Homeಕರ್ನಾಟಕನಗರ್ತಪೇಟೆ ಗಲಾಟೆಗೆ ಕೋಮುಬಣ್ಣ: 'ಜಾಗೃತ ನಾಗರಿಕರು ಕರ್ನಾಟಕ' ವೇದಿಕೆಯಿಂದ ಚುನಾವಣಾ ಆಯೋಗಕ್ಕೆ ದೂರು

ನಗರ್ತಪೇಟೆ ಗಲಾಟೆಗೆ ಕೋಮುಬಣ್ಣ: ‘ಜಾಗೃತ ನಾಗರಿಕರು ಕರ್ನಾಟಕ’ ವೇದಿಕೆಯಿಂದ ಚುನಾವಣಾ ಆಯೋಗಕ್ಕೆ ದೂರು

- Advertisement -
- Advertisement -

ನಗರ್ತಪೇಟೆ ಮೊಬೈಲ್ ಅಂಗಡಿ ಗಲಾಟೆ ಪ್ರಕರಣಕ್ಕೆ ಕೋಮುಬಣ್ಣ ನೀಡಿಲು ಯತ್ನಿಸಿದ ಬಿಜೆಪಿ ನಾಯಕರ ವಿರುದ್ಧ ‘ಜಾಗೃತ ನಾಗರಿಕರು ಕರ್ನಾಟಕ’ ವೇದಿಕೆ ನಿಯೋಗವು ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಯವರನ್ನು ಭೇಟಿಯಾಗಿ ದೂರು ಸಲ್ಲಿಸಿದೆ.

ಲೋಕಸಭಾ ಚುನಾವಣೆಯ ಈ ಅವಧಿಯಲ್ಲಿ ಕೋಮುದ್ವೇಷ, ಧರ್ಮದ್ವೇಷ ಪ್ರಚೋದಿಸುವ ಯಾವುದೇ ಘಟನೆ ಮಾತುಗಳಿಗೆ ಅವಕಾಶ ನೀಡಬಾರದು. ನಗರ್ತಪೇಟೆಯಲ್ಲಿ ಭಾರತೀಯ ಜನತಾ ಪಕ್ಷದ ಹಾಲಿ ಸಂಸದರು, ಸಚಿವರು, ಸಂಭಾವ್ಯ ಅಭ್ಯರ್ಥಿಗಳು, ಶಾಸಕರು ಕಾನೂನು ಬಾಹಿರ ಪ್ರತಿಭಟನೆ ನಡೆಸಿದ್ದಾರೆ. ದ್ವೇಶ ಭಾಷಣ ಮಾಡಿದ ಸಂಸದರಾದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಸುರೇಶ್ ಕುಮಾರ್ ಮತ್ತಿತರರ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ‌ ಮತ್ತು ಧಾರ್ಮಿಕ ನೆಲೆಯ ಗಲಭೆ‌ ಪ್ರಚೋದನೆಯ ಕೃತ್ಯದ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ತಮ್ಮ ಮನವಿಯಲ್ಲಿ ಆಗ್ರಹಿಸಿದ್ದಾರೆ.

‘ಮನವಿ ಸ್ವೀಕರಿಸಿದ ಮುಖ್ಯ ಚುನಾವಣಾ ಅಧಿಕಾರಿಗಳು, ಘಟನೆ ತಮ್ಮ ಗಮನಕ್ಕೆ ಬಂದಿದ್ದು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ಸಂಘಟನೆ ಮುಖಂಡತು ತಿಳಿಸಿದ್ದಾರೆ.

ಮನವಿ ಪತ್ರದಲ್ಲಿ ಏನಿದೆ?

ದೇಶದ ಸಂವಿಧಾನವನ್ನು ಗೌರವಿಸುವ ಕರ್ನಾಟಕದ ಸಮಾನ ಮನಸ್ಕರನ್ನೊಳಗೊ೦ಡಿರುವ ಜಾಗೃತ ನಾಗರಿಕರು ಕರ್ನಾಟಕ ವೇದಿಕೆಯ ಮೂಲಕ ಈ ಪತ್ರವನ್ನು ತಮಗೆ ಸಲ್ಲಿಸ ಬಯಸುತ್ತೇವೆ; ಮತ್ತು ಸೂಕ್ತ ಕ್ರಮಕ್ಕಾಗಿ ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.

ದಿನಾ೦ಕ 17.03.2024ರಂದು ಬೆ೦ಗಳೂರಿನ ನಗರ್ತಪೇಟೆಯಲ್ಲಿ ನಡೆಯಿತೆನ್ನಲಾದ ಒಂದು ಘಟನೆಯನ್ನಾಧರಿಸಿ, ಬೆ೦ಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಹಾಲಿ ಸಂಸದರು ಮತ್ತು ಸಂಭಾವ್ಯ ಅಭ್ಯರ್ಥಿಯಾದ ತೇಜಸ್ವಿ ಸೂರ್ಯ, ಕೇಂದ್ರದ ಸಚಿವರಾದ ಹಾಗೂ ಬೆ೦ಗಳೂರು ಉತ್ತರ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯಾದ ಶೋಭಾ ಕರಂದ್ಲಾಜೆಯವರು, ಬೆಂಗಳೂರು ರಾಜಾಜಿನಗರದ ಶಾಸಕರೂ ಆಗಿರುವ ಸುರೇಶ್‌ ಕುಮಾರ್‌ ರವರು ನಗರ್ತಪೇಟೆಯಲ್ಲಿ ಸಾವಿರಾರು ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿದ್ದಾರೆ೦ದು ಮಾಧ್ಯಮಗಳಲ್ಲಿ ನೋಡಿ ಆತಂಕಿತರಾಗಿದ್ದೇವೆ ಎಂದು ಹೇಳಿದ್ದಾರೆ.

ಅಂಗಡಿಯೊಂದರಲ್ಲಿ ಜಗಳ ನಡದಿದ್ದು; ಅದರ ಮಾಲೀಕರು ಕೊಟ್ಟ ದೂರಿನನ್ವಯ ಹಲಸೂರು ಗೇಟ್‌ ಪೋಲಿಸ್‌ ಸ್ಟೇಷನ್‌ ನಲ್ಲಿ ಎಫ್‌.ಐ.ಆರ್‌. ಕೂಡಾ ದಾಖಲಾಗಿದೆ. ಅದರಲ್ಲಿ ಯಾವುದೇ ಧಾರ್ಮಿಕ ನೆಲೆಯ ಗಲಾಟೆಗಳ ಕುರಿತ ಅಂಶಗಳಿಲ್ಲ; ಅಂತಹ ಯಾವ ಘಟನೆಗಳು ನಡೆದಿಲ್ಲ ಎ೦ಬ ಪೋಲೀಸರ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲಿ ಯಾವುದೇ ಘಟನೆ ನಡೆದಿದ್ದರೂ, ಅದರ ಗಹನತೆಯನ್ನಾದಧರಿಸಿ ಪೋಲೀಸರು ಕ್ರಮ ಕೈಗೊಳ್ಳುವುದು ನೆಲದ ಕಾನೂನಿನ ಪ್ರಕಾರ ನಡೆಯಬೇಕು. ಆದರೆ, ನಡೆದ ಘಟನೆಗೆ ಕೋಮುವಾದದ ಬಣ್ಣ ಬಳಿದು, ಅದನ್ನು ಕೋಮುದ್ವೇಷ ಹರಡಲು ಬೆ೦ಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯರವರು ಪ್ರಯತ್ನ ನಡೆಸಿದ್ದಾರೆ. ಅವರ ಸಾಮಾಜಿಕ ಮಾಧ್ಯಮಗಳ ಮೂಲಕ ಅವರು ಹಾಕಿರುವ ಹೇಳಿಕಯಲ್ಲಿ ಇದು ಸ್ಪಷ್ಟವಾಗುತ್ತದೆ. ತೇಜಸ್ಟಿ ಸೂರ್ಯ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿ ಮಾತನಾಡಿದ ವಿಡಿಯೋ ಯೂಟ್ಯೂಬ್‌ ನಲ್ಲಿ ಪ್ರಸಾರವಾಗಿದೆ. ಅವರ ಮಾತುಗಳು ಅತ್ಯ೦ತ ಪ್ರಚೋದನಕಾರಿಯಾಗಿದ್ದು ಅನಗತ್ಯ ದೋಷಾರೋಪಣೆಯನ್ನೂ ಮಾಡುತ್ತಿರುವುದು ಕೇಳಿಬರುತ್ತಿದೆ ಎಂದು ವಿವರಿಸಿದ್ದಾರೆ.

ದಿನಾಂಕ 19.03.2024ರಂದು ನಗರ್ತಪೇಟೆಯ ಬೀದಿಗಳಲ್ಲಿ ಹಿಂದೂ ಜಾಗರಣ ಹಾಗೂ ಬಜರಂಗ ದಳದ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿದ್ನಾರೆ. ಆ ಪ್ರತಿಭಟನೆಯಲ್ಲಿ ಕೇಂದ್ರ ಸಚಿವೆ ಮತ್ತು ಬೆ೦ಗಳೂರು ಉತ್ತರ ಲೋಕಸಭಾ ಕ್ವೇತ್ರದ ಸಂಭಾವ್ಯ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರು, ರಾಜಾಜಿನಗರದ ಶಾಸಕ ಸುರೇಶ್‌ ಕುಮಾರ್‌, ಸಂಸದ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಭಾವ್ಯ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯರವರು ಭಾಗವಹಿಸಿದ್ದರು. ಪ್ರತಿಭಟನಾಕಾರರು ರಸ್ತೆಯ ಮೇಲೆ ಹನುಮಾನ್‌ ಚಾಲೀಸಾ ಪಠಣ ಮಾಡಲು ಕುಳಿತರೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ದೇಶದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಇಡೀ ದೇಶದಲ್ಲೀಗ ಚುನಾವಣಾ ನೀತಿ ಸಂಹಿತ ಜಾರಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳಾಗಿದ್ದವರು ಅತ್ಯ೦ತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೇ, ಭಾರತದ ಸಂವಿಧಾನದ ಪ್ರತಿ ಕಲಮುಗಳನ್ನು ಎತ್ತಿ ಹಿಡಿಯಬೇಕು. ದೇಶದ ಸರ್ವೋಚ್ಚ ನ್ಯಾಯಾಲಯವೂ ಕೂಡ ದ್ವೇಷ ಪ್ರಚೋದನೆಯ ಮಾತುಗಳನ್ನಾಡುವುದನ್ನು ನಿಗ್ರಹಿಸಬೇಕೆಂದು ಹಲವು ಬಾರಿ ಹೇಳಿದೆ. ಆದರೆ, ಈ ಮೇಲೆ ಉಲ್ಲೇಖಿಸಿದ ಪ್ರಮುಖರು ಕೇಂದ್ರದಲ್ಲಿ ಸರ್ಕಾರವನ್ನು ನಡೆಸುತ್ತಿರುವ, ರಾಷ್ಟ್ರೀಯ ಪಕ್ಷವೊಂದರ ಜನ ಪ್ರತಿನಿಧಿಗಳು. ದೇಶದ ಸಂವಿಧಾನವನ್ನು ಗೌರವಿಸಿ ಕಾಪಾಡುವ ಕೆಲಸದಲ್ಲಿ ತೊಡಗುವ ಬದಲು, ಕೋಮುದ್ವೇಷವನ್ನು ಹೆಚ್ಚಿಸುವ ರೀತಿ ಪ್ರಚೋದನಕಾರಿಯಾಗಿ ಮಾತನಾಡುತ್ತಿದ್ದಾರೆ. ಜನರನ್ನು ದೊಂಬಿ ಗಲಭೆಗಳಿಗೆ ಪ್ರಚೋದಿಸುತ್ತಿರುವುದು, ಧರ್ಮ ದ್ವೇಷಕ್ಕೆ ಪುಷ್ಠಿಕೊಡುತ್ತಿರುವುದು ಭಾರತೀಯ ದಂಡ ಸಂಹಿತೆಯ ಪ್ರಕಾರ ಕೂಡ ಶಿಕ್ಟಾರ್ಹ ಅಪರಾಧವಾಗಿದೆ ಎಂದು ಹೇಳಿದ್ದಾರೆ.

ಚುನಾವಣೆ ಘೋಷಣೆಯಾದ ಮರುಕ್ಷಣವೇ ನಡೆದ ಈ ಫಟನೆ ಮು೦ದಿನ ದಿನಗಳಲ್ಲಿ ತೆಗೆದುಕೊಳ್ಳಬಹುದಾದ ಹಲವು ರೂಪಾ೦ತರಗಳ ಸೂಚನೆಯಾಗಿದೆ. ಸಂವಿಧಾನ ಪ್ರೇಮಿಗಳಾದ ನಾವು ಈ ಘಟನೆಯಿಂದ ಆತಂಕಿತರಾಗಿದ್ದೇವೆ. ಚುನಾವಣಾ ಆಯೋಗವು ಈ ದಿಸೆಯಲ್ಲಿ ಗಂಭೀರವಾಗಿ ಚಿ೦ತಿಸಬೇಕು. ದೇಶದ ಜಾತ್ಯತೀತ, ಮತ ನಿರಪೇಕ್ಷ ಗುಣಗಳಿಗೆ ಮಸಿ ಬಳಿಯುವ ಪ್ರಯತ್ನವನ್ನು ಯಾರೇ ಮಾಡಿದರೂ, ಧರ್ಮ ಜಾತಿಗಳ ಹೆಸರಿನಲ್ಲಿ ದ್ವೇಷ, ಹಿ೦ಸೆ ಗಲಭೆ ಪ್ರಚೋದಿಸುವ ಕೆಲಸ ಎಲ್ಲೇ ನಡದರೂ, ಅಂತಹ ಶಕ್ತಿಗಳಿಗೆ ಯಾವುದೇ ಆಸ್ಪದ ನೀಡದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸದರಿ ಪ್ರಕರಣದಲ್ಲಿ ಭಾಗಿಗಳಾದ ಮೂವರು ಸಂಸದರು ಮತ್ತು ಒಬ್ಬರು ಶಾಸಕರ ಮೇಲೆ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕೆ೦ದು ಒತ್ತಾಯಿಸುತ್ತೇವೆ ಎಂದು ಜಾಗೃತ ನಾಗರಿಕರು ಕರ್ನಾಟಕ ವೇದಿಕೆ ಆಗ್ರಹಿಸಿದೆ.

ಚುನಾವಣಾ ಆಯುಕ್ತರನ್ನು ಭೇಟಿಯಾದ ನಿಯೋಗದಲ್ಲಿ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ದಲಿತ ನಾಯಕ ಮಾವಳ್ಳಿ ಶಂಕರ್, ಪತ್ರಕರ್ತ ದಿನೇಶ್ ಅಮಿನಮಟ್ಟು, ವಿಮಲಾ.ಕೆ.ಎಸ್, ಬಿ.ಶ್ರೀಪಾದ‌ ಭಟ್, ಜಾಣಗೆರೆ ವೆಂಕಟರಾಮಯ್ಯ, ಕಾ.ತ.ಚಿಕ್ಕಣ್ಣ, ಡಾ.ಬಂಜಗೆರೆ ಜಯಪ್ರಕಾಶ್, ಟಿ.ಸುರೇಂದ್ರ ರಾವ್, ರವಿ ಕುಮಾರ್ ಬಾಗಿ, ಎಚ್.ದಂಡಪ್ಪ ಇದ್ದರು.

ಇದನ್ನೂ ಓದಿ; ಹಲ್ಲೆ ಪ್ರಕರಣವನ್ನು ದೊಡ್ಡದಾಗಿಸುವ ಅಗತ್ಯ ಇರಲಿಲ್ಲ: ಬಿಜೆಪಿ ಶಾಸಕ ಗರುಡಾಚಾರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...