Homeಮುಖಪುಟ'ಮೊದಲು ಭಷ್ಟರ ಮೇಲೆ ದಾಳಿ ನಂತರ...': ಪವಾರ್ ಸೇರ್ಪಡೆ ಬಳಿಕ ಬಿಜೆಪಿ ವಿರುದ್ಧ ಸಿಬಲ್ ವಾಗ್ದಾಳಿ

‘ಮೊದಲು ಭಷ್ಟರ ಮೇಲೆ ದಾಳಿ ನಂತರ…’: ಪವಾರ್ ಸೇರ್ಪಡೆ ಬಳಿಕ ಬಿಜೆಪಿ ವಿರುದ್ಧ ಸಿಬಲ್ ವಾಗ್ದಾಳಿ

- Advertisement -
- Advertisement -

ಎನ್‌ಸಿಪಿ ನಾಯಕ ಅಜಿತ್ ಪವಾರ್ ಮತ್ತು ಇತರ ಎಂಟು ಶಾಸಕರು ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಸೇರ್ಪಡೆಗೊಂಡಿರುವ ಬಗ್ಗೆ ಕಾಂಗ್ರೆಸ್ ಸಂಸದ ಕಪಿಲ್ ಸಿಬಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ”ಮೊದಲು ಭ್ರಷ್ಟರ ಮೇಲೆ ದಾಳಿ ಮಾಡಿ ನಂತರ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೀರಿ” ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ಹರಿಹಾಯ್ದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಬಲ್, ”ಮೊದಲು ಭ್ರಷ್ಟರ ಮೇಲೆ ದಾಳಿ ಮಾಡಿ, ನಂತರ ಭ್ರಷ್ಟರನ್ನು ಅಪ್ಪಿಕೊಳ್ಳಿ. ಮೊದಲು ಅವರ ತನಿಖೆಗೆ ಖಾತರಿ ನೀಡಿ, ನಂತರ ಅವರ ಬೆಂಬಲಕ್ಕಾಗಿ ವಾರಂಟಿ ಪಡೆಯಿರಿ. ಅಮಾನತಿನಲ್ಲಿ ತನಿಖೆ. ಇನ್ಮುಂದೆ ಈ ವ್ಯವಸ್ಥೆಯಲ್ಲಿ ಇಡಿ, ಸಿಬಿಐ ಕೆಲಸ ಮಾಡಬೇಕು ಹಾಗಾಗಿ ನಿಮಗೂ ಟೆನ್ಷನ್ ಇಲ್ಲ. ಇದು ಪ್ರಜಾಪ್ರಭುತ್ವದ ತಾಯಿ” ಎಂದು ಬಿಜೆಪಿ ಹಾಗೂ ಇಡಿ, ಸಿಬಿಐ ಸಂಸ್ಥೆಗಳನ್ನು ವ್ಯಂಗ್ಯ ಮಾಡಿದ್ದಾರೆ.

ಭಾರತ ಪ್ರಜಾಪ್ರಭುತ್ವದ ತಾಯಿ ಎಂದು ಮೋದಿ ಅವರು ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್‌ನಲ್ಲಿ ಭಾಷಣ ಮಾಡಿದ್ದರು. ಅದೇ ಮಾತನ್ನು ಉಲ್ಲೇಖಿಸಿ ಸಿಬಲ್ ಅವರು ಅಜಿತ್ ಪವಾರ್ ದಂಗೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರ ರಾಜಕೀಯದಲ್ಲಿ ದಿಢೀರ್ ಬದಲಾವಣೆ

ಭಾನುವಾರ ಮುಂಬೈನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಮೇಶ್ ಬೈಸ್ ಅವರಿಂದ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇತರ ಎಂಟು ಎನ್‌ಸಿಪಿ ನಾಯಕರು, ಅವರಲ್ಲಿ ಕೆಲವರು ಶರದ್ ಪವಾರ್ ಅವರ ಆಪ್ತರು, ಶಿಂಧೆ-ಫಡ್ನವಿಸ್ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಅಜಿತ್ ಪವಾರ್ ಮತ್ತು ಇತರ ಎಂಟು ಎನ್‌ಸಿಪಿ ಶಾಸಕರು ಶಿಂಧೆ-ಫಡ್ನವಿಸ್ ಸರ್ಕಾರಕ್ಕೆ ಸೇರ್ಪಡೆಗೊಂಡ ಕ್ರಮವು ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಒಗ್ಗಟ್ಟನ್ನು ರೂಪಿಸಲು ವಿರೋಧ ಪಕ್ಷಗಳ ಪ್ರಯತ್ನಗಳ ನಡುವೆ ನಡೆದಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಯತ್ನಗಳಲ್ಲಿ ಪ್ರಮುಖ ನಾಯಕರಾಗಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಇಂದು ಕರಡ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಹರಿಹಾಯ್ದ ಏಕನಾಥ್ ಶಿಂಧೆ, ”ಕೆಲವರು ‘ಗೂಗ್ಲಿ’ ಬಗ್ಗೆ ಮಾತನಾಡುತ್ತಿದ್ದಾರೆ ಆದರೆ ಯಾರು ಯಾರನ್ನು ಕ್ಲೀನ್ ಬೌಲ್ಡ್ ಮಾಡಿದ್ದಾರೆ ಮತ್ತು ‘ಇದು ಹಿಟ್ ವಿಕೆಟ್’ ಎಂದು ಹೇಳಿದ್ದಾರೆ.

ಈ ಮಧ್ಯೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಡ್‌ಗೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ವೈ ಬಿ ಚವಾಣ್ ಅವರೊಂದಿಗೆ ಕರಾದ್‌ನಲ್ಲಿ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.

”ನಾವು ಸತಾರಾಕ್ಕೆ ಹೋಗುತ್ತೇವೆ ಅಲ್ಲಿ ನಾವು ದಿವಂಗತ ಉಪ ಪ್ರಧಾನಿ ಯಶವಂತರಾವ್ ಚವಾಣ್ ಅವರ ಸಮಾಧಿಗೆ ನಮನ ಸಲ್ಲಿಸುತ್ತೇವೆ. ಲಕ್ಷಾಂತರ ಕಾರ್ಯಕರ್ತರು ಶರದ್ ಪವಾರ್ ಅವರೊಂದಿಗೆ ಸತಾರಾಕ್ಕೆ ಹೋಗಲು ಸಿದ್ಧರಾಗಿದ್ದಾರೆ” ಎಂದು ಪುಣೆ ಸಿಟಿ ಎನ್‌ಸಿಪಿ ಅಧ್ಯಕ್ಷ ಪ್ರಶಾಂತ್ ಜಗತಾಪ್ ಎಎನ್‌ಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಪವಾರ್ ಸೇರಿ 9 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ ಎನ್‌ಸಿಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read