HomeದಿಟನಾಗರFACT CHECK : 1951ರಲ್ಲಿ ಅಸ್ಸಾಂನಲ್ಲಿ ಶೇ.14ರಷ್ಟು ಮಾತ್ರ ಮುಸ್ಲಿಮರಿದ್ದರು ಎಂಬ ಸಿಎಂ ಶರ್ಮಾ ಹೇಳಿಕೆ...

FACT CHECK : 1951ರಲ್ಲಿ ಅಸ್ಸಾಂನಲ್ಲಿ ಶೇ.14ರಷ್ಟು ಮಾತ್ರ ಮುಸ್ಲಿಮರಿದ್ದರು ಎಂಬ ಸಿಎಂ ಶರ್ಮಾ ಹೇಳಿಕೆ ಸುಳ್ಳು

- Advertisement -
- Advertisement -

ಈ ವರ್ಷಾಂತ್ಯದಲ್ಲಿ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಜಾರ್ಖಂಡ್‌ನ ಸಹ-ಪ್ರಭಾರಿಯಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇಮಿಸಿದೆ. ಈ ಹಿನ್ನೆಲೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶರ್ಮಾ ಅವರು ಇತ್ತೀಚೆಗೆ ಜಾರ್ಖಂಡ್‌ಗೆ ಭೇಟಿ ನೀಡಿದ್ದರು.

ಈ ವೇಳೆ ರಾಂಚಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಾನು ಅಸ್ಸಾಂನಿಂದ ಬಂದಿದ್ದೇನೆ, ಜನಸಂಖ್ಯೆಯ ಬದಲಾವಣೆಯು ನನಗೆ ದೊಡ್ಡ ಸಮಸ್ಯೆಯಾಗಿದೆ. 1951ರಲ್ಲಿ, ಅಸ್ಸಾಂನ ಮುಸ್ಲಿಂ ಜನಸಂಖ್ಯೆಯು ಶೇಕಡ 14 ರಷ್ಟಿತ್ತು, ಇಂದು ಮುಸ್ಲಿಂ ಜನಸಂಖ್ಯೆಯು ಶೇಕಡ 40ಕ್ಕೆ ಏರಿದೆ. ನಾನು ಅನೇಕ ಜಿಲ್ಲೆಗಳನ್ನು ಕಳೆದುಕೊಂಡಿದ್ದೇನೆ. ನನಗೆ ಈ ವಿಷಯ ರಾಜಕೀಯವಲ್ಲ, ನನಗೆ ಇದು ಜೀವನ್ಮರಣ ಸಮಸ್ಯೆಯಾಗಿದೆ.”ಎಂದಿದ್ದರು.

ತನ್ನ ಹೇಳಿಕೆಯ ವಿಡಿಯೋವನ್ನು ಜುಲೈ 17ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಸಿಎಂ ಶರ್ಮಾ ಅವರು “1951 ರಲ್ಲಿ ಅಸ್ಸಾಂನಲ್ಲಿ ಮುಸ್ಲಿಮರ ಜನಸಂಖ್ಯೆ ಕೇವಲ 14 ಪ್ರತಿಶತದಷ್ಟಿತ್ತು, ಇಂದು ಮುಸ್ಲಿಮರ ಜನಸಂಖ್ಯೆಯು ಶೇಕಡಾ 40ಕ್ಕೆ ಏರಿದೆ ಬರೆದುಕೊಂಡಿದ್ದರು.

ಈ ವಿಷಯದ ಸತ್ಯಾಸತ್ಯತೆ ಪರಿಶೀಲಿಸದೆ ಸಿಎಂ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಹಲವು ಪ್ರಮುಖ ಮಾಧ್ಯಮಗಳು ವರದಿ ಮಾಡಿದ್ದವು. ಇವುಗಳಲ್ಲಿ ಹಿಂದೂಸ್ತಾನ್ ಟೈಮ್ಸ್, ರಿಪಬ್ಲಿಕ್ ಭಾರತ್, ಟೈಮ್ಸ್ ಆಫ್ ಇಂಡಿಯಾ, ದೈನಿಕ್ ಜಾಗರಣ್, ದಿ ಎಕನಾಮಿಕ್ಸ್ ಟೈಮ್ಸ್, ಝೀ ನ್ಯೂಸ್ ಇತ್ಯಾದಿ ಸೇರಿವೆ.

ಫ್ಯಾಕ್ಟ್‌ಚೆಕ್ : ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಹೇಳಿಕೆಯ ಸತ್ಯಾಸತ್ಯತೆ ಪರಿಶೀಲಿಸಲು ನಾವು 1961ರ ಧಾರ್ಮಿಕ ಜನಗಣತಿ ವರದಿಯನ್ನು ಭಾರತ ಸರ್ಕಾರದ ವೆಬ್‌ಸೈಟ್ ‘ಸೆನ್ಸಸ್ ಇಂಡಿಯಾ’ದಲ್ಲಿ ಪರಿಶೀಲಿಸಿದ್ದೇವೆ. ವೆಬ್‌ಸೈಟ್‌ನಲ್ಲಿ 1961ರಲ್ಲಿ ಅಸ್ಸಾಂ ಸೇರಿದಂತೆ ಇತರ ರಾಜ್ಯಗಳಲ್ಲಿ ಯಾವ ಧರ್ಮದ ಜನ ಸಂಖ್ಯೆ ಎಷ್ಟಿತ್ತು ಮತ್ತು 1951-61ರ ನಡುವಿನ ವ್ಯತ್ಯಾಸದ ಮಾಹಿತಿಯಿದೆ.

ವೆಬ್‌ಸೈಟ್‌ನಲ್ಲಿರುವ ದಾಖಲೆಯ ಪುಟ ಸಂಖ್ಯೆ 4ರಲ್ಲಿ, 1951ರಲ್ಲಿ ಅಸ್ಸಾಂನ ಮುಸ್ಲಿಂ ಜನಸಂಖ್ಯೆ 19,95,936 ಎಂದು ತೋರಿಸಲಾಗಿದೆ. ಇದು ಒಟ್ಟು ಜನಸಂಖ್ಯೆಯ 22.60 ಪ್ರತಿಶತವಾಗಿತ್ತು. ಅಸ್ಸಾಂನಲ್ಲಿ ಮುಸ್ಲಿಂ ಜನಸಂಖ್ಯೆಯು 1961 ರಲ್ಲಿ 27, 65,509 ಕ್ಕೆ ಏರಿತ್ತು. ಇದು ಒಟ್ಟು ಜನಸಂಖ್ಯೆಯ ಶೇ. 23.29 ರಷ್ಟಿತ್ತು. ಈ ದಾಖಲೆಯ ಪ್ರಕಾರ, 1951ರಲ್ಲಿ ಅಸ್ಸಾಂನಲ್ಲಿ ಮುಸ್ಲಿಂ ಜನಸಂಖ್ಯೆ ಶೇ. 14ರಷ್ಟಿತ್ತು ಎಂಬ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಹೇಳಿಕೆ ತಪ್ಪಾಗಿದೆ.

ಅಧಿಕೃತ ದಾಖಲೆಯ ಪ್ರಕಾರ, ಅಸ್ಸಾಂನಲ್ಲಿ 1951ರಲ್ಲಿ ಮುಸ್ಲಿಂ ಜನಸಂಖ್ಯೆ ಶೇ.22.60 ಇತ್ತು. 1961ರಲ್ಲಿ ಇದು ಶೇ. 23.29ಕ್ಕೆ ಏರಿಕೆಯಾಗಿತ್ತು. 2011ರ ಜನಗಣತಿ ಪ್ರಕಾರ ಅಸ್ಸಾಂನಲ್ಲಿ ಮುಸ್ಲಿಂ ಜನಸಂಖ್ಯೆ ಶೇ.34.22 ದಾಖಲಾಗಿತ್ತು. ಆ ಬಳಿಕ 2021ರಲ್ಲಿ ಜನಗಣತಿ ನಡೆಯಬೇಕಿತ್ತು. ಆದರೆ, ಸರ್ಕಾರ ಗಣತಿ ನಡೆಸಿಲ್ಲ. ಆದರೂ, ಶೇ.40ರಷ್ಟು ಇರಬಹುದೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ : FACT CHECK : ಹುತಾತ್ಮ ಯೋಧನ ಪತ್ನಿಯದ್ದು ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...