ಜಮ್ಮು ಮೂಲದ ‘ಡೋಗ್ರಾ ಸ್ವಾಭಿಮಾನ್ ಸಂಘಟನ್’ (ಡಿಎಸ್‌ಎಸ್) ಸಂಸ್ಥಾಪಕ ಮತ್ತು ಮಾಜಿ ಸಚಿವ ಚೌಧರಿ ಲಾಲ್ ಸಿಂಗ್ ಬುಧವಾರ ನವದೆಹಲಿಯಲ್ಲಿ ಕಾಂಗ್ರೆಸ್‌ಗೆ ಮರು ಸೇರ್ಪಡೆಗೊಂಡಿದ್ದಾರೆ.
ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ, ಸತತ ಎರಡು ಬಾರಿ ಉಧಮ್‌ಪುರ ಕ್ಷೇತ್ರದಿಂದ ಗೆದ್ದಿರುವ ಕೇಂದ್ರ ಸಚಿವ ಬಿಜೆಪಿಯ ಜಿತೇಂದರ್ ಸಿಂಗ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
आज जम्मू-कश्मीर कांग्रेस के प्रभारी @BharatSolankee जी, कांग्रेस मीडिया विभाग के चेयरमैन @Pawankhera जी और जम्मू-कश्मीर PCC अध्यक्ष @vikar_rasool जी की उपस्थिति में चौधरी लाल सिंह जी कांग्रेस पार्टी में शामिल हुए और उन्होंने अपनी पार्टी 'डोगरा स्वाभिमान संगठन पार्टी' का भी… pic.twitter.com/5Jt0vXpFkf
— Congress (@INCIndia) March 20, 2024
2014 ರ ಸಾರ್ವತ್ರಿಕ ಚುನಾವಣೆಯ ನಂತರ ಕಾಂಗ್ರೆಸ್ ತೊರೆದ ಸಿಂಗ್, ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ನಂತರ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ಕಥುವಾ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ವಿರುದ್ಧದ ರ್‍ಯಾಲಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಸಂಪುಟದಿಂದ ತೆಗೆದು ಹಾಕಲಾಗಿತ್ತು.
ಬಳಿಕ ಬಿಜೆಪಿ ತೊರೆದ ಲಾಲ್ ಸಿಂಗ್, ಡಿಎಸ್ಎಸ್ ಅನ್ನು ಪ್ರಾರಂಭಿಸಿದ್ದರು. ಜಮ್ಮುವಿನ ಡೋಗ್ರಾಗಳ ಹಕ್ಕುಗಳಾಗಿ ಹೋರಾಟ ರೂಪಿಸಿದ್ದರು. 2019 ರಲ್ಲಿ, ಅವರು ಉಧಮ್‌ಪುರ-ದೋಡಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ವಿರುದ್ಧ ಭಾರೀ ಅಂತರದಿಂದ ಸೋಲನುಭವಿಸಿದ್ದರು.
ಉಧಮ್‌ಪುರದಿಂದ ಎರಡು ಬಾರಿ ಸಂಸದರಾಗಿರುವ ಲಾಲ್ ಸಿಂಗ್ ಕಾಂಗ್ರೆಸ್‌ಗೆ ಮರಳಿರುವುದು ಜಮ್ಮುವಿನಲ್ಲಿ ಪಕ್ಷದ ನಿರೀಕ್ಷೆಯನ್ನು ಹೆಚ್ಚಿಸಿದೆ.
ಲಾಲ್ ಸಿಂಗ್ ಕಾಂಗ್ರೆಸ್‌ಗೆ ಮರಳುವುದರೊಂದಿಗೆ, ಉಧಮ್‌ಪುರ-ದೋಡಾ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ನೇತೃತ್ವದ ಡೆಮಾಕ್ರಟಿಕ್ ಆಜಾದ್ ಪಕ್ಷವು ಜಿ.ಎಂ. ಸರೂರಿ ಅವರನ್ನು ಉಧಮ್‌ಪುರ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ. ಸರೂರಿ ಮುಸ್ಲಿಂ ಮತಗಳನ್ನು ವಿಭಜಿಸಿದರೆ ಬಿಜೆಪಿಗೆ ಲಾಭವಾಗಬಹುದು.
ಲಾಲ್ ಸಿಂಗ್ ಪಕ್ಷಕ್ಕೆ ಮರಳಿರುವುದು ಆಂತರಿಕವಾಗಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ವರದಿಗಳು ಹೇಳಿವೆ. ಆದರೂ, ಅವರ ಮೇಲೆ ಪಕ್ಷ ಭರವಸೆಯಿಟ್ಟಿದೆ. ಬಿಜೆಪಿ ವಿರುದ್ದದ ಮುಸ್ಲಿಂ ಮತಗಳು ಲಾಲ್ ಸಿಂಗ್ ಪಡೆಯಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಬಿಹಾರ: ‘ಜನ್ ಅಧಿಕಾರ್ ಪಕ್ಷ’ವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದ ಪಪ್ಪು ಯಾದವ್


