Homeಮುಖಪುಟಭಾರತದ ಭೂಪಟದಿಂದ ಪಾಕ್‌ ಆಕ್ರಮಿತ ಕಾಶ್ಮಿರ ಕೈಬಿಟ್ಟ ರಾಷ್ಟ್ರ ಜಾಗರಣ ಸಮಿತಿ.. ಶೋಭಾ ಕರಂದ್ಲಾಚೆ ವಿರುದ್ಧ...

ಭಾರತದ ಭೂಪಟದಿಂದ ಪಾಕ್‌ ಆಕ್ರಮಿತ ಕಾಶ್ಮಿರ ಕೈಬಿಟ್ಟ ರಾಷ್ಟ್ರ ಜಾಗರಣ ಸಮಿತಿ.. ಶೋಭಾ ಕರಂದ್ಲಾಚೆ ವಿರುದ್ಧ ನೆಟ್ಟಿಗರ ಕಿಡಿ..

- Advertisement -
- Advertisement -

ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ರಾಷ್ಟ್ರ ಜಾಗರಣ ಸಮಿತಿಯು ಇಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾರತದ ಭೂಪಟದಿಂದ ಪಾಕ್‌ ಆಕ್ರಮಿತ ಕಾಶ್ಮಿರ ಚಿತ್ರವನ್ನು ಕೈಬಿಡುವ ಮೂಲಕ ವಿವಾದ ಭುಗಿಲೆದ್ದಿದೆ.

ಚಿಕ್ಕಮಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಚೆ ಸಹ ಭಾಗವಹಿಸಿದ್ದು ದೇಶದ ಎಲ್ಲರಿಗೂ ದೇಶಪ್ರೇಮದ ಪಾಠ ಮಾಡುವ ಇವರು ಎಂಥ ಹೀನ ಕೆಲಸ ಮಾಡಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಸಿಎಎ ಪರ ರ್‍ಯಾಲಿಯ ಸಂಘಟಕರು ನಮ್ಮ ಕಾಶ್ಮೀರದ ಹಕ್ಕುಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿದ್ದಾರೆಯೇ? ಇದು ಸರಿಯೇ ಶೋಭಾ ಕರಂದ್ಲಾಚೆ ಎಂದು ಅಭಿಸಾರ್‌ ಶರ್ಮಾ ಎಂಬುವವರು ಪ್ರಶ್ನಿಸಿದ್ದಾರೆ.

ನಿಮ್ಮ ಬ್ಯಾನರ್‌ ಹಿನ್ನೆಲೆಯಲ್ಲಿನ ಭಾರತದ ನಕ್ಷೆಯನ್ನು ಪರಿಶೀಲಿಸಿ. ಈ ಬಿಜೆಪಿ ಸಂಸದರು ಕಾಶ್ಮೀರದ ಒಂದು ಭಾಗವನ್ನು ಪಾಕಿಸ್ತಾನಕ್ಕೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ತೋರುತ್ತಿದೆ. ಈ ರಾಷ್ಟ್ರ ವಿರೋಧಿ ಚಟುವಟಿಕೆಗಾಗಿ ನಮ್ಮ ಪ್ರಧಾನಿ ಮತ್ತು ಗೃಹ ಸಚಿವರು ಅವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಿದ್ದಾರೆ? ಎಂದು ಹಸಿಬಾರವರು ಪ್ರಶ್ನಿಸಿದ್ದಾರೆ.

ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಕೊಟ್ಟ ಚೊಂಬಕ್ಕ, ಸ್ವಲ್ಪನಾದ್ರೂ ನಾಚಿಕೆ ಇದ್ರೆ ದೇಶದ ಕ್ಷಮೆ ಕೇಳಿ… ಇಲ್ದಿದ್ರೆ ನೀವು ದೇಶದ್ರೋಹಿಗಳು, ತುಕ್ಡೆ ಗ್ಯಾಂಗ್‌ನವ್ರು ಅಂತ ಒಪ್ಕೊಳ್ಳಿ ಎಂದು ಕ್ಯೂಬನ್‌ ಕಿಡ್‌ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಟ್ಟಿರುವಂತೆ ತೋರುತ್ತಿದೆ. ಬೇರೆ ಯಾವುದೇ ಪಕ್ಷದವರು ಹೀಗೆ ಮಾಡಿದ್ದರೆ ಕಿರುಕುಳ, ಬಂಧನ ಮತ್ತು ದೇಶದ್ರೋಹದ ಆರೋಪ ಹೊರಿಸಲಾಗುವುದು. ಈ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್ ಅವರೊಂದಿಗೆ ಎಲ್ಲಾ ಕಾನೂನು ಯಂತ್ರೋಪಕರಣಗಳನ್ನು ಹೊಂದಿದೆ. ಹಾಗಾಗಿ ಅವರು ಯಾವುದನ್ನೂ ಉಲ್ಲಂಘಿಸಬಹುದು ಎಂದು ನೆಟ್ಟಿಗರೊಬ್ಬರು ಆರೋಪಿಸಿದ್ದಾರೆ.

ಸಿಎಎ ಮೂಲಕ ಜನರನ್ನು ಬೇರೆಡೆಗೆ ತಿರುಗಿಸುವಾಗ ನೀವು ಪಿಒಕೆ ಅನ್ನು ಅಧಿಕೃತವಾಗಿ ಪಾಕ್‌ಗೆ ಉಡುಗೊರೆಯಾಗಿ ನೀಡಿದ್ದೀರಾ? ದೇಶಭಕ್ತರು ಎಂದು ಕರೆಯಲ್ಪಡುವ ಹುಸಿ ರಾಷ್ಟ್ರೀಯವಾದಿಗಳು ಭಾರತೀಯ ನಕ್ಷೆಯನ್ನು ಸಹ ಸರಿಯಾಗಿ ಪಡೆಯಲು ಸಾಧ್ಯವಿಲ್ಲವೇ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...