ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ 59 ನೇ ಜನ್ಮ ದಿನಾಚರಣೆಯ ಅಂಗವಾಗಿ ಸಿಟಿಝನ್ ಫಾರ್ ಜಸ್ಟಿಸ್ ಆಂಡ್ ಪೀಸ್ ಮತ್ತು ಗೌರಿ ಮೀಡಿಯಾ ಟ್ರಸ್ಟ್ ಜಂಟಿಯಾಗಿ ಗುರುವಾರ (ಇಂದು) ಸಂಜೆ 5 ರಿಂದ “ಕೋಮುವಾದಿಗಳನ್ನು ಎದುರಿಸೋಣ” ವಿಷಯದ ಕುರಿತು ಸೆಮಿನಾರ್ ನಡೆಸಲಿದೆ.
ಸಮಿನಾರ್‌ನಲ್ಲಿ ಖ್ಯಾತ ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹಾಗೂ ಹಿರಿಯ ಲೇಖಕಿ ಅರುಂಧತಿ ರಾಯ್ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಗೌರಿ ಲಂಕೇಶ್ ಸಹೋದರಿ, ಸಿನಿಮಾ ನಿರ್ದೇಶಕಿ ಕವಿತಾ ಲಂಕೇಶ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮವವನ್ನು CJP India ಇದರ ಫೇಸ್‌ಬುಕ್ ಪೇಜ್‌ನಲ್ಲಿ ಲೈನ್ ಮೂಲಕ ವೀಕ್ಷಿಸಬಹುದು. ಕಾರ್ಯಕ್ರಮವು ಹುತಾತ್ಮ ಪತ್ರಕರ್ತೆ ಗೌರಿ ಲಂಕೇಶ್ ಅವರ ನೆನಪಿನಲ್ಲಿ ಅವರ ಜನ್ಮದಿನದ ಅಂಗವಾಗಿ ನಡೆಯಲಿದೆ.
’ಗೌರಿ ಲಂಕೇಶ್’ ಜನ್ಮದಿನದ ನೆನಪಿನಲ್ಲಿ, ’ ಮತಾಂಧರನ್ನೆದುರಿಸುತ್ತಾ…’ ಸೆಮಿನಾರ್. ಖ್ಯಾತ ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹಾಗೂ ಹಿರಿಯ ಲೇಖಕಿ ಅರುಂಧತಿ ರಾಯ್ ಮಾತನಾಡುತ್ತಿದ್ದಾರೆ. ಫೇಸ್‌ಬುಕ್ ಲೈವ್ ನೋಡಿ►►
ಗೌರಿ ಲಂಕೇಶ್ ತಮ್ಮ ಜೀವನದ ಕೊನೆ ಉಸಿರಿರುವವರೆಗೂ ಕೋಮುವಾದಿಗಳ ವಿರುದ್ದ ಸೆಣಸುತ್ತಲೆ ಇದ್ದರು. ಅವರನ್ನು 2017 ಸೆಪ್ಟೆಂಬರ್ 5 ರಂದು ಸಂಜೆ ಅವರ ಮನೆಯ ಮುಂದೆ ಗುಂಡಿಕ್ಕಿ ಹತ್ಯೆ ಮಾಡಲಾಯಿತು.
ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣ ಸದ್ಯ ಯಾವ ಹಂತದಲ್ಲಿದೆ? ಇಲ್ಲಿದೆ ಮಾಹಿತಿ



????