ದೆಹಲಿಯಲ್ಲಿರುವ ಸುಮಾರು 700 ವರ್ಷಗಳಷ್ಟು ಹಳೆಯ ಲೋಧಿ ಯುಗದ ಸಮಾಧಿಯನ್ನು ಆಕ್ರಮಿಸಿಕೊಂಡಿದ್ದಕ್ಕಾಗಿ ಡಿಫೆನ್ಸ್ ಕಾಲೋನಿ ವೆಲ್ಫೇರ್ ಅಸೋಸಿಯೇಷನ್ (DCWA) ಅನ್ನು ಸುಪ್ರೀಂ ಕೋರ್ಟ್ ಕಟುವಾಗಿ ಟೀಕಿಸಿದ್ದು, ಸ್ಮಾರಕವನ್ನು ರಕ್ಷಿಸುವಲ್ಲಿ ವಿಫಲವಾದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಅನ್ನು ತರಾಟೆಗೆ ತೆಗೆದುಕೊಂಡಿದೆ. ಸ್ಮಾರಕಕ್ಕೆ ಉಂಟಾದ ಹಾನಿಯ ಪ್ರಮಾಣವನ್ನು ಅಧ್ಯಯನ ಮಾಡಲು ಮತ್ತು ಅದರ ಮರುಸ್ಥಾಪನೆ ಕ್ರಮಗಳನ್ನು ಸೂಚಿಸಲು ಪುರಾತತ್ವ ತಜ್ಞರನ್ನು ನೇಮಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ದೆಹಲಿ ಕಾಲೊನಿ
ಸ್ಮಾರಕವು ಸಮಾಜ ವಿರೋಧಿ ಶಕ್ತಿಗಳಿಂದ ಹಾನಿಗೊಳಗಾಗುತ್ತದೆ ಎಂದು ಹೇಳುವ ಮೂಲಕ 1960 ರ ದಶಕದಲ್ಲಿ ಶೇಖ್ ಅಲಿಯ ಗುಮ್ಮಟವನ್ನು ಕಾಲೊನಿ ಅಸೋಸಿಯೇಷನ್ ಆಕ್ರಮಿಸಿಕೊಂಡಿತ್ತು. 15 ನೇ ಶತಮಾನದ ಈ ರಚನೆಯನ್ನು ಅಸೋಸಿಯೇಷನ್ ತನ್ನ ಕಚೇರಿಯಾಗಿ ಬಳಸುತ್ತಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ. ದೆಹಲಿ ಕಾಲೊನಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಗುಮ್ಮಟವನ್ನು ಪ್ರವೇಶಿಸಲು ನಿಮಗೆ ಎಷ್ಟು ಧೈರ್ಯ ಇರಬೇಕು. ಯಾವ ರೀತಿಯ ವಾದಗಳನ್ನು ನೀವು ಮಾಡುತ್ತಿದ್ದೀರಿ” ಎಂದು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಅಸೋಸಿಯೇಷನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಅಸೋಸಿಯೇಷನ್ ವಸಾಹತುಶಾಹಿ ಆಡಳಿತಗಾರರಂತೆ ಮಾತನಾಡುತ್ತಿದೆ ಎಂದು ನ್ಯಾಯಾಲಯ ಹೇಳಿದ್ದು, “ಅಸೋಸಿಯೇಷನ್ ಸ್ಥಳವನ್ನು ಆಕ್ರಮಿಸಿಕೊಂಡಿದ್ದಲ್ಲದೆ, ಎಸಿ ಅಳವಡಿಸಿದ ಕಚೇರಿಯಲ್ಲಿ ಕುಳಿತು ತನ್ನ ಆಡಳಿತವನ್ನು ನಡೆಸುತ್ತಿದೆ. ಅವರು ಬಾಡಿಗೆಯನ್ನು ಪಾವತಿಸುತ್ತಿದ್ದಾರೆಯೆ?” ನ್ಯಾಯಾಲಯ ಹೇಳಿದೆ.
ಅಸೋಸಿಯೇಷನ್‌ಗೆ ಸ್ಮಾರಕವನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನ್ಯಾಯಾಲಯವು ಪುರಾತತ್ವ ಇಲಾಖೆಯನ್ನು ದೂಷಿಸಿದ್ದು, “ನೀವು (ಎಎಸ್‌ಐ) ಯಾವ ರೀತಿಯ ಪ್ರಾಧಿಕಾರ? ನಿಮಗೆ ಇರುವ ಕರ್ತವ್ಯವೇನು? ಪುರಾತನ ರಚನೆಗಳನ್ನು ರಕ್ಷಿಸುವ ನಿಮ್ಮ ಕರ್ತವ್ಯದಿಂದ ಹಿಂದೆ ಸರಿದಿದ್ದೀರಿ. ನಿಮ್ಮ ನಿಷ್ಕ್ರಿಯತೆಯನ್ನು ನೋಡಿ ನಾವು ವಿಚಲಿತರಾಗಿದ್ದೇವೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಗುಮ್ಮಟದಿಂದ ಹೊರಹೋಗುವಂತೆ ಅಸೋಸಿಯೇಷನ್‌ಗೆ ನಿರ್ದೇಶನ ನೀಡುವುದಾಗಿ ನ್ಯಾಯಾಲಯವು ಹೇಳಿದ್ದು, 2025ರ ಜನವರಿ 21ರಂದು ವಿಚಾರಣೆಯನ್ನು ಮುಂದೂಡಿದೆ.
ಸಮಾಧಿಯನ್ನು 500 ವರ್ಷಗಳ ಹಿಂದೆ ಲೋದಿ ರಾಜವಂಶದ ಅವಧಿಯಲ್ಲಿ ನಿರ್ಮಿಸಲಾಗಿತ್ತು. ದೆಹಲಿಯ ಡಿಫೆನ್ಸ್ ಕಾಲೋನಿಯ ನಿವಾಸಿ ರಾಜೀವ್ ಸೂರಿ ಎಂಬುವರು ಸಲ್ಲಿಸಿದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಕಟುವಾದ ಟೀಕೆಗಳನ್ನು ಮಾಡಿದೆ. ಈ ರಚನೆಯನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸೂರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ನಿರ್ದೇಶನಗಳನ್ನು ನೀಡಲು ದೆಹಲಿ ಹೈಕೋರ್ಟ್ 2019ರಲ್ಲಿ ನಿರಾಕರಿಸಿದ ನಂತರ ಸೂರಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದ್ದರು.
ಇದನ್ನೂ ಓದಿ: ‘ಈಶಾನ್ಯ ಭಾರತದಲ್ಲಿ ಕೇವಲ 38 ಜನರ ಹತ್ಯೆ!’ | ಸ್ಥಾಯಿ ಸಮಿತಿ ಮುಂದೆ ಸುಳ್ಳು ಹೇಳಿದ ಕೇಂದ್ರ ಗೃಹ ಸಚಿವಾಲಯ
‘ಈಶಾನ್ಯ ಭಾರತದಲ್ಲಿ ಕೇವಲ 38 ಜನರ ಹತ್ಯೆ!’ | ಸ್ಥಾಯಿ ಸಮಿತಿ ಮುಂದೆ ಸುಳ್ಳು ಹೇಳಿದ ಕೇಂದ್ರ ಗೃಹ ಸಚಿವಾಲಯ


