HomeದಿಟನಾಗರFACT CHECK : ರಾಯಚೂರಿನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬುವುದು ಸುಳ್ಳು

FACT CHECK : ರಾಯಚೂರಿನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬುವುದು ಸುಳ್ಳು

- Advertisement -
- Advertisement -

“ಅಂತೂ ಇಂತೂ ರಾಯಚೂರಿಗೆ ಬಂತು ಪಾಕಿಸ್ತಾನ್. ಇವತ್ತು ರಾಯಚೂರು ನಾಳೆ ನಮ್ಮ ಊರು” ಎಂದು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹರಿಬಿಡಲಾಗಿದೆ. ವಿಡಿಯೋದಲ್ಲಿ ಜನರ ಗುಂಪೊಂದು ಘೋಷಣೆ ಕೂಗುತ್ತಾ ಸಾಗುವುದನ್ನು ನೋಡಬಹುದು.

ಫ್ಯಾಕ್ಟ್‌ಚೆಕ್ : ರಾಯಚೂರಿನಲ್ಲಿ ಪಾಕಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗಿರುವ ಯಾವುದೇ ಘಟನೆಯ ಕುರಿತು ವರದಿಯಾಗಿಲ್ಲ. ಅಂತಹ ಘಟನೆ ನಡೆದಿದ್ದರೆ ಮುಖ್ಯವಾಹಿನಿ ಮಾಧ್ಯಮಗಳು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದವು. ಈ ಹಿಂದೆ ವಿಧಾನಸೌಧದಲ್ಲಿ ಘೋಷಣೆ ಕೂಗಿದಾಗ ಮಾಧ್ಯಮಗಳು ನಿರಂತರ ಸುದ್ದಿ ಪ್ರಕಟಿಸಿದ್ದವು.

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ‘Ramana gouda’ ಎಂಬ ಯೂಟ್ಯೂಬ್ ಚಾನೆಲ್‌ ಒಂದರಲ್ಲಿ ಮೇ 1, 2024ರಂದು ಇದೇ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಆ ವಿಡಿಯೋವನ್ನು ಸ್ಲೋ ಮಾಡಿ ಸ್ಪಷ್ಟವಾಗಿ ಕೇಳಿಸಿಕೊಂಡರೆ, ಅಲ್ಲಿ ‘ರವಿ ಸಾಬ್ ಝಿಂದಾಬಾದ್’ ಎಂದು ಕೂಗಿರುವುದು ಕೇಳಿಸುತ್ತದೆ.

ಏಪ್ರಿಲ್ 30,2024ರಂದು ಕಾಂಗ್ರೆಸ್‌ ಮುಖಂಡ ರವಿ ಬೋಸ್‌ ರಾಜ್ ಅವರು ಲೋಕಸಭಾ ಚುನಾವಣೆಗೆ ರಾಯಚೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಜಿ. ಕುಮಾರ್ ನಾಯಕ್ ಪರ ಪ್ರಚಾರಕ್ಕೆ ತೆರಳಿದ್ದರು. ವೇಳೆ ಕಾಂಗ್ರೆಸ್‌ ಬೆಂಬಲಿಗರು ‘ರವಿ ಸಾಬ್ ಝಿಂದಾಬಾದ್ ಎಂದು ಕೂಗಿದ್ದಾರೆ. ಅದನ್ನು ತಿರುಚಿ ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.

ಇದನ್ನೂ ಓದಿ : FACT CHECK : ಬಳ್ಳಾರಿಯ ಚಿನ್ನಾಭರಣ ಮಳಿಗೆಯಲ್ಲಿ ನಡೆದಿರುವುದು ಬಾಂಬ್ ಸ್ಪೋಟವಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read