Homeನಿಜವೋ ಸುಳ್ಳೋಇದು ಭಾರತ-ಚೀನಾ ’ನಾಥು-ಲಾ’ ಸಂಘರ್ಷದ ಚಿತ್ರವಲ್ಲ: ಫ್ಯಾಕ್ಟ್ ಚೆಕ್‌

ಇದು ಭಾರತ-ಚೀನಾ ’ನಾಥು-ಲಾ’ ಸಂಘರ್ಷದ ಚಿತ್ರವಲ್ಲ: ಫ್ಯಾಕ್ಟ್ ಚೆಕ್‌

- Advertisement -
- Advertisement -

ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಈ ವಿಷಯದ ಬಗ್ಗೆ ಭಾರಿ ಸುಳ್ಳುಗಳನ್ನು ಹರಡಲಾಗುತ್ತಿದೆ.

ಅಂತಹದೆ ಒಂದು ಸುಳ್ಳುಗಳಲ್ಲಿ, ಚಿತ್ರವೊಂದನ್ನು 1967 ರ ’ನಾಥು ಲಾ’ ದಲ್ಲಿನ ಭಾರತ-ಚೀನಾ ನಡುವಿನ ಘರ್ಷಣೆಯಲ್ಲಿನ ಚೀನಾದ ಯುದ್ಧ ಕೈದಿಯೊಬ್ಬನ ಚಿತ್ರವೆಂದು ಹೇಳಿ ಹಂಚಿಕೊಳ್ಳಲಾಗುತ್ತಿದೆ. ಸಂಘರ್ಷದಲ್ಲಿ ಸೋತದ್ದರಿಂದ ಚೀನಾ ಸೇನೆಯಿಂದ ಶಿಕ್ಷೆಯಾಗಬಹುದೆಂದು ಹೆದರಿ ಈ ಖೈದಿ ಹಿಂತಿರುಗಲು ಬಯಸದೆ ಅಳುತ್ತದ್ದಾನೆ ಎಂದು ಬರೆದು ಹಂಚಲಾಗುತ್ತಿದೆ.

ಚಿತ್ರದಲ್ಲಿ ಇಬ್ಬರು ಭಾರತೀಯ ಸೈನಿಕರು ಒಬ್ಬ ವ್ಯಕ್ತಿಯನ್ನು ಹಿಡಿದಿರುವುದು ಕಾಣಬಹುದಾಗಿದೆ. ಆ ವ್ಯಕ್ತಿ ರೋದಿಸುವ ಚಿತ್ರಣವು ಇದರಲ್ಲಿದೆ.

ಈ ಚಿತ್ರವೂ ಐತಿಹಾಸಿಕ ಚಿತ್ರವಾಗಿದೆಯಾದರೂ ಇದು ’ನಾಥು ಲಾ’ ದ ಸಂಧರ್ಭದ ಚಿತ್ರವಲ್ಲ. 1950-1954ರ ಕೊರಿಯನ್ ಯುದ್ಧದಲ್ಲಿ ಭಾರತವು ತನ್ನ ಮೊದಲ ವಿಶ್ವ ಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯ ಭಾಗವಾಗಿ ಕಳುಹಿಸಿದ ಭಾರತೀಯ ಸೈನಿಕರ ಚಿತ್ರವಾಗಿದೆ.

ಈ ಚಿತ್ರಗಳನ್ನು ಹಿಸ್ಟರಿ ಡಾಟ್ ಕಾಮ್ ವೆಬ್‌ಸೈಟ್‌ನ ಲೇಖನವೊಂದರಲ್ಲಿ ಕಾಣಬಹುದಾಗಿದೆ. ವೆಬ್ಸೈಟ್ ಚಿತ್ರವನ್ನು ಗೆಟ್ಟಿ ಇಮೇಜ್ ನಿಂದ ವೆಬ್ಸೈಟ್ ಪಡೆದುಕೊಂಡಿದೆ ಎಂದು ಹೇಳಿದೆ. ಲೇಖನವೂ ಚಿತ್ರವನ್ನು ಕೊರಿಯನ್ ಯುದ್ದದ ಚಿತ್ರ ಎಂದು ಉಲ್ಲೇಖಿಸಿದೆ.

ಗೆಟ್ಟಿ ವಿವರಣೆಯಲ್ಲಿ ಈ ಚಿತ್ರವನ್ನು ಭಾರತೀಯ ಸೈನಿಕರು ಉತ್ತರ ಕೊರಿಯಾದಲ್ಲಿ ಚೀನಾದ ಯುದ್ಧ ಕೈದಿಯನ್ನು ಹೊತ್ತೊಯ್ಯುತ್ತಿದ್ದಾರೆ ಎಂದು ಹೇಳುತ್ತದೆ. “ಅಕ್ಟೋಬರ್ 5, 1953 ರ ಕೊರಿಯನ್ ಯುದ್ಧದ ನಂತರ ಕಮ್ಯುನಿಸ್ಟರ ಬಳಿಗೆ ಮರಳಲು ಉತ್ತರ ಕೊರಿಯಾದ ಪನ್ಮುಂಜೋಮ್ನಲ್ಲಿರುವ ವಿನಿಮಯ ಕೇಂದ್ರಕ್ಕೆ ಅಳುತ್ತಿದ್ದ ಚೀನಾದ ಯುದ್ಧ ಕೈದಿಯನ್ನು ಕರೆದೊಯ್ಯುವ ಇಬ್ಬರು ಭಾರತೀಯ ಸೈನಿಕರು. ಅವರು ಚೀನಾದ 65 ಸೈನಿಕರಲ್ಲಿ ಒಬ್ಬರಾಗಿದ್ದರು.” ಎಂದು ವಿವರಿಸಲಾಗಿದೆ.

1950-1954ರ ಕೊರಿಯನ್ ಯುದ್ಧದಲ್ಲಿ ಭಾರತದ ಸೈನ್ಯವೂ  ತನ್ನ ಮೊದಲ ವಿಶ್ವಸಂಸ್ಥೆ ಶಾಂತಿಪಾಲನಾ ಕಾರ್ಯಾಚರಣೆಯ ಭಾಗವಾಗಿ ಭಾಗವಹಿಸಿತ್ತು.

1967 ರಲ್ಲಿ ಭಾರತ-ಚೀನಾ ನಡುವೆ ಸಿಕ್ಕಿಂ ಗಡಿಯಲ್ಲಿ ನಾಥು ಲಾ ಮತ್ತು ಚೋ ಲಾ ಘರ್ಷಣೆ ಸರಣಿಯಾಗಿ ನಡೆದಿದ್ದವು. ಇದರಲ್ಲಿ ಕನಿಷ್ಠ 88 ಭಾರತೀಯ ಸೈನಿಕರು ಮತ್ತು 340 ಕ್ಕೂ ಹೆಚ್ಚು ಚೀನಾದ ಸೈನಿಕರು ಪ್ರಾಣ ಕಳೆದುಕೊಂಡು, ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಕೃಪೆ: ದಿ ಕ್ವಿಂಟ್


ಓದಿ: ಅಮೆರಿಕಾದ ಕೊರೊನಾ ರಾಜಕೀಯವನ್ನು ಭಾರತ ವಿರೋಧಿಸಲಿದೆ: ಚೀನಾ ಬಯಕೆ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...