Homeಮುಖಪುಟಗುಜರಾತ್‌ನಲ್ಲಿ ಎಮ್ಮೆ ಸಾಗಿಸುತ್ತಿದ್ದ ಆರೋಪ: ಮುಸ್ಲಿಂ ವ್ಯಕ್ತಿಯನ್ನು ಬಾವಿಗೆ ತಳ್ಳಿ ಮಾರಣಾಂತಿಕ ಹಲ್ಲೆ - ಜೈಶ್ರೀರಾಮ್...

ಗುಜರಾತ್‌ನಲ್ಲಿ ಎಮ್ಮೆ ಸಾಗಿಸುತ್ತಿದ್ದ ಆರೋಪ: ಮುಸ್ಲಿಂ ವ್ಯಕ್ತಿಯನ್ನು ಬಾವಿಗೆ ತಳ್ಳಿ ಮಾರಣಾಂತಿಕ ಹಲ್ಲೆ – ಜೈಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯ

- Advertisement -
- Advertisement -

ಗುಜರಾತ್‌ನಲ್ಲಿ ಎಮ್ಮೆ ಸಾಗಿಸುತ್ತಿದ್ದ ಆರೋಪದ ಮೇಲೆ ಹಿಂದುತ್ವವಾದಿಗಳ ಗುಂಪೊಂದು ಮುಸ್ಲಿಂ ವ್ಯಕ್ತಿಯನ್ನು ಬಾವಿಗೆ ತಳ್ಳಿ, ಜೈಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜುಲೈ 22 ರಂದು ಘಟನೆ ನಡೆದಿದ್ದು, ಸಂತ್ರಸ್ತ ಉಮೇದ್ ಖಾನ್ ಬಲೋಚ್‌ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸಹೋದರ ಸೊರಬಖಾನ್ ಬಲೋಚ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿದ ನಂತರ ನಾಲ್ವರು ಆರೋಪಿಗಳಾದ ಅಖೇರಾಜ್‌ಸಿನ್ಹ್ ಪರ್ಬತ್‌ಸಿನ್ಹ್ ವಘೇಲಾ, ಚೆಲ್‌ಸಿನ್ಹ್ ಸುಜನ್‌ಸಿನ್ಹ್ ಸೋಲಂಕಿ, ಈಶ್ವರಭಾಯಿ ಮುಲ್ಶಂಕರಭಾಯಿ ಪುರೋಹಿತ್ ಮತ್ತು ಮಹೇಂದ್ರಸಿಂಹ ವದನ್‌ಸಿನ್ಹ್ ಸೋಲಂಕಿ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರಿಗೆ ಜಾಮೀನು ಸಿಕ್ಕಿದೆ ಎನ್ನಲಾಗಿದೆ.

ತದನಂತರ ಮತ್ತೊಂದು ಪ್ರಕರಣ ದಾಖಲಾಗಿದ್ದು ಸಂತ್ರಸ್ತ ಉಮೇದ್ ಖಾನ್ ವೇಗದ ಚಾಲನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಇಂತಹ ಅಮಾನುಷ ಘಟನೆ ನಡೆದಿದ್ದರೂ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳು ಇದನ್ನು ವರದಿ ಮಾಡಿಲ್ಲ ಎಂದು ಪತ್ರಕರ್ತ ಮೊಹಮ್ಮದ್ ಜುಬೇರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; ಕೋರ್ಟ್ ಆವರಣದಲ್ಲಿಯೇ ರಾಜೀನಾಮೆ ಘೋಷಿಸಿದ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ರೋಹಿತ್ ಬಿ ದೇವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...