Homeಕರ್ನಾಟಕಅಲೆಮಾರಿಗಳಿಗೆ ಶಾಶ್ವತ ವಸತಿ ಕಲ್ಪಿಸಲು ಒತ್ತಾಯ: ಬಜೆಟ್‌ನಲ್ಲಿ ಘೋಷಿಸುವಂತೆ ಮನವಿ

ಅಲೆಮಾರಿಗಳಿಗೆ ಶಾಶ್ವತ ವಸತಿ ಕಲ್ಪಿಸಲು ಒತ್ತಾಯ: ಬಜೆಟ್‌ನಲ್ಲಿ ಘೋಷಿಸುವಂತೆ ಮನವಿ

ಕಳೆದ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಅಲೆಮಾರಿಗಳಿಗೆ ಮೀಸಲಿಟ್ಟ 550 ಕೋಟಿ ರೂಪಾಯಿಗಳನ್ನು ಬಳಸದೇ ಹಿಂಪಡೆದು ಅನ್ಯಾಯ ಮಾಡಿದೆ. ಅದನ್ನು ಕಾಂಗ್ರೆಸ್ ಸರ್ಕಾರ ಸರಿಪಡಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

- Advertisement -
- Advertisement -

ರಾಜ್ಯದಲ್ಲಿರುವ ಲಕ್ಷಾಂತರ ಅಲೆಮಾರಿ ಸಮುದಾಯದ ಜನರಿಗೆ ಶಾಶ್ವತ ವಸತಿ ಕಲ್ಪಿಸಲು ಸಮಗ್ರ ಯೋಜನೆ ರೂಪಿಸಿ, ಬಜೆಟ್‌ನಲ್ಲಿ ಘೋಷಿಸಬೇಕೆಂದು ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ಒತ್ತಾಯಿಸಿದೆ.

ಜುಲೈ 1 ರಂದು ಬೆಂಗಳೂರಿನ ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಿ ಕೆ ಮಂಜುನಾಥ್ ಮಾತನಾಡಿ, “ರಾಜ್ಯದಲ್ಲಿ ಗುಡಿಸಲು, ಗುಡಾರಗಳಲ್ಲಿ ವಾಸವಿರುವ ಅಲೆಮಾರಿ ಕುಟುಂಬಗಳಿಗೆ 7 ಲಕ್ಷ ಸಹಾಯಧನದ ಅನುದಾನದಲ್ಲಿ ತುರ್ತಾಗಿ ಮನೆ ನಿರ್ಮಿಸಿಕೊಡಬೇಕು ಮತ್ತು ಈ ಕುಟುಂಬಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು” ಎಂದರು.

ಸಂಘದ ರಾಜ್ಯ ಉಪಾಧ್ಯಕ್ಷರಾದ ವೀರೇಶ್‌ರವರು ಮಾತನಾಡಿ, “2011 ರ ಜನಗಣತಿಯಂತೆ ರಾಜ್ಯದಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚಿನ ಅಲೆಮಾರಿ ವಾಸವಿದ್ದಾರೆ. ಕರ್ನಾಟಕ ರಾಜ್ಯ ಕಾನೂನು ಶಾಲೆಯ ಸಮೀಕ್ಷಾ ವರದಿಯಂತೆ ಶೇಕಡ 48% ಅಲೆಮಾರಿ ಕುಟುಂಬಗಳು ವಾಸಕ್ಕೆ ಸ್ವಂತ ನಿವೇಶನ/ಸೂರಿಲ್ಲದೆ ರೈಲ್ವೆ ಟ್ರ್ಯಾಕಿನ ಪಕ್ಕದಲ್ಲಿ, ಊರ ಹೊರಗಿನ ಸ್ಮಶಾನದ ಪಕ್ಕದಲ್ಲಿ, ಪಾಳು ಭೂಮಿಯಲ್ಲಿ ಪ್ರಾಣಿಗಳಿಗಿಂತ ಕಡೆಯಾಗಿ ಬದುಕುತಿದ್ದಾರೆ. 87% ಅಲೆಮಾರಿಗಳು ಇಂದಿಗೂ ತುಂಡು ಭೂಮಿಯ ಒಡೆತನವಿಲ್ಲದೆ (ಕೃಷಿಭೂಮಿ) ಜೀವನ ನಿರ್ವಹಣೆಗೆ ಭಿಕ್ಷಾಟನೆ, ಚಿಂದಿ ಆಯುವ, ವೇಶ ಹಾಕುವ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದಾರೆ. ಈ ಜನಾಂಗದ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ರಾಜಕೀಯ, ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗುವಂತಹ ಪ್ರಸ್ತುತ ಇರುವ ಕಾರ್ಯಕ್ರಮಗಳ ಜೊತೆಗೆ ಹೆಚ್ಚುವರಿ ವಿಶೇಷ ಅಭಿವೃದ್ಧಿ ಕಾರ್ಯಕ್ರಮ ರೂಪಿಸಬೇಕೆಂದು” ಮನವಿ ಮಾಡಿದರು.

ಅಲೆಮಾರಿಗಳಿಗೆ ಶಾಶ್ವತ ವಸತಿ ಕಲ್ಪಿಸಲು ಕಳೆದ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಮೀಸಲಿಟ್ಟ 550 ಕೋಟಿ ರೂಪಾಯಿಗಳನ್ನು ಬಳಸದೇ ಹಿಂಪಡೆದು ಅನ್ಯಾಯ ಮಾಡಿದೆ. ಅಲೆಮಾರಿಗಳ ವಸತಿ ಘಟಕವೆಚ್ಚ ಗ್ರಾಮೀಣ ಪ್ರದೇಶಕ್ಕೆ 3.50.ಲಕ್ಷ, ನಗರ ಪ್ರದೇಶಕ್ಕೆ 5.50 ಲಕ್ಷ ಇದ್ದ ವೆಚ್ಚವನ್ನು 2 ಲಕ್ಷಕ್ಕೆ ಬಿಜೆಪಿ ಸರ್ಕಾರ ಇಳಿಸಿದೆ. ನೂತನ ಕಾಂಗ್ರೆಸ್ ಸರ್ಕಾರ ಈ ಹಿಂದಿನಂತೆ ಘಟಕ ವೆಚ್ಚವನ್ನು 7.50 ಲಕ್ಷಕ್ಕೆ ಹೆಚ್ಚಿಸಿ ಅರ್ಜಿ ಸಲ್ಲಿಸಿರುವ ಎಲ್ಲಾ ಅಲೆಮಾರಿಗಳಿಗೆ ವಸತಿ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರಸ್ತುತ ಜಾತಿ ಪತ್ರದ ಗೊಂದಲಕ್ಕೆ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ಅಲೆಮಾರಿ ಜಾತಿಗಳ ಪರ್ಯಾಯ ಹೆಸರುಗಳನ್ನು ಗುರುತಿಸಿ ಅಲೆಮಾರಿಗಳಿಗೆ ಜಾತಿಪತ್ರ ನೀಡಬೇಕು. ರಾಜ್ಯ ಸರ್ಕಾರದಿಂದ ಅಲೆಮಾರಿಗಳ ಸ್ಥಿತಿಗತಿಗಳನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಅವರ ಜೀವನಮಟ್ಟವನ್ನು ಸುಧಾರಿಸುವ ಹಾಗು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಲು ಹೈ ಕೋರ್ಟಿನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಶಾಸನ ಬದ್ಧ ಶಾಶ್ವತ ಅಲೆಮಾರಿ ಸಮುದಾಯಗಳ ಆಯೋಗ ರಚನೆ ಮಾಡಬೇಕು ಎಂದರು.

2011 ರ ಜನಗಣತಿಯಂತೆ ರಾಜ್ಯದಲ್ಲಿ ವಾಸವಿರುವ 25 ಲಕ್ಷ ಅಲೆಮಾರಿಗಳಲ್ಲಿ ಶೇಕಡ 87%
ಭೂ ರಹಿತ ಕುಟುಂಬಗಳಿವೆ. ಅವರಿಗೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಭೂ ಒಡೆತನ ಯೋಜನೆಯಡಿ ಪ್ರತಿ ಕುಟುಂಬಕ್ಕೆ 2 ಎಕರೆ ಕೃಷಿ ಭೂಮಿಯನ್ನು ಖರೀದಿಸಿಕೊಡಬೇಕು ಇದಕ್ಕೆ ತಗಲುವ ವೆಚ್ಚ 350 ಕೋಟಿ ಅನುದಾನವನ್ನು ಮೊದಲ ಅದ್ಯತೆಯಾಗಿ ಕಾಯ್ದಿರಿಸಬೇಕು. ಹಾಗು ಈ ಜಮೀನುಗಳಿಗೆ ಗಂಗಾಕಲ್ಯಾಣ ಯೋಜನೆಯಡಿ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದರು.

ಕೃಷಿ ಭೂಮಿ ಹೊಂದಿರುವ ಅಲೆಮಾರಿ ಕುಟುಂಬಗಳಿಗೆ ಕೃಷಿ ಮಾಡಲು ಶೇಕಡ 90 ರ ಸಹಾಯಧನದಲ್ಲಿ ಟ್ರ್ಯಾಕ್ಟರ್ ಹಾಗು ಇತರೆ ಕೃಷಿ ಪರಿಕರಗಳನ್ನು ಖರೀದಿಸಲು ಅನುದಾನ ನೀಡಬೇಕು. ಉದ್ಯಮ ಶೀಲತೆ ಯೋಜನೆಯಡಿ ನೀಡುವ 2 ಲಕ್ಷ ಸಾಲವನ್ನು ಹಿಂದಿನಂತೆ 9 ಲಕ್ಷಕ್ಕೆ ಹೆಚ್ಚಿಸಿ ಸಹಾಯಧನದ ಜೊತೆ ನಿಗಮದಿಂದಲೇ ನೇರವಾಗಿ ಸಾಲ ಸೌಲಭ್ಯ ಒದಗಿಸಬೇಕು ಎಂದು ಸಭೆಯಲ್ಲಿ ಹಕ್ಕೊತ್ತಾಯ ಮಂಡಿಸಲಾಯಿತು.

ಅಲೆಮಾರಿ ಮಕ್ಕಳು ವಸತಿ ಶಾಲೆಯಲ್ಲಿ ಪ್ರವೇಶ ಪಡೆಯಲು ಈಗಿರುವ 10 % ಮೀಸಲನ್ನು 20%ಗೆ ಹೆಚ್ಚಿಸಬೇಕು. ಹಾಗು ನವೋದಯ ಶಾಲೆಗಳಲ್ಲೂ ವಿಶೇಷ ಮೀಸಲು ನೀಡಿ ಪ್ರವೇಶ ಕಲ್ಪಿಸಬೇಕು. ಪಿಯುಸಿ ವಿಜ್ಞಾನ ಉತ್ತೀರ್ಣರಾದ ನಂತರ ವೈದ್ಯಕೀಯ, ದಂತವೈದ್ಯ, ಬಿಎಸ್ಸಿ ನರ್ಸಿಂಗ್ ಇಂಜಿನಿಯರ್, ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಅವಶ್ಯವಿರುವ ಸಿಇಟಿ, ನೀಟ್ ತರಬೇತಿಯನ್ನು ಪ್ರತಿಷ್ಠಿತ ಕೋಚಿಂಗ್ ಸೆಂಟರ್ ನಲ್ಲಿ ಉಚಿತವಾಗಿ ತರಬೇತಿ ಕೊಡಿಸಬೇಕು.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬಬೇಕು. ಇದರಲ್ಲಿ ಅಲೆಮಾರಿಗಳಿಗೆ ಹೆಚ್ಚಿನ ಹುದ್ದೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಅಲೆಮಾರಿಗಳ ಪಾರಂಪರಿಕ ವಿಶಿಷ್ಟ ಕಲೆಗಳು ಹಾಗೂ ಪಾರಂಪರಿಕ ಔಷಧೀಯ ಜ್ಞಾನವನ್ನು ಮುಂದಿನ ತಲೆಮಾರಿಗೆ ಉಳಿಸಲು ಅಲೆಮಾರಿ ವಿಶ್ವವಿದ್ಯಾಲಯ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀನಿವಾಸ ಶಿಳ್ಳೇಖ್ಯಾತ, ಕಾಂಗ್ರೆಸ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಬಿ ಗೋಪಾಲ್, ಪ್ರೊ. ಚಂದ್ರಕಾಂತರವರು, ಕರ್ನಾಟಕ ರಾಜ್ಯ ಸುಡುಗಾಡುಸಿದ್ದ ಮಹಾಸಂಘದ ರಾಜ್ಯಾಧ್ಯಕ್ಷರಾದ ಸಾಯಿಬಣ್ಣ ಪರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದನ್ನೂ ಓದಿ: ನಾಳೆಯೇ ಮೊದಲ ಜಂಟಿ ಅಧಿವೇಶನ: ಬಿಜೆಪಿಯಲ್ಲಿ ಇನ್ನೂ ಮುಗಿಯದ ವಿಪಕ್ಷ ನಾಯಕನ ಆಯ್ಕೆಯ ಪ್ರಹಸನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...