Homeಮುಖಪುಟಅಸ್ಸಾಂ ಪ್ರವಾಹದಲ್ಲಿ ಮುಳುಗಿದೆ: ಅಲ್ಲಿನ ಸಿಎಂ ಕುದುರೆ ವ್ಯಾಪಾರದಲ್ಲಿ ನಿರತರಾಗಿದ್ದಾರೆ - ಟೀಕೆ

ಅಸ್ಸಾಂ ಪ್ರವಾಹದಲ್ಲಿ ಮುಳುಗಿದೆ: ಅಲ್ಲಿನ ಸಿಎಂ ಕುದುರೆ ವ್ಯಾಪಾರದಲ್ಲಿ ನಿರತರಾಗಿದ್ದಾರೆ – ಟೀಕೆ

- Advertisement -
- Advertisement -

ಮಹಾರಾಷ್ಟ್ರ ರಾಜ್ಯ ರಾಜಕಾರಣವು ಗುಜರಾತ್‌ನಿಂದ ಅಸ್ಸಾಂ ರಾಜ್ಯಕ್ಕೆ ವರ್ಗಾವಣೆಯಾಗಿದೆ. ಏಕ್‌ನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಬಂಡಾಯ ಶಾಸಕರು ಮಂಗಳವಾರ ಮಧ್ಯರಾತ್ರಿ ಸೂರತ್‌ನಿಂದ ಅಸ್ಸಾಂನ ಗೌಹಾತಿಗೆ ತೆರಳಿದ್ದಾರೆ. ಅಲ್ಲಿನ ವಿಮಾನ ನಿಲ್ದಾಣದಲ್ಲಿ ಬಿಜೆಪಿ ನಾಯಕರಾದ ಪಲ್ಲಬ್ ಲೋಚನ್ ದಾಸ್ ಮತ್ತು ಸುಶಾಂತ ಬೋರ್ಗೊಹೈನ್ ಶಿಂಧೆ ಅವರು ಬಂಡಾಯ ಶಾಸಕರನ್ನು ಬರಮಾಡಿಕೊಂಡಿದ್ದಾರೆ. ಅಲ್ಲಿಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ತೆರಳಿ ಆ ಶಾಸಕರು ಬಿಜೆಪಿಗೆ ಬೆಂಬಲ ನೀಡುವಂತೆ ಮನವೊಲಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇದೇ ವೇಳೆ ಅಸ್ಸಾಂನಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಮಂಗಳವಾರ 7 ಸಾವುಗಳು ಸಂಭವಿಸುವುದರೊಂದಿಗೆ ಪ್ರವಾಹದಿಂದ ಉಂಟಾದ ಸಾವುಗಳ ಸಂಖ್ಯೆ 89ಕ್ಕೆ ತಲುಪಿದೆ.

ಕಮ್ರೂಪ್‌ ಜಿಲ್ಲಿಯಲ್ಲಿ ಮೂವರು ಮತ್ತು ದರ್ರಾಂಗ್, ಕರೀಮ್‌ಗಂಜ್, ತಮುಲ್‌ಪುರ್ ಮತ್ತು ಉದಲ್‌ಗುರಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಒಬ್ಬ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ರಾಜ್ಯದ 55 ಲಕ್ಷ ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ ಎಂದು ಮಾಧ್ಯಮಗಳು ವರದಿಯಾಗಿದೆ.

ಈ ಕುರಿತು ಪತ್ರಕರ್ತೆ ವಿದ್ಯಾ ಕೃಷ್ಣನ್ ಟ್ವೀಟ್ ಮಾಡಿದ್ದು, “ಈ ವ್ಯಕ್ತಿಯ ರಾಜ್ಯ ಮುಳುಗಿಹೋಗುತ್ತಿದೆ. ಆದರೂ ಆತ ಕುದುರೆ ವ್ಯಾಪಾರದಲ್ಲಿ ನಿರತನಾಗಿದ್ದಾನೆ” ಎಂದು ಪ್ರವಾಹದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದುವರೆಗೆ ಅಸ್ಸಾಂ ನಾಗರಿಕರು ಕಂಡ ಅತ್ಯಂತ ಕೆಟ್ಟ ಪ್ರವಾಹ ಇದಾಗಿದೆ. ಅಸ್ಸಾಂನಲ್ಲಿ ಪ್ರವಾಹಕ್ಕೆ ಮಕ್ಕಳು ಸೇರಿದಂತೆ 89 ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರಿಗೆ ಆಹಾರ, ನೀರು ಅಥವಾ ನೈರ್ಮಲ್ಯದ ಸ್ಥಳ ಸಿಗುತ್ತಿಲ್ಲ. ಅಸ್ಸಾಂನ 32 ಜಿಲ್ಲೆಗಳು ಮತ್ತು 55,42,053 ನಿವಾಸಿಗಳ ಮೇಲೆ ಪ್ರವಾಹ ಪರಿಣಾಮ ಬೀರಿದೆ. ಆತ್ಮೀಯ ಭಾರತೀಯ ಮಾಧ್ಯಮಗಳೇ, ನೀವು ಗಮನಿಸದೇ ಇದ್ದರೆ… ಎಂದು ಖ್ಯಾತ ಪರ್ತಕರ್ತೆ ಫಯೆ ಡಿಸೋಜ ಬರೆದಿದ್ದಾರೆ.

ಶಿವಸೇನೆಯ ‘ಬಂಡಾಯ’ ಶಾಸಕರು ಸೂರತ್ ಹೋಟೆಲ್‌ನಿಂದ ಗುವಾಹಟಿಗೆ ಚಾರ್ಟರ್ ಪ್ಲೇನ್‌ನಲ್ಲಿ ಹೋದರು. ಒಂದು ಬಿಜೆಪಿ ಆಡಳಿತದ ರಾಜ್ಯದಿಂದ ಮತ್ತೊಂದು ಬಿಜೆಪಿ ಆಡಳಿತದ ರಾಜ್ಯಕ್ಕೆ ಹಾರಿದ್ದಾರೆ. ಅಸ್ಸಾಂನಲ್ಲಿ ಪ್ರವಾಹ ಉಕ್ಕಿ ಹರಿಯುತ್ತಿದ್ದರೂ ಅಲ್ಲಿನ ಸಿಎಂಗೆ ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸುವುದು ಆದ್ಯತೆಯ ಕೆಲಸವಾಗಿದೆ. ಈ ಬಂಡಾಯಗಾರರಿಗೆ ಯಾವು ಹಣ ನೀಡುತ್ತಿದ್ದಾರೆ? ಜನರು ನಿಜವಾಗಿಯೂ ಈ ಬಗ್ಗೆ ಯೋಚಿಸುತ್ತಾರೆಯೇ ಎಂದು ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಹೇಳಿದ್ದಾರೆ.

ಇದನ್ನೂ ಓದಿ:

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...