Homeಮುಖಪುಟಆಗ ’ತುಕುಡೆ ಗ್ಯಾಂಗ್’, ಈಗ ಕೃಷಿಕರು: ಸಂಸದೆ ಶೋಭಾ ಕರಂದ್ಲಾಜೆಯ ಇಬ್ಬಂದಿತನ

ಆಗ ’ತುಕುಡೆ ಗ್ಯಾಂಗ್’, ಈಗ ಕೃಷಿಕರು: ಸಂಸದೆ ಶೋಭಾ ಕರಂದ್ಲಾಜೆಯ ಇಬ್ಬಂದಿತನ

- Advertisement -
- Advertisement -

ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಇಂದಿಗೆ 36 ನೇ ದಿನಕ್ಕೆ ಕಾಲಿಟ್ಟದೆ. ಕೇಂದ್ರವು ಇದುವರೆಗೆ 6 ಬಾರಿ ರೈತರೊಂದಿಗೆ ಮಾತುಕತೆ ನಡೆಸಿದೆಯಾದರೂ ಕೃಷಿ ಕಾನೂನಗಳನ್ನು ವಾಪಾಸು ಪಡೆಯುವುದಿಲ್ಲ ಎಂದು ಹೇಳಿ ತನ್ನ ಹಠಮಾರಿ ಧೋರಣೆಯನ್ನು ಮುಂದುವರೆಸಿದೆ. ರೈತರು ಕೂಡಾ ಕಾನೂನನ್ನು ವಾಪಾಸು ಪಡೆಯುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಮತ್ತೆ ಘೋಷಿಸಿದ್ದಾರೆ.

ಪ್ರತಿಭಟನಾ ನಿರತ ರೈತರು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಪ್ರತಿ ಸುತ್ತಿನಲ್ಲೂ, ಸರ್ಕಾರ ನೀಡುವ ನೀರನ್ನು ಕೂಡಾ ಮುಟ್ಟದೇ, ತಾವೇ ಒಯ್ದಿದ್ದ ಆಹಾರವನ್ನು ಹಂಚಿಕೊಂಡು ತಿಂದು ಸ್ವಾಭಿಮಾನ ಮೆರೆದಿದ್ದರು. ಇದು 6 ನೇ ಸುತ್ತಿನ ಮಾತುಕತೆಯ ವಿರಾಮದ ಸಮಯದಲ್ಲೂ ಮುಂದುವರೆದಿತ್ತು. ಆದರೆ ಈ ಭಾರಿ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್‌ ಮತ್ತು ಪಿಯೂಷ್ ಗೋಯಲ್ ರೈತರು ತಂದಿದ್ದ ಊಟ ಮಾಡಿದ್ದರು.

ಇದನ್ನೂ ಓದಿ: ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರಿಂದ FIR

ಕೇಂದ್ರ ಸಚಿವರಿಬ್ಬರು ರೈತರೊಂದಿಗೆ ಊಟ ಮಾಡುತ್ತಿರುವ ಈ ಚಿತ್ರವನ್ನು, ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ ಖಾತೆಗಳಲ್ಲಿ ಹಂಚಿಕೊಂಡಿದ್ದರು. “ಕೃಷಿಕ ಸಂಘಟನೆಗಳೊಂದಿಗೆ ಮಾತುಕತೆಯ ಸಂದರ್ಭದಲ್ಲಿ ಕೃಷಿಕರೊಂದಿಗೆ ಭೋಜನ ಸೇವಿಸಿದ ಕೇಂದ್ರ ಕೃಷಿ ಮಂತ್ರಿ ಶ್ರೀ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ರೈಲ್ವೆ ಸಚಿವ ಶ್ರೀ ಪಿಯೂಷ್ ಗೋಯಲ್” ಎಂದು ಶೋಭಾ ತಮ್ಮ ಫೇಸ್‌‌ಬುಕ್ ಖಾತೆಗಳಲ್ಲಿ ಬರೆದಿದ್ದಾರೆ.

ಆದರೆ ಇದೇ ಶೋಭಾ ಕರಂದ್ಲಾಜೆ ಡಿಸೆಂಬರ್‌ 22 ರಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ, “ರೈತರ ಸೋಗಿನಲ್ಲಿ ತುಕುಡೇ ಗ್ಯಾಂಗ್ ದೆಹಲಿಯಲ್ಲಿ ನಡೆಯುತ್ತಿರುವ ಕೃಷಿ ಮಸೂದೆ ವಿರೋಧಿ ಹೋರಾಟದ ನೇತೃತ್ವ ವಹಿಸಿದೆ. ಕೃಷಿಕರ ಅಭ್ಯುದಯದ ಚಿಂತನೆಯನ್ನು ನಡೆಸದೆ ಕೇವಲ ರಾಜಕೀಯ ಮಾಡುವ ನಿಟ್ಟಿನಲ್ಲಿ ದೇಶದ ಜನರ ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಹಾಗು ಇತರ ಪಕ್ಷಗಳು ಮಾಡುತ್ತಿವೆ” ಎಂದು ಬರೆಯುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಭಾರತದ ಭೂಪಟದಿಂದ ಪಾಕ್‌ ಆಕ್ರಮಿತ ಕಾಶ್ಮಿರ ಕೈಬಿಟ್ಟ ರಾಷ್ಟ್ರ ಜಾಗರಣ ಸಮಿತಿ.. ಶೋಭಾ ಕರಂದ್ಲಾಚೆ ವಿರುದ್ಧ ನೆಟ್ಟಿಗರ ಕಿಡಿ


ಇದರ ಆರ್ಕೈವ್ ಇಲ್ಲಿದೆ

ಜೊತೆಗೆ, ಟಿವಿ ಕಾರ್ಯಕ್ರಮದಲ್ಲಿ ತಾವು ನೀಡಿದ್ದ ಹೇಳಿಕೆಯ ವಿಡಿಯೋವನ್ನು ಕೂಡಾ ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದರು. ವಿಡಿಯೋದಲ್ಲಿ, “ರೈತರ ಪ್ರತಿಭಟನೆಗೆ ಖಲಿಸ್ತಾನ್‌ಗಳಿಂದ ಹಣ ಬರುತ್ತಿದೆ, ತುಕ್ಡೆ ಗ್ಯಾಂಗ್‌ನವರು ನೇತೃತ್ವ ಸೇರಿದಂತೆ, ಅರ್ಬನ್ ನಕ್ಸಲ್‌ರು ಕೂಡಾ ಈ ಪ್ರತಿಭಟನೆಗೆ ನೇತೃತ್ವ ನೀಡುತ್ತಿದೆ” ಎಂದು ಟೀಕಿಸಿದ್ದರು.

ಇದು ಶೋಭಾ ಕರಂದ್ಲಾಜೆಯವರ ಇಬ್ಬಂದಿತನವಲ್ಲವೇ ಎಂಬ ಪ್ರಶ್ನೆ ಎದ್ದಿದೆ. ತಮಗೆ ಮನ ಬಂದಾಗ ರೈತರನ್ನು ಟೀಕಿಸಿವುದು, ಮನಬಂದಾಗ ಅವರನ್ನು ಹೊಗಳುವುದು ಎಷ್ಟು ಸರಿ? ನಮ್ಮ ಟೀಕೆ ಮತ್ತು ಹೊಗಳಿಕೆಗಳು ವಾಸ್ತವ ಅಂಶಗಳ ಆಧಾರದಲ್ಲಿರಬೇಕು ಮತ್ತು ಇತಿಮಿತಿಯಲ್ಲಿರಬೇಕು ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕಾನೂನಿನ ವಿರುದ್ದ ದೆಹಲಿಯ ಭಾರಿ ಚಳಿಯ ಹೊರತಾಗಿಯೂ ರೈತರು ಚಳುವಳಿ ಮುಂದುವರೆಸಿದ್ದಾರೆ. ಪ್ರತಿಭಟನೆಯಲ್ಲಿ ವೃದ್ದರು, ಮಕ್ಕಳು ಸೇರಿದಂತೆ ಮಹಿಳೆಯರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರೈತರ ಹೋರಾಟವನ್ನು ಖಲಿಸ್ತಾನಿಗಳು, ಅರ್ಬನ್ ನಕ್ಸಲರು, ತುಕ್ಡೆ ಗ್ಯಾಂಗ್‌‌ನವರು ಎಂದು ಹೇಳಿರುವುದು ಕೇವಲ ಸಂಸದೆ ಶೋಭ ಕರಂದ್ಲಾಜೆ ಮಾತ್ರವಲ್ಲ, ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಬಿಜೆಪಿ ನಾಯಕರು ಸೇರಿದಂತೆ ಸಚಿವರು ಕೂಡಾ ಇದನ್ನು ಉಚ್ಚರಿಸಿದ್ದರು. ಆದರೆ ಅದೇ ಹೋರಾಟಗಾರೊಂದಿಗೆ ಕೇಂದ್ರ ಸರ್ಕಾರ ಆರು ಬಾರಿ ಮಾತುಕತೆ ನಡೆಸಿದೆ. ಆರನೇ ಸುತ್ತಿನ ಮಾತುಕತೆಯಲ್ಲಿ ಅವರ ನಾಲ್ಕು ಬೇಡಿಕೆಗಳಲ್ಲಿ ಎರಡನ್ನು ಪರಿಶೀಲಿಸುವುದಾಗಿ ಒಪ್ಪಿಕೊಂಡಿದೆ. ಪ್ರಮುಖ ಬೇಡಿಕೆಯಾದ ನೂತನ ಕೃಷಿ ಕಾನೂನನ್ನು ವಾಪಾಸು ಪಡೆಯುವವರೆಗೂ ಹೋರಾಟದಿಂದ ಒಂದಿಂಚೂ ಹಿಂದೆ ಸರಿಯಲ್ಲ ಎಂದು ರೈತರು ಮತ್ತೆ ಘೋಷಿಸಿದ್ದಾರೆ.

ಇದನ್ನೂ ಓದಿ: ಶೋಭಾ ಕರಂದ್ಲಾಚೆಗೆ ಈರುಳ್ಳಿ ಹಾರ ಹಾಕಿ ಪ್ರತಿಭಟನೆಗೆ ಯತ್ನ: ಸ್ಥಳದಿಂದ ಕಾಲ್ಕಿತ್ತ ಸಂಸದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ದೇಶದ ಶ್ರೀಮಂತ ಉದ್ಯಮಿಗಳ ‘ಸಾಧನ’: ರಾಹುಲ್ ಗಾಂಧಿ

0
ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಕೆಲವೇಕೆಲವು ಶ್ರೀಮಂತ ಉದ್ಯಮಿಗಳ ಸಾಧನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದ ನೈಜ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ಸೆಳೆಯುವುದು, ಭಾರತದ...