Homeಮುಖಪುಟಅದಾನಿ ಹಗರಣ: ಹೂಡಿಕೆದಾರರನ್ನು ರಕ್ಷಿಸಲು ತಜ್ಞರ ಸಮಿತಿ ರಚನೆಗೆ ಸುಪ್ರೀಂ ಸೂಚನೆ

ಅದಾನಿ ಹಗರಣ: ಹೂಡಿಕೆದಾರರನ್ನು ರಕ್ಷಿಸಲು ತಜ್ಞರ ಸಮಿತಿ ರಚನೆಗೆ ಸುಪ್ರೀಂ ಸೂಚನೆ

- Advertisement -
- Advertisement -

ಅದಾನಿ ಗ್ರೂಪ್ ವಿರುದ್ದ ತನಿಖೆ ನಡೆಸುವಂತೆ ಪ್ರತಿಪಕ್ಷಗಳು ಸರ್ಕಾರವನ್ನು ಒತ್ತಾಯಿಸುತ್ತಿರುವ ಬೆನ್ನಲ್ಲೇ  ಅದಾನಿ ಗ್ರೂಪ್ ವಿರುದ್ಧದ ವಂಚನೆ ಆರೋಪದ ಮೇಲೆ ಪರೀಶಿಲನೆ ನಡೆಸಲು ನ್ಯಾಯಾಧೀಶರನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ.

ಈ ವಿವಾದದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು ಎಂಬ ಅರ್ಜಿಯ ವಿಚಾರಣೆ ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ”ನಾವು ಮಧ್ಯ ಪ್ರವೇಶ ಮಾಡುವುದರಿಂದ ಇದು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ಸಾಧ್ಯವೇ? ನಾವು ಅದರ ನೀತಿ ನಿಯಮಗಳ ವಿಷಯಗಳಿಗೆ ಪ್ರವೇಶಿಸಲು ಆಗುವುದಿಲ್ಲ ಅದನ್ನು ಸರ್ಕಾರಕ್ಕೆ ನೋಡಿಕೊಳ್ಳಬೇಕು” ಎಂದು ಹೇಳಿದರು.

ಇದನ್ನೂ ಓದಿ: ಖರ್ಗೆ ಭಾಷಣಕ್ಕೆ ಅವಕಾಶ ನೀಡದ ಸಭಾಧ್ಯಕ್ಷ ಧನಕರ್; ಪ್ರತಿಪಕ್ಷಗಳಿಂದ ಸಭಾತ್ಯಾಗ

“ಭಾರತ ಸರ್ಕಾರವು ಈ ವಿವಾದದ ಬಗ್ಗೆ ಆಸಕ್ತಿ ತೋರಿ ಅಗತ್ಯವಿದ್ದರೆ ತನಿಖೆಗೆ ಒಳಪಡಿಸಬೇಕು. ಸಧ್ಯದ ಈ ಪರಿಸ್ಥಿತಿಯನ್ನು ಎದುರಿಸಲು ನಾವು ತಜ್ಞರ ಸಮಿತಿ ರಚಿಸಲು ಸೂಚಿಸಿದ್ದೇವೆ” ಎಂದು ಡಿವೈ ಚಂದ್ರಚೂಡ್ ಹೇಳಿದರು. ಈ ಸಮಿತಿಯಲ್ಲಿ ನ್ಯಾಯಾಧೀಶರು ಮತ್ತು ಡೊಮೇನ್ ಎಕ್ಸ್‌ಪರ್ಟ್ಸ್ ಗಳನ್ನು ಸೇರಿಸಿಕೊಳ್ಳಬೇಕು ಎಂದರು.

“ಈ ಬಗ್ಗೆ ನಿಯಂತ್ರಕ ಪ್ರಕ್ರಿಯೆಯ ಬಗ್ಗೆ ಕಾಳಜಿಯ ವಹಿಸಲು ನಾವು ಸಾಲಿಸಿಟರ್ ಜನರಲ್ ಅವರಿಗೆ ಸೂಚಿಸಿದ್ದೇವೆ ಮತ್ತು ಕಳೆದ ಎರಡು ವಾರಗಳಲ್ಲಿ ನಡೆದ ಘಟನೆಯಿಂದ ಭಾರತೀಯ ಹೂಡಿಕೆದಾರರನ್ನು ರಕ್ಷಿಸಲಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ಈ ವೇಳೆ ಸಧ್ಯದ ಪರಿಸ್ಥಿತಿ ಮತ್ತು ನಿಯಂತ್ರಣದ ಕುರಿತು ಸಂಕ್ಷಿಪ್ತ ಟಿಪ್ಪಣಿಯನ್ನು ಕೇಳಿದರು.

ಈ ವೇಳೆ ಸಾಲಿಸಿಟರ್ ಜನರಲ್ ಪ್ರತಿಕ್ರಿಯಿಸಿ, ಸೆಬಿ (ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ನಿಗಾ ಇಡಲು ಕೆಲಸವನ್ನು ಮಾಡುತ್ತಿದೆ ಎಂದು ಹೇಳುತ್ತಾರೆ. ಆಗ ನ್ಯಾಯಮೂರ್ತಿ ಚಂದ್ರಚೂಡ್ ಅವರು, ”ನಾವು ಯಾವುದೇ ನಿಯಂತ್ರಕ ಚೌಕಟ್ಟಿನ ಮೇಲೆ ಆಕಾಂಕ್ಷೆ ಹೊಂದಿಲ್ಲ. ನಾವು ಈ ಅಂಶದ ಬಗ್ಗೆ ಸಂವಾದ ನಡೆಸುತ್ತಿದ್ದೇವೆ ಎಂದು ಹೇಳಿದರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಸೆಬಿ, ಹಣಕಾಸು ಮತ್ತು ಇತರ ಸಚಿವಾಲಯಗಳೊಂದಿಗೆ ಸಮಾಲೋಚಿಸಿದ ನಂತರ ಪ್ರಸ್ತಾವನೆಯೊಂದಿಗೆ ಸೋಮವಾರ ಹಿಂತಿರುಗುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ”ಸೆಬಿಯು ಈ ಸಮಸ್ಯೆಯನ್ನು ನಿಯಂತ್ರಣ ದೃಷ್ಟಿಕೋನದಿಂದ ನೋಡುತ್ತಿದೆ” ಎಂದು ಅವರು ಹೇಳಿದರು.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲಿಯನೇರ್ ಗೌತಮ್ ಅದಾನಿಯವರ ವ್ಯವಹಾರದ ಕ್ಷೇತ್ರ ದೊಡ್ಡದಿದೆ. ಈ ಅದಾನಿ ಗ್ರೂಪ್ಸ್ ಮೇಲೆ ಯುಎಸ್ ಮೂಲದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ಅವರ ಜನವರಿ 24 ರ ವರದಿ ಬಿತ್ತರಿಸಿದ ಮೇಲೆ ಅದರ ಏಳು ಕಂಪನಿಗಳ ಷೇರುಗಳು $100 ಶತಕೋಟಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...