Homeಮುಖಪುಟದುರ್ಬಲ ಮನಸ್ಸಿನ ಸಿಎಂ ಯಡಿಯೂರಪ್ಪ ರಾಜಿನಾಮೆ ನೀಡುವುದು ಒಳ್ಳೆಯದು: ಉಗ್ರಪ್ಪ ವಾಗ್ದಾಳಿ

ದುರ್ಬಲ ಮನಸ್ಸಿನ ಸಿಎಂ ಯಡಿಯೂರಪ್ಪ ರಾಜಿನಾಮೆ ನೀಡುವುದು ಒಳ್ಳೆಯದು: ಉಗ್ರಪ್ಪ ವಾಗ್ದಾಳಿ

- Advertisement -
- Advertisement -

ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳೇ ನಡೆಯುತ್ತಿಲ್ಲ. ದುರ್ಬಲ ಮನಸ್ಸಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಕೇವಲ ಅಧಿಕಾರ ದಾಹ, ಸಮಯ ಸಾಧಕತನದಿಂದ ಆಡಳಿತ ನಡೆಸುತ್ತಿದ್ದು ಹೈಕಮಾಂಡ್ ನಿಂದ ಅವಮಾನ ಸಹಿಸುವುದು ಬಿಟ್ಟು ರಾಜಿನಾಮೆ ನೀಡುವುದೇ ಸೂಕ್ತ ಎಂದು ಕಾಂಗ್ರೆಸ್ ವಕ್ತಾರ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಾಹುಲಿ ಅಲ್ಲ. ರಾಜಾ ಇಲಿ ಎಂಬ ಮಾತುಗಳನ್ನು ತುಮಕೂರಿನಲ್ಲೂ ಪುನರುಚ್ಚರಿಸಿದರು. ಕಾಂಗ್ರೆಸ್ ಜೆಡಿಎಸ್ ಶಾಸಕರು ರಾಜಿನಾಮೆ ನೀಡಿದಾಗ ಯಡಿಯೂರಪ್ಪ ವೀರಾವೇಶದ ಮಾತುಗಳನ್ನಾಡಿದರು. ನಾನು ಮುಖ್ಯಮಂತ್ರಿಯಾಗಿ ಒಂದು ಗಂಟೆಯೊಳಗೆ ಎಲ್ಲರನ್ನು ಮಂತ್ರಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಆದರೆ ಇದುವರೆಗೂ ಉಪ ಚುನಾವಣೆಯಲ್ಲಿ ಗೆದ್ದ ಶಾಸಕರನ್ನು ಸಚಿವರನ್ನಾಗಿ ಮಾಡಲು ಸಾಧ್ಯವಾಗಿಲ್ಲ ಎಂದು ಕಿಚಾಯಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಮುಂದೆ ನೆರೆ ಪರಿಹಾರ ಬಿಡುಗಡೆ ಮಾಡುವಂತೆ ಗೋಗರೆದರು. ಜಿಎಸ್.ಟಿಯ ರಾಜ್ಯದ ಪಾಲಿನ ಹಣವನ್ನು ನೀಡುವಂತೆ ಕೋರಿದರು. ಗೃಹ ಸಚಿವ ಅಮಿತ್ ಶಾ ಅವರ ಬಳಿ ಹೋಗಿ ಮನವಿ ಮಾಡಿದರು. ನಾನು ಕೊಟ್ಟ ಮಾತಿನಂತೆ ನಡೆಯುತ್ತೇನೆ. ನನಗೆ ಬೆಂಬಲವಾಗಿ ನಿಂತ ಶಾಸಕರನ್ನು ಮಂತ್ರಿ ಮಾಡಬೇಕೆಂದು ಶಾ ಅವರಿಗೆ ಮನವಿ ಮಾಡಿದರು. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮುಖ್ಯಮಂತ್ರಿಗಳ ಮಾತುಗಳನ್ನೇ ಕೇಳುತ್ತಿಲ್ಲ. 24 ಗಂಟೆಗಳಲ್ಲಿ ಮಂತ್ರಿ ಮಾಡುತ್ತೇನೆಂದ ಮಾತುಗಳೆಲ್ಲವೂ ಸುಳ್ಳಾಗಿವೆ. ಯಾರೂ ಮುಖ್ಯಮಂತ್ರಿಗಳ ಮಾತುಗಳನ್ನು ಕೇಳದಂತಾಗಿದ್ದಾರೆ ಎಂದು ಲೇವಡಿ ಮಾಡಿದರು.

ಯಡಿಯೂರಪ್ಪನವರ ಶಕ್ತಿ ಕುಂದಿ ಹೋಗಿದೆ. ಮಠದ ಸ್ವಾಮೀಜಿಯೊಬ್ಬರು ತಮ್ಮ ಸುಮುದಾಯದವರನ್ನು ಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದರು. ಅವರ ಮಾತಿಗೆ ಸಿಟ್ಟಿಗೆದ್ದ ಮುಖ್ಯಮಂತ್ರಿ ನಾಳೆಯೇ ರಾಜಿನಾಮೆ ಕೊಡುತ್ತೇನೆ ಎಂದು ಅಸಹಾಯಕತೆ ತೋರಿದರು. ಮುಖ್ಯಮಂತ್ರಿಗಳಿಗೆ ತಾಳ್ಮೆ ಇರಬೇಕು. ಯಾರೋ ಒಬ್ಬ ಸ್ವಾಮಿ ಮಾತನಾಡಿದ ಮಾತ್ರಕ್ಕೆ ರಾಜಿನಾಮೆ ಕೊಡುತ್ತೇನೆಂದು ಹೇಳಬೇಕೇ? ಇದನ್ನು ನೋಡಿದರೆ ಯಡಿಯೂರಪ್ಪ ವೀಕ್ ಮೈಂಡ್ ಸಿಎಂ. ಇಂಥವರಿಂದ ಅಭಿವೃದ್ಧಿ ಆಗುವುದಿಲ್ಲ ಎಂದು ಟೀಕಿಸಿದರು.

ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ ವ್ಯಕ್ತಿಗಳು ಮತ್ತು ಶಕ್ತಿಗಳೇ ಇಂದೂ ಅವರನ್ನು ಮುಗಿಸುವ ಕೆಲಸ ಮಾಡುತ್ತಿವೆ. ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ಅವರಿಗೆ ಬಹುಮತ ಇಲ್ಲ. ಸಿಎಂಗೆ ಸ್ವಾಭಿಮಾನವಿದ್ದರೆ ರಾಜಿನಾಮೆ ಕೊಡುವುದು ಒಳ್ಳೆಯದು. ರಾಜ್ಯದ ಜನರ ವಿಶ್ವಾಸ ಗಳಿಸಲು ಯಡಿಯೂರಪ್ಪ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.

ಸಿಎಎ ಮತ್ತು ಎನ್ಆರ್.ಸಿ ಸಂವಿಧಾನ ವಿರೋಧಿಯಾಗಿವೆ. ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆಯುವ ಕೆಲಸವನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಮುಂದಾಗಿದೆ. ಇದು ಸಂವಿಧಾನದ 14, 15, 21, 25 ಮತ್ತು 51 ಎ ಆರ್ಟಿಕಲ್ ಗಳಿಗೆ ವಿರುದ್ದವಾಗಿದೆ. ಇಂತಹ ಕಾಯ್ದೆಯ ಬಗ್ಗೆ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಇಂತಹ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ದೇಶದ ಸಮಸ್ಯೆಗಳ ಬಗ್ಗೆ ಮಾತನಾಡದೆ ಜನರ ಗಮನವನ್ನು ಬೇರೆಡೆ ಸೆಳೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ದೂರಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...