Homeಮುಖಪುಟಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರಿಂದ FIR

ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರಿಂದ FIR

- Advertisement -
- Advertisement -

ಕೇರಳ ಮತ್ತೊಂದು ಕಾಶ್ಮೀರವಾಗಲು ಹೊರಟಿದೆ, ಹಿಂದೂಗಳ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಟ್ವೀಟ್ ಮಾಡಿದ್ದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರು ದೂರು ದಾಖಲು ಮಾಡಿದ್ದಾರೆ.

ಸಿಎಎ 2019 ಅನ್ನು ಬೆಂಬಲಿಸಿದ್ದಕ್ಕಾಗಿ, ಮಲಪ್ಪುರಂನ ಕುಟ್ಟಿಪುರಂ ಪಂಚಾಯತ್‌ನ ಹಿಂದೂಗಳಿಗೆ ನೀರು ಸರಬರಾಜು ನಿರಾಕರಿಸಲಾಗಿದೆ. ಕೇರಳ ಮತ್ತೊಂದು ಕಾಶ್ಮೀರವಾಗಲು ಹೊರಟಿದೆ, ಹಿಂದೂಗಳ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಸೇವಾಭಾರತಿ ಅಂದಿನಿಂದಲೂ ನೀರು ಸರಬರಾಜು ಮಾಡುತ್ತಿದೆ. ದೇವರ ಸ್ವಂತ ನಾಡಿನಲ್ಲಿ ಶಾಂತಿಯುತವಾದ ಈ ಅಸಹಿಷ್ಣುತೆಯನ್ನು ಲುಟಿಯೆನ್ಸ್ ಪ್ರಸಾರ ಮಾಡುತ್ತಾರೆಯೇ? ಎಂದು ಜನವರಿ 22ರಂದು ಸಂಸದೆ ಟ್ವೀಟ್‌ ಮಾಡಿದ್ದರು.

ಹಾಗಾಗಿ ಇದು, ಐಪಿಸಿಯ 153/ಎ ಕಲಂ ನ ಆಧಾರದಲ್ಲಿ ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಕೃತ್ಯವಾಗಿದೆ ಎಂದು ಆರೋಪಿಸಿ ಸಂಸದೆಯ ವಿರುದ್ಧ ಕೇರಳ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಇದರ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯ ” ಶೇಮ್‌ ಆನ್‌ ಯು ಪಿಣರಾಯಿ ವಿಜಯನ್. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಿಸುವ ಬದಲು ಸಿಎಎ ಪರ ರ್‍ಯಾಲಿಯಲ್ಲಿ ಭಾಗವಹಿಸಿದ್ದಕ್ಕಾಗಿ ಕುಡಿಯುವ ನೀರು ನಿರಾಕರಿಸಲ್ಪಟ್ಟ ಚೆರುಕುನ್ನು ದಲಿತರಿಗೆ ನ್ಯಾಯ ಒದಗಿಸುವ ಬಗ್ಗೆ ನಿಮ್ಮ ಸರ್ಕಾರ ಗಮನಹರಿಸಬೇಕು. ಅಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ” ಎಂದು ಟ್ವೀಟ್‌ ಮಾಡಿದ್ದಾರೆ.

ಕೇರಳ ಪೊಲೀಸರು ವಿರುದ್ಧದ ಕ್ರಮವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಸರ್ಕಾರದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುವ ಬದಲು ಸಿ.ಎಂ ಪಿಣರಾಯ್ ವಿಜಯನ್‌ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಆತ್ಮೀಯ ಕೇರಳ, ಇದು ಜಾಗೃತಿಗೆ ಸಮಯ ಎಂದು ಕರ್ನಾಟಕದ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಟ್ವೀಟ್‌ ಮಾಡಿದ್ದಾರೆ.

ಕೇರಳ ಸರ್ಕಾರವನ್ನು ಸ್ವಾಗತಿಸಿ! ಚೆರುಕುನ್ನಿನ ದಲಿತ ಕುಟುಂಬಗಳಿಗೆ ಸಂಭವಿಸಿದ ತಾರತಮ್ಯದ ವಿರುದ್ಧ ಕಾರ್ಯನಿರ್ವಹಿಸುವ ಬದಲು ಅವರು ನನ್ನ ವಿರುದ್ಧ ಮೊಕದ್ದಮೆ ಹೂಡಿದರು! ಪಕ್ಷಪಾತದ ಎಡ ಸರ್ಕಾರದ ಈ ಒತ್ತಡದ ತಂತ್ರಗಳ ವಿರುದ್ಧ ಇಡೀ ಸಮಾಜವು ಒಂದಾಗಲು ಇದು ಸಮಯ ಎಂದು ಶೋಭಾ ಕರಂದ್ಲಾಜೆ  ಪ್ರತಿಕ್ರಿಯಿಸಿದ್ದಾರೆ.

ನಾನು ಆ ಸ್ಥಳದವನು. ಶೋಭಾ ಕರಂದ್ಲಾಚೆಯ ಈ ಸಂದೇಶವನ್ನು ಆರ್‌ಎಸ್‌ಎಸ್‌ನ ಕಾರ್ಖಾನೆಯಲ್ಲಿ ತಯಾರಾಗಿದೆ. ನಾವು ನಮ್ಮ ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತಾ ಸಾಮರಸ್ಯ ಮತ್ತು ಶಾಂತಿಯಿಂದ ಬದುಕುತ್ತೇವೆ. ಕೇವಲ ಒಬ್ಬ ಹಿಂದು ಸಹೋದರನಿಗೆ ನೀರು ಸರಬರಾಜು ನಿರಾಕರಿಸಿದ್ದನ್ನು ನನಗೆ ತೋರಿಸಬೇಕೆಂದು ನಾನು ನಿಮಗೆ ಸವಾಲು ಹಾಕುತ್ತೇನೆ … ದ್ವೇಷ ಸಾಧಿಸುವವರು ಹೇಗೆ ಸುದ್ದಿ ಹರಡುತ್ತಾರೆಂದು ನಮಗೆ ತಿಳಿದಿದೆ ಎಂದು ಸಲೀಂ ಮೊಹಮ್ಮದ್‌ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...