Homeಮುಖಪುಟಖರ್ಗೆ ಭಾಷಣಕ್ಕೆ ಅವಕಾಶ ನೀಡದ ಸಭಾಧ್ಯಕ್ಷ ಧನಕರ್; ಪ್ರತಿಪಕ್ಷಗಳಿಂದ ಸಭಾತ್ಯಾಗ

ಖರ್ಗೆ ಭಾಷಣಕ್ಕೆ ಅವಕಾಶ ನೀಡದ ಸಭಾಧ್ಯಕ್ಷ ಧನಕರ್; ಪ್ರತಿಪಕ್ಷಗಳಿಂದ ಸಭಾತ್ಯಾಗ

- Advertisement -
- Advertisement -

ಸದನದಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮತ್ತು ಇತರ ಕೆಲವು ಪ್ರತಿಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗಿ ಸಭಾತ್ಯಾಗ ಮಾಡಿದರು.

ರಾಜ್ಯಸಭಾ ಸಭಾಧ್ಯಕ್ಷ ಜಗದೀಪ್ ಧನಕರ್ ಅವರು, ಖರ್ಗೆ ಅವರಿಗೆ ಎರಡು ಬಾರಿ ಮಾತನಾಡಲು ಅವಕಾಶ ನೀಡಿದ್ದರೂ ಕೂಡ ಬಿಜೆಪಿ ಸದಸ್ಯರು ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಮೊದಲಿಗೆ ಕಡತದಿಂದ ತೆಗೆದುಹಾಕಲಾದ ಆರು ಅಂಶಗಳ ಭಾಗಗಳನ್ನು ಖರ್ಗೆ ಅವರು ಓದಲು ಪ್ರಾರಂಭಿಸಿದಾಗ ಮೊದಲ ಬಾರಿಗೆ ನಿಲ್ಲಿಸಲಾಯಿತು.

ಆ ಬಳಿಕ ಖರ್ಗೆ ಅವರು, ”ನಾವು ನಿಮ್ಮನ್ನು ಗೌರವಿಸುತ್ತೇವೆ, ನಮ್ಮ ಕೋಪವೆಲ್ಲಾ ಸರ್ಕಾರದ ಮೇಲೆಯೇ ಹೊರತು ವೈಯಕ್ತಿಕವಾಗಿ ನಿಮ್ಮ ಮೇಲಲ್ಲ… ನೀವು ನನ್ನ ಆರು ಅಂಶಗಳನ್ನು ಕಡತದಿಂದ ತಗೆದು ಹಾಕಿದ್ದೀರಿ. ಅವು ಅಸಂಸದೀಯ ಅಂಶಗಳಲ್ಲ, ಆದರೂ ನೀವು ಕಡತಕ್ಕೆ ಏಕೆ ಸೇರಿಸಲಿಲ್ಲ? ಸದನದಲ್ಲಿ ಕೇಳಿದ್ದಾರೆ. ಅವರು ದಾಖಲೆಯಲ್ಲಿ ಯಾವುದನ್ನು ಸೇರಿಸಲಾಗಿಲ್ಲ ಎಂಬ ಬಗ್ಗೆ ಖರ್ಗೆ ಅವರು ಅಧ್ಯಕ್ಷರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು.

ಈ ವೇಳೆ ವಿರೋಧ ಪಕ್ಷದ ಸಂಸದರು ಖರ್ಗೆ ಅವರಿಗೆ ಬೆಂಬಲ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ಆದರೆ ಇದಕ್ಕೆ ಸಭಾಪತಿ ಸಮ್ಮತಿಸಲಿಲ್ಲ. ಶೂನ್ಯ ವೇಳೆಯಲ್ಲಿ ಸದಸ್ಯರು ಮಾತನಾಡುತ್ತಿದ್ದಾಗ ಅದಾನಿ-ಹಿಂಡೆನ್‌ಬರ್ಗ್ ಸಮಸ್ಯೆಯ ತನಿಖೆಗೆ ಜಂಟಿ ಸಂಸದೀಯ ಸಮಿತಿಗೆ ವಿರೋಧ ಪಕ್ಷಗಳು ಒತ್ತಾಯಿಸಿ, ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ: ರಾಜ್ಯಸಭಾ ಕಡತದಿಂದ ಮೋದಿ ವಿರುದ್ಧದ ತಮ್ಮ ಹೇಳಿಕೆ ತಗೆದಿದ್ದಕ್ಕೆ ಖರ್ಗೆ ಆಕ್ಷೇಪ

ಆ ಬಳಿಕ ವಿರೋಧ ಪಕ್ಷದ ಸಂಸದರು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಆಗ ಸಭಾಧ್ಯಕ್ಷರು ”ನಾನು ಅವರನ್ನು (ಖರ್ಗೆ) ಮಾತನಾಡಲು ಕರೆದಿದ್ದೇನೆ. ನಾನು ಕಡತದಿಂದ ತಗೆಸಿದ ಭಾಗಗಳನ್ನು ವಿರೋಧ ಪಕ್ಷದ ನಾಯಕರು ಓದಲು ಆರಂಭಿಸಿದ್ದರಿಂದ ನಾನು ಎದ್ದು ಬಂದೆ. ಇದನ್ನು ಸದಸ್ಯರು ಅರ್ಥಮಾಡಿಕೊಳ್ಳಬೇಕು. ಈಗ, ಅದನ್ನು ಎಂದಾದರೂ ಅನುಮತಿಸಬಹುದೇ? ಇಲ್ಲ.” ಆದರೂ ನೀವು ಅದನ್ನು ಕಡತಕ್ಕೆ ಸೇರಿಸಬೇಕು ಎಂದು ಹೇಳಿದರೆ ಅದು ನನ್ನ ನಿರ್ದೇಶನದ “ಅತಿರೇಕದ ನಿರ್ಲಕ್ಷ್ಯ” ಎಂದು ಅಧ್ಯಕ್ಷರು ಕರೆದರು.

ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಖರ್ಗೆ ಅವರು, ”ಸಂಸತ್ತಿನ ಒಳಗೆ ಮತ್ತು ಹೊರಗೆ ಅದಾನಿ ವಿಷಯವನ್ನು ಕಾಂಗ್ರೆಸ್ ಪ್ರಸ್ತಾಪಿಸುತ್ತಲೇ ಇರುತ್ತದೆ. ಆದರೂ ಸರ್ಕಾರ ಪ್ರಜಾಸತ್ತಾತ್ಮಕವಾಗಿ ಕೆಲಸ ಮಾಡಲು ಸಿದ್ಧವಿಲ್ಲದಿದ್ದರೆ ಜನರೇ ಅಧಿಕಾರದಿಂದ ಕೆಳಗಿಳಿಸುತ್ತಾರೆ” ಎಂದು ಹೇಳಿದ್ದಾರೆ.

ಅದಾನಿ ವಿವಾದ, ಸಂಸತ್ತಿನಲ್ಲಿ ತಮ್ಮ ಮತ್ತು ರಾಹುಲ್ ಗಾಂಧಿ ಅವರ ಕೆಲವು ಟೀಕೆಗಳನ್ನು ಕಡತಕ್ಕೆ ಸೇರಸದೇ ಇರುವುದರ ಬಗ್ಗೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸರ್ಕಾರಕ್ಕೆ 10 ಪ್ರಶ್ನೆಗಳನ್ನು ಕೇಳಿದ್ದಾರೆ.

ಅದಾನಿ ವಿಷಯವು ಸಾರ್ವಜನಿಕ ಹಣವನ್ನು ಒಳಗೊಂಡಿರುವ ಅತಿ ”ದೊಡ್ಡ ಹಗರಣ” ಆಗಿದೆ. ಅದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಆದರೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ತನಿಖೆಗೆ ಆದೇಶಿಸಲು ಸರ್ಕಾರ ಏಕೆ ಹಿಂಜರಿಯುತ್ತಿದೆ ಎಂದು ಖರ್ಗೆ ಪ್ರಶ್ನೆ ಮಾಡಿದ್ದಾರೆ.

”ನಾನಾಗಲಿ ರಾಹುಲ್ ಗಾಂಧಿ ಅವರಾಗಲಿ ಕಡತದಿಂದ ತಗೆಯುವಂತಹ ಅಸಂಸದೀಯ ಮಾತುಗಳನ್ನು ಮಾತನಾಡಿಲ್ಲ. ಅದಾನಿ ವಿಷಯದ ಬಗ್ಗೆ ಕೆಲವು ಪ್ರಶ್ನೆಗಳನ್ನು ಮಾತ್ರ ಕೇಳಿದ್ದೇವೆ” ಎಂದು ಖರ್ಗೆ ತಿಳಿಸಿದರು.

”ಅದಾನಿ ಗ್ರೂಪ್ ಮೇಲಿನ ಆರೋಪಗಳ ಬಗ್ಗೆ ಮೋದಿ ಸರ್ಕಾರವು ಜಂಟಿ ಸಂಸದೀಯ ಸಮಿತಿಯ ತನಿಖೆ ಏಕೆ ನಡೆಸುತ್ತಿಲ್ಲ? ಸಂಸತ್ತಿನಲ್ಲಿ ‘ಅದಾನಿ’ ಪದವನ್ನು ಯಾರಿಗೂ ಹೇಳಲು ಮೋದಿ ಜಿ ಮತ್ತು ಅವರ ಸರ್ಕಾರವು ಅವಕಾಶ ನೀಡದಿರುವುದಕ್ಕೆ ಕಾರಣವೇನು?” ಎಂದು ಪ್ರಶ್ನಿಸಿದರು.

ಸಾರ್ವಜನಿಕ ಹಣವನ್ನು ಒಳಗೊಂಡಿರುವ ಅತಿ ”ದೊಡ್ಡ ಹಗರಣ” ನಡೆದಿದ್ದರೂ ಆರ್‌ಬಿಐ, ಸೆಬಿ, ಇಡಿ, ಎಸ್‌ಎಫ್‌ಐಒ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಐಟಿ ಮತ್ತು ಸಿಬಿಐ ಏಕೆ ಇನ್ನೂ ಮೌನವಾಗಿವೆ. ತನಿಖೆ ಏಕೆ ನಡೆಸುತ್ತಿಲ್ಲ? ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಶ್ನೆ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read