Homeಕರ್ನಾಟಕಸೆ.20ರಂದು ಮುಖ್ಯಮಂತ್ರಿ ಮನೆ ಚಲೋ: ಪೋಸ್ಟರ್ ಬಿಡುಗಡೆ

ಸೆ.20ರಂದು ಮುಖ್ಯಮಂತ್ರಿ ಮನೆ ಚಲೋ: ಪೋಸ್ಟರ್ ಬಿಡುಗಡೆ

- Advertisement -
- Advertisement -

ಬೆಂಗಳೂರು: ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು ಸೆಪ್ಟೆಂಬರ್ 20ರಂದು ಬೆಂಗಳೂರಿನಲ್ಲಿ ಸಂಘಟಿಸಿರುವ ಮುಖ್ಯಮಂತ್ರಿ ಮನೆ ಚಲೋ ಹೋರಾಟದ ಪೋಸ್ಟರ್ ಗಳನ್ನು ಕಾರ್ಮಿಕ ನಾಯಕರು ಬಿಡುಗಡೆ ಮಾಡಿದ್ದಾರೆ.

ಶುಕ್ರವಾರ ಎಐಟಿಯುಸಿ‌ ಕಚೇರಿಯಲ್ಲಿ ಸಮಾವೇಶಗೊಂಡ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ‌ಸಮಿತಿ ಮುಖಂಡರು, ರಾಜ್ಯಾದ್ಯಂತ ಪ್ರಚಾರಾಂದೋಲನ ನಡೆಸಲು ಮುದ್ರಿಸಿರುವ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿದರು. ರಾಜ್ಯದ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರ ನಡುವೆ ವ್ಯಾಪಕವಾಗಿ ಪ್ರಚಾರ ನಡೆಸಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರನ್ನು ಹೋರಾಟಕ್ಕೆ‌ ಅಣಿಗೊಳಿಸಲು ನಿರ್ಧರಿಸಿದರು.

ಐಎನ್ ಟಿಯುಸಿ ಮುಖಂಡರಾದ ಶಾಮಣ್ಣ ರೆಡ್ಡಿ, ಶ್ರೀನಿವಾಸ್, ಎಐಟಿಯುಸಿ ಮುಖಂಡರಾದ ಎಚ್.ಜಿ.ಉಮೇಶ್,‌ ಗಿರೀಶ್, ಗುರುವಯ್ಯ, ಈರಣ್ಣ, ಎಚ್.ಎಂ.ಎಸ್ ಮುಖಂಡರಾದ ನಾಗನಾಥ್, ಸಿಐಟಿಯು ಮುಖಂಡರಾದ ಕೆ.ಮಹಾಂತೇಶ, ಲಿಂಗರಾಜ್, ಹರೀಶ ಕುಮಾರ್,ಎನ್ ಸಿ.ಎಲ್.ನಾಯಕರಾದ ಎನ್.ಪಿ.ಸಾಮಿ, ಧನಶೇಖರ್, ಲೀಲಾವತಿ ಎಐಯುಟಿಯುಸಿ ಮುಖಂಡರಾದ ಷಣ್ಮುಗಂ, ಎಐಸಿಸಿಟಿಯು ಮುಖಂಡರಾದ ಪ್ರಭಾಕರ್, ಟಿಯುಸಿಸಿ ಮುಖಂಡರಾದ ಜಿ.ಆರ್.ಶಿವಶಂಕರ್ ಸಭೆಯಲ್ಲಿ ಭಾಗವಹಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...