ಸಶಸ್ತ್ರ ಪಡೆಗಳ ನೇಮಕಾತಿಯ ಹೊಸ ಅಗ್ನಿಪಥ ಯೋಜನೆ ವಿರುದ್ಧ ಯುವಜನತೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನೆಗೆ ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಬೆಂಬಲವನ್ನು ಘೋಷಿಸಿದೆ.
ಅಗ್ನಿಪಥ ವಿರುದ್ಧದ ಪ್ರತಿಭಟನೆಯನ್ನು ಶಾಂತಿಯುತವಾಗಿಡಲು ಮನವಿ ಮಾಡಿದ ಸಂಯುಕ್ತ ಕಿಸಾನ್ ಮೋರ್ಚಾವು ಈ ಯೋಜನೆಯನ್ನು ಸೇನಾ ವಿರೋಧಿ, ರೈತ ವಿರೋಧಿ ಮತ್ತು ದೇಶ ವಿರೋಧಿ ಎಂದು ಆರೋಪಿಸಿದೆ.
“ಜೈ ಜವಾನ್ ಜೈ ಕಿಸಾನ್” ಘೋಷಣೆಯ ಸ್ಪೂರ್ತಿಯನ್ನು ನಾಶಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ, ಈ ಹೋರಾಟದಲ್ಲಿ ಸೈನಿಕರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವುದು ರೈತ ಚಳವಳಿಯ ಕರ್ತವ್ಯವಾಗಿದೆ. ಅದರಂತೆಯೇ ಸಂಯುಕ್ತ ಕಿಸಾನ್ ಮೋರ್ಚಾ ಈ ಶುಕ್ರವಾರ (ಜೂನ್ 24) ರಂದು ದೇಶಾದ್ಯಂತ ಪ್ರತಿಭಟನಾ ದಿನವನ್ನು ಆಚರಿಸಲಿದೆ ಎಂದು ಸಂಘಟನೆ ತಿಳಿಸಿದೆ. ಈ ನಿರ್ಧಾರವನ್ನು ಕರ್ನಾಲ್ (ಹರಿಯಾಣ) ನಲ್ಲಿ ನಡೆದ ಸಂಯುಕ್ತ ಕಿಸಾನ್ ಮೋರ್ಚಾದ 7 ಸದಸ್ಯರ ಸಮನ್ವಯ ಸಮಿತಿ ತೆಗೆದುಕೊಂಡಿದೆ.
ಇದನ್ನೂ ಓದಿ: ಅಗ್ನಿಪಥ್ ಹಿಂಪಡೆಯುವ ಪ್ರಶ್ನೆಯೆ ಇಲ್ಲ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್
संयुक्त किसान मोर्चा का 24 जून को अग्निपथयोजना के खिलाफ देशभर में जिला-तहसील मुख्यालयों पर विरोधप्रदर्शन।SKMकॉर्डिनेशन कमेटी का करनाल में फैसला।युवा-नागरिक संगठनों-पार्टियों से जुटने की अपील।भाकियू 30 के प्रदर्शन के बजाय 24 के फैसले में ही शामिल। @ANI @PTI_News #YouthEmpowerment pic.twitter.com/NFaGjYEiNM
— Rakesh Tikait (@RakeshTikaitBKU) June 20, 2022
ಈ ಅಗ್ನಿಪಥ ಯೋಜನೆಯು ದೇಶದ ಭವಿಷ್ಯದ ಜೊತೆ ಆಟವಾಡುತ್ತಿದೆ ಎಂದು ಆರೋಪಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ, ಇದು ರಾಷ್ಟ್ರೀಯ ಭದ್ರತೆ ಮತ್ತು ನಿರುದ್ಯೋಗಿ ಯುವಕರ ಕನಸುಗಳೊಂದಿಗೆ ಮಾತ್ರವಲ್ಲದೆ ದೇಶದ ರೈತ ಕುಟುಂಬಗಳೊಂದಿಗೆ ಆಟವಾಡುತ್ತಿದೆ ಎಂದು ಹೇಳಿದೆ. ಈ ದೇಶದ ಸೈನಿಕ ಸಮವಸ್ತ್ರ ಧರಿಸಿರುವ ರೈತ. ಬಹುತೇಕ ಸೈನಿಕರು ರೈತ ಕುಟುಂಬದವರು. ಸೇನಾ ಉದ್ಯೋಗವು ಲಕ್ಷಾಂತರ ರೈತ ಕುಟುಂಬಗಳ ಗೌರವ ಮತ್ತು ಆರ್ಥಿಕ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ. “ಒಂದು ಶ್ರೇಣಿ ಒಂದು ಪಿಂಚಣಿ” ಎಂಬ ಭರವಸೆಯೊಂದಿಗೆ ಮಾಜಿ ಸೈನಿಕರನ್ನು ಒಟ್ಟುಗೂಡಿಸಿ ವಿಜಯೋತ್ಸವದ ಅಭಿಯಾನವನ್ನು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಈಗ “ನೋ ರ್‍ಯಾಂಕ್ ನೋ ಪೆನ್ಷನ್” ಎಂಬ ಈ ಯೋಜನೆಗೆ ಚಾಲನೆ ನೀಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ತಿಳಿಸಿದೆ.
ಜೂನ್ 24 ಶುಕ್ರವಾರದಂದು ಯೋಜನೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನಾ ದಿನವನ್ನು ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ. ಅಂದು “ಜೈ ಜವಾನ್ ಜೈ ಕಿಸಾನ್” ಘೋಷಣೆಯೊಂದಿಗೆ ಎಲ್ಲಾ ಜಿಲ್ಲೆ, ತಾಲೂಕು ಪ್ರಧಾನ ಕಚೇರಿಗಳಲ್ಲಿ ಶಾಂತಿಯುತ ಪ್ರತಿಭಟನೆಯನ್ನು ನಡೆಸಿ ನಂತರ ಭಾರತದ ರಾಷ್ಟ್ರಪತಿ, ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಗುವುದು. ಜೊತೆಗೆ ಕೇಂದ್ರ ಸರ್ಕಾರದ ಪ್ರತಿಕೃತಿಯನ್ನು ಸುಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯನ್ನು ವಿರೋಧಿಸುವ ಎಲ್ಲಾ ಯುವಕರು ಈ ಶಾಂತಿಯುತ ಪ್ರತಿಭಟನೆಯ ಘನತೆಯನ್ನು ಗೌರವಿಸುವ ಮೂಲಕ ಈ ಪ್ರತಿಭಟನಾ ದಿನದಲ್ಲಿ ಪಾಲ್ಗೊಳ್ಳಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ಮನವಿ ಮಾಡಿದೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ದೇಶದ ಎಲ್ಲಾ ಸಮೂಹ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದೆ.
ಇದನ್ನೂ ಓದಿ: ಅಗ್ನಿಪಥ್ ಹಿಂಪಡೆಯುವ ಪ್ರಶ್ನೆಯೆ ಇಲ್ಲ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್
Farmers associations sd not interfear this matter against defense decisions..
Farmers associations leaders will loose their publicity and ethics for standing against good rules .
Farmers leaders decisions are not all farmers decisions.
It’s for their own welfare..
Anti national teams try to utilize farmers card blindly..
Protest sd hv sm honest point of damages against farmers. not any groups…