Homeಮುಖಪುಟನೈನ್ ಹಿಲ್ಸ್ ಒನ್ ವ್ಯಾಲಿ: ಸ್ಪೂರ್ತಿಧಾಮದಲ್ಲಿ ಮಣಿಪುರದ ಕುರಿತು ಚಲನಚಿತ್ರ ಪ್ರದರ್ಶನ

ನೈನ್ ಹಿಲ್ಸ್ ಒನ್ ವ್ಯಾಲಿ: ಸ್ಪೂರ್ತಿಧಾಮದಲ್ಲಿ ಮಣಿಪುರದ ಕುರಿತು ಚಲನಚಿತ್ರ ಪ್ರದರ್ಶನ

- Advertisement -
- Advertisement -

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿರುವ ಸಮಯದಲ್ಲಿ ಅಲ್ಲಿನ ಸ್ಥಳೀಯ ಅಸ್ಮಿತೆಗಳ ಕುರಿತು ಚಿತ್ರಸಲಾದ ‘ನೈನ್ ಹಿಲ್ಸ್ ಒನ್ ವ್ಯಾಲಿ’ ಚಲನಚಿತ್ರ ಪ್ರದರ್ಶನವನ್ನು ಸ್ಪೂರ್ತಿಧಾಮ ಟ್ರಸ್ಟ್ ಹಮ್ಮಿಕೊಂಡಿದೆ.

ಆಗಸ್ಟ್ 12ರ ಶನಿವಾರ ಮಧ್ಯಾಹ್ನ 2.30ಕ್ಕೆ ಸರಿಯಾಗಿ ಸ್ಪೂರ್ತಿಧಾಮದ ಸೆಮಿನಾರ್ ಹಾಲ್ ನಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. ಚಿತ್ರ ಪ್ರದರ್ಶನದ ಬಳಿಕ ಚಿತ್ರದ ಕುರಿತು ನಿರ್ದೇಶಕರೊಂದಿಗೆ ಸಂವಾದ ಹಮ್ಮಿಕೊಳ್ಳಲಾಗಿದೆ.

ಮೈತೈ-ತಂಗ್‌ಖುಲ್ ದ್ವಿಭಾಷೆಯಲ್ಲಿರುವ 75 ನಿಮಿಷಗಳ ಈ ಸಿನಿಮಾವನ್ನು 2021 ರಲ್ಲಿ ಹಾಬಾಮ್ ಪಬನ್ ಕುಮಾರ್‌ರವರು ನಿರ್ದೇಶಿಸಿದ್ದಾರೆ.

ನೈನ್ ಹಿಲ್ಸ್ ಒನ್ ವ್ಯಾಲಿ ಎಂಬುವುದು ಮಣಿಪುರದಂತಹ ವೈವಿಧ್ಯತೆಯ ಸ್ಥಳದಲ್ಲಿ ಹುಟ್ಟಿದ ನನ್ನ ಆಂತರಿಕ ಸಂದಿಗ್ಧತೆಯ ಬಗೆಗಿನ  ವೈಯಕ್ತಿಕ ಪ್ರಯಾಣವಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂಕಷ್ಟದ ಏಕಾಂತದ ಸಮಯದಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ.

ಅನಮ್ ಅಹುಮ್ ಎಂಬಾತ ತನ್ನ ಮಗಳು ಉನ್ನತ ಅಧ್ಯಯನಕ್ಕಾಗಿ ನವದೆಹಲಿಗೆ ಹೊರಡುವ ಮೊದಲು ಆಕೆಯನ್ನು ಭೇಟಿಯಾಗಲು ಕಣಿವೆಯ ಇಂಫಾಲ್ ನಗರಕ್ಕೆ ಪ್ರಯಾಣಿಸುತ್ತಾನೆ. ಪ್ರಯಾಣದ ಸಮಯದಲ್ಲಿ ಅವರಿಗೆ ವಿಭಿನ್ನ ಜನರು ಮತ್ತು ಅವರ ಕಥೆಗಳು ಎದುರಾಗುತ್ತದೆ ಮತ್ತು ಜನಾಂಗೀಯ ಸಂಘರ್ಷಗಳ ಕ್ರೂರತೆಗೆ ಸಾಕ್ಷಿಯಾಗುತ್ತಾನೆ. ಆದರೂ ಆ ದುಃಖದ ನೆನಪುಗಳ ಜೊತೆ  ಭರವಸೆಯು ಆತನಲ್ಲಿ ಬೆಳೆಯುತ್ತದೆ. ಅದನ್ನು ನಿರ್ದೇಶಕರು ಸಿನಿಮಾವಾಗಿ ತೆರೆಗೆ ತಂದಿದ್ದಾರೆ.

ಹಾಬಾಮ್ ಪಬನ್ ಕುಮಾರ್ ಅವರು ಭಾರತದ ಈಶಾನ್ಯ ರಾಜ್ಯವಾದ ಮಣಿಪುರದ ಸಿನಿಮಾ ನಿರ್ದೇಶಕರಾಗಿದ್ದಾರೆ. ಎಸ್‌ಆರ್‌ಎಫ್‌ಟಿಐ ಕೋಲ್ಕತ್ತಾದಿಂದ ಪದವಿ ಪಡೆದ ತಕ್ಷಣ ಅವರು AFSPA 1958 ಎಂಬ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದರು. ಈ ಸಾಕ್ಷಾಚಿತ್ರ MOMA ನ್ಯೂಯಾರ್ಕ್‌ನಲ್ಲಿ ಸ್ಕ್ರೀನಿಂಗ್ ಸೇರಿದಂತೆ ಅನೇಕ ಪ್ರಶಂಸೆ ಗಳಿಸಿದೆ. ಪಬನ್ ಕುಮಾರ್ ಅವರು 5 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಇದನ್ನು ಓದಿ: ಸೌಜನ್ಯ ಸಾವಿಗೆ ನ್ಯಾಯ ಸಿಗುವವರೆಗೂ ಧರ್ಮಸ್ಥಳಕ್ಕೆ ಹೋಗುವುದಿಲ್ಲ: ನಟ ವಿನೋದ್​ ಟೈಗರ್​ ಪ್ರಭಾಕರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...