ಹೋರಾಟ ಸಂಘಟಿತವಾಗಲು ಯಾಕೆ ಹೋರಾಟ ನಡೆಸುತ್ತಿದ್ದೇವೆ ಎಂಬುದರ ಅರಿವು ಹೆಚ್ಚು ಅವಶ್ಯಕತೆಯಿದೆ. ಅಂತಹ ಒಂದು ಹೋರಾಟ ಗಟ್ಟಿಯಾಗಿ ನಿಲ್ಲಲು ಅದಕ್ಕೆ ಸಂವಿಧಾನ ನೀಡಿರುವ ಹಕ್ಕುಗಳ ಅರಿವಿರಬೇಕು. ಈ ಅರಿವು ತುಂಬುವ ಕೆಲಸವನ್ನು ಕಿಸಾನ್ ಗ್ರಂಥಾಲಯಗಳು ಮಾಡುತ್ತಿವೆ ಎನ್ನುತ್ತಾರೆ ಪಂಜಾಬ್‌ನ ನರೇಶ್.

ಹೌದು, ಐತಿಹಾಸಿಕ ರೈತ ಹೋರಾಟದಲ್ಲಿ ಸಿಂಘು ಗಡಿಯಲ್ಲಿ ಒಂದರಲ್ಲೇ ಪುಸ್ತಕಗಳ ಮಳಿಗೆಗಳನ್ನು ಇಟ್ಟುಕೊಂಡು, ಪ್ರತಿಭಟನಾಕಾರರಿಗೆ ಉಚಿತವಾಗಿ ಓದಲು ನೀಡುತ್ತಿರುವ ನೂರಕ್ಕೂ ಹೆಚ್ಚು ಗ್ರಂಥಾಲಯಗಳಿವೆ. ಇವುಗಳು ರೈತ ಹೋರಾಟದಲ್ಲಿ ಭಾಗವಹಿಸಿರುವವರಿಗೆ ಜ್ಞಾನದ ಎರಕ ಹೊಯ್ಯುತ್ತಿವೆ.

ಕಿಸಾನ್ ಹೋರಾಟದಲ್ಲಿ ಅಮೆರಿಕಾ ಮೂಲದ power in education international org. ಎಂಬ ಸಂಘಟನೆ ತಮ್ಮ ಗ್ರಂಥಾಲಯದಲ್ಲಿ ಸಂವಿಧಾನದ ಕುರಿತು ತಿಳವಳಿಕೆ ಮೂಡಿಸುವ ಕೆಲಸಕ್ಕೆ ಕೈ ಹಾಕಿದೆ. ಪಂಜಾಬಿ, ಹಿಂದಿ, ಆಂಗ್ಲ ಭಾಷೆಗಳಲ್ಲಿ ಸಂವಿಧಾನದ ಪ್ರತಿಗಳನ್ನು, ಪುಸ್ತಕಗಳನ್ನು ಓದಲು ನೀಡುತ್ತಿವೆ.

ಇದನ್ನೂ ಓದಿ: ಖಾಲಿಸ್ತಾನಿ, ಅಲ್‌ಖೈದ ಭಯೋತ್ಪಾದಕರನ್ನು ಹುಡುಕಿಕೊಡಿ: ದೆಹಲಿಯಲ್ಲಿ ಪೋಸ್ಟರ್ ಅಂಟಿಸಿದ ಪೊಲೀಸರು!

“ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಸಂವಿಧಾನದ ಓದು ನಮ್ಮ ಹಕ್ಕುಗಳನ್ನು ನಮಗೆ ಮತ್ತಷ್ಟು ತಿಳಿಯಲು ಸಹಾಯಕವಾಗಿದೆ. ಹಾಗಾಗಿ ಸಂವಿಧಾನದ ಓದು ಅತೀ ಅವಶ್ಯಕವಾಗಿದೆ. ನಾವು ಸಿಂಘು ಗಡಿಯಲ್ಲಿ ಇರುವುದರಿಂದ, ಇಲ್ಲಿ ಪಂಜಾಬಿ ಮಾತನಾಡುವವರ ಸಂಖ್ಯೆ ಹೆಚ್ಚಿರುವ ಕಾರಣ ಪಂಜಾಬಿ ಭಾಷೆಯಲ್ಲಿರುವ ಸಂವಿಧಾನದ ಪ್ರತಿಗಳನ್ನು ಇಡಲಾಗಿದೆ. ಇಲ್ಲೇ ಓದುವವರಿಗೆ ಉಚಿತವಾಗಿ ನೀಡಲಾಗುತ್ತದೆ. ಟ್ಯ್ರಾಲಿಯಲ್ಲಿ ಇರುವವರಿಗೆ 2 ದಿನಗಳು ನೀಡಲಾಗುತ್ತದೆ. ಕೊಂಡುಕೊಳ್ಳುವವರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ನರೇಶ್ ಮಾಹಿತಿ ನೀಡಿದ್ದಾರೆ.

ಇದರ ಜೊತೆಗೆ ಅಂಬೇಡ್ಕರ್‌ ಸ್ಟೂಡೆಂಟ್ಸ್ ಅಸೋಸಿಯೇಷನ್ ಕೂಡ ಸಂವಿಧಾನ ಮತ್ತು ಅಂಬೇಡ್ಕರ್ ಕುರಿತ ಪುಸ್ತಕಗಳನ್ನು ಜನರಿಗೆ ನೀಡುತ್ತಿದ್ದು. ತಮ್ಮ ಟೆಂಟ್ ಹೊರಗೆಯೂ ಈ ವಿಚಾರಗಳ ಕುರಿತು ಹಲವು ಮಾಹಿತಿ ನೀಡುತ್ತಿವೆ. ಜೊತೆಗೆ ಪ್ರತಿದಿನ ವಿದ್ಯಾರ್ಥಿಗಳು ಚರ್ಚೆಗಳನ್ನು ನಡೆಸುತ್ತಾರೆ.

ಇದನ್ನೂ ಓದಿ:  ‘ಪಿಎಂಒ ಮಾತ್ರವಲ್ಲ ಎನ್‌ಎಸ್‌ಎ ಕೂಡ ಅರ್ನಾಬ್ ಜೊತೆಯಿತ್ತು’: ಅರ್ನಾಬ್ ವಾಟ್ಸಾಪ್ ಲೀಕ್ ಸಂಪೂರ್ಣ ವಿವರ

ಸಿಂಘು ಗಡಿಯಲ್ಲಿರುವ ಮತ್ತೊಂದು ವಿಶೇಷ ಗ್ರಂಥಾಲಯ ಸಾಂಜಿ ಸಾತ್. ಸಾಂಜಿ ಎಂದರೆ ಚರ್ಚೆ, ಸಾತ್ ಎಂದರೆ ಜೊತೆಗೆ ಎಂದರ್ಥ. ಒಟ್ಟಾಗಿ ಕುಳಿತು ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸ್ಥಳ ಇದಾಗಿದೆ. ಏಳು ಮಂದಿ ಯುವಕರು ಈ ಸಾಂಜಿ ಸಾತ್ ಎನ್ನುವ ಗ್ರಂಥಾಲಯ ಮತ್ತು ಚರ್ಚಾ ಸ್ಥಳವನ್ನು ಆರಂಭಿಸಿದ್ದಾರೆ.

ಮೊದಲಿಗೆ ಚಿಕ್ಕದಾಗಿ ಗ್ರಂಥಾಲಯ ಆರಂಭ ಮಾಡಿದ್ದ ಈ ತಂಡಕ್ಕೆ, ಪುಸ್ತಕಗಳು, ಹೆಚ್ಚು ದೇಣಿಗೆಯಿಂದ ಇದು ಇಂದು ದೊಡ್ಡ ಗ್ರಂಥಾಲಯವಾಗಿ ಮಾರ್ಪಟ್ಟಿದೆ. ಈ ಸ್ಥಳದಲ್ಲಿ ಪುಸ್ತಕ ಪ್ರೇಮಿಗಳು, ಚರ್ಚೆಗಳಲ್ಲಿ ಭಾಗವಹಿಸುವವರು, ಕ್ರಾಂತಿ ಗೀತೆಗಳನ್ನು ಹಾಡುವವರು, ಬರೆಯುವವರು, ಕೇಳಿಸಿಕೊಳ್ಳುವವರು ಮತ್ತು ಮಕ್ಕಳು ಎಲ್ಲರೂ ಭಾಗವಹಿಸುತ್ತಾರೆ.

“ಪ್ರತಿಭಟನೆಯಲ್ಲಿ ಭಾಗವಹಿಸಿರುವ ಸುಮಾರು 100ಕ್ಕೂ ಹೆಚ್ಚು ಮಕ್ಕಳಿಗೆ ದಿನವೂ ಬೆಳಗ್ಗೆ ಇಂಗ್ಲೀಷ್, ಗಣಿತ, ಸಮಾಜ, ವಿಜ್ಞಾನ, ಚಿತ್ರಕಲೆ ವಿಷಯಗಳನ್ನು ಹೇಳಿಕೊಡಲಾಗುತ್ತದೆ. ಸಂಜೆ 50-60 ಮಂದಿ, ‘ಪ್ರತಿಭಟನೆ ಯಾವ ರೀತಿ ನಡೆಯುತ್ತಿದೆ. ಯಾವ ರೀತಿ ನಡೆಸಬಹುದು’ ಎಂಬ ವಿಚಾರಗಳ ಜೊತೆಗೆ ಸೈದ್ಧಾಂತಿಕ ವಿಚಾರಗಳನ್ನು ಚರ್ಚೆ ಮಾಡಲಾಗುತ್ತದೆ” ಎಂದು ಸಾಂಜಿ ಸಾತ್‌ ನೋಡಿಕೊಳ್ಳುವ ರಮಣೀಕ್ ಹೇಳುತ್ತಾರೆ.

ಇದನ್ನೂ ಓದಿ: ರೈತಹೋರಾಟದ ಮೈಲಿಗಲ್ಲುಗಳು ಈ ಪಿಲ್ಲರ್‌ ನಂಬರ್‌ಗಳು: ರೈತರ ಹೊಸ ಪಿಲ್ಲರ್‌ ವಿಳಾಸಗಳ ಬಗ್ಗೆ ನಿಮಗೆ ಗೊತ್ತೆ?

ಸಾಂಜಿ ಸಾತ್ ಕಟ್ಟಿದ ಬಗ್ಗೆ ಮಾತನಾಡಿದ ರಮಣೀಕ್, “ಪ್ರತಿಭಟನೆಗೆ ಬೆಂಬಲ ನೀಡಲು ಬಂದ ನಮ್ಮ ಏಳು ಜನರ ತಂಡ, ಯಾವ ರೀತಿಯಲ್ಲಿ ಇಲ್ಲಿ ಸೇವೆ ಮಾಡುವುದು ಎಂದು ಯೋಚಿಸುತ್ತಿದ್ದೇವು. ಆಗ ನಮಗೆ ಗ್ರಂಥಾಲಯ ಇಡುವ ಯೋಜನೆ ಹೊಳೆಯಿತು. ಕೆಲವು ಪುಸ್ತಕಗಳಿಂದ ಶುರುವಾದ ಈ ಗ್ರಂಥಾಲಯ ಇಂದು ಸಾಂಜಿ ಸಾತ್ ಆಗಿ ಮಾರ್ಪಟ್ಟಿದೆ. ಇಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಮಕ್ಕಳಿಗೆ ದಿನವೂ ಬೆಳಗ್ಗೆ ಇಂಗ್ಲೀಷ್, ಗಣಿತ, ಸಮಾಜ, ವಿಜ್ಞಾನ, ಚಿತ್ರಕಲೆ ವಿಷಯಗಳನ್ನು ಹೇಳಿಕೊಡಲಾಗುತ್ತದೆ. ಪ್ರತಿಭಟನೆಯಲ್ಲಿ ಇಷ್ಟು ಸೇವೆ ಮಾಡಲು ಅವಕಶ ಸಿಕ್ಕಿದೆ. ಅಷ್ಟು ಸಾಕು” ಎನ್ನುತ್ತಾರೆ.

ಗ್ರಂಥಾಲಯಗಳಲ್ಲಿ ಹಲವು ಪುಸ್ತಕಗಳನ್ನು ಓದುಗರಿಗೆ ಉಚಿತವಾಗಿ ಹಂಚಲಾಗುತ್ತಿದೆ. ಈಗಾಗಲೇ ರೈತ ಹೋರಾಟದ ಕುರಿತು ಹಲವು ಪುಸ್ತಕಗಳು ಪ್ರಕಟವಾಗಿದ್ದು, ಇವುಗಳನ್ನು ಸ್ಟಾಲ್‌ಗಳಲ್ಲಿ ಇಡಲಾಗುತ್ತಿದೆ. ಹೊರಗಿನಿಂದ ಬಂದವರು, ಇಲ್ಲಿಯೇ ಓದುವವರಿಗೂ ಇವುಗಳನ್ನು ಹಂಚಲಾಗುತ್ತಿದೆ.

ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ 60 ದಿನಗಳಾಗುತ್ತಾ ಬಂದರು ಇನ್ನು ತನ್ನ ಕಾವು ಕಳೆದುಕೊಳ್ಳದಿರಲು ಇರುವ ಪ್ರಮುಖ ಅಂಶಗಳಲ್ಲಿ ಈ ಗ್ರಂಥಾಲಯಗಳೂ ಪ್ರಮುಖ ಪಾತ್ರವಹಿಸಿವೆ.


ಇದನ್ನೂ ಓದಿ: ಹೋರಾಟ ನಿರತ ರೈತರ ಸೇವೆಗಾಗಿ ವಿದೇಶಿ ಕೆಲಸದ ಅವಕಾಶ ತೊರೆದ ಯುವಕ..!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here