Homeಕರ್ನಾಟಕExclusive: ಮಸೀದಿ ಸುತ್ತಲಿನ ಹಿಂದೂ ವ್ಯಾಪಾರಿಗಳ ಮನದ ಮಾತು

Exclusive: ಮಸೀದಿ ಸುತ್ತಲಿನ ಹಿಂದೂ ವ್ಯಾಪಾರಿಗಳ ಮನದ ಮಾತು

ಬೆಂಗಳೂರಿನ ಬಸವನಗುಡಿ ಮಸೀದಿಗೆ ಸೇರಿದ ಮಳಿಗೆಗಳಲ್ಲಿ ಹಿಂದೂ ಮುಸ್ಲಿಂ ವ್ಯಾಪಾರಿಗಳಿಬ್ಬರೂ ತಮ್ಮ ಬದುಕು ಕಂಡುಕೊಂಡಿದ್ದಾರೆ. ಮುಸ್ಲಿಮರು ಮಂದಿರಗಳ ಬಳಿ ವ್ಯಾಪಾರ ಮಾಡಬಾರದೆಂದು ಮತೀಯ ಸಂಘಟನೆಗಳು ಮಾಡುತ್ತಿರುವ ರಾಜಕಾರಣವನ್ನು ಹಿಂದೂ ವ್ಯಾಪಾರಿಗಳು ಖಂಡಿಸಿದ್ದಾರೆ. (ಮುಂದೆ ಓದಿರಿ...)

- Advertisement -
- Advertisement -

“ರೋಡಲ್ಲಿ ಹೋಗೋರು ವ್ಯಾಪಾರ ಮಾಡ್ತಾರೆ, ಹಿಂದೂ ಮುಸ್ಲಿಮರೆಲ್ಲ ನಮ್ಮಲ್ಲಿ ಖರೀದಿಸುತ್ತಾರೆ. ನೋಡಿ ಪಕ್ಕದಲ್ಲೇ ಮಸೀದಿ ಇದೆ. ಇಲ್ಲಿ ವ್ಯಾಪಾರ ಮಾಡಬೇಡಿ ಎಂದು ಮಸೀದಿಯವರೇನೂ ನಮಗೆ ತೊಂದರೆ ಕೊಡುತ್ತಿಲ್ಲ. ಎಲ್ಲರದ್ದೂ ಹೊಟ್ಟೆಪಾಡು. ಜಾತಿ, ಧರ್ಮದ ಕಾರಣಕ್ಕೆ ಯಾರಿಗೂ ತೊಂದರೆ ಕೊಡಬಾರದು” ಎನ್ನುತ್ತಾರೆ ಮಂಡ್ಯ ಮೂಲದ ವ್ಯಾಪಾರಿ ಕೃಷ್ಣ.

ಕಳೆದ ಏಳೆಂಟು ವರ್ಷಗಳಿಂದ ಬಸವನಗುಡಿಯ ಮಸೀದಿ ಪಕ್ಕದಲ್ಲೇ ತಳ್ಳೋಗಾಡಿಯಲ್ಲಿ ನಿಂಬೆ ಹಣ್ಣು ಹಾಗೂ ಇತರೆ ತರಕಾರಿಗಳನ್ನು ಮಾರಾಟ ಮಾಡುತ್ತಿರುವ ಅವರು, ಇಂದಿನ ಬೆಳವಣಿಗೆಗಳನ್ನು ಕಟುವಾಗಿ ಟೀಕಿಸುತ್ತಾರೆ. ಹಿಂದೂ ದೇವಾಲಯಗಳ ಬಳಿ ಮುಸ್ಲಿಮರು ವ್ಯಾಪಾರ ಮಾಡಬಾರದೆಂದು ಅಡ್ಡಿಪಡಿಸುತ್ತಿರುವ ಸಂಘಟನೆಗಳ ವರ್ತನೆಗಳಿಗೆ ಬೇಸರ ವ್ಯಕ್ತಪಡಿಸುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮಂಡ್ಯ ಮೂಲದ ಕೃಷ್ಣ ಅವರು ಬಸವನಗುಡಿ ಮಸೀದಿ ಬಳಿ ವ್ಯಾಪಾರ ಮಾಡುತ್ತಿದ್ದು ‘ನಾನುಗೌರಿ.ಕಾಂ’ ಜೊತೆ ಮಾತನಾಡಿದರು.

ಬೆಂಗಳೂರಿನ ಬಸವನಗುಡಿಯ ಖಾಝಿ ಸ್ಟ್ರೀಟ್‌ ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿರುತ್ತದೆ. ಈಗ ರಂಜಾನ್ ಮಾಸವೂ ಇರುವುದರಿಂದ ವ್ಯಾಪಾರ ವಹಿವಾಟು ಕೂಡ ಜೋರಾಗಿ ನಡೆಯುತ್ತಿದೆ. ಇಲ್ಲಿನ ಮಸೀದಿಯ ನೆಲಮಹಡಿಯಲ್ಲಿರುವ ಮಳಿಗೆಗಳಲ್ಲಿ ಹಿಂದೂ, ಮುಸ್ಲಿಮ್ ಬಾಂಧವರಿಬ್ಬರೂ ಕಾಯಕ ನಡೆಸುತ್ತಿದ್ದಾರೆ.

ಇದನ್ನೂ ಓದಿರಿ: 40% ಕಮಿಷನ್‌ ನಿಜ; 25,000 ಕೋಟಿ ರೂ. ಪೆಂಡಿಂಗ್ ಬಿಲ್ ಇದೆ: ಗುತ್ತಿಗೆದಾರರ ಸಂಘದ ಅಧ್ಯಕ್ಷರ ಗಂಭೀರ ಆರೋಪ

ಇಲ್ಲಿನ ಮಳಿಗೆಯೊಂದರಲ್ಲಿ ಕಳೆದ 42 ವರ್ಷಗಳಿಂದ ಹಿಂದೂ ಕುಟುಂಬವೊಂದು ಜೀವನೋಪಾಯ ಕಂಡುಕೊಂಡಿದೆ. ಟೈಲರಿಂಗ್ ಮಾಡುತ್ತಿದ್ದ ರೂಪಾ ರಾಘವೇಂದ್ರ ಎಂಬವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಕಳೆದ 42 ವರ್ಷಗಳಿಂದ ನಮ್ಮ ಮಾವನವರು ಇಲ್ಲಿ ವಹಿವಾಟು ನಡೆಸುತ್ತಿದ್ದರು. ಈಗ ನಾನು ಹಾಗೂ ನನ್ನ ಗಂಡ ಇದೇ ವೃತ್ತಿಯನ್ನು ಇಲ್ಲಿಯೇ ಮುಂದುವರಿಸಿದ್ದೇವೆ. ಈ ಮಳಿಗೆಯು ಮಸೀದಿಗೆ ಸೇರಿದೆ. ಆದರೆ ಮುಸ್ಲಿಮರ್‍ಯಾರೂ ನಮಗೆ ತೊಂದರೆ ಕೊಟ್ಟಿಲ್ಲ. ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದರೆ ಹಿಂದೂ ದೇವಾಲಯಗಳ ಬಳಿ ಮುಸ್ಲಿಮರು ಮಾರಾಟ ಮಾಡಬೇಡಿ ಎಂದು ಹೇಳುತ್ತಿರುವುದು ತುಂಬಾ ಹಿಂಸೆ ತಂದಿದೆ. ಬೇಕಂತಲೇ ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.

ರೂಪಾ ರಾಘವೇಂದ್ರ ಅವರು ಬಸವನಗುಡಿ ಮಸೀದಿಗೆ ಸೇರಿದ ಮಳಿಗೆಯಲ್ಲಿ ಟೈಲರಿಂಗ್ ವೃತ್ತಿ ಮಾಡುತ್ತಿದ್ದಾರೆ.

ಮಾತು ಮುಂದುವರಿಸಿದ ಅವರು, “ನಮಗೆ ಮುಸ್ಲಿಮರೇ ಹೆಚ್ಚು ಗ್ರಾಹಕರಿದ್ದಾರೆ. ಈ ಪ್ರದೇಶದಲ್ಲಿ ಹೆಚ್ಚು ಮುಸ್ಲಿಮರಿದ್ದಾರೆ. ಸುಮ್ಮನೆ ಈ ರೀತಿಯ ಗಲಾಟೆಗಳನ್ನು ಬಿಟ್ಟು ಅವರವರ ಕೆಲಸ ಮಾಡಿಕೊಂಡರೆ ಒಳ್ಳೆಯದು. ಈಗ ಕೋವಿಡ್ ಇಲ್ಲದ ಕಾರಣ ಇದನ್ನು ಎತ್ತಿಕೊಂಡಿದ್ದಾರೆ. ಕೋವಿಡ್‌ ಸಮಯದಲ್ಲಿ ಎಷ್ಟೊಂದು ಸಮಸ್ಯೆಯಾಯಿತು. ಜನರು ಬದುಕಲು ಬಿಡಿ. ಮಕ್ಕಳನ್ನು ಓದಲು ಬಿಡಿ. ಈ ಗಲಾಟೆಗಳಿಂದ ಒಳ್ಳೆಯದಾಗಲ್ಲ. ಹಿಂದೂ ಮುಸ್ಲಿಂ ಗಲಭೆಗಳಾಗುತ್ತವೆ ಅಷ್ಟೇ” ‌ಎಂದು ಎಚ್ಚರಿಸಿದರು. ಅವರ ವಿಡಿಯೋ ನೋಡಿ.

ಮಸೀದಿಯ ಎದುರಲ್ಲೇ ನಂದಿನಿ ಹಾಲು ಉತ್ಪನ್ನ ಮಳಿಗೆ ಇದೆ. ಮಳಿಗೆಯಲ್ಲಿದ್ದ ಸುನಂದಾ ಅವರನ್ನು ಮಾತನಾಡಿಸಿದಾಗ, “ನನ್ನ ಯಜಮಾನರು ಸುಮಾರು 25 ವರ್ಷಗಳಿಂದ ಇಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ. ಹಿಂದೂ ಮುಸ್ಲಿಮರೆಲ್ಲ ಅಣ್ಣತಮ್ಮಂದಿರಂತೆ ಇದ್ದೇವೆ. ಮಸ್ಲಿಮರೇ ನಮ್ಮಲ್ಲಿ ಹೆಚ್ಚು ವ್ಯಾಪಾರ ಮಾಡುತ್ತಾರೆ. ನಮ್ಮ ಕೆಲಸವನ್ನು ನಾವು ನೋಡಿಕೊಳ್ಳಬೇಕು. ಬೇರೆಯವರಿಗೆ ತೊಂದರೆ ಕೊಡಬಾರದು. ಎಲ್ಲರೂ ನಮ್ಮಂಥೇ ಅಲ್ಲವೇ?” ಎಂದು ಪ್ರಶ್ನಿಸಿದರು.

ಬಸವನಗುಡಿ ಮಸೀದಿಗೆ ಎದುರಲ್ಲೇ ಇರುವ ನಂದಿನಿ ಉತ್ಪನ್ನಗಳ ಮಳಿಗೆಯ ವ್ಯಾಪಾರಿ ಸುನಂದಾ ಅವರು ‘ಹಿಂದೂ ಮುಸ್ಲಿಂ’ ಸಹೋದರತೆಯ ಕುರಿತು ತಿಳಿಸಿದರು.

ಹಣ್ಣು, ತರಕಾರಿ ಮಾರುವ ತಮಿಳುನಾಡಿನ ಸೆಲಂನ ಧನಲಕ್ಷ್ಮಿ ಅವರು ಮಸೀದಿ ಬದಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಬದುಕು ಕಂಡುಕೊಂಡಿದ್ದಾರೆ. ಮುಸ್ಲಿಂ ವ್ಯಾಪಾರಿಗಳಿಗೆ ಹಣ್ಣನ್ನು ಮಾರುತ್ತಲೇ ಮಾತಿಗಿಳಿದ ಅವರು, “ಒಂದು ದಿನ ಬರದಿದ್ದರೆ ಏನಾಯಿತೆಂದು ಇಲ್ಲಿನ ಮುಸ್ಲಿಮರು ವಿಚಾರಿಸುತ್ತಾರೆ” ಎಂದು ತಮ್ಮ ಬಾಂಧವ್ಯವನ್ನು ಹಂಚಿಕೊಂಡರು.

ಬಸವನಗುಡಿ ಮಸೀದಿ ಬಳಿ ತಮಿಳುನಾಡಿನ ಧನಲಕ್ಷ್ಮಿಯವರು ಕಳೆದ ಹತ್ತು ವರ್ಷಗಳಿಂದ ತರಕಾರಿ, ಹಣ್ಣುಗಳನ್ನು ಮಾರುತ್ತಾ ಜೀವನ ಕಂಡುಕೊಂಡಿದ್ದಾರೆ.

ಹಣ್ಣು ತರಕಾರಿ ಖರೀದಿಸುತ್ತಿದ್ದ ಸ್ಥಳೀಯ ನಿವಾಸಿ ಎಸ್‌.ಎ.ಖಾದರ್‌ ಮಾತಿಗಿಳಿದು, “ಇಲ್ಲಿ ಸಾಕಷ್ಟು ಮುಸ್ಲಿಂ ಅಂಗಡಿಗಳಿವೆ. ಆದರೆ ನಾನು ಇವರಲ್ಲಿಯೇ ಹತ್ತು ವರ್ಷಗಳಿಂದ ಖರೀದಿಸುತ್ತಿದ್ದೇನೆ” ಎಂದು ತಿಳಿಸಿದರು.

ಮುಸ್ಲಿಂ ಗ್ರಾಹಕ ಎಸ್.ಎ.ಖಾದರ್‌ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದರು.

ಸ್ಥಳೀಯ ನಿವಾಸಿ ಹಾಗೂ ವ್ಯಾಪಾರಿ ಅಹಮದ್ ಶರೀಫ್‌ ಪ್ರತಿಕ್ರಿಯಿಸಿ, “ನಮ್ಮ ಮಸೀದಿಯ ಬಳಿ ಯಾವ ಜಾತಿ, ಜನಾಂಗದವರು ಬಂದು ವ್ಯಾಪಾರ ಮಾಡಿದರೂ ಅಭ್ಯಂತರವಿಲ್ಲ. ಇದುವರೆಗೂ ನೀವು ಯಾವ ಜಾತಿಯವರು, ಯಾವ ಧರ್ಮದವರು ಎಂದು ನಾವು ಕೇಳಿಲ್ಲ” ಎಂದು ಸ್ಪಷ್ಟಪಡಿಸಿದರು.

“ನಮ್ಮನ್ನೆಲ್ಲ ದೇವರು ಸೃಷ್ಟಿ ಮಾಡಿದ್ದಾನೆ. ಗಾಳಿ, ನೀರು, ಭೂಮಿಯೆಲ್ಲ ದೇವರ ಸೃಷ್ಟಿ. ಸುನಾಮಿ ಬಂದರೆ, ಭೂಕಂಪವಾದರೆ, ಕೋವಿಡ್ ಬಂದರೆ ಹಿಂದೂ, ಮುಸ್ಲಿಂ ಎಂದು ನೋಡುತ್ತದೆಯೇ? ಎಲ್ಲರನ್ನೂ ಹೊತ್ತುಕೊಂಡು ಹೋಗುತ್ತದೆ. ದೇವರು ತಾರತಮ್ಯ ಮಾಡುತ್ತಿಲ್ಲ. ಸಾಯಿಸಿದರೆ ಒಟ್ಟಿಗೆ ಸಾಯಿಸುತ್ತಾನೆ, ಬದುಕಿಸಿದರೆ ಒಟ್ಟಿಗೆ ಬದುಕಿಸುತ್ತಾನೆ? ಇದನ್ನು ಸ್ವಲ್ಪ ಯೋಚನೆ ಮಾಡಿದರೆ ಸರಿಯಾಗುತ್ತದೆ. ಯೋಚನೆ ಮಾಡದವರು ಮಾತ್ರ ಹೀಗೆ ವರ್ತಿಸುತ್ತಾರೆ. ಶಿಕ್ಷಣ ಕಡಿಮೆ ಇದ್ದವರು ಧರ್ಮಗಳ ಜಗಳ ಮಾಡುತ್ತಿದ್ದಾರೆ. ಸರ್ಕಾರ ಎಲ್ಲರನ್ನೂ ಸಮಾನವಾಗಿ ನೋಡಬೇಕು. ಸ್ವಲ್ಪ ವಿಳಂಬ ಮಾಡುತ್ತಿದೆ. ನೋಡೋಣ, ದೇವರು ಬುದ್ಧಿಕೊಡಬಹುದು” ಎಂದು ನಿಟ್ಟುಸಿರು ಬಿಟ್ಟರು.

ಬಸವನಗುಡಿ ಮಸೀದಿ ಬಳಿಯ ಬೇಕರಿಯೊಂದರಲ್ಲಿ ಮಾತಿಗೆ ಸಿಕ್ಕ ಅಹಮದ್ ಶರೀಫ್‌

ಮಸೀದಿಗೆ ಸೇರಿದ ಮಳಿಗೆಯೊಂದರಲ್ಲಿ ಕಿಡ್ನಿ ಸ್ಟೋನ್‌ ಮೆಡಿಕಲ್‌ ಶಾಪ್ ನಡೆಸುತ್ತಿರುವ ಮಹಮ್ಮದ್ ರಫೀ ಮಾತನಾಡಿ, “ನಮ್ಮ ತಂದೆಯವರು ಕಳೆದ ಐವತ್ತು ವರ್ಷಗಳಿಂದ ಅಂಗಡಿಯನ್ನು ನಡೆಸುತ್ತಿದ್ದರು. ತಂದೆಯವರು ಮನೆಯಲ್ಲಿರುವುದರಿಂದ ಆಗಾಗ್ಗೆ ಬಂದು ಹೋಗುತ್ತೇನೆ. ಪಕ್ಕದಲ್ಲಿರುವವರು ಹಿಂದೂಗಳು. ಕಳೆದ ನಲವತ್ತು ವರ್ಷಗಳಿಂದ ನಮ್ಮ ಜೊತೆ ಇದ್ದಾರೆ. ಈ ಬದಿಯಲ್ಲಿರುವ ಮೊಬೈಲ್‌ ಅಂಗಡಿ ಮುಸ್ಲಿಮ್ ವ್ಯಕ್ತಿಗೆ ಸೇರಿದ್ದರೂ ಇಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಹೆಸರು ಪ್ರಕಾಶ್” ಎಂದು ಹೇಳುತ್ತಾ ಹಿಂದೂ ಮುಸ್ಲಿಂ ಏಕತೆಯನ್ನು ಉಳಿಸಬೇಕೆಂದು ಕೋರಿದರು.

ಬಸವನಗುಡಿ ಮಸೀದಿಗೆ ಸೇರಿದ ಮಳಿಗೆಯೊಂದರಲ್ಲಿ ಕಿಡ್ನಿ ಸ್ಟೋನ್‌ ಮೆಡಿಕಲ್‌ ಶಾಪ್ ನಡೆಸುತ್ತಿರುವ ಮಹಮ್ಮದ್ ರಫೀ ಮಾತನಾಡಿದರು.

ಪಕ್ಕದಲ್ಲೇ ಇದ್ದ ಮೊಬೈಲ್‌ ಶಾಪ್‌ನಲ್ಲಿ ಮಾತಿಗೆ ಸಿಕ್ಕ ಪ್ರಕಾಶ್ ಮೂಲತಃ ರಾಜಸ್ಥಾನದವರು. ಕಳೆದ ಒಂದು ವರ್ಷದಿಂದ ತನ್ನ ಮುಸ್ಲಿಂ ಗೆಳೆಯನೊಂದಿಗೆ ಈ ಅಂಗಡಿಯಲ್ಲಿ ಪಾಲುದಾರನಾಗಿದ್ದಾರೆ. ಅವರು ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. “ಇಲ್ಲಿ ನನಗೇನೂ ತೊಂದರೆಯಾಗಿಲ್ಲ. ಹಿಂದೂ ಮುಸ್ಲಿಂ ಎಲ್ಲರೂ ಚೆನ್ನಾಗಿದ್ದೇವೆ” ಎಂದು ಅವರು ತಮ್ಮ ಸಂತಸ ಹಂಚಿಕೊಂಡರು ಪ್ರಕಾಶ್.

ರಾಜಸ್ಥಾನ ಮೂಲದ ಪ್ರಕಾಶ್ ಅವರು ಬಸವನಗುಡಿಯ ಮಸೀದಿಗೆ ಸೇರಿದ ಮಳಿಗೆಯೊಂದರಲ್ಲಿ ಮುಸ್ಲಿಂ ಗೆಳೆಯನೊಂದಿಗೆ ಪಾಲುದಾರನಾಗಿ ವ್ಯಾಪಾರ ಮಾಡುದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿರಿ: 40% ಕಮಿಷನ್‌ ಸರ್ಕಾರದ ವಿರುದ್ಧ ಜನಜಾಗೃತಿಗೆ ರಾಜ್ಯ ಪ್ರವಾಸ: ಸಿದ್ದರಾಮಯ್ಯ ಘೋಷಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ಈಗ ಹಿಂದೂ ಮುಸ್ಲಿಂ ಸೌಹಾರ್ದ ತೆ ಬಗ್ಗೆ ಮಾತಾಡೋ ನಿಮ್ಮ ಪತ್ರಿಕೆ ಹಾಗೂ 61ಜನ ಸ್ವಯಂಘೋಷಿತ ಬುದ್ದಿಜೀವಿಗಳು ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ ಹಿಂದೂ ಮಹಿಳಾ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಿದಾಗ ಎಲ್ಲಿ ಇದ್ರೀ ಮುಸುರೆ ತಿನ್ಕೊಂಡು

  2. ಮುಸ್ಲಿಮರು ಮಂಗಳೂರಲ್ಲಿ ಎಂದೂ ಹಿಂದೂ ಮಹಿಳಾ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಲಿಲ್ಲ.

  3. ರಾಜು ಅವರೇ ನೀವು ಮುಸ್ಲಿಂ ವ್ಯಾಪಾರಿಗೆ ಬಹಿಷ್ಕಾರ ಹಾಕಿದ್ದು ಸರಿ,ಹಾಗೆಯೇ ಮುಸ್ಲಿಮರು ಕೂಡ ಬೆಂಗಳೂರಿನ ಮಸೀದಿ ಹತ್ತಿರದ ಹಿಂದೂ ವ್ಯಾಪಾರಿಗಳಿಗೆ ಬಹಿಷ್ಕಾರ ಹಕಬೇಕಾಗಿತ್ತು ಅಂತೀರಾ.ಹಾಗೆಯೇ ನಿಮ್ಮ ನಿಲುವು ಸರಿಯಾಗಿದ್ದರೆ ಹಿಂದೂ ವ್ಯಾಪಾರಿಗಳನ್ನ ಮಸೀದಿ ಹತ್ತಿರ ಮಾರಾಟ ಮಾಡಬೇಡಿ ಮುತ್ತು ರಂಝಾನ್ ಹಬ್ಬಕ್ಕೆ ಬಟ್ಟೆ ಬರೆ ಹಬ್ಬದ ಸಾಮಾನು ಮುಸ್ಲಿಮರಿಗೆ ಮಾರುವುದಿಲ್ಲ ಎಂದು ಹಿಂದೂ ಅಂಗಡಿಗಳ ಮುಂದೆ ಬೋರ್ಡ್ ಹಾಕಿಸಿ ನೋಡೋಣ.ನೀವು ನಿಜವಾದ ನ್ಯಾಯವಂತರದರೆ.

  4. ಈ ಲೇಖನ ಅರ್ಥಗರ್ಭಿತವಾಗಿದ್ದು. ವಿಚಾರ ಮಾಡಿಕೊಂಡು ಓದಿ…. ನಮ್ಮ ಭಾರತ ಜ್ಯಾತ್ಯಾತೀತ ರಾಷ್ಟ್ರ…. ಕನ್ನಡ ನಾಡು ಸುಂದರವಾದ ತೋಟವಿದ್ದಂತೆ. ಅಲ್ಲಿ ನಾನಾ ತರಹದ ಹೂವಿನ ಪರಿಮಳ ಪಸರಿಸುತ್ತದೆ…

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....