ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಎಲ್ಲಾ ವಿಮಾ ಉತ್ಪನ್ನಗಳನ್ನು ಮತ್ತು ಪರಿಷ್ಕರಣೆಯ ಯೋಜನೆಗಳನ್ನು ಸೆಪ್ಟೆಂಬರ್ 30ರೊಳಗೆ ಹಿಂಪಡೆಯಲಿದೆ ಎಂದು ಹೇಳುವ ಸೂಚನಾ ಪತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

30 ಸೆಪ್ಟೆಂಬರ್ 2024 ರೊಳಗೆ LICಯು ತನ್ನ ಎಲ್ಲಾ ಯೋಜನೆಗಳನ್ನು ಸ್ಥಗಿತಗೊಳಿಸಲಿದೆ ಎಂದು ಹೇಳಿಕೊಂಡು ವೈರಲ್ ಆಗುತ್ತಿರುವ ಸೂಚನಾ ಪತ್ರದಲ್ಲಿ ಮಾಡಿದ ಪ್ರತಿಪಾದನೆ ನಿಜವೇ? ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಪ್ರತಿಪಾದಿಸಿದಂತೆ LIC ವಿಮಾ ಯೋಜನೆಗಳನ್ನು ಹಿಂತೆಗೆದುಕೊಳ್ಳಲಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸಲು LIC ವೆಬ್‌ಸೈಟ್‌ಅನ್ನು ಸರ್ಚ್ ಮಾಡಿದಾಗ, LIC ತನ್ನ ಎಲ್ಲಾ ವಿಮಾ ಯೋಜನೆಗಳನ್ನು ಹಿಂತೆಗೆದುಕೊಳ್ಳುವ ಕುರಿತು ಯಾವುದೇ ಪತ್ರಿಕಾ ಪ್ರಕಟಣೆ ಅಥವಾ ಅಧಿಸೂಚನೆಯನ್ನು ಹೊರಡಿಸಿದ ಮಾಹಿತಿ ಲಭ್ಯವಾಗಿಲ್ಲ.
ಆದರೂ, LIC ಪ್ರತಿ ವರ್ಷ ಕೆಲವು ವಿಮಾ ಯೋಜನೆಗಳನ್ನು ವಾಡಿಕೆಯಂತೆ ಹಿಂತೆಗೆದುಕೊಳ್ಳುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ತನ್ನ ಮಾರ್ಗಸೂಚಿಗಳನ್ನು ಅನುಸರಿಸುವ ಕ್ರಮವಾಗಿದ್ದು, ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಮತ್ತು ಗ್ರಾಹಕರ ಅಗತ್ಯಗಳನ್ನು ಉತ್ತಮವಾಗಿ ಪೂರೈಸುವ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತದೆ. 2024-25ರ ಹಣಕಾಸು ವರ್ಷಕ್ಕೆ LIC ಯು ಹಿಂತೆಗೆದುಕೊಂಡ ಯೋಜನೆಗಳ ಕುರಿತು ನೀವು (ಇಲ್ಲಿ) ನೋಡಬಹುದು.

ಹೆಚ್ಚಿನ ಮಾಹಿತಿಗಾಗಿ X ಖಾತೆಯಲ್ಲಿ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ನೀಡಿರುವ ಸ್ಪಷ್ಟೀಕರಣ ಲಭ್ಯವಾಗಿದೆ. ವೈರಲ್ ಪೋಸ್ಟ್ ನಕಲಿ ಎಂದು ಪಿಐಬಿ ಹೇಳಿದೆ, “ಎಲ್ಲಾ ವಿಮಾ ಉತ್ಪನ್ನಗಳು/ಯೋಜನೆಗಳನ್ನು ಪರಿಷ್ಕರಣೆಗಾಗಿ 30 ಸೆಪ್ಟೆಂಬರ್ 2024 ರಂದು ಹಿಂತೆಗೆದುಕೊಳ್ಳುತ್ತದೆ ಎಂದು ಎಲ್‌ಐಸಿ ಹೊರಡಿಸಿದೆ ಎನ್ನಲಾದ ಸೂಚನಾ ಪತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದು, ಇದು ಸುಳ್ಳು ಮತ್ತು ದಾರಿತಪ್ಪಿಸುವಂತದ್ದು ಸ್ಪಷ್ಟಪಡಿಸಿದೆ.
ಭಾರತೀಯ ಜೀವ ವಿಮಾ ನಿಗಮವು (LIC) ತನ್ನ ಎಲ್ಲಾ ವಿಮಾ ಯೋಜನೆಗಳನ್ನು 30 ಸೆಪ್ಟೆಂಬರ್ 2024 ರೊಳಗೆ ಹಿಂತೆಗೆದುಕೊಳ್ಳುವ ಕುರಿತು ಯಾವುದೇ ಪತ್ರ ಅಥವಾ ಅಧಿಸೂಚನೆಯನ್ನು ನೀಡಿಲ್ಲ. ನಿಯಮಾನುಸಾರ ಪ್ರತಿ ವರ್ಷ ತನ್ನ ಮಾರ್ಗ ಸೂಚಿಯಂತೆ ಗ್ರಾಹಕರ ಮತ್ತು ಮಾರುಕಟ್ಟೆ ಅವಶ್ಯಕತೆಗಳಿಗೆ ಅನುಗುಣಾಗಿ ನಡೆಯುವ ಸಾಮಾನ್ಯ ಪ್ರಕ್ರಿಯೆಯನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತದೆ.
ಇದನ್ನೂ ಓದಿ : FACT CHECK : ಇಸ್ರೇಲ್ ಅನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ‘ಅಕ್ರಮ ರಾಷ್ಟ್ರ’ವೆಂದು ಘೋಷಿಸಿರುವುದು ನಿಜಾನಾ?


