Homeಮುಖಪುಟಮಹಾರಾಷ್ಟ್ರ: ಸಿಎಂ ಗೃಹ ಕಚೇರಿ ಬಿಟ್ಟು ಸ್ವಂತ ಮನೆಗೆ ತೆರಳಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ

ಮಹಾರಾಷ್ಟ್ರ: ಸಿಎಂ ಗೃಹ ಕಚೇರಿ ಬಿಟ್ಟು ಸ್ವಂತ ಮನೆಗೆ ತೆರಳಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ

- Advertisement -
- Advertisement -

ಶಿವಸೇನೆ ನಾಯಕ, ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯ ಎದ್ದಿರುವ ಶಾಸಕರ ಕುರಿತು ಭಾವನಾತ್ಮಕ ಭಾಷಣ ಮಾಡಿದ ಸ್ವಲ್ಪ ಸಮಯದ ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಸಿಎಂ ಅಧಿಕೃತ ನಿವಾಸ “ವರ್ಷ” ದಿಂದ ತಮ್ಮ, ಸ್ವಂತ ನಿವಾಸ ’ಮಾತೋಶ್ರೀ’ಗೆ ತೆರಳಿದ್ದಾರೆ.

ಉದ್ಧವ್ ಠಾಕ್ರೆ ಭಾಷಣದ ಬಳಿಕ ಭಾರಿ ಸಂಖ್ಯೆಯಲ್ಲಿ ಶಿವಸೇನಾ ಬೆಂಬಲಿಗರು ಮಾತ್ರೋಶ್ರೀ ನಿವಾಸದ ಹೊರಗೆ ಜಮಾಯಿಸಿ, ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಠಾಕ್ರೆಯವರು ಕಾರಿನಿಂದ ಇಳಿದು ಬೆಂಬಲಿಗರನ್ನು ಮಾತನಾಡಿಸಿ ಮನೆಯೊಳಗೆ ಹೋದರು. ಠಾಕ್ರೆ ಅವರ ಪುತ್ರ ಮತ್ತು ರಾಜ್ಯ ಸಚಿವ ಆದಿತ್ಯ ಠಾಕ್ರೆ ಕೂಡ ಪಕ್ಷದ ಕಾರ್ಯಕರ್ತರಿಗೆ ಶುಭಾಶಯ ಕೋರಿದ್ದಾರೆ.

ಇನ್ನು, ಉದ್ಧವ್ ಠಾಕ್ರೆ ಕೊರೊನಾ ಸೋಂಕಿಗೆ ಒಳಗಾಗಿದ್ದು, ಕಾರ್ಯಕರ್ತರನ್ನು ಭೇಟಿಯಾಗಿದ್ದು, ಮಾತನಾಡಿರುವ ಕಾರಣ ಅವರ ವಿರುದ್ಧ ಕೊರೊನಾ ನಿಯಮ ಉಲ್ಲಂಘನೆ ಎಂದು ಬಿಜೆಪಿ ನಾಯಕರೊಬ್ಬರು ದೂರು ನೀಡಿದ್ದಾರೆ.

ಇದನ್ನೂ ಓದಿ: ಅಸ್ಸಾಂ ಪ್ರವಾಹದಲ್ಲಿ ಮುಳುಗಿದೆ: ಅಲ್ಲಿನ ಸಿಎಂ ಕುದುರೆ ವ್ಯಾಪಾರದಲ್ಲಿ ನಿರತರಾಗಿದ್ದಾರೆ – ಟೀಕೆ

ಬುಧವಾರದಂದು, ತಮ್ಮ ಸರ್ಕಾರಕ್ಕೆ ಬಂದಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಮೊದಲ ಸಾರ್ವಜನಿಕ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, “ನಾನು ಖುರ್ಚಿಗೆ ಆಸೆಪಟ್ಟವನಲ್ಲ, ಒಬ್ಬ ಶಿವಸೇನಾ ಶಾಸಕ ಹೇಳಿದರೂ ಇಂದೇ ರಾಜೀನಾಮೆ ನೀಡುತ್ತೇನೆ, ಆದರೆ ಮುಖಾಮುಖಿ ಹೇಳಬೇಕು. ಬನ್ನಿ ಇಂದೇ ನನ್ನ ರಾಜೀನಾಮೆ ಪತ್ರ ತೆಗೆದುಕೊಂಡು ಹೋಗಿ” ಎಂದಿದ್ದರು.

“ಶಾಸಕರು ಹೇಳಿದರೆ ನಾನು ರಾಜೀನಾಮೆ ಕೊಡಲು ಸಿದ್ದನಿದ್ದೇನೆ. ಎಷ್ಟು ಜನ ನನ್ನ ಪರವಾಗಿದ್ದಾರೆ, ಎಷ್ಟು ಜನ ನನ್ನ ವಿರುದ್ಧವಾಗಿದ್ದಾರೆ ಎಂದು ನಾನು ನೋಡುವುದಿಲ್ಲ. ಒಬ್ಬ ಶಾಸಕ ಹೇಳಿದರೂ ರಾಜೀನಾಮೆ ಕೊಡುತ್ತೇನೆ. ನನ್ನ ವಿರುದ್ಧ ಒಬ್ಬ ಶಾಸಕ ಮಾತನಾಡಿದರೂ ಅದು ದೊಡ್ಡ ನಾಚಿಕೆ ನನಗೆ” ಎಂದಿದ್ದರು.

ಮುಖ್ಯಮಂತ್ರಿಗಳ ಅಧಿಕೃತ ನಿವಾಸದಿಂದ ಉದ್ಧವ್ ಠಾಕ್ರೆ ತೆರಳಿದ್ದರೂ ಕೂಡ ರಾಜೀನಾಮೆ ನಿಡುವುದಿಲ್ಲ ಎಂದು ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ. ಆದರೂ, ಈ ಎಲ್ಲಾ ಬೆಳವಣಿಗೆಗಳು ಮಹಾ ವಿಕಾಸ್ ಅಘಾಡಿ ಸರ್ಕಾರ ಬೀಳುವ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡುತ್ತಿವೆ.


ಇದನ್ನೂ ಓದಿ: ಒಬ್ಬ ಶಿವಸೇನಾ ಶಾಸಕ ಹೇಳಿದರೂ ಇಂದೇ ರಾಜೀನಾಮೆ ನೀಡುತ್ತೇನೆ: ಉದ್ಧವ್ ಠಾಕ್ರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...