Homeಮುಖಪುಟಎಕ್ಸಿಟ್ ಪೋಲ್ (ಮತಗಟ್ಟೆ ಸಮೀಕ್ಷೆ): ಇವೆಷ್ಟು ನಿಖರ? ಎಷ್ಟು ಸಲ ಫೇಲಾದವು?

ಎಕ್ಸಿಟ್ ಪೋಲ್ (ಮತಗಟ್ಟೆ ಸಮೀಕ್ಷೆ): ಇವೆಷ್ಟು ನಿಖರ? ಎಷ್ಟು ಸಲ ಫೇಲಾದವು?

‘ದೇಶದಲ್ಲಿ ಹಿಂದಿನ ಎಕ್ಸಿಟ್ ಪೋಲ್‍ಗಳು ಅಪರೂಪಕ್ಕೊಮ್ಮೆ ನಿಖರವಾಗಿವೆ!

- Advertisement -
- Advertisement -

ಇದನ್ನು ನೀವು ಓದುವ ಹೊತ್ತಿಗಾಗಲೇ ಎಕ್ಸಿಟ್ ಪೋಲ್ ಅಂದರೆ ಚುನಾವಣೆ ನಂತರದ ಸಮೀಕ್ಷೆಗಳು ಹೊರಬೀಳಲು ಶುರು ಮಾಡಿರುತ್ತವೆ. ಭಾರತದಲ್ಲಿ ಇವತ್ತು ಹಲವಾರು ಸಂಸ್ಥೆಗಳು ಹಲವು ಚಾನೆಲ್‍ಗಳ ಸಹಭಾಗಿತ್ವದಲ್ಲಿ ಈ ಸಮೀಕ್ಷೆ ಮಾಡುತ್ತಿವೆ. ಇದರಲ್ಲಿ ಯಾರು ಹೆಚ್ಚು ವಿಶ್ವಾಸಾರ್ಹರು? ಅವುಗಳ ಹಿಂದಿನ ಸಾಧನೆಯನ್ನು ನೋಡಿದರೆ, ಒಂದು ನಿಖರ ಉತ್ತರ ಸಿಗಬಹುದು. ಆ ಪ್ರಯತ್ನ ಇಲ್ಲಿದೆ…

ಈ ಮೊದಲ ವಾಕ್ಯ ಓದಿ: ‘ದೇಶದಲ್ಲಿ ಹಿಂದಿನ ಎಕ್ಸಿಟ್ ಪೋಲ್‍ಗಳು ಅಪರೂಪಕ್ಕೊಮ್ಮೆ ನಿಖರವಾಗಿವೆ!
ಇದು ಒಟ್ಟಾಗಿ ಎಲ್ಲ ಎಕ್ಸಿಟ್ ಪೋಲ್‍ಗಳನ್ನು ಸಮೀಕರಿಸಿ ನೀಡಿದ ತೀರ್ಮಾನ. ಆದರೂ ಚುನಾವಣಾ ಪೂರ್ವ ಸಮೀಕ್ಷೆಗಳಿಗಿಂತ ಈ ಚುನಾವಣೋತ್ತರ ಸಮೀಕ್ಷೆಗಳೇ ( ಎಕ್ಸಿಟ್ ಪೋಲ್ಸ್) ಆದಷ್ಟು ಹತ್ತಿರ ಹತ್ತಿರದ ಸಂಖ್ಯೆಗಳನ್ನು ಕೊಡುತ್ತ ಬಂದಿವೆ.

ಎಕ್ಸಿಟ್ ಪೋಲ್ ನಡೆಸುವ ಬಹುಪಾಲು ಸಂಸ್ಥೆಗಳು ತಮ್ಮದು ನಿಖರ, ವಿಶ್ವಾಸಾರ್ಹ ಎನ್ನುತ್ತವೆ. ಈ ನಿಟ್ಟಿನಲ್ಲಿ ಕೆಲವು ಪ್ರಮುಖ ಸಮೀಕ್ಷಾ ಸಂಸ್ಥೆಗಳ ಟ್ರ್ಯಾಕ್ ರೆಕಾರ್ಡ್ ಏನು ಎಂದುದನ್ನು ನೋಡೋಣ…

• ಭಾರತದಲ್ಲಿ ಎಕ್ಸಿಟ್ ಪೋಲ್ ವಿಷಯಕ್ಕೆ ಬಂದರೆ 1996 ಮಹತ್ವದ ವರ್ಷ. ಆಗ ದೂರದರ್ಶನವು ‘ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವೆಲಪಿಂಗ್ ಸೊಸೈಟೀಸ್ ( ಸಿಎಸ್‍ಡಿಎಸ್)ಗೆ ಚುನಾವಣಾ ಸಮೀಕ್ಷೆ ಮಾಡಿಕೊಡಲು ಕೇಳಿತು. ( ಇದು ಯೋಗೇಂದ್ರ ಯಾದವ್ ಮತ್ತು ಸ್ನೇಹಿತರು ಹುಟ್ಟು ಹಾಕಿದ ಸಂಸ್ಥೆ). ಅದು ಅನೌಪಚಾರಿಕ ಸಮೀಕ್ಷೆಯಾಗಿದ್ದು, ಸಂಪೂರ್ಣ ಬಹುಮತದ ಕೊರತೆ, ಪ್ರಧಾನಿ ಅಭ್ಯರ್ಥಿ ಆಯ್ಕೆಯಲ್ಲಿ ಇಲ್ಲದ ಒಮ್ಮತದ ಕಾರಣದಿಂದಾಗಿ 1999ರವರೆಗೆ ದೇಶವು ಹಲವು ಚುನಾವಣೆಗಳನ್ನು ಕಾಣಲಿದೆ ಎಂದು ಈ ಸಮೀಕ್ಷೆ ಹೇಳಿತ್ತು.
ಆಗ ಸಿಎಸ್‍ಡಿಎಸ್ ಸಮೀಕ್ಷೆ ಸಾರಾಂಶದಲ್ಲಿ ನಿಜವಾಗಿತ್ತು. ಅತಂತ್ರ ಫಲಿತಾಂಶ ಬಂದು, ಆಗ ಲೋಕಸಭೆಯಲ್ಲಿ ದೊಡ್ಡ ಪಾರ್ಟಿಯಾದ ಬಿಜೆಪಿ ವಾಜಪೇಯಿ ನೇತೃತ್ವದಲ್ಲಿ ಎನ್‍ಡಿಎ ಸರ್ಕಾರ ರಚಿಸಿತ್ತು, ಅದರ ಆಯುಷ್ಯ 13 ದಿನವಾಗಿತ್ತು.

• 1998ರಲ್ಲಿ ದೇಶ ಮತ್ತೆ ಚುನಾವಣೆ ಎದುರಿಸಿದಾಗ ಎಲ್ಲ ಎಕ್ಸಿಟ್ ಪೋಲ್‍ಗಳು ಎನ್‍ಡಿಎ ಅಧಿಕಾರಕ್ಕೆ ಬರುವುದಾಗಿ ಭವಿಷ್ಯ ನುಡಿದಿದ್ದವು. ಇಂಡಿಯಾ ಟುಡೇ/ಸಿಎಸ್‍ಡಿಎಸ್, ಡಿಆರ್‍ಎಸ್, ಔಟ್‍ಲುಕ್/ ಎ.ಸಿ. ನೆಲ್ಸನ್ ಮತ್ತು ಫ್ರಂಟ್‍ಲೈನ್/ಸಿಎಂಎಸ್- ಈ ನಾಲ್ಕೂ ಪ್ರಮುಖ ಸಮೀಕ್ಷಾ ಕೂಟಗಳು ವಾಜಪೇಯಿ ನೇತೃತ್ವದಲ್ಲಿ ಎನ್‍ಡಿಎ ಸರಳ ಬಹುಮತ ದಾಟಿ ಆರಾಮಾಗಿ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದ್ದವು. ಆದರೆ, ವಾಜಪೇಯಿ ನೇತೃತ್ವದ ಕೂಟ 252 ಸೀಟು ಪಡೆದು ಬಹುಮತದ ಕೊರತೆ ಎದುರಿಸಿದರೆ, ಕಾಂಗ್ರೆಸ್ 166 ಸೀಟು ಪಡೆದಿತ್ತು.

• 1999ರಲ್ಲಿ ಕಾರ್ಗಿಲ್ ‘ಯುದ್ಧ’ದ ನಂತರ ಭಾರತ ಮತ್ತೆ ಹೊಸ ಪ್ರಧಾನಿಯ ಆಯ್ಕೆಗೆ ಹೋಗಿತ್ತು. ಆ ಚುನಾವಣೆಯಲ್ಲಿ ಎಲ್ಲ ಎಕ್ಸಿಟ್ ಪೋಲ್‍ಗಳು ಎನ್‍ಡಿಎಗೆ ಸ್ಪಷ್ಟ ಬಹುಮತ, 300ಕ್ಕೂ ಹೆಚ್ಚು ಸೀಟು ಎಂದಿದ್ದವು. ಕೊನೆಗೆ ಎನ್‍ಡಿಎಗೆ 296 ಸೀಟು ಸಿಕ್ಕಿದ್ದವು. ಕಾಂಗ್ರೆಸ್ಸೇತರ ಪಕ್ಷಗಳಿಗೆ 113 ಸೀಟು ಸಿಕ್ಕಿದ್ದವು.

• 2004ರ ಚುನಾವಣೆಯಲ್ಲಿ ವಾಜಪೇಯಿ ‘ಸಾಧನೆ’ ಇಟ್ಟಕೊಂಡು ‘ಇಂಡಿಯಾ ಶೈನಿಂಗ್’ ಪ್ರಚಾರ ಶುರುವಾಗಿತ್ತು. ಮತ್ತೆ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರ ಎಂದು ಎಲ್ಲ ಎಕ್ಸಿಟ್ ಪೋಲ್‍ಗಳು ಹೇಳಿದ್ದವು. ಆದರೆ, ಇದರಲ್ಲಿ ಫಲಿತಾಂಶ ಉಲ್ಟಾ ಹೊಡೆದಿತ್ತು, ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ದೊಡ್ಡ ಪಾರ್ಟಿಯಾಗಿ, ಯುಪಿಎ ಅಧಿಕಾರಕ್ಕೆ ಬಂದಿತ್ತು.

• 2004ರಿಂದ 2009ರವರೆಗೆ ಮನಮೋಹನಸಿಂಗ್ ಸರ್ಕಾರ. 2009ರಲ್ಲಿ ಮತ್ತೆ ಚುನಾವಣೆ. 2004ರಲ್ಲಿ ಮಾಡಿದ್ದ ತಪ್ಪು ನೆನಪಿಸಿಕೊಂಡ ಸಮೀಕ್ಷಾ ಕಂಪನಿಗಳು, ಆ ಸಲ ಯುಪಿಎ ಮತ್ತು ಎನ್‍ಡಿಎ ನಡುವೆ ನೆಕ್-ಟು-ನೆಕ್ ಸ್ಪರ್ಧೆ ಎಂದು ಹೇಳಿದ್ದವು. ಆದರೆ ಫಲಿತಾಂಶ ಅವುಗಳ ಪಾಲಿಗೆ ಮತ್ತೆ ಉಲ್ಟಾ ಹೊಡೆದಿತ್ತು. ಎ.ಸಿ. ನೆಲ್ಸನ್ ಸಮೀಕ್ಷೆ ಎನ್‍ಡಿಎಗೆ 197, ಯುಪಿಎಗೆ 199 ಸೀಟು ಎಂದು ಹೇಳಿತ್ತು. ಆದರೆ ಫಲಿತಾಂಶದಲ್ಲಿ ಯುಪಿಎಗೆ 262 ಸೀಟು, ಎನ್‍ಡಿಎಗೆ 159 ಸೀಟು ದಕ್ಕಿದ್ದವು. ಕಾಂಗ್ರೆಸ್ 2004ರಲ್ಲಿ ಗೆದ್ದಿದ್ದಕ್ಕಿಂತ 80 ಸೀಟು ಹೆಚ್ಚು ಗೆದ್ದಿದ್ದರೆ, ಎನ್‍ಡಿಎ 30 ಸೀಟು ಕಡಿಮೆ ಗೆದ್ದಿತ್ತು.

• 2014ರಲ್ಲಿ ಯುಪಿಎ ಭ್ರಷ್ಟಾಚಾರ ಮತ್ತು ಮೋದಿ ಹವಾ ಮುಖ್ಯ ವಸ್ತು ಆಗಿದ್ದವು. ಆಗ ಎಲ್ಲ ಎಕ್ಸಿಟ್ ಪೋಲ್‍ಗಳು ಹೇಳಿದಂತೆ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದಿತು. ಆದರೆ ಆಗ ಎರಡು ಸರ್ವೆ ಮಾತ್ರ ಬಿಜೆಪಿಗೆ 280ರಷ್ಟು ಸೀಟು ಬರುವುದನ್ನು ಹೇಳಿದ್ದವು. ಹಾಗೆಯೇ ಕಾಂಗ್ರೆಸ್ 50ರ ಕೆಳಗೆ ಕುಸಿಯಬಹುದು ಎಂಬುದನ್ನು ಯಾವ ಸರ್ವೆಯೂ ಹೇಳಿರಲಿಲ್ಲ.

• ಒಟ್ಟಿನಲ್ಲಿ ಎಕ್ಸಿಟ್ ಪೋಲ್‍ಗಳು ಪಕ್ಕಾ ನಿಖರ ಫಲಿತಾಂಶ ಕೊಟ್ಟಿದ್ದು ಕಡಿಮೆ. ವಿವಿಧ ರಾಜ್ಯಗಳ ಚುನಾವಣಾ ಸಮೀಕ್ಷೆಗಳಲ್ಲೂ ಇದು ವ್ಯಕ್ತವಾಗಿದೆ. ಹಾಗಾಗಿ, ಈ ಎಕ್ಸಿಟ್ ಪೋಲ್‍ಗಳು ಫೈನಲ್ ಅಲ್ಲ, ಅವು ಅಪರೂಪಕ್ಕೊಮ್ಮೆ ನಿಖರ ಆಗಿವೆ. ಆದರೆ ಟ್ರೆಂಡ್ ಗುರುತಿಸಲು ಕೆಲವೊಮ್ಮೆ ಸಹಾಯವಾಗಿರಬಹುದು.

ಜನಪ್ರಿಯ ಅನಿಸಿಕೆ ಅಥವಾ ಪಾಪುಲರ್ ಮೂಡ್ ಆಧಾರದಲ್ಲಿ ಈ ಸಮೀಕ್ಷೆಗಳು ತಮ್ಮ ಸಂಖ್ಯೆಗಳನ್ನು ನೀಡುತ್ತ ಬಂದಿವೆಯಾ? ಹಾಗಿದ್ದಲ್ಲಿ ಇವತ್ತೂ ಅದನ್ನೇ ಹೇಳಿವೆಯಾ? ಯಾವುದಕ್ಕೂ ಮೇ 23ರ ಫಲಿತಾಂಶವೇ ಫೈನಲ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...