Homeಮುಖಪುಟ10 ವರ್ಷಗಳ ಸತತ ಹೋರಾಟ!; 2011ರ ದೇಶದ್ರೋಹ ಪ್ರಕರಣದಲ್ಲಿ ಹೋರಾಟಗಾರ್ತಿ ಸೋನಿ ಸೋರಿ ಖುಲಾಸೆ

10 ವರ್ಷಗಳ ಸತತ ಹೋರಾಟ!; 2011ರ ದೇಶದ್ರೋಹ ಪ್ರಕರಣದಲ್ಲಿ ಹೋರಾಟಗಾರ್ತಿ ಸೋನಿ ಸೋರಿ ಖುಲಾಸೆ

- Advertisement -
- Advertisement -

ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ ಸೋನಿ ಸೋರಿ ಅವರ ವಿರುದ್ಧ 2011 ರಲ್ಲಿ ದಾಖಲಾದ ದೇಶದ್ರೋಹ ಪ್ರಕರಣವನ್ನು ದಾಂತೇವಾಡ ನ್ಯಾಯಾಲಯವು ಖುಲಾಸೆಗೊಳಿಸಿದೆ. ಸೋನಿ ಮತ್ತು ಇತರ ಮೂವರ ಮೇಲೆ ಮಾವೋವಾದಿಗಳಿಗೆ ಹಣ ಸರಬರಾಜು ಮಾಡಿದ ಆರೋಪ ಹೊರಿಸಲಾಗಿದ್ದು, ಸೋರಿಯನ್ನು 2011 ರಲ್ಲಿ ದೆಹಲಿಯಿಂದ ಬಂಧಿಸಲಾಗಿತ್ತು.

ವಿಶೇಷ ನ್ಯಾಯಾಧೀಶ ವಿನೋದ್ ಕುಮಾರ್ ದೇವಾಂಗನ್ ಅವರು, ‘‘ಸೋನಿ ಸೊರಿ, ಅವರ ಸಹಾಯಕ ಲಿಂಗರಾಮ್ ಕೊಡೋಪಿ, ಗುತ್ತಿಗೆದಾರ ಬಿ.ಕೆ. ಲಾಲಾ ಮತ್ತು ಎಸ್ಸಾರ್ ಅಧಿಕಾರಿ ಡಿ.ವಿ.ಸಿ.ಎಸ್. ವರ್ಮಾ ಅವರು ಪ್ರಕರಣದಲ್ಲಿ ತಪ್ಪಿತಸ್ಥರಲ್ಲ” ಎಂದು ತೀರ್ಪು ನೀಡಿದ್ದಾರೆ.

ಇದನ್ನೂ ಓದಿ: ಬಹುಜನ ಭಾರತ; ಬಸ್ತರ್ – ಹುಟ್ಟಿದ ನೆಲದಲ್ಲೇ ತಬ್ಬಲಿಗಳಾಗಿರುವ ಆದಿವಾಸಿಗಳು!

ಮಾವೋವಾದಿಗಳಿಗೆ ಹಸ್ತಾಂತರಿಸಲು ಬೇಕಾಗಿ ಎಸ್ಸಾರ್ ಪರವಾಗಿ ಲಾಲಾ ಅವರು ಸೋರಿ ಮತ್ತು ಕೊಡೋಪಿಗೆ 15 ಲಕ್ಷ ರೂ. ನೀಡಿದ್ದರು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು. “ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಿಲ್ಲ” ಎಂದು ನ್ಯಾಯಾಲಯ ತೀರ್ಪು ನೀಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ನ್ಯಾಯಾಲಯವು ಮಾರ್ಚ್ 14 ರಂದು ಅಂಗೀಕರಿಸಿದ್ದು, ಮಾರ್ಚ್ 15 ರಂದು ಆದೇಶ ಲಭ್ಯವಾಗಿದೆ.

ಸೋನಿ ಸೋರಿ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 (ಎ) (ದೇಶದ್ರೋಹ), 121 (ಭಾರತ ಸರ್ಕಾರದ ವಿರುದ್ಧ ಯುದ್ಧ ನಡೆಸುವುದು, ಅಥವಾ ಯುದ್ಧ ಮಾಡಲು ಪ್ರಯತ್ನಿಸುವುದು, ಅಥವಾ ಯುದ್ಧ ನಡೆಸಲು ಪ್ರೇರೇಪಿಸುವುದು), 120-ಬಿ (ಅಪರಾಧ ಪಿತೂರಿ), ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಮತ್ತು ಛತ್ತೀಸ್ಗಢ ವಿಶೇಷ ಸಾರ್ವಜನಿಕ ಭದ್ರತಾ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಹಿಂದೆ ರಾಜ್ಯದಲ್ಲಿ ಇದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೋನಿ ಸೋರಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಎಲ್ಲಾ ಪ್ರಕರಣಗಳಲ್ಲಿ ಅವರು ದೋಷಮುಕ್ತರಾಗಿದ್ದಾರೆ.

ಇದನ್ನೂ ಓದಿ: ಭಾರತದ ಫ್ಯಾಸಿಸ್ಟ್ ಪ್ರಜಾಪ್ರಭುತ್ವ

ಪ್ರಕರಣದಲ್ಲಿ ತನ್ನನ್ನು ಕಸ್ಟಡಿಗೆ ತೆಗೆದುಕೊಂಡಾಗ ಪೊಲೀಸ್ ದೌರ್ಜನ್ಯವನ್ನು ಅನುಭವಿಸಿದ್ದೇನೆ ಎಂದು ಸೋನಿ ಸೋರಿ ಹಲವು ವರ್ಷಗಳಿಂದ ಆರೋಪಿಸುತ್ತಿದ್ದಾರೆ. ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿರುವ ಅವರು, “ಅವರು ನನಗೆ 11 ವರ್ಷಗಳನ್ನು ಹಿಂದಿರುಗಿಸುತ್ತಾರೆಯೆ?” ಎಂದು ಪ್ರಶ್ನಿಸಿದ್ದಾರೆ.

“ನನ್ನನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ. ನಿರಪರಾಧಿ ಎಂದು ಸಾಬೀತುಪಡಿಸಲು ನಾನು ಒಂದು ದಶಕಕ್ಕೂ ಹೆಚ್ಚು ಕಾಲ ಹೋರಾಡಬೇಕಾಯಿತು. ನಾನು ಶಾಲಾ ಶಿಕ್ಷಕಿಯಾಗಿದ್ದೆ… ಈ ಸುಳ್ಳು ಪ್ರಕರಣಗಳು ನನ್ನ ಜೀವನ, ನನ್ನ ಘನತೆ ಮತ್ತು ನನ್ನ ಕುಟುಂಬವನ್ನು ಹಾಳುಮಾಡಿದೆ” ಎಂದು ಅವರು ಹೇಳಿದ್ದಾರೆ.

“ಸುಳ್ಳು ಆರೋಪಗಳ ವಿರುದ್ಧ ಹೋರಾಡಿ ಕಳೆದುಹೋದ ನನ್ನ ಘನತೆ ಮತ್ತು ನನ್ನ ಜೀವನದ 11 ವರ್ಷಗಳನ್ನು ಮರಳಿ ಕೊಡುವವರು ಯಾರು? ರಾಜ್ಯ ಸರ್ಕಾರ ಅಥವಾ ಕೇಂದ್ರ ಅದನ್ನು ಹಿಂದಿರುಗಿಸಬಹುದೇ? ಇದು ಕೇವಲ ಸೋನಿ ಸೋರಿ ಬಗ್ಗೆ ಮಾತ್ರವಲ್ಲ, ಬಸ್ತಾರ್ ಪ್ರದೇಶದ ಹಲವಾರು ಬುಡಕಟ್ಟು ಜನಾಂಗದವರು ಇಂತಹ ಸುಳ್ಳು ಪ್ರಕರಣಗಳ ಭಾರವನ್ನು ಹೊತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ಬಸ್ತಾರ್‌ನಲ್ಲಿ ನಡೆದ ದೌರ್ಜನ್ಯಗಳು, ನಕಲಿ ಎನ್‌ಕೌಂಟರ್‌ಗಳು ಮತ್ತು ಹಕ್ಕುಗಳ ಉಲ್ಲಂಘನೆಗಳ ವಿರುದ್ಧ ಸೋನಿ ಸೋರಿ ಆಗಾಗ್ಗೆ ಧ್ವನಿ ಎತ್ತುತ್ತಲೆ ಬರುತ್ತಿದ್ದಾರೆ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾ, ಸುದ್ದಿ ವೆಬ್‌ಸೈಟ್, ಒಟಿಟಿ; ಬಗ್ಗುವ ಬೆನ್ನಿಗೆ ಗುದ್ದಲಿರುವ ಮುಷ್ಟಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...