ಕನ್ನಡದ ಸಾಹಿತಿ ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕಥಾ ಸಂಕಲನದ ಇಂಗ್ಲಿಷ್ ಅನುವಾದಿತ ಪುಸ್ತಕಕ್ಕೆ ಪ್ರತಿಷ್ಠಿತ ‘ಇಂಗ್ಲಿಷ್ ಪೆನ್’ ಪ್ರಶಸ್ತಿ ಲಭಿಸಿದೆ.
ಹತ್ತು ಭಾಷೆಗಳಿಂದ ಇಂಗ್ಲಿಷ್‌ಗೆ ಅನುವಾದಗೊಂಡಿದ್ದ 16 ಕೃತಿಗಳಿಗೆ 2024ನೇ ಸಾಲಿನ ‘ಇಂಗ್ಲಿಷ್ ಪೆನ್’ ಪ್ರಶಸ್ತಿಯನ್ನು ಗುರುವಾರ ಪ್ರಕಟಿಸಲಾಗಿದೆ. ಈ ಪೈಕಿ, ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯ ಇಂಗ್ಲಿಷ್ ಆವೃತ್ತಿಗೆ ಪ್ರಶಸ್ತಿ ಲಭಿಸಿದೆ.
ಹತ್ತು ಭಾಷೆಗಳಿಂದ ಇಂಗ್ಲಿಷ್‌ಗೆ ಅನುವಾದಗೊಂಡಿದ್ದ 16 ಕೃತಿಗಳಿಗೆ 2024ನೇ ಸಾಲಿನ ‘ಇಂಗ್ಲಿಷ್ ಪೆನ್’ ಪ್ರಶಸ್ತಿಯನ್ನು ಗುರುವಾರ (ಜು.18) ಪ್ರಕಟಿಸಲಾಗಿದೆ. ಈ ಪೈಕಿ, ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯ ಇಂಗ್ಲಿಷ್ ಆವೃತ್ತಿಗೆ ಪ್ರಶಸ್ತಿ ಲಭಿಸಿದೆ.
ಬಾನು ಮುಷ್ತಾಕ್ ಅವರು ಕನ್ನಡದಲ್ಲಿ ರಚಿಸಿದ್ದ ಕೃತಿಯನ್ನು ಪತ್ರಕರ್ತೆ, ಲೇಖಕಿ ದೀಪಾ ಬಸ್ತಿ ಅವರು ‘ಹಸೀನಾ ಅಂಡ್ ಅದರ್ ಸ್ಟೋರೀಸ್’ ಎಂದು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದರು. ಇದೀಗ, ಕೃತಿಯು ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಗೊಂಡು ‘ಇಂಗ್ಲಿಷ್ ಪೆನ್’ ಪ್ರಶಸ್ತಿ ಪಡೆದ ಮೊದಲ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
‘ಇಂಗ್ಲಿಷ್ ಪೆನ್’ ವಿಶ್ವದ ಪ್ರಸಿದ್ಧ ಮಾನವ ಹಕ್ಕು ಸಂಘಟನೆಗಳಲ್ಲಿ ಒಂದಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಜಾಗತಿಕ ಮಟ್ಟದಲ್ಲಿ ಹೋರಾಟ ನಡೆಸುತ್ತಿದೆ. 90 ದೇಶಗಳಲ್ಲಿ 130 ಕೇಂದ್ರಗಳನ್ನು ಹೊಂದಿರುವ ‘ಇಂಗ್ಲಿಷ್ ಪೆನ್’ ಸಂಘಟನೆಯು ಪೆನ್ ಇಂಟರ್ ನ್ಯಾಷನಲ್ ಎಂಬ ಜಾಗತಿಕ ಲೇಖಕರ ಸಂಘವನ್ನು ಸ್ಥಾಪಿಸಿದೆ.
ಸಮಕಾಲೀನ ಮಹಿಳೆಯರು ಎದುರಿಸುವ ವಾಸ್ತವಗಳನ್ನು ಅಪರೂಪದ ಪ್ರತಿಭೆ ಹಾಗು ಕಲೆಯ ಮೂಲಕ ಬಾನು ಮುಷ್ತಾಕ್ ಅವರು ಅನಾವರಣಗೊಳಿಸಿದ್ದಾರೆ. ಅವರ ಕೃತಿಯಲ್ಲಿನ ಧ್ವನಿ, ಸಂದರ್ಭಗಳು ಹಾಗು ಅನುಭವವನ್ನು ದೀಪಾ ಬಸ್ತಿ ಅವರ ಅತ್ಯುತ್ತಮ ಅನುವಾದ ಭಾರತ ಹಾಗೂ ಜಾಗತಿಕ ಇಂಗ್ಲಿಷ್ ಓದುಗರಿಗೆ ತಲುಪಿಸಿದೆ ಎಂದು ಪೆನ್ ಪ್ರಶಸ್ತಿ ಸಮಿತಿ ಹೇಳಿದೆ.
ಇದನ್ನೂ ಓದಿ : ರೈತನಿಗೆ ಅವಮಾನ: ಏಳು ದಿನಗಳ ಕಾಲ ಜಿಟಿ ಮಾಲ್ ಮುಚ್ಚಿಸಲು ರಾಜ್ಯ ಸರ್ಕಾರ ನಿರ್ಧಾರ


