Homeಮುಖಪುಟನಾವೆಲ್ಲ ಒಂದೇ ಕುಟುಂಬ ಸದಸ್ಯರು: ಬೋಹ್ರಾ ಮುಸ್ಲಿಮರನ್ನು ಭೇಟಿ ಮಾಡಿದ ಪ್ರಧಾನಿ

ನಾವೆಲ್ಲ ಒಂದೇ ಕುಟುಂಬ ಸದಸ್ಯರು: ಬೋಹ್ರಾ ಮುಸ್ಲಿಮರನ್ನು ಭೇಟಿ ಮಾಡಿದ ಪ್ರಧಾನಿ

- Advertisement -
- Advertisement -

ದಾವೂದಿ ಬೋಹ್ರಾ ಮುಸ್ಲಿಮರ ಶಿಕ್ಷಣ ಸಂಸ್ಥೆಯ ಹೊಸ ಕ್ಯಾಂಪಸ್ ಅನ್ನು ಪ್ರಧಾನಿ ಮೋದಿಯವರು ಶುಕ್ರವಾರ ಉದ್ಘಾಟಿಸಿದ್ದಾರೆ. ಮುಂಬೈನ ಅತ್ಯಂತ ಪ್ರಭಾವಿ ಸಮುದಾಯಗಳಲ್ಲಿ ಒಂದನ್ನು ಮೋದಿಯವರು ಭೇಟಿಯಾಗಿದ್ದು, ಮುಂಬರುವ ಮುನ್ಸಿಪಲ್ ಚುನಾವಣೆಯಲ್ಲಿ ಮುಸ್ಲಿಮರನ್ನು ಸೆಳೆಯಲು ಮೋದಿ ಗಮನ ಹರಿಸಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.

ಅಂಧೇರಿಯ ಉಪನಗರದಲ್ಲಿರುವ ಮರೋಲ್‌ನಲ್ಲಿರುವ ದಾವೂದಿ ಬೋಹ್ರಾ ಸಮುದಾಯದ ಪ್ರಮುಖ ಶಿಕ್ಷಣ ಸಂಸ್ಥೆಯಾದ ಅಲ್ಜಮಿಯಾ-ತುಸ್-ಸೈಫಿಯಾ (ದಿ ಸೈಫೀ ಅಕಾಡೆಮಿ)ನ ಹೊಸ ಕ್ಯಾಂಪಸ್‌ನಲ್ಲಿ ಪ್ರಧಾನಿ ಮೋದಿ ಅವರು ಸಮುದಾಯದ ಮುಖ್ಯಸ್ಥ ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಅವರೊಂದಿಗೆ ಕೈ ಹಿಡಿದು ನಡೆದಿದ್ದಾರೆ.

“ಸಯ್ಯದ್ನಾ ಸಾಹಬ್ ಅವರ ಕುಟುಂಬದ ನಾಲ್ಕು ತಲೆಮಾರುಗಳನ್ನು ನಾನು ತಿಳಿದಿದ್ದೇನೆ. ನಾನು ಕುಟುಂಬ ಸದಸ್ಯನಾಗಿ ಇಲ್ಲಿದ್ದೇನೆ, ಪ್ರಧಾನಿಯಾಗಿ ಅಲ್ಲ. ಈ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ನೀವು 150 ವರ್ಷಗಳ ಕನಸನ್ನು ನನಸಾಗಿದ್ದೀರಿ” ಎಂದು ಹೊಗಳಿದ್ದಾರೆ.

“ಸಮುದಾಯದ ಸಂಪ್ರದಾಯಗಳು ಮತ್ತು ಸಾಹಿತ್ಯ ಸಂಸ್ಕೃತಿಯನ್ನು ರಕ್ಷಿಸಲು ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತದೆ. ಈ ಹೊಸ ಕೇಂದ್ರವು ಅರೇಬಿಕ್ ಕಲಿಕೆಗೆ ಒತ್ತು ನೀಡಿದೆ.”

ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಮುಂಬೈ ನಗರಕ್ಕೆ ಪ್ರಧಾನಿ ಮೋದಿಯವರು ನೀಡಿದ ಎರಡನೇ ಭೇಟಿ ಇದಾಗಿತ್ತು. ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಇತ್ತೀಚೆಗೆ ಅನಾವರಣಗೊಳಿಸಿದ್ದರು. ಜನವರಿ 19ರಂದು, ಪ್ರಧಾನಮಂತ್ರಿ ಅವರು ಆರ್ಥಿಕ ಬಂಡವಾಳದಲ್ಲಿ ₹ 38,000 ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದರು.

ಭಾರತದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯಾದ ಬೃಹತ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ (BMC) ಮುಂಬರುವ ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಭೇಟಿ ಮಹತ್ವ ಪಡೆದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...