Homeರಂಜನೆಕ್ರೀಡೆಫ್ರಾನ್ಸ್‌ ಸೋತರೂ ಫುಟ್‌ಬಾಲ್‌ ಪ್ರೇಮಿಗಳ ಮನಗೆದ್ದ ಎಂಬಾಪೆ; ಗೋಲ್ಡನ್ ಬೂಟ್‌ ಪಯಣದ ಯಶೋಗಾಥೆ

ಫ್ರಾನ್ಸ್‌ ಸೋತರೂ ಫುಟ್‌ಬಾಲ್‌ ಪ್ರೇಮಿಗಳ ಮನಗೆದ್ದ ಎಂಬಾಪೆ; ಗೋಲ್ಡನ್ ಬೂಟ್‌ ಪಯಣದ ಯಶೋಗಾಥೆ

- Advertisement -
- Advertisement -

23 ವರ್ಷ ವಯಸ್ಸಿನ ಕಿಲಿಯಾನ್ ಎಂಬಾಪೆ ಈ ಬಾರಿಯ ಫಿಫಾ ವರ್ಡ್‌ಕಪ್‌ನಲ್ಲಿ ಗೋಲ್ಡನ್‌ ಬೂಟ್‌ ಪಡೆದ ಫ್ರಾನ್ಸ್ ಆಟಗಾರ. ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಫ್ರಾನ್ಸ್ ಸೋತರೂ ಫುಟ್ಬಾಲ್‌ ಪ್ರೇಮಿಗಳ ಮನಗೆದ್ದವರು ಎಂಬಾಪೆ.

2018ರಲ್ಲಿ ರಷ್ಯಾದಲ್ಲಿ ನಡೆದ ಫಿಫಾ ವರ್ಡ್‌ಕಪ್‌ನಲ್ಲಿ ‘ಬೆಸ್ಟ್ ಯಂಗ್ ಪ್ಲೇಯರ್‌ ಅವಾರ್ಡ್’ ಪಡೆದಿದ್ದ ಎಂಬಾಪೆ ಈ ಸಲದ ಕತಾರ್‌ ವರ್ಡ್‌ಕಪ್‌ನಲ್ಲಿ ಅತಿ ಹೆಚ್ಚು ಗೋಲ್‌ ಭಾರಿಸುವ ಮೂಲಕ ‘ಗೋಲ್ಡನ್ ಬೂಟ್ ಅವಾರ್ಡ್’ ತಮ್ಮದಾಗಿಸಿಕೊಂಡರು.

ವರ್ಡ್‌ಕಪ್‌ ಫೈನಲ್‌ನಲ್ಲಿ ಹ್ಯಾಟ್ರಿಕ್‌ ಗೋಲ್ ಗಳಿಸಿದ ಎರಡನೇ ಆಟಗಾರರಾಗಿ ಎಂಬಾಪೆ ಹೊಮ್ಮಿದರು. 1966ರಲ್ಲಿ ಇಂಗ್ಲೆಂಡ್‌ನ ಜಿಯೋಫ್ ಹರ್ಸ್ಟ್ ಈ ಸಾಧನೆ ಮಾಡಿದ್ದರು.

2022ರ ವರ್ಡ್ ಕಪ್‌ ಫೈನಲ್ ಭಾರೀ ಪೈಪೋಟಿಯಿಂದ ಕೂಡಿತ್ತು. ಅರ್ಜೆಂಟೀನಾ ಪರವಾಗಿ ಡಿ ಮಾರಿಯ ಒಂದು ಗೋಲ್‌, ಲಿಯೋನಲ್ ಮೆಸ್ಸಿ ಎರಡು ಗೋಲ್ ಭಾರಿಸಿದರೆ, ಫ್ರಾನ್ಸ್‌ ಪರವಾಗಿ ಮೂರು ಗೋಲ್‌ಗಳನ್ನೂ ಎಂಬಾಪೆ ಒಬ್ಬರೇ ಗಳಿಸುವ ಮೂಲಕ ಪೆನಾಲ್ಟಿ ಶೂಟ್‌ಗೆ ಪಂದ್ಯ ಕಾಲಿಡಲು ಕಾರಣವಾದರು.

ತೊಂಬತ್ತು ನಿಮಿಷಗಳ ಆಟದ ಮೊದಲಾರ್ಧದಲ್ಲಿ ಅರ್ಜೆಂಟೀನಾ ಮೇಲುಗೈ ಸಾಧಿಸಿತು. ಆದರೆ ದ್ವಿತೀಯಾರ್ಧದಲ್ಲಿ ಒಂದು ಪ್ಯಾನಲ್ಟಿ ಸೇರಿದಂತೆ ಎಂಬಾಪೆ ಬಾರಿಸಿದ ಎರಡು ಗೋಲುಗಳು ಪಂದ್ಯದ ದಿಕ್ಕನ್ನೇ ಬದಲಿಸಿತು. ಮತ್ತೆ ಹೆಚ್ಚುವರಿ ಅರ್ಧ ಗಂಟೆಯಲ್ಲಿ ಮೆಸ್ಸಿ ಒಂದು ಗೋಲು ಗಳಿಸಿದರು. ಪ್ಯಾನಲ್ಟಿ ಗೋಲಿನ ಅದೃಷ್ಟ ಪಡೆದ ಎಂಬಾಪೆ ಮತ್ತೊಂದು ಗೋಲು ತಮ್ಮದಾಗಿಸಿಕೊಂಡರು. ಹೀಗೆ ಸಮಬಲ ಸಾಧಿಸಿದ ಪಂದ್ಯ ಪ್ಯಾನಲ್ಟಿ ಶೂಟೌಟ್‌ಗೆ ಕಾಲಿಟ್ಟಿದ್ದು ರೋಮಾಂಚನಕಾರಿಯಾಗಿತ್ತು. ಫೈನಲ್‌ನಲ್ಲಿ ನಾಲ್ಕು ಗೋಲು ಗಳಿಸಿದ ಖ್ಯಾತಿಗೂ ಎಂಬಾಪೆ ಪಾತ್ರರಾಗಿದ್ದಾರೆ. 2018ರ ವರ್ಡ್‌ಕಪ್‌ ಫೈನಲ್‌ನಲ್ಲಿ ಕ್ರೊಯೇಷಿಯ ವಿರುದ್ಧ ಒಂದು ಗೋಲನ್ನು ಎಂಬಾಪೆ ಗಳಿಸಿದ್ದರು.

ಫೈನಲ್ ಪಂದ್ಯದ ಆರಂಭಕ್ಕೂ ಮೊದಲು ಮೆಸ್ಸಿ ಮತ್ತು ಎಂಬಾಪೆ ನಡುವೆ ಗೋಲ್ಡನ್ ಬೂಟ್‌ ಯಾರಿಗೆ ದೊರಕುತ್ತದೆ ಎಂಬ ಕುತೂಹಲ ಉಂಟಾಗಿತ್ತು. ಪಂದ್ಯದ ಏರಿಳಿತದಲ್ಲಿ ಒಮ್ಮೆ ಮೆಸ್ಸಿ ಕಡೆಗೂ ಮತ್ತೊಂದು ಸಲ ಎಂಬಾಪೆ ಕಡೆಗೂ ಗೋಲ್ಡನ್‌ ಬೂಟ್‌ ಅವಕಾಶ ಹರಿದಾಡುತ್ತಿತ್ತು. ಅಂತಿಮವಾಗಿ ಏಳು ಗೋಲನ್ನು ಮೆಸ್ಸಿ ಗಳಿಸಿದರೆ, ಎಂಬಾಪೆ ಎಂಟು ಗೋಲು ಭಾರಿಸಿದರು.

ಗೋಲ್ಡನ್ ಬೂಟ್‌ನ ಸಮರ ಹೇಗಿತ್ತು?

ಕತಾರ್‌ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು ಎಂಟು ಗೋಲ್‌ಗಳನ್ನು ಎಂಬಾಪೆ ಗಳಿಸಿದ್ದಾರೆ. ಜೊತೆಗೆ ಎರಡು ಗೋಲ್‌ಗಳಿಗೆ ಅಸಿಸ್ಟ್‌ (ನೆರವು) ಮಾಡಿದ್ದಾರೆ. ಫ್ರಾನ್ಸ್‌ ತಂಡವು ಟೂರ್ನಿಯಲ್ಲಿ ಫೈನಲ್‌ ತಲುಪಿ, ಪ್ರಬಲ ಪೈಪೋಟಿ ನೀಡಲು ಕಾರಣವಾದ ಎಂಬಾಪೆಯ ಗೋಲ್‌ಗಳು ಹೀಗಿದ್ದವು:

(ಆವರಣದಲ್ಲಿ ನೀಡಿರುವುದು ಎಂಬಾಪೆ ಗಳಿಸಿದ ಗೋಲ್‌ಗಳ ಸಂಖ್ಯೆ)

ಡಿ ಗುಂಪು: ಫ್ರಾನ್ಸ್ 4-1 ಆಸ್ಟ್ರೇಲಿಯಾ (1 ಗೋಲು, 1 ಅಸಿಸ್ಟ್‌)

ಡಿ ಗುಂಪು: ಫ್ರಾನ್ಸ್ 2-1 ಡೆನ್ಮಾರ್ಕ್ (2 ಗೋಲು)

ಡಿ ಗುಂಪು: ಟುನೀಶಿಯಾ 1-0 ಫ್ರಾನ್ಸ್ (0 ಗೋಲುಗಳು)

16ರ ಸುತ್ತು: ಫ್ರಾನ್ಸ್ 3-1 ಪೋಲೆಂಡ್ (2 ಗೋಲುಗಳು, 1 ಅಸಿಸ್ಟ್)

ಕ್ವಾರ್ಟರ್-ಫೈನಲ್: ಇಂಗ್ಲೆಂಡ್ 1-2 ಫ್ರಾನ್ಸ್ (0 ಗೋಲು)

ಸೆಮಿಫೈನಲ್: ಫ್ರಾನ್ಸ್ 2-0 ಮೊರಾಕೊ (0 ಗೋಲು)

ಫೈನಲ್: ಅರ್ಜೆಂಟೀನಾ 3-3 ಫ್ರಾನ್ಸ್ (3 ಗೋಲುಗಳು)

ಮೆಸ್ಸಿ ಮ್ಯಾಜಿಕ್‌

ಅರ್ಜೆಂಟೀನಾದ ಸ್ಟಾರ್‌ ಆಟಗಾರ ಲಿಯೋನೆಲ್ ಮೆಸ್ಸಿ, ಅರ್ಜೇಂಟೀನಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನೊಂದು ಗೋಲ್ ಗಳಿಸಿದ್ದರೂ ಅವರು ಎಂಬಾಪೆ ಅವರೊಂದಿಗೆ ಸಮಬಲ ಸಾಧಿಸಿ ಗೋಲ್ಡನ್‌ ಬೂಟ್‌ ಪಡೆಯುತ್ತಿದ್ದರು. ಯಾಕೆಂದರೆ ಒಂದು ಹೆಚ್ಚುವರಿ ಅಸಿಸ್ಟ್ ಮಾಡಿದ ದಾಖಲೆ ಮೆಸ್ಸಿ ಅವರ ಪಾಲಿಗಿತ್ತು. ಅಂತಿಮವಾಗಿ ಮೆಸ್ಸಿ ಈ ಟೂರ್ನಿಯಲ್ಲಿ 7 ಗೋಲು ಹಾಗೂ 3 ಅಸಿಸ್ಟ್‌ ಮಾಡಿದ್ದಾರೆ.

ಮೆಸ್ಸಿ ಗೋಲ್‌ ಭಾರಿಸಿದ ಪಂದ್ಯಗಳು ಹೀಗಿವೆ:

(ಆವರಣದಲ್ಲಿ ನೀಡಿರುವುದು ಮೆಸ್ಸಿ ಗಳಿಸಿದ ಗೋಲ್‌ಗಳ ಸಂಖ್ಯೆ)

ಗುಂಪು ಸಿ: ಅರ್ಜೆಂಟೀನಾ 1-2 ಸೌದಿ ಅರೇಬಿಯಾ (1 ಗೋಲು)

ಗುಂಪು ಸಿ: ಅರ್ಜೆಂಟೀನಾ 2-1 ಮೆಕ್ಸಿಕೋ (1 ಗೋಲು, 1 ಅಸಿಸ್ಟ್‌)

ಗುಂಪು ಸಿ: ಪೋಲೆಂಡ್ 0-2 ಅರ್ಜೆಂಟೀನಾ (0 ಗೋಲುಗಳು)

16ರ ಸುತ್ತು: ಅರ್ಜೆಂಟೀನಾ 2-1 ಆಸ್ಟ್ರೇಲಿಯಾ (1 ಗೋಲು)

ಕ್ವಾರ್ಟರ್-ಫೈನಲ್: ನೆದರ್ಲ್ಯಾಂಡ್ಸ್ 2-2 ಅರ್ಜೆಂಟೀನಾ (1 ಗೋಲು, 1 ಅಸಿಸ್ಟ್‌)

ಸೆಮಿಫೈನಲ್: ಅರ್ಜೆಂಟೀನಾ 3-0 ಕ್ರೊಯೇಷಿಯಾ (1 ಗೋಲು, 1 ನೆರವು)

ಫೈನಲ್: ಅರ್ಜೆಂಟೀನಾ 3-3 ಫ್ರಾನ್ಸ್ (2 ಗೋಲು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...