ಪಟಾಕಿ ತುಂಬಿದ ಹಣ್ಣು ತಿಂದು ಗರ್ಭಿಣಿ ಆನೆಯೊಂದು ಕೇರಳದಲ್ಲಿ ಸಾವನಪ್ಪಿದ ಘಟನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಆದರೆ ಈ ಸಂದರ್ಭದಲ್ಲಿ ಎರಡು ಸುಳ್ಳನ್ನು ವ್ಯವಸ್ಥಿತವಾಗಿ ಹೆಣೆದು ಹರಡಲಾಗಿದೆ. ಅವುಗಳೆಂದರೆ
1. ಘಟನೆ ನಡೆದಿದ್ದು ಮಲ್ಲಪುರಂನಲ್ಲಿ?
ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ಬಿಜೆಪಿ ನಾಯಕಿ ಮನೇಕಾ ಗಾಂಧಿ ಸೇರಿದಂತೆ ಹಲವರು ತಮ್ಮ ಟ್ವೀಟ್‌ಗಳಲ್ಲಿ ಬೇಕಂತಲೇ ಘಟನೆ ನಡೆದ ಸ್ಥಳವನ್ನು ಮಲ್ಲಪುರಂ ಎಂದು ಉಲ್ಲೇಖಿಸಿದ್ದರು. ಇದು ಮುಸ್ಲಿಂ ಬಾಹುಳ್ಯ ಪ್ರದೇಶವಾಗಿದ್ದು, ಘಟನೆಗೆ ಮುಸ್ಲಿಮರೆ ಕಾರಣ ಎಂದು ಬಿಂಬಿಸುವುದು ಅವರ ಉದ್ದೇಶವಾಗಿತ್ತು. ಈ ಕೆಳಗಿನ ಪ್ರಕಾಶ್ ಜಾವಡೆಕರ್‌ರವರ ಟ್ವೀಟ್ ನೋಡಿ. ಮಲ್ಲಪುರಂ ಎಂದೇ ಉಲ್ಲೇಖಿಸಿದ್ದಾರೆ.
Central Government has taken a very serious note of the killing of an elephant in Mallapuram, #Kerala. We will not leave any stone unturned to investigate properly and nab the culprit(s). This is not an Indian culture to feed fire crackers and kill.@moefcc @PIB_India @PIBHindi
— Prakash Javadekar (@PrakashJavdekar) June 4, 2020
ಆದರೆ ನಿಜವಾಗಿಯೂ ಘಟನೆ ನಡೆದಿರುವುದು ಕೇರಳದ ಮಲ್ಲಪುರಂನಲ್ಲಿ ಅಲ್ಲ. ಬದಲಿಗೆ ಪಾಲಕ್ಕಾಡ್ ಜಿಲ್ಲೆಯಲ್ಲಿ ಸಂಭವಿಸಿದೆ.
ಓದಿ:ಆನೆ ಪ್ರಕರಣವನ್ನಿಟ್ಟು ಕೇರಳದ ಬಗ್ಗೆ ದ್ವೇಷ ಹರಡುವವರಿಗೆ ವಿಭಿನ್ನ ಸಂದೇಶ ನೀಡಿದ ಕೇರಳ
2. ಘಟನೆಯಲ್ಲಿ ಬಂಧಿಸಿದ ವ್ಯಕ್ತಿಗಳು ಅಮ್ಜದ್ ಅಲಿ ಮತ್ತು ತಮೀಮ್ ಶೇಖ್?
ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆತನ ಹೆಸರು ಪಿ ವಿಲ್ಸನ್ ಆಗಿದೆ. ಇದನ್ನು ಪಾಲಕ್ಕಾಡ್ ಎಸ್‌ಪಿ, ಡಿಡಿ ನ್ಯೂಸ್ ಮಲೆಯಾಳಂ ಸೇರಿದಂತೆ ಹಲವರು ದೃಢಪಡಿಸಿದ್ದಾರೆ.


ಆದರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಮಾಧ್ಯಮ ಸಲಹೆಗಾರರಾದ ಅಮರ್ ಪ್ರಸಾದ್ ರೆಡ್ಡಿ, ನ್ಯೂಸ್ ನೇಷನ್ ಟಿವಿಯ ನಿರೂಪಕ ದೀಪಕ್ ಚೌರಾಸಿಯ, ಸುದರ್ಶನ್ ನ್ಯೂಸ್ ಸೇರಿದಂತೆ ಹಲವಾರು ಜನ ಘಟನೆಯ ಆರೋಪಿಗಳಾದ ಅಮ್ಜದ್ ಅಲಿ ಮತ್ತು ತಮೀಮ್ ಶೇಖ್ ಎಂಬುವವರನ್ನು ಬಂಧಿಸಲಾಗಿದೆ ಎಂಬ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಾರೆ.

ಇದನ್ನೂ ಓದಿ: ಗರ್ಭಿಣಿ ಆನೆ ಹತ್ಯೆ: ಪ್ರಕಾಶ್ ಜಾವಡೇಕರ್ ಹೇಳಿಕೆಗೆ ಕಿಡಿಕಾರಿದ ನೆಟ್ಟಿಗರು



ಆದರೆ ಈ ಸುದ್ದಿಯಲ್ಲಿ ಆನೆ ಕೊಂದವರ ಬಗ್ಗೆ ಕನಿಷ್ಠ ಒಂದು ವಿಷಾದ ಕೂಡ ಇಲ್ಲ.