Homeಮುಖಪುಟಉದ್ಧವ್ ಸರ್ಕಾರಕ್ಕೆ ಸಂಕಷ್ಟ: ವಿಧಾನಸಭೆ ವಿಸರ್ಜನೆಯತ್ತ ರಾಜಕೀಯ ಬೆಳವಣಿಗೆ-ಸಂಜಯ್ ರಾವತ್ ಟ್ವೀಟ್‌

ಉದ್ಧವ್ ಸರ್ಕಾರಕ್ಕೆ ಸಂಕಷ್ಟ: ವಿಧಾನಸಭೆ ವಿಸರ್ಜನೆಯತ್ತ ರಾಜಕೀಯ ಬೆಳವಣಿಗೆ-ಸಂಜಯ್ ರಾವತ್ ಟ್ವೀಟ್‌

- Advertisement -
- Advertisement -

ಮಹಾರಾಷ್ಟ್ರದಲ್ಲಿ ಬಂಡಾಯದ ಬಿಸಿ ಹೆಚ್ಚಾಗುತ್ತಿದ್ದು, ಶಿವಸೇನಾ ನಾಯಕ ಏಕನಾಥ್ ಶಿಂಧೆ ಮತ್ತು ಇತರ 46 ಶಾಸಕರು ಬಿಜೆಪಿ ಆಡಳಿತದ ರಾಜ್ಯಗಳಲ್ಲಿದ್ದಾರೆ. ಈ ನಡುವೆ ವಿಧಾನಸಭೆ ವಿಸರ್ಜನೆಯ ಸುಳಿವನ್ನು ಸಂಸದ ಸಂಜಯ್ ರಾವತ್‌ ನೀಡಿದ್ದಾರೆ.

ಶಿವಸೇನೆ ನಾಯಕ ಸಂಜಯ್ ರಾವುತ್ “ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆಗಳು ವಿಧಾನಸಭೆಯನ್ನು ವಜಾಗೊಳಿಸುವತ್ತ ಸಾಗುತ್ತಿವೆ” ಎಂದು ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಪಕ್ಷದಲ್ಲಿಯೇ ದಂಗೆಯನ್ನು ಎದುರಿಸುತ್ತಿದ್ದಾರೆ. ಆದರೆ, ಅವರು ರಾಜಿ ಮಾಡಿಕೊಳ್ಳುವ ಬದಲು ವಿಧಾನಸಭೆ ವಿಸರ್ಜಿಸಲು ಮತ್ತು ಅಧಿಕಾರವನ್ನು ಬಿಟ್ಟುಕೊಡಲು ಸಿದ್ಧರಾಗಿದ್ದಾರೆ ಎಂಬ ದೊಡ್ಡ ಸುಳಿವನ್ನು ಸಂಜಯ್ ರಾವತ್ ಅವರ ಟ್ವೀಟ್ ಬಿಟ್ಟುಕೊಟ್ಟಿದೆ.

ಇದನ್ನೂ ಓದಿ: ಆಪರೇಷನ್ ಕಮಲಕ್ಕೆ ಬಲಿಯಾಗಲಿದೆಯೇ ಮಹಾ ವಿಕಾಸ್ ಅಘಾಡಿ ಸರ್ಕಾರ?

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಏಕನಾಥ್‌ ಶಿಂಧೆ ದೂರವಾಣಿ ಸಂಭಾಷಣೆ ನಡೆಸಿದ್ದು,  ಶಿವಸೇನೆಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಜಂಟಿಯಾಗಿ ಆಡಳಿತ ನಡೆಸಬೇಕೆಂದು ಶಿಂಧೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಬಂಡಾಯ ನಾಯಕರ ಬೇಡಿಕೆಗೆ ಮಣಿಯುವುದಕ್ಕಿಂತ ಉದ್ಧವ್ ಠಾಕ್ರೆ ಅವರು ಅಧಿಕಾರವನ್ನು ಬಿಟ್ಟುಕೊಡಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ದೊರೆತಿವೆ.

ಈ ಹಿಂದೆ ಮಾತನಾಡಿದ್ದ ಸಂಸದ ಸಂಜಯ್ ರಾವತ್, ಬಂಡಾಯ ನಾಯಕ ಏಕನಾಥ್ ಶಿಂಧೆಯನ್ನು “ಆಪ್ತ ಸ್ನೇಹಿತ” ಎಂದು ಕರೆದಿದ್ದರು. ಅದೇ ಸಮಯದಲ್ಲಿ, “ಅಧಿಕಾರವು ಕ್ಷಣಿಕವಾಗಿದೆ. ಹೆಚ್ಚೆಂದರೆ ಏನಾಗಬಹುದು..? ನಾವು ಅಧಿಕಾರವನ್ನು ಕಳೆದುಕೊಳ್ಳುತ್ತೇವೆ. ಮತ್ತೆ ಅಧಿಕಾರವು ಹಿಂತಿರುಗುತ್ತದೆ” ಎಂದಿದ್ದರು.

ಇಂದು ಬೆಳಗ್ಗೆ ಮಾತನಾಡಿದ್ದ ಬಂಡಾಯ ನಾಯಕ ಏಕನಾಥ್ ಶಿಂಧೆ, ’ನನಗೆ ಸ್ವತಂತ್ರ ಶಾಸಕರು ಸೇರಿದಂತೆ 46 ಶಾಸಕರ ಬೆಂಬಲವಿದೆ. ಆದರೆ, ಪಕ್ಷವನ್ನು ಬದಲಾಯಿಸುವ ಯಾವುದೇ ಯೋಚನೆಯಿಲ್ಲ. ತಾನು ಶಿವಸೇನೆಯಿಂದ ಬೇರ್ಪಡುವುದಿಲ್ಲ ಮತ್ತು ಬಾಳಾಸಾಹೇಬ್ ಠಾಕ್ರೆಯವರ ಸಿದ್ಧಾಂತವನ್ನು ಮುಂದುವರಿಸುತ್ತೇನೆ. ನಾವು ಹಿಂದುತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ’ ಎಂದು ತಿಳಿಸಿದ್ದರು.


ಇದನ್ನೂ ಓದಿ: ಉದ್ಧವ್ ಸರ್ಕಾರಕ್ಕೆ ಸಂಕಷ್ಟ: 46 ಶಾಸಕರ ಬೆಂಬಲವಿದೆ, ಆದರೆ ಪಕ್ಷ ಬದಲಾಯಿಸುವುದಿಲ್ಲ ಎಂದ ಏಕನಾಥ್ ಶಿಂಧೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...