Homeಫ್ಯಾಕ್ಟ್‌ಚೆಕ್FACT CHECK : ಕಾಂಗ್ರೆಸ್, ಗಾಂಧಿ ಕುಟುಂಬ ಭಾರತವನ್ನು ಲೂಟಿ ಮಾಡುತ್ತಿದೆ ಎಂಬ ಕಾರ್ಟೂನ್ ಮಾರ್ಫ್...

FACT CHECK : ಕಾಂಗ್ರೆಸ್, ಗಾಂಧಿ ಕುಟುಂಬ ಭಾರತವನ್ನು ಲೂಟಿ ಮಾಡುತ್ತಿದೆ ಎಂಬ ಕಾರ್ಟೂನ್ ಮಾರ್ಫ್ ಮಾಡಲಾಗಿದೆ

- Advertisement -
- Advertisement -

ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬವನ್ನು ಕೆಟ್ಟದಾಗಿ ಬಿಂಬಿಸುವ ಕಾರ್ಟೂನ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವೈರಲ್ ಕಾರ್ಟೂನ್‌ನಲ್ಲಿ “ಭಾರತ ಎಂಬ ಎಲೆಯನ್ನು ತಿನ್ನುವ ಕಾಂಗ್ರೆಸ್ ಹಸು, ಭಾರತೀಯರಿಗೆ ಸೆಗಣಿ ಕೊಟ್ಟರೆ, ಗಾಂಧಿ ಕುಟುಂಬಕ್ಕೆ ಹಾಲು ಕೊಡುತ್ತಿದೆ” ಎಂದು ಹೇಳಲಾಗಿದೆ.

ಕಾರ್ಟೂನ್‌ ಜೊತೆಗೆ “ಅಮೆರಿಕನ್ ಕಾರ್ಟೂನಿಸ್ಟ್ ಬೆನ್ ಗ್ಯಾರಿಸನ್ ಅವರ ಭಾರತ ದೇಶದ ಚಿತ್ರಣ. ಕಾಂಗ್ರೆಸ್ ಭಾರತವನ್ನು ಹೇಗೆ ಆಳಿತು ಎಂಬುವುದನ್ನು ತೋರಿಸಲು ಇದು ಉತ್ತಮ ಮಾರ್ಗವಾಗಿದೆ” ಎಂದು ಬರೆದುಕೊಳ್ಳಲಾಗಿದೆ.

ಈ ಕಾರ್ಟೂನ್‌ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಎಸ್‌. ಗುರುಮೂರ್ತಿ ಎಂಬ ಬಳಕೆದಾರ “ನೆಹರೂ ಮತ್ತು ರಾಹುಲ್ ಆಳ್ವಿಕೆಯನ್ನು ಉತ್ತಮವಾಗಿ ಚಿತ್ರಿಸಲಾಗಲಿಲ್ಲ” ಎಂದು ಬರೆದುಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್ : ವೈರಲ್ ಕಾರ್ಟೂನ್‌ ಕುರಿತು ನಾವು ಮಾಹಿತಿ ಹುಡುಕಿದಾಗ, ಅದು ತಿರುಚಿದ ಕಾರ್ಟೂನ್‌. ಮೂಲ ಕಾರ್ಟೂನ್‌ನಲ್ಲಿ ವಿದೇಶಿ ಹೂಡಿಕೆದಾರರು ಭಾರತವನ್ನು ಲೂಟಿ ಮಾಡುತಿದ್ದಾರೆ ಎಂಬುವುದನ್ನು ಚಿತ್ರಿಸಿರುವುದು ಗೊತ್ತಾಗಿದೆ.

ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಕಾರ್ಟೂನ್‌ ಕುರಿತು ಹುಡುಕಾಡಿದಾಗ, ಫೆಬ್ರವರಿ 2021ರಲ್ಲಿ ಎಕ್ಸ್‌ ಬಳಕೆದಾರ ಅರುಣ್ ದೇಶಪಾಂಡೆ ಎಂಬವರು ಮೇಲಿನಂತೆ ಆರೋಪಿಸಿ ಅದೇ ಕಾರ್ಟೂನ್‌ ಹಂಚಿಕೊಂಡಿರುವುದು ಗೊತ್ತಾಗಿದೆ.

ಆದರೆ, ದೇಶಪಾಂಡೆಯವರ ಪೋಸ್ಟ್‌ಗೆ ಕಮೆಂಟ್ ಮಾಡಿರುವ ರಾಕೇಶ್ ಕೃಷ್ಣನ್ ಸಿಂಹ ಎಂಬ ಎಕ್ಸ್ ಬಳಕೆದಾರ 2015ರಲ್ಲಿ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಕಾರ್ಟೂನ್‌ನ ಸ್ಕ್ರೀನ್‌ ಶಾಟ್‌ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.

ಅವರು ಹೇಳಿದಂತೆ, ಮೂಲ ಕಾರ್ಟೂನ್‌ ಗಾಂಧಿ ಕುಟುಂಬವನ್ನು ಗುರಿಯಾಗಿಸುವ ಬದಲು ಮೋದಿಯವರ ಮೇಕ್‌ ಇನ್‌ ಇಂಡಿಯಾ ಯೋಜನೆಯನ್ನು ಗುರಿಯಾಗಿಸಿ ರಚಿಸಲಾಗಿದೆ. ಅಲ್ಲದೆ, ಆ ಕಾರ್ಟೂನ್‌ ರಚಿಸಿದವರು ಬೆನ್ ಗ್ಯಾರಿಸನ್ ಅಲ್ಲ. 2015ರಲ್ಲಿ ಅಮಲ್ ಮೇಧಿ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಆ ಕಾರ್ಟೂನ್‌ ರಚಿಸಿದ್ದಾರೆ.

ಎರಡು ಕಾರ್ಟೂನ್‌ಗಳ ಹೋಲಿಕೆ ಕೆಳಗಿದೆ

ಎಕ್ಸ್‌ ಬಳಕೆದಾರ ರಾಕೇಶ್ ಕೃಷ್ಣನ್ ಸಿಂಹ ಅವರು ಹೇಳಿದಂತೆ, ಎರಡನೆಯದಾಗಿ ಹಂಚಿಕೊಂಡ ಕಾರ್ಟೂನಲ್ಲಿ ಅಮಲ್ ಮೇಧಿ ಅವರ ಸಹಿ ಕಾಣಬಹುದು. ಅಲ್ಲದೆ ಎರಡನೇ ಕಾರ್ಟೂನ್‌ ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಗುರಿಯಾಗಿಸಿ ರಚಿಸಲಾಗಿದೆ.

ಇನ್ನು ಅಮಲ್ ಮೇಧಿ ವೈರಲ್ ಕಾರ್ಟೂನ್‌ ರಚಿಸಿದ್ದು ನಿಜವೇ? ಎಂದು ಪರಿಶೀಲಿಸಿದಾಗ, ಅವರ ಫೇಸ್‌ಬುಕ್‌ ಖಾತೆಯಲ್ಲಿ ಮಾರ್ಚ್ 28,2024 ರಂದು ಕಾರ್ಟೂನ್‌ ಕುರಿತು ಸ್ಪಷ್ಟನೆ ನೀಡಿರುವುದು ಕಾಣಿಸಿದೆ.
ಫೇಸ್‌ಬುಕ್‌ನಲ್ಲಿ ತಿರುಚಿದ ಮತ್ತು ಮೂಲ ಕಾರ್ಟೂನ್‌ಗಳನ್ನು ಹಂಚಿಕೊಂಡಿರುವ ಅಮಲ್ ಮೇಧಿ, “ಕಳೆದ 9 ವರ್ಷಗಳಿಂದ ಈ ಎರಡು ಕಾರ್ಟೂನ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಾನು ಈ ಕಾರ್ಟೂನ್‌ನಿಂದ ಯಾವುದೇ ಹಣ ಗಳಿಸಿಲ್ಲ ಎಂದು ತಿಳಿಸಿದ್ದಾರೆ.

ನಾವು ಬೆನ್ ಗ್ಯಾರಿಸನ್ ಅವರ ಎಕ್ಸ್ ಖಾತೆಯನ್ನೂ ಪರಿಶೀಲಿಸಿದ್ದೇವೆ. ಈ ವೇಳೆ ಅಕ್ಟೋಬರ್ 23, 2017ರಂದು ” ನಾನು ಭಾರತದ ರಾಜಕೀಯದ ಕುರಿತು ಯಾವುದೇ ಕಾರ್ಟೂನ್‌ ರಚಿಸಿಲ್ಲ. ನನ್ನ ಸಹಿಯಲ್ಲಿ ಕೆಲವು ಹರಿದಾಡುತ್ತಿವೆ. ಅವು ನನ್ನದಲ್ಲ ಎಂದು ಬರೆದುಕೊಂಡಿರುವುದು ಕಾಣಿಸಿದೆ.

ನಾವು ನಡೆಸಿದ ಪರಿಶೀಲನೆಯಲ್ಲಿ “ಗಾಂಧಿ ಕುಟುಂಬ ಭಾರತವನ್ನು ಲೂಟಿ ಮಾಡಿದೆ ಎಂದು ಬಿಂಬಿಸಿದ ಕಾರ್ಟೂನ್‌ ಹಳೆಯ ತಿರುಚಿದ ಕಾರ್ಟೂನ್‌ ಆಗಿದೆ. ಮೋದಿ ಸರ್ಕಾರದ ಮೇಕ್‌ ಇಂಡಿಯಾ ಯೋಜನೆಯನ್ನು ಗುರಿಯಾಗಿಸಿ ಅಮಲ್ ಮೇಧಿ ಮೂಲ ಕಾರ್ಟೂನ್‌ ರಿಚಿಸಿದ್ದರು. ಅದನ್ನು ತಿರುಚಿ ಬೆನ್ ಗ್ಯಾರಿಸನ್ ಹೆಸರಿನಲ್ಲಿ ವೈರಲ್ ಮಾಡಲಾಗಿದೆ.

ಇದನ್ನೂ ಓದಿ: FACT CHECK: ಮತ್ತೆ ವೈರಲ್ ಆಗ್ತಿದೆ ಎಂ.ಬಿ ಪಾಟೀಲ್ ಬರೆದಿದ್ದರು ಎನ್ನಲಾದ ನಕಲಿ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -