾಟಕಅಂಬೇಡ್ಕರ್‌ ಕುರಿತು ಅವಹೇಳನ: ಜೈ‌ನ್‌ ವಿವಿ ವಿರುದ್ಧ ದಲಿತ ಮುಖಂಡರ ಆಕ್ರೋಶ

ಅಂಬೇಡ್ಕರ್‌ ಕುರಿತು ಅವಹೇಳನ: ಜೈ‌ನ್‌ ವಿವಿ ವಿರುದ್ಧ ದಲಿತ ಮುಖಂಡರ ಆಕ್ರೋಶ

- Advertisement -
- Advertisement -

ರಾಷ್ಟ್ರ ನಾಯಕ, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿ, ಮೀಸಲಾತಿ ಕುರಿತು ಕ್ಷುಲ್ಲಕವಾಗಿ ಚಿತ್ರಿಸಿ ಪ್ರಹಸನ (ಸ್ಕಿಟ್‌) ಪ್ರದರ್ಶಿಸಿರುವ ಬೆಂಗಳೂರಿನ ಜೈನ್‌‌ ವಿಶ್ವವಿದ್ಯಾನಿಲಯದ ವಿರುದ್ಧ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಬಿ.ಆರ್.ಅಂಬೇಡ್ಕರ್ ಅಲ್ಲ ಅದು ಬಿಯರ್ ಅಂಬೇಡ್ಕರ್” ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಮತ್ತು ದಲಿತರ ಬಗ್ಗೆಯೂ ಅವಹೇಳನಕಾರಿ ಭಾಷೆ ಬಳಸಿ ವಿವಾದ ಹುಟ್ಟುಹಾಕಿದ್ದಾರೆ. ಸ್ಕಿಟ್‌ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ಬ್ಯಾನ್ ಜೈನ್‌ ಯೂನಿವರ್ಸಿಟಿ (ಜೈನ್ ವಿಶ್ವವಿದ್ಯಾನಿಲಯ ರದ್ದುಗೊಳಿಸಿ) ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿರುವ ಪೋಸ್ಟರ್‌ ವೈರಲ್ ಆಗುತ್ತಿದೆ. ಮತ್ತೊಂದೆಡೆ ಜೈನ್ ವಿವಿಯು, “ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಸ್ಕಿಟ್ ಮಾಡಲಾಗಿದೆ. ಈ ರೀತಿಯ ಅಪಕಲ್ಪನೆಗಳು ಇರಬಾರದು ಎಂದು ಈ ಸ್ಕಿಟ್ ಕೊನೆಯಲ್ಲಿ ಸಂದೇಶ ಸಾರುತ್ತಿದೆ” ಎಂದು ಹೇಳಿಕೊಂಡಿದೆ. (ಸಾರ್ವಜನಿಕವಾಗಿ ಸ್ಕಿಟ್‌ನ ಪೂರ್ಣ ವಿಡಿಯೊ ಲಭ್ಯವಾಗಿಲ್ಲ.)

ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ದಲಿತ ಮುಖಂಡರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ದಸಂಸ ಮುಖಂಡರಾದ ಮಾವಳ್ಳಿ ಶಂಕರ್‌ ಮಾತನಾಡಿ, “ಈ ಸ್ಕಿಟ್ ಮಾಡಿರುವವರ ಉದ್ದೇಶ ಸ್ಪಷ್ಟವಾಗುತ್ತಿದೆ. ಸಮಾಜದಲ್ಲಿ ಅರಿವು ಮೂಡಿಸಲು ಇದನ್ನು ಮಾಡಿದ್ದೇವೆ ಎಂದು ಅವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅರಿವು ಮೂಡಿಸಲು ಬೇರೆ ಬೇರೆ ಆಯಾಮಗಳು ಇರುತ್ತವೆ. ಆದರೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಬಗ್ಗೆ, ಮೀಸಲಾತಿ, ಅಸ್ಪೃಶ್ಯತೆಯ ಬಗ್ಗೆ ಬಳಸಿರುವ ಭಾಷೆಯು ಇವರ ಉದ್ದೇಶವೇನೆಂದು ಹೇಳುತ್ತದೆ. ಜಾತಿ ಪೀಡಿತ ಮನೋಭಾವ ಎದ್ದುಕಾಣುತ್ತಿದೆ” ಎಂದಿದ್ದಾರೆ.

“ಈ ಸ್ಕಿಟ್‌ನ ರಿಹರ್ಸಲ್‌ ನೋಡಿ ಪ್ರದರ್ಶನಕ್ಕೆ ಅನುಮತಿ ನೀಡಿದವರು ಯಾರು? ಅವರ ವಿರುದ್ಧ ಕಾನೂನು ಕ್ರಮ ಆಗಬೇಕಿದೆ. ಬಂಡವಾಳಶಾಹಿಗಳು ನಡೆಸುತ್ತಿರುವ ಈ ಸಂಸ್ಥೆಯ ಮ್ಯಾನೇಜ್‌ಮೆಂಟ್ ವಿರುದ್ಧ ಕ್ರಮ ಜರುಗಿಸಬೇಕಿದೆ. ಸರ್ಕಾರಗಳಿಗೆ ಈ ರೀತಿಯ ಮನಸ್ಥಿತಿಗಳೇ ಬೇಕಾಗಿವೆ. ಸಾಮಾಜಿಕ ನ್ಯಾಯವನ್ನು ಇವರು ಕಡೆಗಣಿಸುತ್ತಿದ್ದಾರೆ. ಅಪ್ರಜಾತ್ಮಕ ವ್ಯವಸ್ಥೆ ಬೆಳೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಬಾಬಾ ಸಾಹೇಬರ ಕುರಿತು ಅವಹೇಳನಕಾರಿ ಸ್ಕಿಟ್ ಮಾಡಿಸಿದ್ದಾರೆ. ಯಾವ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದ್ದಾರೆ?” ಎಂದು ಪ್ರಶ್ನಿಸಿದರು.

“ಆರ್‌ಎಸ್‌ಎಸ್, ಬಿಜೆಪಿಯವರು ಮೀಸಲಾತಿ ಎಂದರೆ ಮೈ ಪರಚಿಕೊಳ್ಳುತ್ತಾರೆ. ಮೂಲತಃ ಸಾಮಾಜಿಕ ನ್ಯಾಯದ ವಿರೋಧಿ ಮನಸ್ಥಿತಿ ಇವರದ್ದು. ಮಂಡಲ್‌ ವರದಿಗೆ ಬೆಂಕಿ ಹಚ್ಚಿದವರು ಇವರು. ಮೀಸಲಾತಿಯ ವಿರುದ್ಧ ವಿಷ ಕಾರುತ್ತಿರುವವರು ಇವರು. ಆದರೆ ಇಡಬ್ಲ್ಯೂಎಸ್‌ ಮೂಲಕ ಅನಾಯಸವಾಗಿ ತಿನ್ನುತ್ತಿದ್ದಾರೆ. ಇಡಬ್ಲ್ಯೂಎಸ್‌ ಕುರಿತು ಇವರಿಗೆ ಏನೂ ಅನಿಸುವುದಿಲ್ಲ” ಎಂದು ಟೀಕಿಸಿದರು.

“ಬೆಂಗಳೂರು ವಿವಿ ವಿದ್ಯಾರ್ಥಿಗಳು ಹೋರಾಟಕ್ಕೆ ಕರೆ ನೀಡಿದ್ದು, ಜೈನ್‌ ವಿವಿ ಬಾಯ್ಕಾಟ್‌ ಘೋಷಣೆ ಕೂಗುತ್ತಿದ್ದಾರೆ. ಈ ವಿಶ್ವವಿದ್ಯಾನಿಲಯವನ್ನು ರದ್ದುಗೊಳಿಸಬೇಕು. ಈ ಸ್ಕಿಟ್‌ನಲ್ಲಿ ಭಾಗಿಯಾಗಿರುವವರು (ಸ್ಕಿಟ್ ಮಾಡಿದವನು, ಮಾಡಲು ಕುಮ್ಮಕ್ಕು ಕೊಟ್ಟವನು, ಅದನ್ನು ಪ್ರೋತ್ಸಾಹಿಸಿದ ಮ್ಯಾನೇಜ್‌ಮೆಂಟ್) ಯಾರೇ ಆದರೂ ಅವರ ವಿರುದ್ಧ ಕ್ರಮ ಜರುಗಿಸಬೇಕು. ಇಂತಹ ದೇಶದ್ರೋಹಿಗಳ ಮೇಲೆ ಯುಎಪಿಎ ಹಾಗೂ ಎಸ್‌ಸಿ, ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣದ ದಾಖಲಿಸಬೇಕು” ಎಂದು ಒತ್ತಾಯಿಸಿದರು.

ದಸಂಸ ಹಿರಿಯ ಮುಖಂಡರಾದ ಎನ್‌.ವೆಂಕಟೇಶ್ ಮಾತನಾಡಿ, “ದಲಿತ ಸಂಘಟನೆಗಳ ಐಕ್ಯತಾ ಹೋರಾಟ ಸಮಿತಿ ಈ ಘಟನೆಯನ್ನು ಖಂಡಿಸುತ್ತದೆ. ಇಲ್ಲಿ ಉದ್ದೇಶಪೂರ್ವಕವಾಗಿ ಅಂಬೇಡ್ಕರ್‌ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಅಸಮಾನತೆಯನ್ನು ಉಳಿಸಿಕೊಂಡು ಹೋಗಬೇಕು ಎಂಬುದು ಸಂಘಪರಿವಾರದ ಆಲೋಚನೆ. ಹೀಗಾಗಿ ಅಂಬೇಡ್ಕರ್‌ ಅವರ ಚಿಂತನೆಗಳನ್ನು ಬುಡಮೇಲು ಮಾಡಲು, ಸಂವಿಧಾನ ವಿರೋಧಿ ಕಾರ್ಯಚರಣೆಯನ್ನು ನಡೆಸುತ್ತಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ” ಎಂದರು.

ಒಳಮೀಸಲಾತಿ ಹೋರಾಟದ ಮುಂಚೂಣಿ ಮುಖಂಡರಾದ ಅಂಬಣ್ಣ ಅರೋಲಿಕರ್‌ ಮಾತನಾಡಿ, “ಸಂವಿಧಾನ ಜಾರಿಮಾಡಬೇಕಾದ ಸರ್ಕಾರ ಇಂತಹ ಘಟನೆಗಳು ನಡೆದಾಗ ತಕ್ಷಣವೇ ಕ್ರಮ ಜರುಗಿಸಬೇಕು. ಸಂವಿಧಾನಶಿಲ್ಪಿಯನ್ನು ಅವಹೇಳನ ಮಾಡಿದವರನ್ನು ಬೇಷರತ್ತಾಗಿ ಅರೆಸ್ಟ್ ಮಾಡಿ, ತನಿಖೆ ಆರಂಭಿಸಬೇಕು. ಅನಗತ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಅವಕಾಶ ನೀಡಿ ಯುವಕರನ್ನು ಪ್ರಚೋದನೆ ಮಾಡಬಾರದು. ಇದು ಸರ್ಕಾರ ವೈಫಲ್ಯವಾಗುತ್ತದೆ. ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಬೇಕು. ಇಂತಹ ವಿಚಾರಗಳು ಹೆಚ್ಚು ಚರ್ಚೆಯಾದಷ್ಟು ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ” ಎಂದು ಎಚ್ಚರಿಸಿದರು.

ಘಟನೆಯನ್ನು ಖಂಡಿಸಿದ ಹಿರಿಯ ದಲಿತ ಮುಖಂಡರಾದ ಕರಿಯಪ್ಪ ಗುಡಿಮನಿ, “ಕರ್ನಾಟಕ ಜನಶಕ್ತಿ, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿಯ ಸ್ಥಳೀಯ ಕಾರ್ಯಕರ್ತರು ವಿಜಯನಗರ ಚಾಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಸುತ್ತಿದ್ದೇವೆ” ಎಂದು ಮಾಹಿತಿ ನೀಡಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನಾಡಾ’ದಿಂದ ಕುಸ್ತಿಪಟು ಬಜರಂಗ್ ಪುನಿಯಾ ಅಮಾನತು: ವರದಿ

0
ಡೋಪಿಂಗ್ ಪರೀಕ್ಷೆ (ಮಾದಕವಸ್ತು ಪತ್ತೆ ಪರೀಕ್ಷೆ)ಗೆ ಸರಿಯಾದ ಸಮಯಕ್ಕೆ ಮೂತ್ರದ ಮಾದರಿಯನ್ನು ನೀಡದ ಆರೋಪದ ಮೇಲೆ ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ...