HomeಚಳವಳಿExplainer: ವೋಟರ್ ಐಡಿಯೊಂದಿಗೆ ಆಧಾರ್ ಲಿಂಕ್ ಮಾಡುವ ಮಸೂದೆಯ ಸಾಧಕ-ಬಾಧಕಗಳು

Explainer: ವೋಟರ್ ಐಡಿಯೊಂದಿಗೆ ಆಧಾರ್ ಲಿಂಕ್ ಮಾಡುವ ಮಸೂದೆಯ ಸಾಧಕ-ಬಾಧಕಗಳು

- Advertisement -
- Advertisement -

ಲೋಕಸಭೆಯಲ್ಲಿ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ 2021 ಅನ್ನು ವಿಪಕ್ಷಗಳ ವಿರೋಧದ ನಡುವೆಯೂ ಅಂಗೀಕರಿಸಲಾಗಿದೆ. ಈ ಮಸೂದೆಯು ಮತದಾರರ ಪಟ್ಟಿಯನ್ನು ಆಧಾರ್‌ ಜೊತಗೆ ಜೋಡಿಸುವ ಉದ್ದೇಶವನ್ನು ಹೊಂದಿದೆ. ಮಸೂದೆಯನ್ನು ಕಾನೂನು ಸಚಿವ ಕಿರಣ್ ರಿಜಿಜು ಅವರು ಮಂಡಿಸಿದ್ದು, ಮಸೂದೆಯ ಭಾಗವಾಗಿರುವ ವಿವಿಧ ಪ್ರಸ್ತಾವನೆಗಳನ್ನು ಕಾನೂನು ಮತ್ತು ಸಿಬ್ಬಂದಿಗಳ ಸ್ಥಾಯಿ ಸಮಿತಿಯು ಶಿಫಾರಸ್ಸು ಮಾಡಿದೆ. ಇದು ಚುನಾವಣಾ ವ್ಯವಸ್ಥೆಯನ್ನು ಶುದ್ಧೀಕರಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ. 

ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ-2021 ಎಂದರೇನು?

ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ-2021 ಮತದಾರರಾಗಿ ನೋಂದಾಯಿಸಲು ಬಯಸುವ ಜನರಿಂದ ಅವರ ಗುರುತನ್ನು ದೃಢಪಡಿಸಲು ಆಧಾರ್ ಸಂಖ್ಯೆಯನ್ನು ಪಡೆಯುವ ಅಧಿಕಾರವನ್ನು ಚುನಾವಣಾ ಅಧಿಕಾರಿಗಳಿಗೆ ನೀಡುತ್ತದೆ. ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ದೃಢೀಕರಿಸುವುದಕ್ಕಾಗಿ ಈಗಾಗಲೇ  ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿರುವ ಜನರಿಂದಲೂ ಆಧಾರ್ ಸಂಖ್ಯೆಗಳನ್ನು ಪಡೆದುಕೊಳ್ಳಲು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಈ ಮಸೂದೆ ಅವಕಾಶ ನೀಡುತ್ತದೆ. 

ಒಂದು ಕ್ಷೇತ್ರ ಅಥವಾ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಒಬ್ಬನೇ ವ್ಯಕ್ತಿಯು ಒಂದಕ್ಕಿಂತಲೂ ಹೆಚ್ಚು ಮತದಾರ ಗುರುತಿನ ಚೀಟಿಯನ್ನು ಹೊಂದುವುದನ್ನು ಇದು ತಡೆಯುತ್ತದೆ ಎಂದು ಹೇಳಲಾಗಿದೆ. 

ಮಸೂದೆ ಕುರಿತು ಮಾತನಾಡಿದ ಸಚಿವ ರಿಜಿಜು, ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡುವುದು ಸ್ವಯಂಪ್ರೇರಿತವಾಗಿರುತ್ತದೆ. ತಿದ್ದುಪಡಿ ಮಸೂದೆಯು “ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಯಾವುದೇ ಅರ್ಜಿಯನ್ನು ನಿರಾಕರಿಸುವಂತಿಲ್ಲ. ಆಧಾರ್‌ ನೀಡದ ಕಾರಣಕ್ಕಾಗಿ ಮತದಾರರ ಪಟ್ಟಿಯಲ್ಲಿನ ಯಾವುದೇ ನಮೂದುಗಳನ್ನು ಅಳಿಸಲಾಗುವುದಿಲ್ಲ. ಆಧಾರ್‌ ನೀಡಲು ವಿಫಲರಾದಂತಹ ಜನರು ಸೂಚಿಸಬಹುದಾದಂತೆ ಇತರ ದಾಖಲೆಗಳನ್ನು ಒದಗಿಸಲು ಅನುಮತಿಸಲಾಗುವುದು” ಎಂದು ಹೇಳಿದ್ದಾರೆ.

ತಿದ್ದುಪಡಿಗಳ ಅಡಿಯಲ್ಲಿ ಪ್ರಸ್ತಾಪಿಸಲಾದ ವಿಷಯಗಳು

ಈ ಮಸೂದೆಯ ಮೂಲಕ ಪ್ರಜಾಪ್ರತಿನಿಧಿ ಕಾಯಿದೆ 1950 ಮತ್ತು 1951 ರ ವಿವಿಧ ವಿಭಾಗಗಳಿಗೆ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ. ಮಸೂದೆಯ ಉದ್ದೇಶ ಮತ್ತು ಕಾರಣಗಳ ಹೇಳಿಕೆಯು RP ಕಾಯಿದೆ 1950ರ ಸೆಕ್ಷನ್ 23ಕ್ಕೆ ತಿದ್ದುಪಡಿ ಮಾಡಿ, ಮತದಾರರ ಪಟ್ಟಿಯ ಡೇಟಾವನ್ನು ಆಧಾರ್‌ ಲಿಂಕ್ ಮಾಡಲು ಅನುಮತಿಸಲಾಗುತ್ತದೆ.

ಆರ್‌ಪಿ ಕಾಯಿದೆ, 1950ರ ಸೆಕ್ಷನ್ 14ಕ್ಕೆ ಮಾಡಲಾಗುವ ತಿದ್ದುಪಡಿಯು ಅರ್ಹ ಜನರು ಮತದಾರರಾಗಿ ನೋಂದಾಯಿಸಲು ನಾಲ್ಕು ಅರ್ಹತಾ ದಿನಾಂಕಗಳನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಉದಾ: ಪ್ರಸ್ತುತ ಜನವರಿ 1ನ್ನು ತೆಗೆದುಕೊಂಡರೆ. ಈಗಿನಂತೆ, ಜನವರಿ 1 ರಂದು ಅಥವಾ ಅದಕ್ಕಿಂತ ಮೊದಲು 18 ವರ್ಷ ತುಂಬುವ ಜನರು ಮತದಾರರಾಗಿ ನೋಂದಾಯಿಸಿಕೊಳ್ಳಬಹುದು. ಆದರೆ ಜನವರಿ 1 ರ ನಂತರ 18 ವರ್ಷ ವಯಸ್ಸಿನವರು ನೋಂದಣಿಗಾಗಿ ಇಡೀ ವರ್ಷ ಕಾಯುತ್ತಾರೆ. ಹೀಗಾಗಿ, ಈ ಮಸೂದೆಯು ಜನವರಿ 1 ನೇ ದಿನ, ಏಪ್ರಿಲ್ 1 ನೇ ದಿನ, ಜುಲೈ 1 ನೇ ದಿನ ಮತ್ತು ಅಕ್ಟೋಬರ್ 1 ನೇ ದಿನವನ್ನು ಅರ್ಹತಾ ದಿನಾಂಕಗಳಾಗಿ ನಿಗದಿ ಪಡಿಸಲು ಪ್ರಸ್ತಾಪಿಸುತ್ತದೆ.

ಆರ್‌ಪಿ ಆಕ್ಟ್, 1950ರ ಸೆಕ್ಷನ್ 20ರ ಮತ್ತು ಆರ್‌ಪಿ ಆಕ್ಟ್, 1951ರ ಸೆಕ್ಷನ್ 60ರ  ತಿದ್ದುಪಡಿಯು ಸೇವಾ ಮತದಾರರಿಗೆ ಚುನಾವಣೆಗಳಲ್ಲಿ ಲಿಂಗ-ತಟಸ್ಥ  ಮಾಡಲು ಪ್ರಯತ್ನಿಸುತ್ತದೆ. ತಿದ್ದುಪಡಿಯು ಕಾನೂನುಗಳನ್ನು ಲಿಂಗ-ತಟಸ್ಥಗೊಳಿಸಲು ‘ಹೆಂಡತಿ’ ಪದವನ್ನು ‘ಸಂಗಾತಿ’ ಎಂದು ಬದಲಿಸುತ್ತದೆ.

ಆರ್‌ಪಿ ಆಕ್ಟ್, 1950ರ ಸೆಕ್ಷನ್ 28 ರಲ್ಲಿ ಪ್ರಸ್ತಾಪಿಸಲಾದ ತಿದ್ದುಪಡಿಯು ಆಧಾರ್ ಸಂಖ್ಯೆಯನ್ನು ತಿಳಿಸುವ ರೂಪ ಮತ್ತು ವಿಧಾನ ಮತ್ತು ಆಧಾರ್ ಬದಲಿಗೆ ಒದಗಿಸಬೇಕಾದ ಪರ್ಯಾಯ ದಾಖಲೆಗಳ ಕುರಿತು ಸಾಕಷ್ಟು ಕಾರಣಗಳನ್ನು ಒದಗಿಸುವಿಕೆಯ ಬಗ್ಗೆ ಕೇಂದ್ರ ಸರ್ಕಾರವು ನಿಯಮಗಳನ್ನು ರೂಪಿಸಿದಾಗ ತಿಳಿಯುತ್ತದೆ ಎಂದು ಸ್ಪಷ್ಟಪಡಿಸುತ್ತದೆ. ಈ ನಿಟ್ಟಿನಲ್ಲಿ ಮತ್ತು ಅಧಿಕೃತ ಗೆಜೆಟ್‌ನಲ್ಲಿ ತಿದ್ದುಪಡಿಯನ್ನು ತಿಳಿಸುತ್ತದೆ.

ವಿರೋಧ, ಕಾನೂನು ಮತ್ತು ರಾಜಕೀಯ

ಮಸೂದೆಯನ್ನು ಪರಿಚಯಿಸುವ ಸಂದರ್ಭದಲ್ಲಿ, ಕಾನೂನು ಸಚಿವ ರಿಜಿಜು ಅವರು ಮತದಾರರ ಪಟ್ಟಿಯಿಂದ ನಕಲಿ ಮತದಾರರನ್ನು ತೆಗೆದುಹಾಕುವ ಅಗತ್ಯವಿರುವುದರಿಂದ ಅಸ್ತಿತ್ವದಲ್ಲಿರುವ ಕಾನೂನಿನಲ್ಲಿರುವ ಕೆಲವು ಲೋಪವನ್ನು ತೆಗೆದುಹಾಕಲು ಸರ್ಕಾರ ಪ್ರಯತ್ನಿಸಿದೆ ಎಂದು ಒತ್ತಿ ಹೇಳಿದ್ದಾರೆ. ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ನಿಬಂಧನೆಯು “ಕಡ್ಡಾಯವಾಗಿರುವುದಿಲ್ಲ. ಆದರೆ ಸ್ವಯಂಪ್ರೇರಿತವಾಗಿರುತ್ತದೆ” ಎಂದು ಅವರು ಹೇಳಿದ್ದಾರೆ. ಆದರೆ, ವಿರೋಧ ಪಕ್ಷಗಳ ಸಂಸದರು, ಈ ಮಸೂದೆಯು ಜನರ ಮೂಲಭೂತ ಮತ್ತು ಶಾಸನಬದ್ಧ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. 

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಆಧಾರ್ ಕೇವಲ ವಾಸಸ್ಥಳದ ಪುರಾವೆಯಾಗಿದೆ. ಅದು ಪೌರತ್ವದ ಪುರಾವೆಯಲ್ಲ. ಇದಲ್ಲದೆ, ನಾಗರಿಕರಿಗೆ ಮಾತ್ರ ಮತ ಚಲಾಯಿಸಲು ಅವಕಾಶ ಇದ್ದಾಗ, ಮತದಾರರ ಪಟ್ಟಿಗ ಆಧಾರ್ ಸಂಖ್ಯೆ ಜೋಡಿಸುವುದು ನಕಲಿ ಮತದಾರರನ್ನು ತಡೆಯಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. 

ಇದು ಪುಟ್ಟಸ್ವಾಮಿ ಪ್ರಕರಣ (ಗೌಪ್ಯತೆಯ ಹಕ್ಕು)ದಲ್ಲಿ ಆಧಾರ್‌ ಬಗ್ಗೆ ಸುಪ್ರೀಂ ನೀಡಿದ್ದ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಹೇಳಿದ್ದಾರೆ. 

ಆಧಾರ್‌ ಒಂದು ಗುರುತಿನ ಚೀಟಿ ಮಾತ್ರವೇ ಆಗಿದ್ದು, ಇದನ್ನು ಮತದಾರರ ಪಟ್ಟಿಗೆ ಲಿಂಕ್‌ ಮಾಡುವುದರಿಂದ ಭಾರತದ ಪೌರತ್ವವನ್ನು ಪಡೆಯದೇ ಇರುವವರೂ ಕೂಡ ಮತದಾನದ ಹಕ್ಕನ್ನು ಪಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇದು, ಭಾರತೀಯ ಪ್ರಜೆಗಳ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. 

ವಿರೋಧಕ್ಕೆ ಕಾರಣಗಳು ಹೀಗಿವೆ:

ಆಧಾರ್ ಪೌರತ್ವದ ಪುರಾವೆ ಅಲ್ಲ. ಮತದಾರರ ಪಟ್ಟಿಯಿಂದ ನಾಗರಿಕರ ಹೆಸರನ್ನು ಪರಿಶೀಲಿಸಲು ಅಥವಾ ಅಳಿಸಲು ಕಾನೂನುಬದ್ಧ ಆಧಾರವಾಗಿ ಆಧಾರ್‌ಅನ್ನು ಬಳಸಲಾಗುವುದಿಲ್ಲ.
ಆಧಾರ್ ಬಳಸಿ ಮತದಾರರ ಪಟ್ಟಿಯನ್ನು ಪರಿಶೀಲಿಸುವ ಹಿಂದಿನ ಪ್ರಯತ್ನಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನಡೆದಿದ್ದು, ಈ ಪ್ರಯತ್ನವು ಮತದಾರರಿಗೆ ಅನ್ಯಾಯ ಮತ್ತು ಸಾಮೂಹಿಕ ಅಮಾನ್ಯೀಕರಣಕ್ಕೆ ಕಾರಣವಾಗಿವೆ. 2015 ರಲ್ಲಿ, ರಾಷ್ಟ್ರೀಯ ಚುನಾವಣಾ ಪಟ್ಟಿ ಶುದ್ಧೀಕರಣ ಮತ್ತು ದೃಢೀಕರಣ ಕಾರ್ಯಕ್ರಮದ (ಎನ್‌ಇಆರ್‌ಪಿಎಪಿ) ಮೂಲಕ ಮತದಾರರ ಪಟ್ಟಿಗೆ ಆಧಾರ್  ಜೋಡಿಸುವ ಕಾರ್ಯಕ್ರಮವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಇದೀಗ ಮತ್ತೆ ಅಂತದ್ದೇ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಇದು ಆಧಾರ್ ಲಿಂಕ್ ಕುರಿತು ಸುಪ್ರೀಂ ಕೋರ್ಟ್‌ನ ಆದೇಶಗಳ ಉಲ್ಲಂಘನೆಯಾಗಿದೆ.

MNREGA ಅಥವಾ PDS ಫಲಾನುಭವಿಗಳ ಡೇಟಾವನ್ನೂ ಶುದ್ಧಗೊಳಿಸಲು ಆಧಾರ್ ಅನ್ನು ಲಿಂಕ್‌ ಮಾಡಲು ಪ್ರಯತ್ನಿಸಲಾಗಿತ್ತು. ಆದರೆ, ಅದು ನಿಜವಾದ ಫಲಾನುಭವಿಗಳನ್ನು ಅಳಿಸಲು ಕಾರಣವಾಯಿತು. ಅಲ್ಲದೆ, ನೈಜ ಫಲಾನುಭವಿಗಳನ್ನು ಕಲ್ಯಾಣ ಯೋಜನೆಗಳಿಂದ ಹೊರಗಿಡಲು ಕಾರಣವಾಯಿತು.

ಆಧಾರ್ ಡೇಟಾಬೇಸ್ ಅನೇಕ ಡೇಟಾ ಗುಣಮಟ್ಟದ ಸಮಸ್ಯೆಗಳನ್ನು ಹೊಂದಿದ್ದು, ಅದು ಮತದಾರರ ಡೇಟಾದ ಗುಣಮಟ್ಟ ಮತ್ತು ನಂಬಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದು ವಂಚನೆಗಳಿಗೆ ಹೆಚ್ಚು ಕಾರಣವಾಗುತ್ತದೆ. ವಾಸ್ತವವಾಗಿ, ವಿವಾದದಲ್ಲಿ ಮುಳುಗಿರುವ ಆಧಾರ್ ಯೋಜನೆಗೆ ನ್ಯಾಯಸಮ್ಮತತೆಯನ್ನು ಒದಗಿಸುವ ಮಾರ್ಗವಾಗಿ ಯುಐಡಿಎಐ ಈ ಪ್ರಸ್ತಾಪಕ್ಕಾಗಿ ತೀವ್ರವಾಗಿ ಲಾಬಿ ನಡೆಸುತ್ತಿದೆ ಎಂದು ಕಂಡುಬಂದಿದೆ.

ಮತದಾರರ ಡೇಟಾಬೇಸ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಮತದಾರರ ಗೌಪ್ಯತೆಯ ಮೇಲಿನ ದಾಳಿಯಾಗಿದೆ. ಇದು ಮತದಾರರ ಪ್ರೊಫೈಲ್‌ಗಳ ಮೇಲೆ ಕಣ್ಗಾವಲು ಸಕ್ರಿಯಗೊಳಿಸುತ್ತದೆ. ಇದು ವಿಶೇಷವಾಗಿ ಅಲ್ಪಸಂಖ್ಯಾತರಿಗೆ ಹೆಚ್ಚು ಹಾನಿಕಾರಕವಾಗಿದೆ. ಹಿಂದಿನ ಕೆಲವು ಅನುಭವಗಳು ಸೂಚಿಸುವಂತೆ, ಪಕ್ಷ ಅಥವಾ ಅದರ ಸಿದ್ಧಾಂತವನ್ನು ವಿರೋಧಿಸುವವರನ್ನು ಹಕ್ಕುಚ್ಯುತಿಗೊಳಿಸಲು ಇದನ್ನು ಬಳಸಬಹುದು.

ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆಗಳನ್ನು ಲಿಂಕ್ ಮಾಡುವುದು ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣವಾಗಿರುವ ಮತದಾನದ ಗೌಪ್ಯತೆಯನ್ನು ಹಾಳುಮಾಡಲು ದಾರಿ ಮಾಡಿಕೊಡುತ್ತದೆ.

ಪುಟ್ಟಸ್ವಾಮಿ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಪ್ರಮಾಣಾನುಗುಣ ಪರೀಕ್ಷೆಯನ್ನು ಪೂರೈಸದ ಕಾರಣ ಆಧಾರ್ ಮತ್ತು ವೋಟರ್ ಐಡಿಯನ್ನು ಲಿಂಕ್ ಮಾಡುವುದು ಅಸಂವಿಧಾನಿಕವಾಗಿದೆ. ಇದು ಪ್ರಮಾಣಾನುಗುಣವಾಗಿರಲು, ಕಾನೂನುಬದ್ಧ ಗುರಿಯನ್ನು ಅನುಸರಿಸಲು ಅಗತ್ಯವಾದ ಸಾಧನವಾಗಿದೆ ಎಂದು ಸರ್ಕಾರವು ತೋರಿಸಬೇಕಾಗಿದೆ.

ಮತದಾರರ ಡೇಟಾದಲ್ಲಿ ಎಷ್ಟು ನಕಲಿ ದೋಷಗಳು ಅಸ್ತಿತ್ವದಲ್ಲಿವೆ ಎಂಬುದನ್ನು ತೋರಿಸಲು ಸರ್ಕಾರದ ಬಳಿ ಅಗತ್ಯ ಪುರಾವೆಗಳೂ ಇಲ್ಲ ಅಥವಾ ಮತದಾರರ ಐಡಿಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದರಿಂದ ಅಂತಹ ದೋಷಗಳನ್ನು ಕಡಿಮೆ ಮಾಡುತ್ತದೆ ಎಂದು ತೋರಿಸುವಂತಹ ಯಾವುದೇ ಪುರಾವೆಗಳನ್ನೂ ಸರ್ಕಾರ ಇಟ್ಟುಕೊಂಡಿಲ್ಲ.

ಈಗಿರುವ ಕಾನೂನುಗಳು ಏನು ಹೇಳುತ್ತವೆ

RPAಯ ಸೆಕ್ಷನ್ 15ರ ಪ್ರಕಾರ ಪ್ರತಿ ಕ್ಷೇತ್ರಕ್ಕೆ ಮತದಾರರ ಪಟ್ಟಿಯನ್ನು ಹೊಂದಿರಬೇಕು ಎಂದು ಹೇಳುತ್ತದೆ. ಇದನ್ನು ಚುನಾವಣಾ ಆಯೋಗದ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಅಡಿಯಲ್ಲಿ ಈ ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿ ತಯಾರಿಸಲಾಗುತ್ತದೆ.

ಸೆಕ್ಷನ್ 16 ಹೇಳುವಂತೆ ಒಬ್ಬ ವ್ಯಕ್ತಿಯು ಭಾರತದ ಪ್ರಜೆಯಾಗಿಲ್ಲದಿದ್ದರೆ ಮತದಾರರ ಪಟ್ಟಿಯಲ್ಲಿ ನೋಂದಣಿಗೆ ಅನರ್ಹನಾಗುತ್ತಾನೆ.

ಸೆಕ್ಷನ್ 17ರ ಪ್ರಕಾರ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಗೆ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಯಾವುದೇ ವ್ಯಕ್ತಿಗೆ ಅರ್ಹತೆ ಇರುವುದಿಲ್ಲ.

ಸೆಕ್ಷನ್ 19ರ ಪ್ರಕಾರ ಅರ್ಹತಾ ದಿನಾಂಕದಂದು 18 ವರ್ಷಕ್ಕಿಂತ ಕಡಿಮೆಯಿಲ್ಲದ ವಯಸ್ಸಿನ ಮತ್ತು ಸಾಮಾನ್ಯವಾಗಿ ಕ್ಷೇತ್ರದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಅರ್ಹರಾಗಿರುತ್ತಾರೆ.


ಇದನ್ನೂ ಓದಿ: ಓಟರ್‌ ಐಡಿಯೊಂದಿಗೆ ಆಧಾರ್ ಲಿಂಕ್ ಮಾಡುವ ಮಸೂದೆ ಅಂಗೀಕರಿಸಿದ ಒಕ್ಕೂಟ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....