Homeಕರ್ನಾಟಕಹೊಸ ವರ್ಷ-ಕೊರೊನಾ ಮುನ್ನೆಚ್ಚರಿಕೆ: ಗುರುವಾರ ಮಧ್ಯಾಹ್ನದಿಂದ ಶುಕ್ರವಾರ ಬೆಳಿಗ್ಗೆ ತನಕ ಕರ್ಫ್ಯೂ

ಹೊಸ ವರ್ಷ-ಕೊರೊನಾ ಮುನ್ನೆಚ್ಚರಿಕೆ: ಗುರುವಾರ ಮಧ್ಯಾಹ್ನದಿಂದ ಶುಕ್ರವಾರ ಬೆಳಿಗ್ಗೆ ತನಕ ಕರ್ಫ್ಯೂ

- Advertisement -
- Advertisement -

ರೂಪಾಂತರಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಹೊಸ ವರ್ಷದ ಪಾರ್ಟಿಗಳಿಗೆ ಕಡಿವಾಣ ಹಾಕುವ ಸಲುವಾಗಿ ಸರ್ಕಾರವು ಗುರುವಾರ ಮಧ್ಯಾಹ್ನ 12 ಗಂಟೆಯಿಂದ ಶುಕ್ರವಾರ ಬೆಳಿಗ್ಗೆ 6 ಗಂಟೆಯವರೆಗೆ 144 ಸೆಕ್ಷನ್ (ಕರ್ಫ್ಯೂ) ಜಾರಿಗೊಳಿಸಿದೆ.

ಈ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪನವರು ರಾತ್ರಿ ಕರ್ಫ್ಯೂ ಘೋಷಿಸಿದ ದಿನವೇ ಅದರ ದಿನಾಂಕ ಬದಲಿಸಿದ್ದರು. ನಂತರ ಆ ಆದೇಶವನ್ನೇ ಹಿಂತೆಗೆದುಕೊಂಡಿದ್ದರು. ರಾಜ್ಯ ಸರ್ಕಾರದ ಈ ನಡೆ ರಾಜ್ಯದಾದ್ಯಂತ ವ್ಯಾಪಕ ವ್ಯಂಗ್ಯಕ್ಕೆ ಗುರಿಯಾಗಿತ್ತು.

ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ಧದ ನಿರ್ಣಯ ಬೆಂಬಲಿಸಿದ ಕೇರಳದ ಬಿಜೆಪಿ ಶಾಸಕ!

“ಗೃಹ ಸಚಿವರು ಹೇಳಿದ್ದನ್ನು ಮಾತ್ರ ನಾವು ಮಾಡಿದ್ದೇವೆ” ಎಂದಿರುವ ಬೆಂಗಳೂರು ನಗರ ಪೊಲೀಸರ ಹಿರಿಯ ಅಧಿಕಾರಿ ಆಯುಕ್ತ ಕಮಲ್ ಪಂತ್, “ನಿಷೇಧಿತ ಆದೇಶಗಳು ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆಗೆ ಮಾತ್ರ ಸಂಬಂಧಿಸಿದೆ. ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳಂತಹ ಸಂಸ್ಥೆಗಳು ಅವುಗಳ ಪರವಾನಗಿ ಸ್ಥಿತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬಹುದು” ಎಂದು ಹೇಳಿದ್ದಾರೆ.

“ಹೊಸ ಮಾದರಿಯ ಬ್ರಿಟನ್ ಕೊರೋನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಈ ರೀತಿಯ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ನಿಷೇಧಾಜ್ಞೆ ವೇಳೆ ಜನರು ಸಹಕರಿಸಬೇಕು. ಎಲ್ಲರೂ ಕೊರೊನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಆರೋಗ್ಯದ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಇವತ್ತು ಒಂದು ದಿನ ಪಾಲಿಸಿ” ಎಂದು ಯಡಿಯೂರಪ್ಪನವರು ಮನವಿ ಮಾಡಿದ್ದಾರೆ.


ಇದನ್ನೂ ಓದಿ: ಬಿಎಸ್​ವೈ ವಿರುದ್ಧ ಮತ್ತೆ ಅಪಸ್ವರ ಎತ್ತಿದ ಯತ್ನಾಳ್​; ಸಿಎಂ ಕಾರ್ಯವೈಖರಿ ಖಂಡಿಸಿ ಕಟೀಲ್​ಗೆ ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...