Homeಮುಖಪುಟ'ಅಂಬೇಡ್ಕರ್‌ರನ್ನು ಗುಂಡಿಟ್ಟು ಕೊಲ್ಲುತ್ತಿದ್ದೆ': ನಾಲಿಗೆ ಹರಿಬಿಟ್ಟ ಹಿಂದುತ್ವ ನಾಯಕ; ಕ್ರಮಕ್ಕೆ BSP ನಾಯಕರ ಆಗ್ರಹ

‘ಅಂಬೇಡ್ಕರ್‌ರನ್ನು ಗುಂಡಿಟ್ಟು ಕೊಲ್ಲುತ್ತಿದ್ದೆ’: ನಾಲಿಗೆ ಹರಿಬಿಟ್ಟ ಹಿಂದುತ್ವ ನಾಯಕ; ಕ್ರಮಕ್ಕೆ BSP ನಾಯಕರ ಆಗ್ರಹ

- Advertisement -
- Advertisement -

ಗೋಡ್ಸೆ ಗಾಂಧಿಯನ್ನು ಕೊಂದಂತೆ ನಾನು ಅಂಬೇಡ್ಕರ್‌ರನ್ನು ಗುಂಡಿಟ್ಟು ಕೊಲ್ಲುತ್ತಿದ್ದೆ ಎಂದು ಹೇಳುವ ಮೂಲಕ ಹಿಂದುತ್ವ ಸಂಘಟನೆಯಾದ ರಾಷ್ಟ್ರೀಯ ದಲಿತ ಸೇನೆಯ ಸಂಸ್ಥಾಪಕ ಹಮಾರಾ ಪ್ರಸಾದ್ ಅವರು ನಾಲಿಗೆ ಹರಿಬಿಟ್ಟಿದ್ದಾರೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಮತ್ತು ಪ್ರಿವೆಂಟಿವ್ ಡಿಟೆನ್ಶನ್ ಆಕ್ಟ್ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಬಹುಜನ ಸಮಾಜ ಪಕ್ಷದ ತೆಲಂಗಾಣ ಮುಖ್ಯಸ್ಥ ಆರ್‌.ಎಸ್ ಪ್ರವೀಣ್ ಕುಮಾರ್ ಆಗ್ರಹಿಸಿದ್ದಾರೆ.

ಹಮಾರಾ ಪ್ರಸಾದ್ ಮಾತನಾಡಿರುವ ವಿಡಿಯೋದಲ್ಲಿ, ”ಅಂಬೇಡ್ಕರ್ ಬರೆದಿರುವ ‘ಹಿಂದೂಯಿಸಂನಲ್ಲಿ ಒಗಟುಗಳು’ ಎನ್ನುವ ಪುಸ್ತಕ ಜನಸಾಮಾನ್ಯರಿಗೆ ಜ್ಞಾನೋದಯಕ್ಕೆ ಒಂದು ವಿವರಣೆ ಎಂದು ಹೇಳಿದ್ದಾರೆ. ಈ ಮನುಷ್ಯ (ಅಂಬೇಡ್ಕರ್) ಸ್ಪಷ್ಟವಾಗಿ 12 ಡಿಗ್ರಿ (ಮಾಸ್ಟರ್ಸ್) ಹೊಂದಿರುವ ಬುದ್ಧಿಜೀವಿಯಾಗಿದ್ದಾರೆ. ರಾಷ್ಟ್ರನಾಯಕನಾದವನು ದೇಶದ ಎಲ್ಲ ಜನರನ್ನು ಸಮಾನವಾಗಿ ಕಾಣಬೇಕು. ಅವನು ಕಷ್ಟ ಅನುಭವಿಸಿದರೂ ಇತರರ ಮೇಲೆ ತನ್ನ ದ್ವೇಷವನ್ನು ತೋರಿಸಬಾರದು.” ಅಂಬೇಡ್ಕರ್ ಅವರು ಈ ರೀತಿಯ ಕಸ ಬರೆಯುವ ಮೂಲಕ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಹಮಾರಾ ಪ್ರಸಾದ್ ಹೇಳಿದ್ದಾರೆ. ”ನಾನು ಅಂಬೇಡ್ಕರ್ ಬದುಕಿದ್ದಾಗ ಹುಟ್ಟಿದ್ದರೆ, ಈ ಪುಸ್ತಕ ನನ್ನ ಕಣ್ಣಿಗೆ ಬಿದ್ದಿದ್ದರೆ, ಗೋಡ್ಸೆ ಗಾಂಧಿಗೆ ಹೇಗೆ ಗುಂಡು ಹಾರಿಸಿದನೋ ಅದೇ ರೀತಿ ನಾನು ಅಂಬೇಡ್ಕರ್‌ಗೆ ಗುಂಡು ಹಾರಿಸುತ್ತಿದ್ದೆ” ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

ವಿಡಿಯೊ ಕ್ಲಿಪ್ಪಿಂಗ್ ಶೇರ್ ಮಾಡಿರುವ ಆರ್‌.ಎಸ್. ಪ್ರವೀಣ್ ಕುಮಾರ್ ಅವರು, ಬಿಆರ್ ಎಸ್ ಪಕ್ಷವನ್ನು ಟ್ಯಾಗ್ ಮಾಡಿ, ಈ ‘ಈಡಿಯಟ್’ ವಿರುದ್ಧ 153 ಎ (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆ ಕಾಪಾಡಲು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು.) ಅಡಿಯಲ್ಲಿ ಸರ್ಕಾರ ಏಕೆ ಪ್ರಕರಣ ದಾಖಲಿಸಿಲ್ಲ ಎಂದು ಕೇಳಿದ್ದಾರೆ. ಮತ್ತು ಪ್ರಿವೆಂಟಿವ್ ಡಿಟೆನ್ಶನ್ ಆಕ್ಟ್‌ನ ಅಡಿಯಲ್ಲಿ ಅವನನ್ನು ಜೈಲಿನಲ್ಲಿಡಿ ಎಂದು ಪ್ರವೀಣ್ ಕುಮಾರ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಅಂಬೇಡ್ಕರ್, ದಲಿತರ ಬಗ್ಗೆ ಅಪಹಾಸ್ಯ ಮಾಡಿದ ಸ್ಕಿಟ್ ಪ್ರದರ್ಶನ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ

”ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ನಿಂದಿಸುವ ಮತ್ತು ಪರಿಶಿಷ್ಟ ಜಾತಿಯ ನಾಗರಿಕರ ಭಾವನೆಗಳಿಗೆ ನೋವುಂಟು ಮಾಡುವ ವೀಡಿಯೊಗಳನ್ನು ಮಾಡಿ ಮತ್ತು ಫಾರ್ವರ್ಡ್ ಮಾಡಿದ್ದಾರೆ” ಎಂದು ದಲಿತಪರ ಹೋರಾಟಗಾರ ಕಾರ್ತಿಕ್ ನವಯನ್ ಅವರು ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರಿಗೆ ಆನ್‌ಲೈನ್ ದೂರು ದಾಖಲಿಸಿದ್ದಾರೆ.

ಆದರೆ, ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಟಿಎನ್‌ಎಂ ಜೊತೆ ಮಾತನಾಡಿದ್ದು, ಹಮಾರಾ ಪ್ರಸಾದ್ ವಿರುದ್ಧ ಇನ್ನೂ ಯಾವುದೇ ದೂರುಗಳು ಬಂದಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ದಲಿತಪರ ಸಂಘಟನೆಗಳು ಮತ್ತು ಪ್ರಜ್ಞಾವಂತ ಜನರು, ತೆಲಂಗಾಣ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಕೂಡಲೇ ಹಮಾರಾ ಪ್ರಸಾದ್‌ನನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಂಬೇಡ್ಕರ್ ಅವರು ಬರೆದಿರುವ ಹಿಂದೂ ಧರ್ಮದಲ್ಲಿ ಒಗಟುಗಳು ಎಂಬ ಪುಸ್ತಕವು ಹಿಂದೂ ಧರ್ಮವನ್ನು ವಿಮರ್ಶಸಿದೆ. ಈ ಪುಸ್ತಕದಲ್ಲಿ, ”ಬ್ರಾಹ್ಮಣ ಧರ್ಮಶಾಸ್ತ್ರ ಎಂದು ಹೇಳುತ್ತ ಜನಸಾಮಾನ್ಯರ ಮೇಲೆ ಹೇರಲಾದ ನಂಬಿಕೆಗಳ ಮೌಢ್ಯದ ನಿರೂಪಣೆಯನ್ನು ಒಳಗೊಂಡಿದೆ. ಬ್ರಾಹ್ಮಣರು ಇಲ್ಲಿಯ ಮೂಲ ನಿವಾಸಿಗಳನ್ನು ಯಾವ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಮತ್ತು ಅವರನ್ನು ತರ್ಕಬದ್ಧ ಚಿಂತನೆಯ ಹಾದಿಗೆ ಕರೆದೊಯ್ಯುವ ಉದ್ದೇಶ ಈ ಪುಸ್ತಕದಲ್ಲಿದೆ. ಹಿಂದು ಧರ್ಮ ಸನಾತನವಾದ ಧರ್ಮ ಇದು ಎಂದಿಗೂ ಬದಲಾಗುವುದಿಲ್ಲ ಎನ್ನುವ ದೃಷ್ಟಿಕೋನದಲ್ಲಿ ಬ್ರಾಹ್ಮಣರು ಪ್ರಚಾರ ಮಾಡಿದ್ದಾರೆ.”

”ಹಿಂದೂ ನಾಗರಿಕತೆಯು ಎಂದೂ ಬದಲಾಗದೇ ಸ್ಥಿರವಾಗಿದೆ ಎಂದು ಹೇಳಿದ ಅನೇಕ ಯುರೋಪಿಯನ್ ವಿದ್ವಾಂಸರು ಅವರ ದೃಷ್ಟಿಕೋನವನ್ನು ಬಲಪಡಿಸಿದ್ದಾರೆ. ಆದರೆ ಅವರ ದೃಷ್ಟಿಕೋನ ಸತ್ಯ ಅಲ್ಲ. ಹಿಂದೂ ಸಮಾಜವು ಕಾಲಕಾಲಕ್ಕೆ ಬದಲಾಗಿದೆ ಮತ್ತು ಆಗಾಗ್ಗೆ ಬದಲಾವಣೆಯು ಆಗುತ್ತಿದೆ ಎಂದು ನಾನು ಈ ಪುಸ್ತಕದಲ್ಲಿ ತೋರಿಸಲು ಪ್ರಯತ್ನಿಸಿದೆ. ಈ ಸಂಬಂಧದಲ್ಲಿ, ಒಗಟುಗಳನ್ನು ಹಿಂಸೆಯಿಂದ ಅಹಿಂಸೆಗೆ ಮತ್ತು ಅಹಿಂಸೆಯಿಂದ ಹಿಂಸೆಗೆ ಹೋಲಿಸಿ, ಈ ಹಿಂದೂ ಧರ್ಮ ಸನಾತನವಲ್ಲ ಎಂದು ಜನಸಾಮಾನ್ಯರಿಗೆ ಅರಿವು ಮೂಡಿಸಲು ಬಯಸುತ್ತೇನೆ” ಎಂದು ಪುಸ್ತಕದ ಪರಿಚಯದಲ್ಲಿ ಅಂಬೇಡ್ಕರ್ ಬರೆದಿದ್ದಾರೆ.

”ಈ ಪುಸ್ತಕದ ಎರಡನೇ ಉದ್ದೇಶ ಎಂದರೆ, ಬ್ರಾಹ್ಮಣರ ತಂತ್ರಗಳತ್ತ ಹಿಂದೂ ಜನಸಾಮಾನ್ಯರ ಗಮನವನ್ನು ಹೇಗೆ ಸೆಳೆಯುತ್ತಾರೆ ಮತ್ತು ಅವರು ಬ್ರಾಹ್ಮಣರಿಂದ ಹೇಗೆ ವಂಚನೆಗೆ ಒಳಗಾಗಿದ್ದಾರೆ, ದಾರಿ ತಪ್ಪಿದ್ದಾರೆ ಎನ್ನುವುದನ್ನು ಸ್ವತಃ ಯೋಚಿಸುವಂತೆ ಮಾಡುವುದು ಹೇಗೆ” ಎನ್ನುವ ಬಗ್ಗೆ ಅಂಬೇಡ್ಕರ್ ಅವರು ಪುಸ್ತಕದಲ್ಲಿ ಬರೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...