Homeಚಳವಳಿಮಲಯಾಳಂ ಚಲನಚಿತ್ರ ಸೆಟ್‌ಗಳು ‘ಲೈಂಗಿಕ ಕಿರುಕುಳ ವಿರೋಧಿ ಸಮಿತಿ’ ಹೊಂದಿರಬೇಕು: ಹೈಕೋರ್ಟ್ ತೀರ್ಪು

ಮಲಯಾಳಂ ಚಲನಚಿತ್ರ ಸೆಟ್‌ಗಳು ‘ಲೈಂಗಿಕ ಕಿರುಕುಳ ವಿರೋಧಿ ಸಮಿತಿ’ ಹೊಂದಿರಬೇಕು: ಹೈಕೋರ್ಟ್ ತೀರ್ಪು

- Advertisement -
- Advertisement -

ಮಲಯಾಳಂ ಚಲನಚಿತ್ರ ನಿರ್ಮಾಣ ಸಂಸ್ಥೆಗಳು ತಮ್ಮ ಕೆಲಸದ ಸ್ಥಳದಲ್ಲಿ, “ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ-2013”ರ ಪ್ರಕಾರ ‘ಆಂತರಿಕ ಸಮಿತಿ’ಯನ್ನು (IC) ರಚಿಸಬೇಕು ಎಂದು ಕೇರಳ ಹೈಕೋರ್ಟ್ ಗುರುವಾರ ಹೇಳಿದೆ. ವುಮೆನ್ ಇನ್ ಸಿನಿಮಾ ಕಲೆಕ್ಟಿವ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಅಮ್ಮ) ಮತ್ತು ಕೇರಳದ ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ (FEFKA) ನಂತಹ ಇತರ ಸಂಸ್ಥೆಗಳಲ್ಲಿ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಅವರು ಮನವಿ ಮಾಡಿದ್ದರು.

ಮಲಯಾಳಂ ಚಲನಚಿತ್ರ ಕಲಾವಿದರ ಸಂಘವು ಆಂತರಿಕ ಸಮಿತಿ ರಚನೆಗೆ ಒಪ್ಪಿಗೆ ನೀಡಿದೆ ಮತ್ತು 10 ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಇತರ ಸಿನಿ ಸಂಸ್ಥೆಗಳು ಕಡ್ಡಾಯವಾಗಿ ಆಂತರಿಕ ಸಮಿತಿ ಹೊಂದಿರಬೇಕು ಎಂದು ಪೀಠ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಎಸ್. ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ. ಚಾಲಿ ಅವರನ್ನೊಳಗೊಂಡ ಪೀಠವು ತೀರ್ಪಿನ ಆಪರೇಟಿವ್ ಭಾಗವನ್ನು ನ್ಯಾಯಾಲಯದಲ್ಲಿ ಓದಿದೆ.

ಇದನ್ನೂ ಓದಿ: 10 ವರ್ಷಗಳ ಸತತ ಹೋರಾಟ!; 2011ರ ದೇಶದ್ರೋಹ ಪ್ರಕರಣದಲ್ಲಿ ಹೋರಾಟಗಾರ್ತಿ ಸೋನಿ ಸೋರಿ ಖುಲಾಸೆ

2017 ರಲ್ಲಿ ಕಲಾವಿದರೊಬ್ಬರ ಮೇಲಿನ ದಾಳಿಯ ಪ್ರಕರಣದ ನಂತರ ‘ವುಮೆನ್ ಇನ್ ಸಿನಿಮಾ ಕಲೆಕ್ಟಿವ್’ ಅನ್ನು ರಚಿಸಲಾಗಿತ್ತು. ಈ ಪ್ರಕರಣದಲ್ಲಿ ಮಲಯಾಳಂನ ಖ್ಯಾತ ದಿಲೀಪ್ ಕುಮಾರ್‌ ಆರೋಪಿಯಾಗಿದ್ದರು. ಮಲಯಾಳಂ ಚಿತ್ರರಂಗದಲ್ಲಿನ ಲಿಂಗ ತಾರತಮ್ಯದ ವಿರುದ್ಧ ಹೋರಾಡಲು ತಾವು ಶ್ರಮಿಸುವುದಾಗಿ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ ಸ್ಪಷ್ಟಪಡಿಸಿತ್ತು. ಇದರ ಭಾಗವಾಗಿ, POSH ಕಾಯಿದೆಯ ಪ್ರಕಾರ ಮಲಯಾಳಂ ಚಲನಚಿತ್ರ ಸಂಸ್ಥೆಗಳಲ್ಲಿ ಆಂತರಿಕ ಸಮಿತಿಗಳನ್ನು ಸ್ಥಾಪಿಸಬೇಕೆಂದು ಸಂಸ್ಥೆಯು ಅಕ್ಟೋಬರ್ 2018 ರಲ್ಲಿ ನ್ಯಾಯಾಲಯದ ಮೊರೆ ಹೋಗಿತ್ತು.

ವುಮೆನ್ ಇನ್ ಸಿನಿಮಾ ಕಲೆಕ್ಟಿವ್ ಆರಂಭದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದಾಗ, ಕೇರಳ ರಾಜ್ಯ ಸರ್ಕಾರ ಮತ್ತು ಮಲಯಾಳಂ ಚಲನಚಿತ್ರ ಕಲಾವಿದರ ಸಂಘವನ್ನು ಪ್ರತಿವಾದಿಗಳಾಗಿ ಹೆಸರಿಸಲಾಗಿತ್ತು. ಸಾಂವಿಧಾನಿಕ ಹಕ್ಕುಗಳ ಸಂಶೋಧನೆ ಮತ್ತು ವಕೀಲರ ಕೇಂದ್ರವು ನಂತರ ಅರ್ಜಿಯನ್ನು ಸೇರಿಕೊಂಡು, ಅದರ ವ್ಯಾಪ್ತಿಯನ್ನು ವಿಸ್ತರಿಸಿದೆ. ಮಾಧ್ಯಮ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳಲ್ಲಿ ಆಂತರಿಕ ಸಮಿತಿಗಳನ್ನು ರಚಿಸಬೇಕು ಎಂದು ಅದು ಹೇಳಿದೆ.

 

View this post on Instagram

 

A post shared by Geetu Mohandas (@geetu_mohandas)

ಇದನ್ನೂ ಓದಿ: ’ಲವ್ ಸ್ಟೋರಿ’: ಫ್ಯೂಡಲ್ ಮನಸ್ಥಿತಿಯ ತೆಲುಗು ಸಿನಿಮಾರಂಗದಲ್ಲೊಂದು ಸಣ್ಣ ಆಶಾವಾದದ ಮಿಂಚು

ಇದರ ನಂತರ ಕೇರಳದ ಮಹಿಳಾ ಆಯೋಗವು ಈ ವಿಷಯದಲ್ಲಿ ಅರ್ಜಿಯನ್ನು ಸಲ್ಲಿಸಿ, ಮನವಿಯನ್ನು ಮತ್ತೆ ಬಲಪಡಿಸಿತು. ವಿಶಾಕಾ ಮಾರ್ಗಸೂಚಿಗಳು ಮತ್ತು POSH ಕಾಯಿದೆಗೆ ಅನುಗುಣವಾಗಿ ಮಲಯಾಳಂ ಚಲನಚಿತ್ರ ಕಲಾವಿದರ ಸಂಘವು ಆಂತರಿಕ ಸಮಿತಿ ಸ್ಥಾಪಿಸುವುದನ್ನು ರಾಜ್ಯ ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಆಯೋಗವು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ.

ಗುರುವಾರ ನ್ಯಾಯಾಲಯ ನೀಡಿದ ಆದೇಶದ ಆಪರೇಟಿವ್ ಭಾಗದಲ್ಲಿ, ಚಲನಚಿತ್ರ ಸಂಸ್ಥೆಗಳನ್ನು ಹೊರತುಪಡಿಸಿ, ಮಾಧ್ಯಮ ಸಂಸ್ಥೆಗಳು ಸಹ ಪೋಷ್ ಕಾಯ್ದೆಯ ಪ್ರಕಾರ  ಆಂತರಿಕ ಸಮಿತಿಗಳನ್ನು ಹೊಂದಲು ಸೂಚಿಸಲಾಗಿದೆ.

ಹಲವು ವರ್ಷಗಳಿಂದ ಸಮಿತಿ ರಚನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ, ಅರ್ಜಿಯ ಆದೇಶವನ್ನು ಪ್ರಕಟಿಸುವ ಮುನ್ನವೇ ಕಳೆದ ವಾರ ಸಮಿತಿಯೊಂದನ್ನು ರಚಿಸಲು ನಿರ್ಧರಿಸಿದೆ. ಆದಾಗ್ಯೂ, ಈ ಆಂತರಿಕ ಸಮಿತಿಗೆ ಅಗತ್ಯವಿರುವಂತೆ ಬಾಹ್ಯ ಸದಸ್ಯರನ್ನು ಹೊಂದಿಲ್ಲ ಮತ್ತು ಇದನ್ನು ನಂತರ ಮಾಡಲಾಗುವುದು ಎಂದು ಸಂಸ್ಥೆ ಹೇಳಿದೆ.

ಇದನ್ನೂ ಓದಿ: ಭಾರತದ ವಿವಿಧ ಭಾಷೆಗಳ ಇತ್ತೀಚಿನ ಸಿನಿಮಾಗಳಲ್ಲಿ ದಲಿತ ಕಥನಗಳು; ಭಾಗ-1 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...