HomeದಿಟನಾಗರFact Check : ಬೆಂಗಳೂರಿನಲ್ಲಿ ನಡೆದಿರುವುದು ಪಾರ್ಕಿಂಗ್ ಜಗಳವೇ ಹೊರತು 'ಕೋಮು ಗಲಾಟೆಯಲ್ಲ'

Fact Check : ಬೆಂಗಳೂರಿನಲ್ಲಿ ನಡೆದಿರುವುದು ಪಾರ್ಕಿಂಗ್ ಜಗಳವೇ ಹೊರತು ‘ಕೋಮು ಗಲಾಟೆಯಲ್ಲ’

ಘಟನೆಗೆ ಕೋಮು ಬಣ್ಣ ಬಳಿಯಲು ಯತ್ನಿಸಿ ಪಲಾಯನ ಮಾಡಿದ ಸಂಸದ ಪ್ರತಾಪ್ ಸಿಂಹ

- Advertisement -
- Advertisement -

ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ನಡೆದ ವಾಗ್ವಾದದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ವೈರಲ್ ವಿಡಿಯೋವನ್ನು ಮಾರ್ಚ್ 24ರಂದು ರಾತ್ರಿ 10 ಗಂಟೆ 46 ನಿಮಿಷಕ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಈ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಲ್ಲಿ ನಡೆದಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರ ಗಮನಕ್ಕೆ ತರುತ್ತಿದ್ದೇವೆ. ಹಿಂದೂಗಳೇ ಎದ್ದೇಳಿ” ಎಂದು ಬರೆದುಕೊಂಡಿದ್ದಾರೆ.

ಪ್ರತಾಪ್ ಸಿಂಹ ಅವರು ತಮ್ಮ ಪೋಸ್ಟ್‌ನಲ್ಲಿ ಕುಮಾರಸ್ವಾಮಿ ಬಡಾವಣೆಯಲ್ಲಿ ಘಟನೆ ನಡೆದಿದೆ ಎಂದು ಉಲ್ಲೇಖಿಸಿ, ಕೊನೆಯಲ್ಲಿ ‘ಎದ್ದೇಳಿ ಹಿಂದೂಗಳೇ’ ಎಂದು ಬರೆಯುವ ಮೂಲಕ ಘಟನೆಗೆ ಕೋಮು ಬಣ್ಣ ಬಳಿಯುವ ಪ್ರಯತ್ನ ಮಾಡಿದ್ದಾರೆ. ಆದರೆ, ವಿಡಿಯೋದಲ್ಲಿರುವ ಘಟನೆ ಏನು? ಹೇಗೆ ನಡೆಯಿತು? ಇತ್ಯಾದಿ ಯಾವ ಮಾಹಿತಿಯನ್ನೂ ಅವರು ಉಲ್ಲೇಖಿಸಿರಲಿಲ್ಲ. ಪ್ರಸ್ತುತ ಪ್ರತಾಪ್ ಸಿಂಹ ಅವರು ತಮ್ಮ ಎಕ್ಸ್‌ ಪೋಸ್ಟ್ ಅನ್ನು ಡಿಲಿಟ್ ಮಾಡಿದ್ದಾರೆ.

ಪ್ರತಾಪ್ ಸಿಂಹ ಪೋಸ್ಟ್ ಡಿಲಿಟ್ ಮಾಡಿರುವುದು

ಫ್ಯಾಕ್ಟ್‌ಚೆಕ್ : ಪ್ರತಾಪ್ ಸಿಂಹ ಹಂಚಿಕೊಂಡ ವಿಡಿಯೋಗೆ ಸಂಬಂಧಪಟ್ಟಂತೆ ಸತ್ಯಾಸತ್ಯತೆಯನ್ನು ನಾನುಗೌರಿ.ಕಾಂ ಪರಿಶೀಲನೆ ನಡೆಸಿದೆ.

ಇಂದು (25 ಮಾರ್ಚ್ 2024) ಡೆಕ್ಕನ್ ಹೆರಾಲ್ಡ್ ಸುದ್ದಿ ವೆಬ್‌ಸೈಟ್‌ ‘Neighbours fight over parking; police say ‘no communal angle”ಎಂಬ ಶೀರ್ಷಿಕೆಯಲ್ಲಿ ವಿಡಿಯೋಗೆ ಸಂಬಂಧಪಟ್ಟಂತೆ ಸುದ್ದಿ ಪ್ರಕಟಿಸಿದೆ. ಸುದ್ದಿಯ ಶೀರ್ಷಿಕೆಯಲ್ಲೇ ಪಾರ್ಕಿಂಗ್ ವಿಚಾರಕ್ಕೆ ನೆರೆಹೊರೆಯವರ ನಡುವೆ ಜಗಳ ನಡೆದಿದೆ. ಇದರಲ್ಲಿ ಕೋಮು ವಿಷಯವಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ.

ಸುದ್ದಿಯನ್ನು ವಿವರವಾಗಿ ನೋಡುವುದಾದರೆ, “ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಪ್ರಗತಿಪುರದಲ್ಲಿ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಘಟನಾ ಸ್ಥಳದಲ್ಲಿ ಜನರು ಗುಂಪಾಗಿ ಜಮಾಯಿಸಿದ್ದರಿಂದ ಕೋಮು ಗಲಾಟೆಯ ವದಂತಿ ಹಬ್ಬಿತ್ತು. ಆದರೆ, ಇದು ಕುಮಾರ್ ಮತ್ತು ಸೈಯ್ಯದ್ ತಲ್ಹಾ ಎಂಬ ಇಬ್ಬರು ನೆರೆಹೊರೆಯವರ ನಡುವೆ ಆಟೋ ರಿಕ್ಷಾ ಪಾರ್ಕಿಂಗ್ ವಿಚಾರಕ್ಕೆ ನಡೆದ ಜಗಳ. ಇದರಲ್ಲಿ ಯಾವುದೇ ಕೋಮು ವಿಚಾರ ಇಲ್ಲ ಎಂದು ಉಪ ಪೊಲೀಸ್ ಆಯುಕ್ತ ( ಬೆಂಗಳೂರು ದಕ್ಷಿಣ) ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ” ಎಂದು ಹೇಳಲಾಗಿದೆ.

“ಇಬ್ಬರನ್ನು ಹೊರತುಪಡಿಸಿ ಇತರರು ಈ ಗಲಾಟೆಯಲ್ಲಿ ಪಾಲ್ಗೊಂಡಿಲ್ಲ. ವಿಡಿಯೋದಲ್ಲಿ ಒಂದಷ್ಟು ಜನರು ಜಮಾಯಿಸಿರುವುದು ಕಂಡು ಬಂದಿದೆ. ನಮಾಝ್ ಮುಗಿಸಿ ಹೋಗುವಾಗ ಗಲಾಟೆ ನಡೆಯುತ್ತಿದ್ದರಿಂದ ಕೆಲವರು ನಿಂತು ನೋಡಿದ್ದಾರೆ ಅಷ್ಟೆ” ಎಂದು ಉಪ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.

ಸುದ್ದಿ ಲಿಂಕ್ ಇಲ್ಲಿದೆ 

ಇಂಡಿಯಾ ಟುಡೇ, ಟೈಮ್ಸ್ ನೌ ವೆಬ್‌ಸೈಟ್‌ಗಳೂ ಕೂಡ ಈ ಕುರಿತು ಸುದ್ದಿ ಪ್ರಕಟಿಸಿದ್ದು, ಪಾರ್ಕಿಂಗ್ ವಿಚಾರಕ್ಕೆ ನಡೆದ ಜಗಳವೇ ಹೊರತು ಯಾವುದೇ ಕೋಮು ಗಲಾಟೆ ಅಲ್ಲ ಎಂದು ತಿಳಿಸಿದೆ.

ಎರಡೂ ಸುದ್ದಿ ಲಿಂಕ್‌ಗಳು ಕೆಳಗಿವೆ
ಇಂಡಿಯಾ ಟುಡೇ
ಟೈಮ್ಸ್‌ ನೌ

ನಾವು ನಡೆಸಿದ ಪರಿಶೀಲನೆಯಲ್ಲಿ ಇದು ಪಾರ್ಕಿಂಗ್ ವಿಚಾರಕ್ಕೆ ನಡೆದ ವಾಗ್ವಾದವೇ ಹೊರತು, ಕೋಮು ಗಲಾಟೆಯಲ್ಲ ಎಂಬುವುದು ಸ್ಪಷ್ಟವಾಗಿದೆ. ಸಂಸದ ಪ್ರತಾಪ್ ಸಿಂಹ ಪ್ರಕರಣಕ್ಕೆ ಕೋಮು ಬಣ್ಣ ಬಳಿಯಲು ಯತ್ನಿಸಿ ಬಳಿಕ ಪೋಸ್ಟ್ ಡಿಲಿಟ್ ಮಾಡುವ ಮೂಲಕ ಪಲಾಯನ ಮಾಡಿರುವುದು ಬಯಲಾಗಿದೆ.

ಇದನ್ನೂ ಓದಿ : Fact Check: ಚುನಾವಣೆ ಹಿನ್ನೆಲೆ ವಾಟ್ಸಾಪ್‌, ಫೇಸ್‌ಬುಕ್ ಮೆಸೇಜ್‌ಗಳ ಮೇಲೆ ಸರ್ಕಾರ ಕಣ್ಣಿಟ್ಟಿದೆಯಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...