ಇತ್ತೀಚೆಗೆ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿ ನಾಯಕಿ ಡಾ. ತೇಜಸ್ವಿನಿಗೌಡ ಅವರು ಇಂದು (ಮಾ.30) ಕಾಂಗ್ರೆಸ್‌ಗೆ ಮರಳಿದ್ದಾರೆ.
ದೆಹಲಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ತೇಜಸ್ವಿನಿ ಗೌಡ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ಪವನ್‌ಖೇರಾ ಅವರು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.
ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ತೆಜಸ್ವಿನಿಗೌಡ ಅವರು, ‘ಕಾಂಗ್ರೆಸ್ ಮಾತನಾಡಲ್ಲ, ಕೆಲಸ ಮಾಡುತ್ತದೆ’ ಇತಿಹಾಸ ನಮ್ಮ ಮುಂದಿದೆ. ಇದು ಉತ್ತಮ ಸಮಯ. ನಾನು ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ಕೆಲಸ ಮಾಡಲು ಬಯಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳು ನಿರ್ಭಯವಾಗಿ ಉಳಿಯಬೇಕು.” ಎಂದು ಹೇಳಿದರು.
Congress sirf baat nahi karte per kaam karte hai; history is there before us. It's high time, and with all sincerity, I would like to work for the party.
In a democracy, political parties must sustain without fear.: Dr. Tejasiwini Gowda ji pic.twitter.com/OFsc6n9zQM
— Congress (@INCIndia) March 30, 2024
ನಾನು ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಕೇಳಿದ್ದೆ. ಪ್ರತಾಪ್ ಸಿಂಹ ನನ್ನ ಸಹೋದರ, ಅವರಿಗೆ ಟಿಕೆಟ್ ಕೊಡದಿದ್ದರೆ ನನಗೆ ಕೊಡಿ ಎಂದಿದ್ದೆ. ಮೈಸೂರು-ಕೊಡಗು ಆಗದಿದ್ದರೆ ಬೆಂಗಳೂರು ಉತ್ತರದ ಟಿಕೆಟ್ ಕೊಡಿ ಎಂದಿದ್ದೆ. ಆದರೆ, ಬಿಜೆಪಿಯವರು ನನಗೆ ಟಿಕೆಟ್ ಕೊಟ್ಟಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಜೆಡಿಎಸ್ ನಮಗೆ ಅವತ್ತೂ ವಿರೋಧಿ, ಇವತ್ತೂ ವಿರೋಧಿ. ಅಂತಹ ಪಕ್ಷದ ಜೊತೆ ಮೈತ್ರಿ ಯಾಕೆ ಬೇಕಿತ್ತು? ಬಿಜೆಪಿ ನಾಯಕರಿಗೆ ಒಕ್ಕಲಿಗರ ಮೇಲೆ ನಂಬಿಕೆ ಇಲ್ವಾ? ಸಿ.ಟಿ ರವಿ, ಪ್ರತಾಪ್ ಸಿಂಹ, ಅಶ್ವತ್ ನಾರಾಯಣ, ಡಿ.ವಿ ಸದಾನಂದ ಗೌಡರಂತ ಫೈರ್ ಬ್ರ್ಯಾಂಡ್‌ಗಳಿಗೆ ಟಿಕೆಟ್ ತಪ್ಪಿಸಿದ್ದೀರಲ್ವಾ, ಅವರ ಮೇಲೆ ನಂಬಿಕೆ ಇಲ್ವಾ? ನಾವು ಹೋಗಿ ಜೆಡಿಎಸ್‌ನವರ ಕಾಲಿಗೆ ಬೀಳಬೇಕಾ? ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಎಲ್ಲರನ್ನು ಒಳಗೊಂಡ ನಾಯಕ. ಡಿ.ಕೆ ಶಿವಕುಮಾರ್ ನಮ್ಮ ಸಮುದಾಯದ ಸರ್ವೋಚ್ಚ ನಾಯಕ. ಅವರು ನಮ್ಮ ಸಮುದಾಯಕ್ಕೆ ಎಲ್ಲವನ್ನೂ ಕೊಟ್ಟಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪಕ್ಷ ಮುಂದುವರೆಯುತ್ತಿದೆ. ಪಕ್ಷ ಎಲ್ಲಿ ಹೋಗಿ ಪ್ರಚಾರ ಮಾಡಲು ಹೇಳುತ್ತದೋ, ಅಲ್ಲಿ ಪ್ರಚಾರ ಮಾಡಲು ನಾನು ಸಿದ್ದ ಎಂದು ಹೇಳಿದರು.
ತೇಜಸ್ವಿನಿ ಘರ್ ವಾಪ್ಸಿ
ಪತ್ರಕರ್ತೆಯಾಗಿದ್ದ ತೇಜಸ್ವಿನಿ ಗೌಡ ಅವರು 2004ರಲ್ಲಿ ಕಾಂಗ್ರೆಸ್ ಸೇರಿದ್ದರು. ಅಲ್ಲದೆ, ಅದೇ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಿರುದ್ಧ ಗೆಲುವು ಸಾಧಿಸಿದ್ದರು.
ಬಳಿಕ, 2014ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಇದೀಗ, ಅವರು ಕಾಂಗ್ರೆಸ್‌ಗೆ ಮರಳಿ ಬಂದಿದ್ದಾರೆ. ಅವರು ಕಾಂಗ್ರೆಸ್‌ನಿಂದಲೂ ಎಂಎಲ್‌ಸಿ ಆಗುವ ಸಾಧ್ಯತೆಗಳಿವೆ.
ಇದನ್ನೂ ಓದಿ : ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ


