Homeಕರ್ನಾಟಕಎಕ್ಸಿಟ್ ಪೋಲ್ಸ್ ಹೊರ ಹಾಕಿದ ‘ಸರ್‍ಪ್ರೈಸ್’ಗಳು... ಈ ಪೋಲ್ಸ್ ಬಗ್ಗೆ ಅನುಮಾನ ಏಕೆಂದರೆ.....

ಎಕ್ಸಿಟ್ ಪೋಲ್ಸ್ ಹೊರ ಹಾಕಿದ ‘ಸರ್‍ಪ್ರೈಸ್’ಗಳು… ಈ ಪೋಲ್ಸ್ ಬಗ್ಗೆ ಅನುಮಾನ ಏಕೆಂದರೆ…..

ಆದರೆ, 2004 ಮತ್ತು 2009ರ ಲೋಕಸಭಾ ಚುನಾವಣೆಗಳಲ್ಲಿ ಈ ಸಂಸ್ಥೆಗಳು ಬಿಜೆಪಿ ಪರವಾಗಿಯೇ ಸಮೀಕ್ಷೆ ‘ರೂಪಿಸಿದ್ದವು’ ಮತ್ತು ಇದೇ ಚಾನೆಲ್‍ಗಳು ತುತ್ತೂರಿ ಊದಿದ್ದವು. ‘ಗ್ರೇಟ್ ಲೀಡರ್’ ವಾಜಪೇಯಿ 2004ರಲ್ಲಿ ಮಕಾಡೆ ಮಲಗಿದರು.

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |

ಎಕ್ಸಿಟ್ ಪೋಲ್ಸ್ ಮತ್ತೆ ಮೋದಿಯೇ ಪ್ರಧಾನಿ ಎಂಬರ್ಥದಲ್ಲಿ ಬಂದಿವೆ. ಆದರೆ, ಇವು ಹಲವು ‘ಸರ್‍ಪ್ರೈಸ್’ ಅಂಶಗಳನ್ನೂ ನಮ್ಮ ಮುಂದಿಟ್ಟಿವೆ. 2014ರಲ್ಲಿ ಮೋದಿ ಹವಾ ಇದ್ದಾಗ ಈ ಎಲ್ಲ ಪೋಲ್ಸ್ ಹೆಚ್ಚೂ-ಕಡಿಮೆ ಸತ್ಯವನ್ನೇ ನುಡಿದಿದ್ದವು. ಆದರೆ 2004, 2009 ರಲ್ಲಿ ಇವು ನೀಡಿದ ಫಲಿತಾಂಶ ಉಲ್ಟಾಪಪ್ಟಾ ಆಗಿತ್ತು. ಈ ಸಲವೂ ಹಾಗೇಕೆ ಆಗಬಾರದು ಎಂಬ ಪ್ರಶ್ನೆ ಇಟ್ಟುಕೊಂಡೇ, ಈ ಸಲದ ಪೋಲ್ಸ್‍ಗಳ ಕುರಿತು ಒಂದು ಬರಹ ಇಲ್ಲಿದೆ…

ಬಿಜೆಪಿ ಪರವಾದ ಒಂದು ಸಣ್ಣ ಸುದ್ದಿ ಬಂದರೂ ಪಟಾಕಿ ಹೊಡೆಯುವ ‘ಮೋದಿ ಭಕ್ತರೇ’ ಎಕ್ಸಿಟ್ ಪೋಲ್ ಬಂದ ಮೇಲೂ ಅಂತಹ ಉತ್ಸಾಹ ತೋರಿಲ್ಲ! ಯಡಿಯೂರಪ್ಪ ಬಿಟ್ಟರೆ ಉಳಿದವರಿಗೆ ಈ ಎಕ್ಸಿಟ್ ಪೋಲ್ ಉತ್ಸಾಹವನ್ನೇನೂ ಕೊಟ್ಟಂತಿಲ್ಲವಲ್ಲ? ಆದರೆ, ಬಿಜೆಪಿಯೇ ಅಧಿಕಾರದಲ್ಲಿ ಇರಲಿ ಎಂದು ಬಯಸುವ ಶೇರು ಮಾರುಕಟ್ಟೆಯಲ್ಲಿ ಈ ಸಂಭ್ರಮ ಕಂಡಿದೆ.

ವಿಷಯ ಏನೆಂದರೆ, ಈ ಎಕ್ಸಿಟ್ ಪೋಲ್‍ಗಳ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಆದರೆ, ‘ಬುದ್ಧಿವಂತರು’ ನಡೆಸುವ ಸ್ಟಾಕ್ ಮಾರ್ಕೆಟ್ ಹುಚ್ಚೆದ್ದು ಕುಣಿದಿದೆ. ಅದಕ್ಕೂ ಗೊತ್ತು ಈ ಎಕ್ಸಿಟ್ ಪೋಲ್ ನಮಗಾಗಿಯೇ ಮಾಡಿದ್ದು ಎಂದು… ಮೂರು-ನಾಲ್ಕು ದಿನಗಳ ವಹಿವಾಟು ಎಂದರೆ ಅದು 20 ಲಕ್ಷ ಕೋಟಿಗಳ ದಂಧೆ!ಇದನ್ನೆಲ್ಲ ಬಿಡೋಣ… ಈಗ ನೇರವಾಗಿ ಎಕ್ಸಿಟ್ ಪೋಲ್ ಹೇಳಿದ್ದು ಸತ್ಯಕ್ಕಿಂತ ಹೇಗೆ ದೂರ ಎಂದು ನೋಡೋಣ….

ರಾಜ್ಯ ಬಿಜೆಪಿ 18-24: ಎಲ್ಲಿಂದ ಹೆಚ್ಚುವರಿ ಗಳಿಕೆ?

ಕರ್ನಾಟಕದಲ್ಲಿ 28ರಲ್ಲಿ ಬಿಜೆಪಿ 18-24ರವರೆಗೂ ಸೀಟು ಗೆಲ್ಲುವುದಂತೆ! ಇದು ಬಿಜೆಪಿಯ ಕಾರ್ಯಕರ್ತರಿಗೇ ‘ಭಯ’ ಹುಟ್ಟಿಸುವ ನ್ಯೂಸ್! ಎಲ್ಲಿಂದ ಅವರು ಗೆಲ್ಲುತ್ತಾರೆ? ಕಳೆದ ಸಲ 17 ಗೆದ್ದಿದ್ದರು. ಈಗ ಅದಕ್ಕಿಂತ ಹೆಚ್ಚುವರಿಯಾಗಿ ಗೆಲ್ಲಬಹುದಾದ 3-5 ಕ್ಷೇತ್ರ ಇವೆಯಾ? ಇದುವರೆಗಿನ ಅಂದಾಜಿನಂತೆ ಕೆಲವು ಬಿಜೆಪಿ ಎಂಪಿಗಳು ಸೋಲಬಹುದು. ಈ ಸೋತ ಕ್ಷೇತ್ರಗಳನ್ನು ಕವರ್ ಮಾಡಿಕೊಂಡು 20-23 ತಲುಪಲು ಬಿಜೆಪಿ ಹೊಸ ಕ್ಷೇತ್ರಗಳನ್ನು ಗೆಲ್ಲಬೇಕಲ್ಲ? ಇನ್ನೊಂದು ವಿಷಯ, ಸಮೀಕ್ಷೆ ಮಾಡಿದ ಸಂಸ್ಥೆ ಮತ್ತು ಅದರ ಸಹಭಾಗಿಯಾಗಿ ಅದನ್ನು ಪ್ರಕಟಿಸಿದ ಚಾನೆಲ್‍ಗಳ ಪ್ರಕಾರ, 2014ರ ಲೆಕ್ಕದಲ್ಲಿ ಇಲ್ಲಿ 17 ಬಿಜೆಪಿ ಸಂಸದರು ಇದ್ದಾರೆ! ಬಳ್ಳಾರಿಯಲ್ಲಿ 2 ಲಕ್ಷಕ್ಕೂ ಅಧಿಕ ಮತಗಳಿಂದ ಸೋತ ಮೇಲೆ ಬಿಜೆಪಿ ಸಂಸದರ ಸಂಖ್ಯೆ 16… ಈ ಪ್ರಾಥಮಿಕ ಅಂಕಿಸಂಖ್ಯೆಯ ತಿಳುವಳಿಕೆ ಇಲ್ಲದವರು ಅದೆಂತಹಾ ಸಮೀಕ್ಷೆ ಮಾಡಿದರು… ಅದನ್ನು ಫ್ಯಾಕ್ತುವಲ್ ಎರರ್ ಅಂದುಕೊಳ್ಳಲೂ ಆಗಲ್ಲ. ಏಕೆಂದರೆ, ಇಲ್ಲಿ ಮೈತ್ರಿಯ ಪರಿಣಾಮವಾಗಿಯೇ ಬಳ್ಳಾರಿಯಲ್ಲಿ ದೊಡ್ಡ ಲೀಡ್ ಬಂದಿದ್ದು ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಮತ್ತು ನಿತ್ಯ ಸಿಎಂ ಆಕಾಂಕ್ಷಿ ಯಡಿಯೂರಪ್ಪನವರ ಸ್ವಂತ ಕ್ಷೇತ್ರದಲ್ಲಿ ಅವರ ಮಗ ಜೆಡಿಎಸ್ ವಿರುದ್ಧ ಕೇವಲ 50 ಸಾವಿರ ಓಟುಗಳಿಂದ ಗೆದ್ದರಲ್ಲವೇ? ಅದು ಮೈತ್ರಿಯ ಎಫೆಕ್ಟ್ ಅಲ್ಲವೇ?

ಎಕ್ಸಿಟ್ ಪೋಲ್ಸ್ ಪ್ರಕಾರ, ಸದ್ಯ ಇಲ್ಲಿ ಮೈತ್ರಿಯ ಪ್ರಭಾವ ಇಲ್ಲ, ಓಕೆ ಎನ್ನೋಣ… ಬಿಜೆಪಿಗೆ ಹೆಚ್ಚುವರಿ ಸೀಟು ಗೆಲ್ಲಲು ಕಾರಣವಾದ ಅಂಶವೂ ನಮಗೆ ಕಾಣುತ್ತಿಲ್ಲವಲ್ಲ?

ಆಶ್ಚರ್ಯಗಳು, ಪ್ರಶ್ನೆಗಳು, ಸಂಶಯಗಳು
ಹೀಗಾಗಿ, ಈಗ ಪ್ರಕಟವಾಗಿರುವ ಎಕ್ಸಿಟ್ ಪೋಲ್ಸ್‍ಗಳ ಮೆಥಡಾಲಜಿಯ ಬಗ್ಗೆಯೇ ಒಂದು ಸಂಶಯ ಶುರುವಾಗಿದೆ… ಹಾಗಂತ, ಇದೇನೂ ಮೊದಲಲ್ಲ, ಹಲವಾರು ರಾಜ್ಯ ವಿಧಾನಸಭೆಗಳ ಚುನಾವಣೆಗಳ ಸಂದರ್ಭದಲ್ಲೂ ಈ ಸಮೀಕ್ಷೆಗಳು ನೆಗೆದು ಬಿದ್ದಿವೆ. ಹಾಗಿದ್ದರೂ, ಇವು ಮತ್ತೆ ಮತ್ತೆ ‘ತಾವು ಅಕ್ಯುರೇಟ್’ ಎಂದು ನಮ್ಮ ಮುಂದೆ ಬರುತ್ತಿವೆ. ಅಷ್ಟಕ್ಕೂ, ಯಾರಿದು ಸಿ-ವೋಟರ್? ಯಾವುದಿದು ನೆಲ್ಸನ್? ಟುಡೆಸ್ ಚಾಣಕ್ಯದ ಹಿನ್ನೆಲೆಯೇನು? ಈ ಕುರಿತಾಗಿ ಯಾವುದೂ ಪಾರದರ್ಶಕವಾಗೇ ಇಲ್ಲ. ಈ ಎಲ್ಲ ಬಿಸಿನೆಸ್ ಕಂಪನಿಗಳು (ದಂಧೆಕೋರರು) ನಮ್ಮ ಮುಂದೆ ಹಾಜರಾಗುವುದು ಚಾನೆಲ್‍ಗಳ ಮೂಲಕ! ಈ ಚಾನೆಲ್‍ಗಳೇ ಈಗ ಎಕ್ಸಿಟ್ ಪೋಲ್ಸ್ ದಂಧೆಯ ಸಾರ್ವಜನಿಕ ಮುಖಗಳು….

ದಲ್ಲಾಳಿಗಳು ಅನ್ನಬಾರದೇಕೆ? ನಿನ್ನೆ ಎಕ್ಸಿಟ್ ಪೋಲ್ ಪ್ರಕಟವಾದ ನಂತರ ಸ್ಟಾಕ್ ಮಾರ್ಕೆಟಿನಲ್ಲಿ ಸಂಭ್ರಮ! ಅದಾನಿ ಕಂಪನಿಗಳ ಶೇರು ವಹಿವಾಟಿನಲ್ಲಿ ಶೇ.13ರಷ್ಟು ಹೆಚ್ಚಳ!

ಎನ್‍ಡಿಎಗೆ ಅತಿ ಹೆಚ್ಚು ಸೀಟು 345 ಇದ್ದರೆ, ಉಳಿದ ಬಹುತೇಕ ಸಂಸ್ಥೆಗಳು 300ಕ್ಕೂ ಹೆಚ್ಚು ನೀಡಿವೆ. ಎನ್‍ಡಿಎಗೆ 240-260 ರ ಸಂಖ್ಯೆಯನ್ನು ಎರಡೇ ಎರಡು ಕಂಪನಿ ನೀಡಿವೆ… ಸರಾಸರಿ 300 ದಾಟದೇ ಇರುತ್ತಾ?
ಇವುಗಳಲ್ಲಿ ನಿರ್ದಿಷ್ಟ ಪಕ್ಷದ ಪರವಾಗಿ ಸಮೀಕ್ಷೆಯನ್ನು ರೂಪಿಸಿಕೊಡುವುದಕ್ಕಾಗಿ ಸಿಕ್ಕಿ ಹಾಕಿಕೊಂಡಿದ್ದ ಸಿ-ವೋಟರ್ ಇದೆ.

ಪುಣ್ಯಕ್ಕೆ ‘ಪ್ರಜಾವಾಣಿ’ಯಾದರೂ, ಸಮೀಕ್ಷೆಗಳು ನಿಜವಾದ ನಿದರ್ಶನಗಳು ಕಡಿಮೆ’ ಎಂದು ಮುಖಪುಟದ ಟೈಟಲ್ಲಿನಲ್ಲಿ ಹಾಕಿದೆ…

Statistics ಎಂಬ ಆಟ!
Probability ಅನ್ನೋ ಜೂಜು!

ಈಗ ಮತ್ತೆ ನಿನ್ನೆಯ ಎಕ್ಸಿಟ್ ಪೋಲ್‍ಗೆ ಬರೋಣ. ಅವು ಹತ್ತಿರಕ್ಕೆ ಸಮೀಪ ಇರಬಹುದು, ಸರಿ ಒಪ್ಪೋಣ. ಆದರೆ ಅದನ್ನೆಲ್ಲ ವೈಜ್ಞಾನಿಕ, ಗಣಿತಶಾಸ್ತ್ರೀಯ ಮಾನದಂಡ, ಅಲ್ಗೋರಿಥಮ್‍ಗಳ ನೆರವಿನಿಂದ ಮಾಡಲಾಗಿದೆ ಎಂದು ಬೊಬ್ಬೆ ಹೊಡೆಯಲಾಗುತ್ತಿದೆ. ಈ ಎಕ್ಸಿಟ್ ಪೋಲ್‍ಗಳಿಗೆ ಮಹಾ ಯಶಸ್ಸು ಅಂತಾ ಸಿಕ್ಕಿದ್ದರೆ, ಅದು 2014ರ ಚುನಾವಣೆಯಲ್ಲಿ… ನಿಖರ ಸಂಖ್ಯೆ ಹೇಳಲಾಗದಿದ್ದರೂ, ಈ ಸಲ ಮೋದಿ ಸರ್ಕಾರವೇ ಅಂತಾ ಜನರೇ ಹೇಳುತ್ತಿದ್ದರು. (ಹಾಗೆ ಅವರನ್ನು ಮಾಧ್ಯಮಗಳು, ಸುಶಿಕ್ಷಿತರು ನಂಬಿಸಿದ್ದರು!)… ಜನರು ಹೇಳಿದ್ದನ್ನೇ ಈ ಪೋಲ್‍ಗಳು ಹೇಳಿದ್ದವು.

ಆದರೆ, 2004 ಮತ್ತು 2009ರ ಲೋಕಸಭಾ ಚುನಾವಣೆಗಳಲ್ಲಿ ಈ ಸಂಸ್ಥೆಗಳು ಬಿಜೆಪಿ ಪರವಾಗಿಯೇ ಸಮೀಕ್ಷೆ ‘ರೂಪಿಸಿದ್ದವು’ ಮತ್ತು ಇದೇ ಚಾನೆಲ್‍ಗಳು ತುತ್ತೂರಿ ಊದಿದ್ದವು. ‘ಗ್ರೇಟ್ ಲೀಡರ್’ ವಾಜಪೇಯಿ 2004ರಲ್ಲಿ ಮಕಾಡೆ ಮಲಗಿದರು. 2009ರಲ್ಲಿ ಮನಮೋಹನಸಿಂಗ್‍ರನ್ನು ಜರಿದು, ಅವಮಾನ ಮಾಡಿದ ಮೇಲೂ, ಈ ಸಲ ಎನ್‍ಡಿಎ ಎಂದು ಹೇಳಿದ್ದ ಸಮೀಕ್ಷೆಗಳು ಬಕ್ಕಬರಲು ಮಲಗಿದ್ದವು!
ಈ ದೇಶದಲ್ಲಿ ಈಗ ಸಮೀಕ್ಷೆಯೂ ಒಂದು ದಂಧೆಯಾಗಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...