Homeಮುಖಪುಟಒಬ್ಬ ಶಿವಸೇನಾ ಶಾಸಕ ಹೇಳಿದರೂ ಇಂದೇ ರಾಜೀನಾಮೆ ನೀಡುತ್ತೇನೆ: ಉದ್ಧವ್ ಠಾಕ್ರೆ

ಒಬ್ಬ ಶಿವಸೇನಾ ಶಾಸಕ ಹೇಳಿದರೂ ಇಂದೇ ರಾಜೀನಾಮೆ ನೀಡುತ್ತೇನೆ: ಉದ್ಧವ್ ಠಾಕ್ರೆ

- Advertisement -
- Advertisement -

ಮಹಾರಾಷ್ಟ್ರ ರಾಜಕೀಯ ಸಂಕಷ್ಟದ ಕುರಿತು ಮೊದಲ ಬಾರಿಗೆ ಮಹಾರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಉದ್ಧವ್ ಠಾಕ್ರೆ, “ನಾನು ಖುರ್ಚಿಗೆ ಆಸೆಪಟ್ಟವನಲ್ಲ, ಒಬ್ಬ ಶಿವಸೇನಾ ಶಾಸಕ ಹೇಳಿದರೂ ಇಂದೇ ರಾಜೀನಾಮೆ ನೀಡುತ್ತೇನೆ, ಆದರೆ ಮುಖಾಮುಖಿ ಹೇಳಬೇಕು. ಬನ್ನಿ ಇಂದೇ ನನ್ನ ರಾಜೀನಾಮೆ ಪತ್ರ ತೆಗೆದುಕೊಂಡು ಹೋಗಿ” ಎಂದಿದ್ದಾರೆ.

ಶಾಸಕರು ಹೇಳಿದರೆ ನಾನು ರಾಜೀನಾಮೆ ಕೊಡಲು ಸಿದ್ದನಿದ್ದೇನೆ. ಎಷ್ಟು ಜನ ನನ್ನ ಪರವಾಗಿದ್ದಾರೆ, ಎಷ್ಟು ಜನ ನನ್ನ ವಿರುದ್ಧವಾಗಿದ್ದಾರೆ ಎಂದು ನಾನು ನೋಡುವುದಿಲ್ಲ. ಒಬ್ಬ ಶಾಸಕ ಹೇಳಿದರೂ ರಾಜೀನಾಮೆ ಕೊಡುತ್ತೇನೆ. ನನ್ನ ವಿರುದ್ಧ ಒಬ್ಬ ಶಾಸಕ ಮಾತನಾಡಿದರೂ ಅದು ದೊಡ್ಡ ನಾಚಿಕೆ ನನಗೆ ಎಂದು ಅವರು ಹೇಳಿದ್ದಾರೆ.

ಈಗ ನಮ್ಮ ಶಾಸಕರಿಗೆ ಏನಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಅವರನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆ. ಈ ಕುರಿತು ಹಲವು ಶಾಸಕರು ನನಗೆ ಕರೆ ಮಾಡಿ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಉದ್ಧವ್ ಹೇಳಿದ್ದಾರೆ.

ಶರದ್ ಪವಾರ್ ಮತ್ತು ಕಮಲ್ ನಾಥ್ ಕರೆ ಮಾಡಿ ನನಗೆ ಬೆಂಬಲ ಸೂಚಿಸಿದ್ದಾರೆ. ನೀವು ಮುಂದುವರೆಯಿರಿ ಜೊತೆಗಿದ್ದೇವೆ ಎಂದಿದ್ದಾರೆ. ಅಲ್ಲದೆ ರಾಜ್ಯದ ಶಿವಸೈನಿಕರು ಸಹ ನನ್ನ ಜೊತೆಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಿಎಂ ಹುದ್ದೆ ಬರುತ್ತದೆ, ಹೋಗುತ್ತದೆ. ಆದರೆ ನನಗೆ ಜನರ ಪ್ರೀತಿ ಮುಖ್ಯ. ಈ ಎರಡು ವರ್ಷಗಳಲ್ಲಿ ನನಗೆ ಸಾಕಷ್ಟು ಪ್ರೀತಿ ಸಿಕ್ಕಿದೆ. ನನ್ನ ನಂತರ ಶಿವಸೈನಿಕರು ಮುಖ್ಯಮಂತ್ರಿಯಾದರೆ ನಾನು ಖುಷಿ ಪಡುತ್ತೇನೆ ಎಂದಿದ್ದಾರೆ.

ನಾನು ಬಾಳಾಸಾಹೇಬ್‌ರವರ ಮಗ. ಶಿವಸೇನೆ ಹಿಂದುತ್ವವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಇಂದಿಗೂ ನಮ್ಮ ಪ್ರಮುಖ ಅಜೆಂಡಾ ಅದೇ ಆಗಿದೆ. ಆದರೆ ಈ ಕುರಿತು ಆಕ್ಷೇಪಣೆಗಳಿದ್ದರೆ ನನ್ನ ಬಳಿ ಬರುವುದು ಬಿಟ್ಟು ಅವರು ಸೂರತ್‌ಗೆ ಏಕೆ ಹೋದರು? ಬಿಜೆಪಿಯ ಕುತಂತ್ರದಿಂದ ಕೆಲ ಶಾಸಕರನ್ನು ದಿಕ್ಕುತಪ್ಪಿಸಲಾಗುತ್ತಿದೆ ಎಂದು ಉದ್ಧವ್ ಹೇಳಿದ್ದಾರೆ.

ಇದನ್ನೂ ಓದಿ; ಮಹಾರಾಷ್ಟ್ರ ರಾಜಕೀಯ ಸಂಕಷ್ಟ: ಸರ್ಕಾರದ ಅಳಿವು-ಉಳಿವಿನ ನಂಬರ್ ಗೇಮ್ ಹೀಗಿದೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಒಬ್ಬ ಶಾಸಕ ಏಕನಾಥ ಶಿಂಧೆ ಹೇಳುತ್ತಿದ್ದಾರಲ್ಲ, ರಾಜಿನಾಮೆ ಕೊಡಿ…

    ಊಸರವಳ್ಳಿಯನ್ನೂ ನಾಚಿಸುವ ನಾಯಕ..,

    ಅಧಿಕಾರ ಬೇಕೆಂದರೆ ರಾತ್ರೋರಾತ್ರಿ ಹಿಂದುತ್ವ ಹೋಗಿ ಜಾತ್ಯಾತೀತರಾಗುತ್ತಾನೆ.., ಅಧಿಕಾರ ಹೋಗುತ್ತೆ ಅಂದಾಗ ಮತ್ತೆ ಹಿಂದುತ್ವ 😡😡😡

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...