Homeಕರ್ನಾಟಕಮೈಸೂರು: ವಿವಾದಿತ ಮಾತೃಮಂಡಳಿ ವೃತ್ತ ನೆಲಸಮ

ಮೈಸೂರು: ವಿವಾದಿತ ಮಾತೃಮಂಡಳಿ ವೃತ್ತ ನೆಲಸಮ

- Advertisement -
- Advertisement -

ಮೈಸೂರು ಜಿಲ್ಲೆಯಲ್ಲಿ ವಿವಾದದ ಕೇಂದ್ರವಾಗಿದ್ದ ನಗರದ ಮಾತೃಮಂಡಳಿ ವೃತ್ತವನ್ನು ಗುರುವಾರದಂದು ನೆಲಸಮ ಮಾಡಲಾಗಿದೆ. ವೃತ್ತದಲ್ಲಿ ಪ್ರತಿಮೆಗಳನ್ನು ಇಡುವ ವಿಚಾರದಲ್ಲಿ ಇತ್ತೀಚೆಗೆ ವಿವಾದ ಉಂಟಾಗಿತ್ತು.

ಒಂದು ಬಣ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆಯನ್ನು ವೃತ್ತದಲ್ಲಿ ಇಡಬೇಕು ಎಂದು ಪ್ರತಿಪಾದಿಸಿದ್ದರೆ, ಮತ್ತೊಂದು ಬಣ ಕುವೆಂಪು ಅವರ ಪ್ರತಿಮೆಯನ್ನು ಇಡಬೇಕು ಎಂದು ಒತ್ತಾಯಿಸುತ್ತಿತ್ತು.

ಇದನ್ನೂ ಓದಿ:ಮೈಸೂರು: ಅಂಬೇಡ್ಕರ್‌ ಪ್ರತಿಮೆ ತೆರವು; ಕತ್ತುಕೊಯ್ದುಕೊಂಡ ಯುವಕ; ಏನಿದು ವಿವಾದ?

ಈ ನಡುವೆ ಅನುಮತಿ ಪಡೆಯದೆ ಅಂಬೇಡ್ಕರ್‌ ಪ್ರತಿಮೆ ಇಟ್ಟಿರುವುದರಿಂದ ಪೊಲೀಸರು ಪ್ರತಿಮೆಯನ್ನು ತೆರವುಗೊಳಿಸಿದ್ದರು. ಇದರಿಂದ ಬೇಸರಗೊಂಡಿದ್ದ ಯುವಕನೊಬ್ಬ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ತಕ್ಷಣ ಎಚ್ಚೆತ್ತುಕೊಂಡು ಪೊಲೀಸರು ಹಾಗೂ ಪಾಲಿಕೆ ಸಿಬ್ಬಂದಿ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ಬಣಗಳ ನಡುವೆ ಕಚ್ಚಾಟದ ಹಿನ್ನೆಲೆಯಲ್ಲಿ ಇದೀಗ ಪೊಲೀಸ್‌ ಬಂದೋಬಸ್ತ್‌ನೊಂದಿಗೆ ವೃತ್ತವನ್ನು ಜೆಸಿಬಿ ಬಳಸಿ ತೆರವು ಮಾಡಲಾಗಿದೆ. ಇದನ್ನು ಖಂಡಿಸಿ ತಡೆಯಲು ಬಂದ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಆಂದೋಲನ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ:Exclusive | ವಾರ್ಡನ್‌ಗಳು, ಕ್ಲರ್ಕ್‌ಗಳು ಸೇರಿ 46 ಲಕ್ಷ ರೂ. ನುಂಗಿದ್ದರು: ಮೈಸೂರು ವಿವಿ ಡೀನ್‌‌

ದಾರ್ಶನಿಕರ ಹೆಸರಲ್ಲಿ ಜಗಳ ಸಲ್ಲದು

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌, ರಾಷ್ಟ್ರಕವಿ ಕುವೆಂಪು ಅವರು ದೇಶಕಂಡ ಮಹಾನ್‌ ಮಾನವತಾವಾದಿಗಳು ಹಾಗೂ ದಾರ್ಶಕನಿಕರು. ಆದರೆ ಜಾತಿವಾದಿ ಸಮಾಜ ಈ ದಾರ್ಶನಿಕರನ್ನು ಜಾತಿಯ ಗೂಟಕ್ಕೆ ಕಟ್ಟಿರುವುದು ವಿಷಾದನೀಯ. ಈ ಇಬ್ಬರು ಮಹಾನೀಯರು ಸಮಾಜದಲ್ಲಿನ ಅಸಮಾನತೆ, ಶ್ರೇಣಿಕೃತ ವ್ಯವಸ್ಥೆಯನ್ನು ಪ್ರಶ್ನಿಸಿದವರು. ದುರಾದೃಷ್ಟವಶಾತ್‌ ಅಂಬೇಡ್ಕರ್‌ ಎಂದರೆ ದಲಿತರಿಗೆ, ಕುವೆಂಪು ಎಂದರೆ ಒಕ್ಕಲಿಗರಿಗೆ ಎಂಬ ವಿಂಗಡಣೆ ಆಗಿರುವುದು ಮಾತ್ರ ವಿಷಾದನೀಯ ಎಂದು ಸ್ಥಳೀಯರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

“ಕುವೆಂಪು ಹಾಗೂ ಅಂಬೇಡ್ಕರ್‌ ಅವರನ್ನು ಸಮಾನ ದೂರದಲ್ಲಿಟ್ಟು ಅಣಕ ಮಾಡುವ ರಾಜಕೀಯ ವ್ಯವಸ್ಥೆ ಒಂದು ಕಡೆ ಇದ್ದರೆ, ಈ ಇಬ್ಬರ ಹೆಸರಲ್ಲಿ ಜಗಳ ಆಡುತ್ತಿರುವ ಜನವರ್ಗ ಒಂದು ಕಡೆ ಇದೆ. ನಿನ್ನೆ ಆಗಿರುವ ಘಟನೆಗೂ ಇಂಥದ್ದೇ ಕಾರಣವಿದೆ” ಎಂದು ಅವರು ಹೇಳಿದ್ದಾರೆ.

ಮೈಸೂರು ನಗರದ ಪಡುವಾರಹಳ್ಳಿ, ಒಂಟಿಕೊಪ್ಪಲು ಭಾಗದಲ್ಲಿ ಇರುವ ಮಾತೃಮಂಡಳಿ ವೃತ್ತದಲ್ಲಿ ಅಂಬೇಡ್ಕರ್‌ ಪ್ರತಿಮೆ ಇಡಬೇಕೆಂದು ದಲಿತರು ಆಗ್ರಹಿಸುತ್ತಿದ್ದರೆ, ಕುವೆಂಪು ಪ್ರತಿಮೆ ಇಡಬೇಕೆಂದು ಒಕ್ಕಲಿಗರು ಬಯಸುತ್ತಿದ್ದರು. ಈ ಭಾಗದಲ್ಲಿ ದಲಿತರು, ನಾಯಕರು ಹಾಗೂ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ.

ಇದನ್ನೂ ಓದಿ:ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಮುಂದೂಡಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅಂಬೇಡ್ಕರ್ ಅವರ ಪ್ರತಿಮೆಗೆ ಒಕ್ಕಲಿಗರು ವಿರೋಧಿಸಿದ್ದು, ಕುವೆಂಪು ಅವರ ಪ್ರತಿಮೆಗೆ ದಲಿತರು ವಿರೋಧಿಸಿದ್ದು, ಈ ಎರಡೂ ತಪ್ಪು. ಈ ಎರಡು ಮಹಾನ್ ಚೇತನಗಳನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಅಪರಾಧ.

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...